ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಹೊಸ ಕಾರು ಖರೀದಿ ವೇಳೆ ಗ್ರಾಹಕರು ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಿದ ನಂತರ ಡೀಲರ್ಸ್‌ಗಳಿಗೆ ಅನುಗುಣವಾಗಿ 1 ರಿಂದ 2 ವಾರಗಳ ಕಾಲ ಕಾಯುವಿಕೆ ಪ್ರಕ್ರಿಯೆಯು ಸಾಮಾನ್ಯವಾಗಿ ಎಲ್ಲಾ ಕಡೆಗೂ ಇದ್ದೇ ಇರುತ್ತೆ. ಆದ್ರೆ ಇಲ್ಲೊಬ್ಬ ಜೀಪ್ ಡೀಲರ್ಸ್ ಮಾತ್ರ ಗ್ರಾಹಕನಿಂದ ಮುಂಗಡ ಹಣ ಪಡೆದ ನಾಲ್ಕು ತಿಂಗಳ ನಂತರ ಹೊಸ ಕಾರನ್ನು ವಿತರಣೆ ಮಾಡಿದ್ದು, ಗ್ರಾಹಕರ ನ್ಯಾಯಾಲಯದಿಂದ ರೂ. 50 ಸಾವಿರ ದಂಡ ಹಾಕಿಸಿಕೊಂಡಿದ್ದಾನೆ.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಹೌದು, ಜೀಪ್ ಕಂಪಾಸ್ ಖರೀದಿ ಮಾಡಲು ಬಂದಿದ್ದ ಗ್ರಾಹಕರೊಬ್ಬರು ರೂ.50 ಸಾವಿರ ಪಾವತಿಸಿ ತಮ್ಮ ನೆಚ್ಚಿನ ಕಾರು ಮಾದರಿಯನ್ನೇ ಬುಕ್ ಮಾಡಿದ್ದರು. ಮುಂಗಡ ಹಣ ತೆಗೆದುಕೊಳ್ಳುವಾಗ 10ರಿಂದ 15 ದಿನಗಳ ಅವಧಿಯಲ್ಲಿ ಕಾರು ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದ ಡೀಲರ್ಸ್ ಬರೋಬ್ಬರಿ 4 ತಿಂಗಳ ನಂತರ ಹೊಸ ಕಾರನ್ನು ವಿತರಣೆ ಮಾಡಿದ್ದಾನೆ. ಇದರಿಂದ ರೋಸಿ ಹೋಗಿದ್ದ ಕಾರು ಗ್ರಾಹಕನು ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ರೂ.50 ಸಾವಿರ ಪರಿಹಾರ ಪಡೆದುಕೊಂಡಿದ್ದಾನೆ.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಗೋವಾದಲ್ಲಿರುವ ಕ್ವಾಡ್ರೊಸ್ ಮೋಟಾರ್ಸ್ ಪ್ರೈ. ಲಿ ಡೀಲರ್ಸ್‌ನಲ್ಲಿ ಜೀಪ್ ಕಂಪಾಸ್ ಎಸ್‌ಯುವಿ ಖರೀದಿಗಾಗಿ ಟೆರ್ಟುಲಿಯಾನೋ ಡ್ಯಾರಿಲ್ ಗೋಮ್ಸ್ ಎಂಬಾತನು ರೂ.50 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಿದ್ದ. ಆದ್ರೆ 2 ವಾರದೊಳಗೆ ಹೊಸ ಕಾರು ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದ ಡೀಲರ್ಸ್ ಮಾಡಿದ್ದು ಮಾತ್ರ ಮೋಸದ ವ್ಯವಹಾರ.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಮೊದಲು ಹೊಸ ಕಾರಿಗೆ ಬುಕ್ಕಿಂಗ್ ಮಾಡುವಾಗ ವಿತರಣೆಗೆ 1ರಿಂದ 2 ವಾರ ಕಾಯುವಂತೆ ಹೇಳಿದ್ದ ಡೀಲರ್ಸ್ ತದನಂತರ ಹೊಸ ಕಾರು ಬೇಕಾದ್ರೆ 1ರಿಂದ 2 ತಿಂಗಳು ಕಾಯಲೇಬೇಕಾಗುತ್ತೆ ಎಂದಿದ್ದಾನೆ. ಹೀಗಾದ್ರು ತಾಳ್ಮೆ ಕಳೆದುಕೊಳ್ಳದ ಗ್ರಾಹಕ ಗೋಮ್ಸ್, ಡೀಲರ್ಸ್ ಭರವಸೆ ಮೇಲೆ ಕಾರು ಪಡೆದುಕೊಳ್ಳದೆಯೇ ಪೂರ್ತಿ ಹಣ ಪಾವತಿಸಿದ್ದಾನೆ.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಇನ್ನೇನು ಹೊಸ ಕಾರು ಬಂದು ಬಿಡುತ್ತೆ ಎನ್ನುತ್ತಲೇ ಮತ್ತೆ ಮತ್ತೆ ದಿನದೂಡಿದ ಡೀಲರ್ಸ್ ಕೊನೆಗೆ ನಾಲ್ಕು ತಿಂಗಳ ನಂತರ ಹೊಸ ಕಾರುನ್ನು ವಿತರಣೆ ಮಾಡಿದ್ದು, ಅದೇ ವೇಳೆ ಡೀಲರ್ಸ್ ವಿರುದ್ದ ಗ್ರಾಹಕರ ನ್ಯಾಯಾಲಯದಲ್ಲಿ ಸುಳ್ಳು ಭರವಸೆ ಮೇಲೆ ದೂರು ದಾಖಲಿಸಿ ಇದುವರೆಗೆ ಆದ ನಷ್ಟಕ್ಕೆ ಪರಿಹಾರ ನೀಡುವಂತೆ ಬೇಡಿಕೆಯಿಟ್ಟದ್ದರು.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಗ್ರಾಹಕ ಮತ್ತು ಡೀಲರ್ಸ್ ಕಡೆಯಿಂದ ವಾದ-ಪ್ರತಿವಾದವನ್ನು ಆಲಿಸಿದ ಗೋವಾ ಗ್ರಾಹಕ ನ್ಯಾಯಾಲಯವು ಗ್ರಾಹಕನಿಗೆ ರೂ.50 ಸಾವಿರ ಪರಿಹಾರದೊಂದಿಗೆ ಈ ವರೆಗೆ ಪಾವತಿ ಮಾಡಲಾದ ಬಡ್ಡಿ ಹಣವನ್ನು ಸಹ ಡೀಲರ್ಸ್ ಕಡೆಯಿಂದಲೇ ಪಾವತಿ ಮಾಡಿಸುವಂತೆ ಆದೇಶ ನೀಡಿದೆ.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಯಾಕೆಂದ್ರೆ ಗ್ರಾಹಕ ಗೋಮ್ಸ್ ಕಾರು ಖರೀದಿಗೂ ಮುನ್ನವೇ ರೂ.17 ಲಕ್ಷ ಹಣಕ್ಕೆ ಬಡ್ಡಿ ಪಾವತಿಸಿದರೂ ಸಹ ಹೊಸ ಕಾರು ಖರೀದಿ ಮಾಡಿರಲಿಲ್ಲ. ಈ ವಿಚಾರವನ್ನು ಗ್ರಾಹಕರ ನ್ಯಾಯಾಲಯದ ಗಮನಕ್ಕೆ ತರುವ ಮೂಲಕ ಡೀಲರ್ಸ್ ಕಳ್ಳಾಟಕ್ಕೆ ಸರಿಯಾಗಿಯೇ ಬುದ್ದಿಕಲಿಸಿದ್ದಾನೆ.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಸದ್ಯ ಹೊಸ ಜೀಪ್ ಕಂಪಾಸ್ ಎಸ್‌ಯುವಿ ಕಾರನ್ನು ಗೋಮ್ಸ್ ಅವರಿಗೆ ವಿತರಣೆ ಮಾಡಲಾಗಿದ್ದು, ಈ ಹಿಂದೆ ಖರೀದಿ ಮಾಡುವಾಗ ಇದ್ದ ಕಾರಿನ ಬೆಲೆಯ ಆಧಾರದ ಮೇಲೆ ಹೊಸ ಕಾರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ವೃತ್ತಿಯಲ್ಲಿ ಮ್ಯೂಜಿಷನ್ ಆಗಿ ಗೋವ್ಸ್ ತನ್ನ ವೃತ್ತಿಗೆ ಸಹಕಾರಿಯಾಗಬಹುದಾದ ಜೀಪ್ ಕಂಪಾಸ್ ಕಾರನ್ನೇ ಆಯ್ಕೆ ಮಾಡಿದ್ದರು. ಹೊಸ ಕಾರಿನ ಬೂಟ್ ಸ್ಪೇಸ್ ಉತ್ತಮ ಸ್ಥಳಾವಕಾಶ ಹೊಂದಿದ್ದು, ಇದೇ ಕಾರಣಕ್ಕೆ ಗೋವ್ಸ್ ಅವರಿಗೆ ಜೀಪ್ ಕಂಪಾಸ್ ಕಾರನ್ನು ಮನಮೆಚ್ಚಿ ಬುಕ್ಕಿಂಗ್ ಮಾಡಿದ್ದರು.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಆದ್ರೆ ಡೀಲರ್ಸ್ ಕಳ್ಳಾಟದಿಂದ ಕಾರು ವಿತರಣೆಯು ಬರೋಬ್ಬರಿ 4 ತಿಂಗಳು ತೆಗೆದುಕೊಂಡಿದ್ದು, ಇದೀಗ ಪರಿಹಾರದ ಜೊತೆ ಹೊಸ ಕಾರನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಒಟ್ಟಿನಲ್ಲಿ ಹೊಸ ಕಾರು ಇದೀಗ ಗ್ರಾಹಕನ ಕೈ ಸೇರಿದ್ದು, ಗ್ರಾಹಕರಿಂದ ಹಣ ಪಡೆದು ಆಟ ಆಡಿಸುವ ಡೀಲರ್ಸ್‌ಗೆ ಇದೊಂದು ತಕ್ಕ ಪಾಠ ಅಂದ್ರೆ ತಪ್ಪಾಗುವುದಿಲ್ಲ.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಇನ್ನು ಭಾರತದಲ್ಲಿ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ಜೀಪ್ ಸಂಸ್ಥೆಯು ಕಳೆದ 2017ರಲ್ಲಿ ಮೊದಲ ಬಾರಿಗೆ ಕಂಪಾಸ್ ಕಾರನ್ನು ಅಚ್ಚರಿಯ ಬೆಲೆಗಳಲ್ಲಿ ಬಿಡುಗಡೆ ಮಾಡಿ ಉತ್ತಮ ಮಾರಾಟವನ್ನು ಪ್ರಮಾಣವನ್ನು ದಾಖಲಿಸುತ್ತಿದೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಕಾರು ಬಿಡುಗಡೆಯಾದ ನಂತರ ಇದುವರೆಗೆ ಸುಮಾರು 85 ಸಾವಿರಕ್ಕೂ ಹೆಚ್ಚು ಕಂಪಾಸ್ ಕಾರುಗಳನ್ನು ಭಾರತದಲ್ಲಿ ಮಾರಾಟವಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.40 ಲಕ್ಷದಿಂದ ರೂ. 22.90 ಲಕ್ಷ ಬೆಲೆಯನ್ನು ಹೊಂದಿದೆ.

ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಎಸ್‌ಯುವಿ ಪ್ರಿಯರ ಬೇಡಿಕೆಯೆಂತೆ 2.0-ಲೀಟರ್ ಡೀಸೆಲ್ ಮತ್ತು 1.4-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ಜೀಪ್ ಕಂಪಾಸ್ ಕಾರುಗಳು ಪರ್ಫಾಮೆನ್ಸ್‌ನಲ್ಲಿ ಐಷಾರಾಮಿ ಕಾರುಗಳನ್ನೇ ಹಿಂದಿಕ್ಕುತ್ತಿದ್ದು, ಮೇಡ್ ಇನ್ ಇಂಡಿಯಾ ನಿರ್ಮಾಣದ ಮೊದಲ ಜೀಪ್ ಕಾರು ಎಂಬ ಹೆಗ್ಗಳಿಕೆಯೊಂದಿಗೆ ಮುಂದಿನ ಕೆಲವೇ ದಿನಗಳಲ್ಲಿ 1 ಲಕ್ಷ ಮಾರಾಟ ಗುರಿಯನ್ನು ತಲುಪುವ ನೀರಿಕ್ಷೆಯಲ್ಲಿದೆ.

Source: rushlane

Most Read Articles

Kannada
English summary
Jeep Compass Delayed Delivery Dealer To Pay Rs 50k Fine To Owner. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X