ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಎಲೆಕ್ಟ್ರಿಕ್ ಪರ್ಫಾಮೆನ್ಸ್ ಕಾರುಗಳಿಗಾಗಿ ಈಗಾಗಲೇ ವಿಶ್ವಾದ್ಯಂತ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಹ್ಯುಂಡೈ ಮತ್ತು ಕಿಯಾ ಮೋಟಾರ್ಸ್ ಸಂಸ್ಥೆಗಳು ಕೂಡಾ ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿವೆ.

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಹೌದು, ದಕ್ಷಿಣ ಕೊರಿಯಾದ ದೈತ್ಯ ಕಾರು ಉತ್ಪಾದನಾ ಸಂಸ್ಥೆಗಳಾದ ಹ್ಯುಂಡೈ ಮತ್ತು ಕಿಯಾ ಮೋಟಾರ್ಸ್ ಸಂಸ್ಥೆಗಳು ಸಾಮಾನ್ಯ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಜೊತೆಗೆ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಮೇಲೂ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಪರ್ಫಾಮೆನ್ಸ್ ಎಲೆಕ್ಟ್ರಿಕ್ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿಮ್ಯಾಕ್ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಪರ್ಫಾಮೆನ್ಸ್ ಕಾರುಗಳ ಉತ್ಪಾದನೆಗಾಗಿ ಸಣ್ಣ ಪ್ರಮಾಣದ ಉತ್ಪಾದನಾ ಘಟಕವನ್ನು ಹೊಂದಿದ್ದರೂ ಸಹ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಪರ್ಫಾಮೆನ್ಸ್ ಕಾರುಗಳಲ್ಲಿ ರಿಮ್ಯಾಕ್ ಭಾರೀ ಜನಪ್ರಿಯತೆ ಹೊಂದುತ್ತಿದ್ದು, ರಿಮ್ಯಾಕ್ ಸಂಸ್ಥೆಗೆ ಮತ್ತಷ್ಟು ಬಲ ತುಂಬಲು ಹ್ಯುಂಡೈ ಮತ್ತು ಕಿಯಾ ಇದೀಗ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿವೆ.

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಮಾಹಿತಿಗಳ ಪ್ರಕಾರ, ಹ್ಯುಂಡೈ ಮತ್ತು ಕಿಯಾ ಜೊತೆಗೂಡಿ ರಿಮ್ಯಾಕ್ ಸಂಸ್ಥೆಯ ಅಭಿವೃದ್ಧಿ ಮತ್ತು ಸಂಶೋಧನೆ ಮೇಲೆ ಬರೋಬ್ಬರಿ 6 ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದು, ರಿಮ್ಯಾಕ್ ಸಂಸ್ಥೆಯ ಶೇ. 50 ರಷ್ಟು ಪಾಲನ್ನು ತಮ್ಮದಾಸಿಕೊಂಡಿವೆ.

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಈ ಮೂಲಕ ಸಾಮಾನ್ಯ ಮಾದರಿಯ ಜೊತೆಗೆ ಸೂಪರ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಮಾರಾಟದಲ್ಲೂ ಸದ್ದು ಮಾಡಲು ಮುಂದಾಗಿರುವ ಕಿಯಾ ಮತ್ತು ಹ್ಯುಂಡೈ ಸಂಸ್ಥೆಗಳು ಈ ಮೂಲಕ ಹೊಸ ಅಧ್ಯಾಯ ಶುರು ಮಾಡಲಿದ್ದು, 2020ರ ಆರಂಭದಿಂದಲೇ ಮೂರು ಸಂಸ್ಥೆಗಳ ಸಹಭಾಗಿತ್ವದಲ್ಲಿ ಹೊಸ ಕಾರುಗಳು ರಸ್ತೆಗಿಳಿಯಲಿವೆ.

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಇನ್ನು ಹ್ಯುಂಡೈ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಹೊಸ ಘಟಕಗಳಿಗೆ ಚಾಲನೆ ನೀಡಿದ್ದು, ಭಾರತದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸುವ ಹೊಸ ಘಟಕದ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಬರೋಬ್ಬರಿ 7 ಸಾವಿರ ಕೋಟಿ ಹೂಡಿಕೆ ಮಾಡುತ್ತಿದೆ.

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಹ್ಯುಂಡೈ ಸಂಸ್ಥೆಯು ಭಾರತದಲ್ಲಿ ಬಿಡುಗಡೆ ಮಾಡಲಿರುವ ಹೊಸ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಈಗಾಗಲೇ ಮಾಹಿತಿ ಬಿಚ್ಚಿಟ್ಟಿದ್ದು, ಮೊದಲ ಹಂತವಾಗಿ ಕೊನಾ ಇವಿ ಕಾರು ಭಾರತೀಯ ರಸ್ತೆಗಳಲ್ಲಿ ಭಾರೀ ಜನಪ್ರಿಯತೆ ಸಾಧಿಸುವ ನಿರೀಕ್ಷೆಯಲ್ಲಿದೆ.

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಇದಕ್ಕೆ ಕಾರಣ, ಕಾರುಗಳ ಬೆಲೆಯನ್ನು ತಗ್ಗಿಸಲು ಹೊಸ ಕೊನಾ ಕಾರನ್ನು ದೇಶಿಯ ಮಾರುಕಟ್ಟೆಯಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸಿದ್ದು, ಇದಕ್ಕಾಗಿ ವಿವಿಧ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಸ್ಥಳೀಯವಾಗಿಯೇ ಬಿಡಿಭಾಗಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಇದರ ಜೊತೆ ಜೊತೆಗೆ ಎಲೆಕ್ಟ್ರಿಕ್ ವೆಹಿಕಲ್ ಬಿಡಿಭಾಗಗಳನ್ನು ನಿರ್ಮಾಣ ಕಾರ್ಯಕ್ಕೆ ಕೈ ಹಾಕುತ್ತಿರುವ ಹ್ಯುಂಡೈ ಸಂಸ್ಥೆಯು ಇದರಿಂದ ಭಾರೀ ಪ್ರಮಾಣದ ಆದಾಯದ ನೀರಿಕ್ಷೆಯಲ್ಲಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಎರಡು ವಿಭಿನ್ನ ಪವರ್ ಟ್ರೈನ್ ಗಳಿಂದ ಸಿದ್ದವಾಗಿರುವ ಕೋನಾ ಕಾರು ಮಾದರಿಗಳು ಪ್ರತಿ ಚಾರ್ಜ್‌ಗೆ 299 ಕಿ.ಮೀ ಮತ್ತು 469 ಕಿ.ಮೀ.ವರೆಗೆ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಎಲೆಕ್ಟ್ರಿಕ್ ಕಾರು ಆವೃತ್ತಿಗಳಲ್ಲೇ ಅತಿ ಹೆಚ್ಚು ಬೇಡಿಕೆ ಪಡೆಯುವ ಎಲ್ಲಾ ಗುಣಲಕ್ಷಣಗಳು ಈ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿವೆ.

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಮಾಹಿತಿಗಳ ಪ್ರಕಾರ, ಹ್ಯುಂಡೈ ಸಂಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್ ಟ್ರೈನ್ ನಿರ್ಮಿಸಲು ಎಲ್‌ಜಿ ಕೆಮಿಕಲ್ಸ್ ಜೊತೆ ಕೈಜೋಡಿಸಿದ್ದು, ಇದೇ ಬ್ಯಾಟರಿಯನ್ನು ಚೆವಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲೂ ಕೂಡಾ ಇರಿಸಲಾಗಿರಲಿದೆ ಎನ್ನಲಾಗಿದೆ. ಅಲ್ಲದೆ ಕೊನಾ ಇವಿ 39.2 ಕಿಲೋವ್ಯಾಟ್ಸ್ ಮತ್ತು 64 ಕಿಲೋವ್ಯಾಟ್ಸ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ.

ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕಾಗಿ ಹ್ಯುಂಡೈ ಮತ್ತು ಕಿಯಾ ಬೃಹತ್ ಪ್ಲ್ಯಾನ್..!

ಬ್ಯಾಟರಿ ವೈಶಿಷ್ಟ್ಯತೆ ಕೋನಾ ಕಾರುಗಳಲ್ಲಿ ಎರಡು ಮಾದರಿಯ ಬ್ಯಾಟರಿ ಚಾಲಿತ ವಿಭಾಗಗಳಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ 39. 2 ಕೆವಿ ಮತ್ತು 64 ಕೆವಿ ಬ್ಯಾಟರಿಯನ್ನು ಆಯ್ಕೆ ಮಾಡಬಹುದು. 39.2 ಕೆವಿ ಪ್ರೇರಿತ ಕೋನಾ ಕಾರುಗಳಿಗಿಂತಲೂ 64 ಕೆ.ವಿ ಪ್ರೇರಿತ ಕೋನಾ ಕಾರುಗಳು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.

Article Published On: Friday, May 17, 2019, 9:00 [IST]
English summary
Hyundai, Kia & Rimac Joins For Develop Electric Performance Cars. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+