ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!
ಒನ್ ವೇ ಮತ್ತು ರಾಂಗ್ ಸೈಡ್‌ನಲ್ಲಿ ವಾಹನ ಚಾಲನೆ ಮಾಡುವವರ ವಿರುದ್ದ ಸಂಚಾರಿ ಪೊಲೀಸರು ಈಗಾಗಲೇ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಕೆಲವರು ಮಾತ್ರ ಯಾವುದೇ ಕ್ರಮ ಜಾರಿಗೆ ಮಾಡಿದರೂ ಸಹ ಅದು ತಮಗೆ ಸಂಬಂಧವೇ ಇಲ್ಲದಂತೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ.

ದೇಶಾದ್ಯಂತ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಬಹುತೇಕ ವಾಹನ ಸವಾರರು ಒಂದಿಲ್ಲಾ ಒಂದು ರೀತಿಯಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಮುನ್ನುಗ್ಗಲು ಯತ್ನಸುತ್ತಿರುತ್ತಾರೆ. ಇಲ್ಲೊಬ್ಬ ಕಾರು ಚಾಲಕ ಕೂಡಾ ಟ್ರಾಫಿಕ್ ಸಿಗ್ನಲ್ ಅನ್ನು ನಿಗದಿತ ಅವಧಿಯೊಳಗೆ ದಾಟಬೇಕೆಂಬ ಧಾವಂತದಲ್ಲಿ ರಾಂಗ್ ಸೈಡ್‌ನಲ್ಲಿ ಬಂದು ಬೈಕ್ ಸವಾರನಿಂದ ಸರಿಯಾಗಿಯೇ ಉಗಿಸಿಕೊಂಡಿರುವ ಘಟನೆ ನಡೆದಿದೆ.

ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ಇತರೆ ವಾಹನಗಳನ್ನು ಹಿಂದಿಕ್ಕಿ ವಿರುದ್ದ ದಿಕ್ಕಿನಲ್ಲಿ ನುಗ್ಗಲು ಮುಂದಾಗಿದ್ದ ಟಾಟಾ ಇಂಡಿಗೋ ಕಾರು ಮಾಲೀಕನನ್ನು ತಡೆದ ಕೆಟಿಎಂ ಬೈಕ್ ಸವಾರನು, ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಸರಿಯಾಗಿ ನಿಯಮ ಪಾಲನೆ ಮಾಡಿ ಅಂತಾ ಮನವಿ ಮಾಡಿದ್ದಾನೆ.

ರಾಂಗ್ ಸೈಡ್‌ನಲ್ಲಿ ನುಗ್ಗಲು ಯತ್ನಸಿದಾಗ ವಿರುದ್ಧ ದಿಕ್ಕಿನಿಂದ ಬಂದ ಕಾರು ಮಾಲೀಕನು ಮತ್ತೊಂದು ಮಾರ್ಗದಿಂದ ಬರುತ್ತಿದ್ದ ವಾಹನಗಳಿಗೆ ಕಿರಿಕಿರಿ ಉಂಟುಮಾಡುತ್ತಿದ್ದ. ಇದೇ ವೇಳೆಗೆ ಕೆಟಿಎಂ ಬೈಕ್ ಎದುರಾದಾಗ ಬೈಕ್ ಸವಾರನು ಕಾರಿನ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾರನ್ನು ಹಿಂದಕ್ಕೆ ಕಳುಹಿಸಿದ್ದಾನೆ.

ಅಂದಹಾಗೆ ಈ ಘಟನೆ ನಡೆದಿರುವುದು ರಾಜಸ್ತಾನದ ಜೈಪುರ್‌ನಲ್ಲಿ. ಹವ್ಯಾಸಿ ಬೈಕ್ ರೈಡರ್‌ರೊಬ್ಬರು ರಾಜಸ್ತಾನದ ಪ್ರವಾಸಕ್ಕಾಗಿ ತೆರಳಿದ್ದಾಗ ಈ ಘಟನೆ ನಡೆದಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಾಂಗ್ ಸೈಡ್‌ನಲ್ಲಿ ನುಗ್ಗಲು ಯತ್ನಿಸಿದ ಕಾರು ಮಾಲೀಕನಿಗೆ ಸರಿಯಾಗಿಯೇ ಬುದ್ದಿಕಲಿಸಿದ್ದಾರೆ.

ಸದ್ಯ ಭಾರತದಲ್ಲಿ ಸಂಭವಿಸುತ್ತಿರುವ ಬಹುತೇಕ ಅಪಘಾತ ಪ್ರಕರಣಗಳು ಇಂತಹ ಕೆಟ್ಟ ಚಾಲನಾ ಅಭ್ಯಾಸಗಳಿಂದಲೇ ಸಾವು-ನೋವಿನ ಪ್ರಕರಣಗಳು ಹೆಚ್ಚುತ್ತಿದ್ದು, ಕೆಟಿಎಂ ಬೈಕ್ ಸವಾರ ಮಾಡಿದ ಕಾರ್ಯಕ್ಕೆ ಬಹುತೇಕರು ಬೆಂಬಲ ಸೂಚಿಸಿದ್ದಾರೆ.

ಜೊತೆಗೆ ರಾಂಗ್ ಸೈಡ್‌ನಲ್ಲಿ ನುಗ್ಗಲು ಯತ್ನಿಸುವ ವಾಹನಗಳ ವಿರುದ್ಧವೂ ಸೂಕ್ತ ಜರಗಿಸಬೇಕೆಂದು ಹಲವರು ಒತ್ತಾಯಿಸಿದ್ದು, ಯಾರೋ ಮಾಡುವ ತಪ್ಪಿನಿಂದಾಗಿ ಅಮಾಯಕರ ಜೀವಗಳು ಬಲಿಯಾಗುತ್ತಿರುವುದು ಅಕ್ಷರ ಸಹ ಇಂತಹ ಕೆಟ್ಟ ಚಾಲನಾ ಅಭ್ಯಾಸಗಳಿಂದಲೇ ಎನ್ನುವುದನ್ನು ಮರೆಯುವಂತಿಲ್ಲ.
MOST READ: ಮಾಡಿಫೈ ಬೈಕ್ ಸವಾರರಿಗೆ ಭಿಕ್ಷುಕರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು..!
ಕಳೆದ ನವೆಂಬರ್ 30ರಂದು ಸಹ ಇಂತದ್ದೆ ಘಟನೆಯೊಂದು ಬೆಂಗಳೂರಿನಲ್ಲೂ ನಡೆದಿತ್ತು. ಯಶವಂತಪುರ ಟು ಬನಶಂಕರಿ ಮಾರ್ಗದಲ್ಲಿ ಮಾರ್ಗದಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ರಾಂಗ್ ಸೈಡ್‌ನಲ್ಲಿ ನುಗ್ಗಿಕೊಂಡು ಹೋಗುತ್ತಿತ್ತು. ಇದನ್ನು ತಡೆದ ಬೈಕ್ ಸವಾರನೊಬ್ಬ ಬಸ್ ಅನ್ನು ವಾಪಸ್ ಕಳುಹಿಸಿದ್ದ.

ಸಂಚಾರಿ ನಿಯಮ ಅಂದ್ರೆ ಎಲ್ಲರಿಗೂ ಒಂದೇ ಎಂದು ರೊಚ್ಚಿಗೆದ್ದ ಬೈಕ್ ರೈಡರ್ ಒನ್ ವೇ ಯಿಂದ ಬಸ್ ಅನ್ನು ಹಿಂದಕ್ಕೆ ತೆಗದುಕೊಳ್ಳುವಂತೆ ಮಾಡಿದ್ದಲ್ಲದೇ ಒನ್ ವೇ ನಲ್ಲಿ ಬರುತ್ತಿದ್ದ ಬಹುತೇಕ ವಾಹನ ಸವಾರರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದ.
MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಕೊನೆಗೆ ಒನ್ ವೇ ನಲ್ಲಿ ಬರುತ್ತಿದ್ದ ಎಲ್ಲಾ ವಾಹನಗಳನ್ನು ಹಿಂದಕ್ಕೆ ಕಳುಹಿಸಿ ಆ ರಸ್ತೆಯನ್ನು ತೆರವು ಮಾಡಿದ ಬೈಕ್ ಸವಾರನು ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಬಸ್ ಹಿಂದಕ್ಕೆ ಕಳುಹಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಆದ್ರೆ ಅದೆನೇ ಇರಲಿ, ಸಮಯ ಉಳಿತಾಯ ಮಾಡುವುದಕ್ಕೋ ಅಥವಾ ಇಂಧನ ಉಳಿತಾಯ ಮಾಡಲು ಒನ್ ವೇ ನಲ್ಲಿ ಹೋಗುವ ಮುನ್ನ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಯೋಚನೆ ಮಾಡಿ ವಾಹನ ಚಾಲನೆ ಮಾಡಿ. ಯಾಕೆಂದ್ರೆ ದೇಶದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಬಹುತೇಕರು ಸಂಚಾರಿ ನಿಯಮಗಳನ್ನು ಪಾಲನೆ ಮಾಡದೆಯೇ ಪ್ರಾಣಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ.


Click it and Unblock the Notifications








