ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ತಪ್ಪದೇ ತಿಳಿಯಿರಿ..!

ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣ ಅಂದ್ರೆ ವಾಹನಗಳಲ್ಲಿ ಜೋಡಿಸಲಾಗುವ ತಾಂತ್ರಿಕ ಸೌಲಭ್ಯಗಳ ಕೊರತೆ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಅಗ್ಗದ ಬೆಲೆಯ ವಾಹನಗಳಿಂದಾಗಿ ಅಮಾಯಕರ ಜೀವಗಳು ಬಲಿಯಾಗುತ್ತಿದ್ದು, ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಹೊಸ ಸುರಕ್ಷಾ ಮಾರ್ಗಸೂಚಿಯು ಪ್ರಸ್ತುತ ಸಂದರ್ಭದಲ್ಲಿ ಸೂಕ್ತವೆನಿಸುತ್ತದೆ.

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

ಹೊಸ ವಾಹನಗಳ ಸಂಖ್ಯೆ ಹೆಚ್ಚಾದಂತೆ ರಸ್ತೆ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚುತ್ತಿದ್ದು, ಈ ಹಿನ್ನೆಲೆ ವಾಹನಗಳಲ್ಲಿನ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ದ್ವಿಚಕ್ರ ವಾಹನಗಳಲ್ಲಿ ಸಿಬಿಎಸ್(ಕಾಂಬಿ ಬ್ರೇಕಿಂಗ್ ಸಿಸ್ಟಂ) ಮತ್ತು ಎಬಿಎಸ್(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ತಂತ್ರಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಜಾರಿಗೆ ತರುತ್ತಿದೆ.

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

ಈ ಹಿಂದೆ 2017ರ ಏಪ್ರಿಲ್ 1 ರಿಂದ ಭಾರತದಲ್ಲಿ ಸಂಪೂರ್ಣವಾಗಿ ಬಿಎಸ್ 3 ಎಂಜಿನ್ ವಾಹನಗಳನ್ನು ನಿಷೇಧ ಮಾಡಿ ಬಿಎಸ್ 4 ನಿಯಮವನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಇದೀಗ ಸಿಬಿಎಸ್ ಮತ್ತು ಎಬಿಎಸ್ ತಂತ್ರಜ್ಞಾನವನ್ನು ಕಡ್ಡಾಯಗೊಳಿಸುತ್ತಿದೆ.

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

2019ರ ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸಿಬಿಎಸ್ ತಂತ್ರಜ್ಞಾನ ಮತ್ತು 150ಸಿಸಿ ಮೇಲ್ಪಟ್ಟ ಬೈಕ್‌ಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ತಂತ್ರಜ್ಞಾನವು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಹೊಸ ನಿಯಮವನ್ನು ಹೊಂದಿರದ ಬೈಕ್ ಮಾದರಿಗಳ ಮಾರಾಟಕ್ಕೆ ಬ್ರೇಕ್ ಬಿಳಲಿದೆ.

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

ಹೀಗಾಗಿಯೇ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರವಾಗಿ 125ಸಿಸಿ ಬೈಕ್ ಮಾದರಿಗಳಲ್ಲಿ ಸಿಬಿಎಸ್ ಮತ್ತು 150ಸಿಸಿ ಬೈಕ್‌ಗಳಲ್ಲಿ ಎಬಿಎಸ್ ಅಳವಡಿಕೆ ಮಾಡಿ ಮಾರಾಟಕ್ಕೆ ಚಾಲನೆ ನೀಡಿದ್ದು, ನೀವು ಕೂಡಾ ಹೊಸ ಬೈಕ್ ಖರೀದಿಸುವ ಯೋಜನೆಯಿದ್ದಲ್ಲಿ ಈ ವಿಚಾರಿಸಿ ಮುಂದಿನ ವ್ಯವಹಾರ ಕೈಗೊಳ್ಳುವುದು ಒಳಿತು.

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

ಹಾಗಾದ್ರೆ ಎಬಿಎಸ್‌ನಿಂದ ಏನು ಲಾಭ?

ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ನಿಮ್ಮ ಬೈಕ್‌ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಕೆಲವೇ ಸೇಕೆಂಡುಗಳಲ್ಲಿ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದಾಗಿದೆ.

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

ಉದಾಹರಣೆ, ನೀವು ಎಬಿಎಸ್ ಇಲ್ಲದ ಒಂದು ಬೈಕ್ ಅಥವಾ ಕಾರಿನ ಚಾಲನೆ ಮಾಡುತ್ತಿದ್ದೀರಿ ಎಂದುಕೊಳ್ಳಿ. ಆಗ ಹಠಾತ್ ಆಗಿ ನಿಮ್ಮ ವಾಹನಕ್ಕೆ ಬೇರೆ ಯಾವುದೋ ವಾಹನವೋ ಇಲ್ಲವೇ ಯಾರಾದ್ರು ರಸ್ತೆ ದಾಟುವವರು ಸಡನ್ ಆಗಿ ಅಡ್ಡಬಂದಲ್ಲಿ ಬಹುತೇಕ ವಾಹನ ಸವಾರರು ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಒತ್ತಲು ಪ್ರಯತ್ನ ಪಡುವುದು ಕಾಮನ್.

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

ಈ ವೇಳೆ ಬ್ರೇಕ್ ಅನ್ನು ಪೂರ್ಣ ಪ್ರಮಾಣದಲ್ಲಿ ಅದುಮಿದಾಗ ಕಾರಿನ ಸ್ಟೀರಿಂಗ್ ಅಥವಾ ಬೈಕಿನ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು, ಇದು ಚಾಲಕರಿಗೆ ಅಪಘಾತವನ್ನು ತಪ್ಪಿಸುವ ಯಾವುದೇ ಅವಕಾಶವಿರುವುದಿಲ್ಲ. ಆದ್ರೆ ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಎಬಿಎಸ್ ಸಾಕಷ್ಟು ಸಹಕಾರಿಯಾಗುತ್ತೆ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

ಇದರಿಂದಾಗಿ ಕೇಂದ್ರ ಸರ್ಕಾರವೇ ಎಬಿಎಸ್ ಅನ್ನು ಕಡ್ಡಾಯಗೊಳಿಸುವ ಮುನ್ನ ನಾವೇ ಅಳವಡಿಸಿಕೊಳ್ಳುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿದ್ದು, ಈ ನಿಟ್ಟಿನಲ್ಲಿ ಕೆಲವು ವಾಹನ ಉತ್ಪಾದನಾ ಸಂಸ್ಥೆಗಳು ಪ್ರತಿ ವಾಹನಗಳಲ್ಲೂ ಸ್ವಯಂಪ್ರೇರಿತವಾಗಿ ಎಬಿಎಸ್ ಆಯ್ಕೆಯನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದು.

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

ಬೆಲೆ ಏರಿಕೆಯ ಬಿಸಿ

ಹೌದು, ಸಾಮಾನ್ಯ ಮಾದರಿಯ ಡ್ರಮ್ ಬ್ರೇಕ್ ಸಿಸ್ಟಂ ಹೊಂದಿರುವ ಬೈಕ್‌ ಬೆಲೆಗಳಿಂತ ಸಿಬಿಯು ಮತ್ತು ಎಬಿಎಸ್ ಹೊಂದಿರುವ ಬೈಕ್ ಬೆಲೆಗಳ ತುಸು ದುಬಾರಿ ಎನ್ನಿಸಲಿದ್ದು, ಎಬಿಎಸ್ ತಂತ್ರಜ್ಞಾನದ ಗುಣಮಟ್ಟದ ಆಧಾರದ ಮೇಲೆ ಕನಿಷ್ಠ ರೂ.5 ಸಾವಿರದಿಂದ ರೂ.12 ಸಾವಿರದಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ಈ ಬಗ್ಗೆ ತಿಳಿದಿರಲಿ..!

ಜೊತೆಗೆ ಹೊಸ ನಿಯಮಗಳನ್ನು ಹೊಂದಿರದ ಬೈಕ್‌ಗಳ ನೋಂದಣಿಯು ಏಪ್ರಿಲ್ 1ರಿಂದಲೇ ಸ್ಥಗಿತಗೊಳ್ಳಲಿದ್ದು, ಈಗಾಗಲೇ ಖರೀದಿ ಮಾಡಲಾಗಿರುವ ಬೈಕ್‌ಗಳಿಗೆ ಈ ಹೊಸ ನಿಯಮ ಅನ್ವಯಿಸುವುದಿಲ್ಲ. ಆದರೂ ಕೂಡಾ ಒಂದು ವೇಳೆ ನೀವು ನಿಮ್ಮ ಬೈಕಿನಲ್ಲಿ ಎಬಿಎಸ್ ಹೊಂದಿಲ್ಲವಾದಲ್ಲಿ ಹೊಸ ಸುರಕ್ಷಾ ಸೌಲಭ್ಯವನ್ನು ಅಳವಡಿಸಿಕೊಳ್ಳುವುದು ಉತ್ತಮ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಲು ಮರೆಯದಿರಿ.

More from DriveSpark

Article Published On: Saturday, March 30, 2019, 15:35 [IST]
English summary
Don"t Buy Two Wheelers Without CBS/ABS After April 1st. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+