ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ದಕ್ಷಿಣ ಕೊರಿಯಾದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಗಳಾಗಿರುವ ಹ್ಯುಂಡೈ ಮೋಟಾರ್ಸ್ ಮತ್ತು ಕಿಯಾ ಮೋಟಾರ್ಸ್ ಸಂಸ್ಥೆಗಳು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು, ಒಂದೇ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಗೊಳಿಸಲು ಸಜ್ಜಾಗಿವೆ.

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಹ್ಯುಂಡೈ ಮತ್ತು ಕಿಯಾ ಸಂಸ್ಥೆಗಳು ಈಗಾಗಲೇ ತಮ್ಮ ಭವಿಷ್ಯದ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅನಾವರಣಗೊಳಿಸಿದ್ದು, ಅತ್ಯುತ್ತಮ ಬ್ಯಾಟರಿ ಪ್ಯಾಕ್‌ನೊಂದಿಗೆ ಗರಿಷ್ಠ ಮಟ್ಟದ ಮೈಲೇಜ್ ನೀಡುವ ವೈಶಿಷ್ಟ್ಯತೆಗಳನ್ನು ಹೊಂದಿವೆ. ಹೀಗಾಗಿ ಬರಲಿರುವ ಎರಡು ಸಂಸ್ಥೆಗಳ ಎಲೆಕ್ಟ್ರಿಕ್ ಕಾರುಗಳು ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಮತ್ತಷ್ಟು ವಿಶೇಷತೆಗಳಿಗೆ ಕಾರಣವಾಗಿದೆ.

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಹ್ಯುಂಡೈ ಸಂಸ್ಥೆಯು ಕೊನಾ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಅಭಿವೃದ್ಧಿಗೊಳಿಸಿ ಟೆಸ್ಟಿಂಗ್ ನಡೆಸುತ್ತಿದ್ದು, ಎರಡು ವಿಭಿನ್ನ ಪವರ್ ಟ್ರೈನ್ ಗಳಿಂದ ಸಿದ್ದವಾಗಿರುವ ಕೊನಾ ಕಾರು ಪ್ರತಿ ಚಾರ್ಜ್‌ಗೆ 299 ಕಿ.ಮೀ ಮತ್ತು 469 ಕಿ.ಮೀ.ವರೆಗೆ ಮೈಲೇಜ್ ನೀಡಲಿವೆ.

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಮಾಹಿತಿಗಳ ಪ್ರಕಾರ, ಹ್ಯುಂಡೈ ಸಂಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್ ಟ್ರೈನ್ ನಿರ್ಮಿಸಲು ಎಲ್‌ಜಿ ಕೆಮಿಕಲ್ಸ್ ಜೊತೆ ಕೈಜೋಡಿಸಿದ್ದು, ಇದೇ ಬ್ಯಾಟರಿಯನ್ನು ಚೆವಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲೂ ಕೂಡಾ ಇರಿಸಲಾಗಿದೆ. ಹೀಗಾಗಿ ಕೊನಾ ಇವಿ 39.2 ಕಿಲೋವ್ಯಾಟ್ಸ್ ಮತ್ತು 64 ಕಿಲೋವ್ಯಾಟ್ಸ್ ಬ್ಯಾಟರಿ ಪ್ಯಾಕ್‌ನ್ನು ಪ್ರೇರಣೆ ಪಡೆದುಕೊಂಡಿರಲಿವೆ.

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

39.2 ಕೆವಿ ಬ್ಯಾಟರಿ ಪ್ರೇರಿಕ ಕೊನಾ ಕಾರುಗಳು ಪೂರ್ಣಪ್ರಮಾಣದಲ್ಲಿ ಚಾರ್ಜಿಂಗ್‌ಗೊಳ್ಳಲು 6 ತಾಸು 10 ನಿಮಿಷ ಸಮಯ ತೆಗೆದುಕೊಳ್ಳವುದಲ್ಲದೇ 54 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜಿಂಗ್‌ ಮಾಡಬಹುದು. ಹಾಗೆಯೇ 64 ಕೆವಿ ಬ್ಯಾಟರಿ ಪ್ರೇರಿತ ಕೊನಾ ಕಾರುಗಳು ಸಹ ಪೂರ್ಣಪ್ರಮಾಣದ ಚಾರ್ಜಿಂಗ್‌ಗಾಗಿ 9 ತಾಸು 40 ನಿಮಿಷ ಸಮಯ ತೆಗೆದುಕೊಂಡರೇ, ಕೆವಲ 54 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜಿಂಗ್ ಮಾಡಬಹುದು.

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಸದ್ಯಕ್ಕೆ ಹೊಸ ಕೊನಾ ಕಾರುಗಳನ್ನು ಸಿಕೆಡಿ ಮೂಲಕ ಆಮದು ಮಾಡಿಕೊಂಡು ಚೆನ್ನೈನಲ್ಲಿ ಕಾರು ಉತ್ಪಾದನಾ ಘಟಕದಲ್ಲಿ ಬಿಡಿಭಾಗಗಳ ಜೋಡಣಾ ಪ್ರಕ್ರಿಯೆ ನಡೆಯಲಿದ್ದು, ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.15 ಲಕ್ಷದಿಂದ ರೂ.22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಹಾಗೆಯೇ ಕಿಯಾ ಮೋಟಾರ್ಸ್ ಸಂಸ್ಥೆಯು ಕೂಡಾ ಭಾರತದಲ್ಲಿ ಮೊದಲ ಬಾರಿಗೆ ತನ್ನ ವಾಣಿಜ್ಯ ವಹಿವಾಟು ಆರಂಭಿಸುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಭವಿಷ್ಯದಲ್ಲಿ ಹೊಸ ಸಂಚಲನ ಸೃಷ್ಠಿಸಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಕೇಂದ್ರ ಸರ್ಕಾರದ ನಿರ್ದೇಶನದಂತೆ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಮೇಲೂ ಹೆಚ್ಚಿನ ಗಮನಹರಿಸಿದ್ದು, ನಿರೊ ಎನ್ನುವ ಎಲೆಕ್ಟ್ರಿಕ್ ಕಾರು ಮಾದರಿಯೊಂದು ಪ್ರದರ್ಶನ ಮಾಡಿ ಟೆಸ್ಟಿಂಗ್ ನಡೆಸುತ್ತಿದೆ.

MOST READ: ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ತಪ್ಪದೇ ತಿಳಿಯಿರಿ..!

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಕಿಯಾ ಸಂಸ್ಥೆಯು ತನ್ನ ಭವಿಷ್ಯದ ಎಲೆಕ್ಟ್ರಿಕ್ ನಿರೊ ಕಾರನ್ನು ಸುಧಾರಿತ ಬ್ಯಾಟರಿ ಸೌಲಭ್ಯದೊಂದಿಗೆ ಅಭಿವೃದ್ಧಿಗೊಳಿಸಿದ್ದು, ಈ ಕಾರು ಟೆಸ್ಲಾ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ಹಿಂದಿರುಗಿಸುವುದು ಖಚಿತವಾಗಿದೆ.

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಪ್ರತಿ ಜಾರ್ಜ್‌ಗೆ ಬರೋಬ್ಬರಿ 455ಕಿ.ಮಿ ಮೈಲೇಜ್ ರೇಂಜ್ ಹೊಂದಿರುವ ನಿಯೊ ಕಾರುಗಳು ಐಷಾರಾಮಿ ಸೌಲಭ್ಯಗಳನ್ನು ಹೊತ್ತುಬರಲಿದ್ದು, ಮೈಲೇಜ್ ಹೊರತು ಪಡಿಸಿ ಕಾರಿನ ಯಾವುದೇ ವೈಶಿಷ್ಟ್ಯತೆಗಳು ಮತ್ತು ಬೆಲೆ ಮಾಹಿತಿಯನ್ನು ಕಿಯಾ ಬಿಟ್ಟುಕೊಟ್ಟಿಲ್ಲ.

MOST READ: ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್!

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಅದ್ರೆ ಇದೀಗ ಹ್ಯುಂಡೈ ಮತ್ತು ಕಿಯಾ ಸಂಸ್ಥೆಗಳು ಸಹಭಾಗಿತ್ವದ ಆಧಾರ ಮೇಲೆ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಗೊಳಿಸಲು ಸಜ್ಜಾಗುತ್ತಿರುವುದು ಅತಿ ದೊಡ್ಡ ಬದಲಾವಣೆಗೆ ಕಾರಣವಾಗಿದ್ದು, ಭಾರತದಲ್ಲೇ ಹ್ಯುಂಡೈ ಎಲೆಕ್ಟ್ರಿಕ್ ಮತ್ತು ಕಿಯಾ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣವಾದಲ್ಲಿ ಬೆಲೆಗಳು ಮತ್ತಷ್ಟು ತಗ್ಗುವ ಸಾಧ್ಯತೆಗಳಿವೆ.

Most Read Articles

Kannada
English summary
Hyundai & Kia To Get New All-Electric Car Platform — The EV Future Is Nearly Here. Read in Kannada.
Story first published: Saturday, March 30, 2019, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X