ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಹ್ಯುಂಡೈ ಕೋನಾ ಕಾರು ಕೆನಡಾದಲ್ಲಿ ಸ್ಪೋಟಗೊಂಡಿದೆ. ಈ ಘಟನೆಯು ಕೋನಾ ಕಾರ್ ಅನ್ನು ಗ್ಯಾರೇಜ್‍‍ನಲ್ಲಿ ನಿಲ್ಲಿಸಿದ್ದಾಗ ನಡೆದಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಆದರೆ ಈ ಘಟನೆಯಿಂದಾಗಿ ಗ್ಯಾರೇಜ್‍‍ನ ಮೇಲ್ಛಾವಣಿ ಹಾರಿಹೋಗಿದ್ದು, ಬಾಗಿಲುಗಳು ಹಾಳಾಗಿವೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍‍ಯು‍‍ವಿಯಾಗಿದ್ದು 2018ರಲ್ಲಿ ಅನಾವರಣಗೊಂಡಿತ್ತು. ಈ ವರ್ಷದ ಆರಂಭದಲ್ಲಿ ಉತ್ತರ ಅಮೆರಿಕಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ, ಈ ರೀತಿಯ ದುರ್ಘಟನೆ ನಡೆದಿದೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಸ್ಪೋಟಗೊಂಡ ಈ ವಾಹನವನ್ನು ಈ ವರ್ಷದ ಮಾರ್ಚ್‍‍ನಲ್ಲಿ ಖರೀದಿಸಲಾಗಿತ್ತು. ಖರೀದಿಸಿದ ಕೇವಲ ನಾಲ್ಕು ತಿಂಗಳಲ್ಲಿ ಸುಟ್ಟು ಕರಕಲಾಗಿದೆ. ಸಿಬಿಸಿಯ ವರದಿಯ ಪ್ರಕಾರ, ಈ ವಾಹನವನ್ನು ಪಿಯೆರೋ ಕೊಸೆಂಟಿನೊ ಎಂಬ ವ್ಯಕ್ತಿ ಖರೀದಿಸಿದ್ದರು. ಸ್ಫೋಟ ಸಂಭವಿಸಿ ಬೆಂಕಿಯ ಅಲಾರಂಗಳು ಕೇಳಿಸಿದಾಗ ಅವರು ಊಟಕ್ಕೆ ರೆಡಿಯಾಗುತ್ತಿದ್ದರು ಎಂದು ವರದಿ ಉಲ್ಲೇಖಿಸಿದೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಅವರು ಬೇಸ್‍‍ಮೆಂಟಿಗೆ ಹೋದಾಗ, ಗ್ಯಾರೇಜ್‍‍ನಿಂದ ದಟ್ಟವಾದ ಕಪ್ಪು ಹೊಗೆ ಬರುತ್ತಿತ್ತು. ತಕ್ಷಣವೇ ಅವರು ಮನೆಯಿಂದ ಹೊರಗೆ ಓಡಿಹೋದರು. ಪಿಯೆರೋರವರು ಮನೆಯ ಹೊರಗಿನಿಂದ ನೋಡಿದಾಗ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಸ್ಫೋಟದಿಂದ ಸಾಕಷ್ಟು ಪ್ರಮಾಣದ ಹಾನಿಯಾಗಿರುವುದು ಕಂಡು ಬಂದಿದೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಗ್ಯಾರೇಜ್‍‍ನ ಬಾಗಿಲು 30 ಅಡಿಗಳಷ್ಟು ದೂರ ಬಿದ್ದಿದೆ. ಗ್ಯಾರೇಜ್‍‍ನ ಮೇಲ್ಛಾವಣಿಯಲ್ಲಿದ್ದ ಹೆಂಚುಗಳು ಹಾರಿ ಹೋಗಿವೆ. ಸ್ಫೋಟದಿಂದಾಗಿ ಕಟ್ಟಡಕ್ಕೆ ಹಾನಿಯಾಗಿರುವ ಸಾಧ್ಯತೆಗಳಿದ್ದು, ಹಿಂತಿರುಗದಂತೆ ಮನೆಯವರಿಗೆ ಸೂಚಿಸಲಾಗಿದೆ. ಕುಸಿದು ಬಿದ್ದು ಭಾರೀ ಪ್ರಮಾಣದ ಅನಾಹುತಗಳಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಗ್ಯಾರೇಜ್ ಅನ್ನು ಸಂಪೂರ್ಣವಾಗಿ ಕೆಡವಲಾಗಿದೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ರೇಡಿಯೋ ಕೆನಡಾ / ಮ್ಯಾಥ್ಯೂ ಡೇನಿಯಲ್ ವ್ಯಾಗ್ನರ್ ಸೆರೆಹಿಡಿದ ಚಿತ್ರಗಳಲ್ಲಿ ಕಾಣುವಂತೆ ಹ್ಯುಂಡೈ ಕೋನಾ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕಾರಿನ ಮುಂಭಾಗದ ತುದಿಯು ಸಂಪೂರ್ಣವಾಗಿ ಹಾಳಾಗಿದೆ. ಬ್ಯಾಟರಿ ಪ್ಯಾಕ್ ಸ್ಥಿತಿಯ ಬಗ್ಗೆ ಹೇಳುವಂತಿಲ್ಲ. ಎಲೆಕ್ಟ್ರಿಕ್ ಮೋಟಾರ್ ಹಾಗೂ ಡ್ರೈವ್‌ಟ್ರೇನ್ ಸುಟ್ಟುಹೋಗಿವೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಪ್ಲಾಸ್ಟಿಕ್‌ಗಳು ಕರಗಿ ಹೋಗಿದ್ದರೆ, ಗಾಜುಗಳು ಪುಡಿ ಪುಡಿಯಾಗಿವೆ. ಕುತೂಹಲದ ವಿಷಯವೆಂದರೆ, ಮುಂಭಾಗದ ಟಯರ್‌ಗಳು ಹಾಗೂ ವ್ಹೀಲ್‍‍ಗಳಿಗೆ ಯಾವುದೇ ತೊಂದರೆಯಾಗಿಲ್ಲ, ಆದರೆ ಹಿಂದಿನ ವ್ಹೀಲ್‍‍ಗಳು ಹಾಗೂ ಟಯರ್‍‍‍ಗಳು ಗುರುತಿಸಲಾಗದಷ್ಟು ಹಾನಿಗೊಳಗಾಗಿವೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಬೆಂಕಿಯು ಸ್ಫೋಟಕ್ಕೆ ಕಾರಣವಾಗಿದೆಯೇ ಅಥವಾ ಸ್ಪೋಟದಿಂದ ಬೆಂಕಿಯುಂಟಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ನಡೆದ ಸಮಯದಲ್ಲಿ ಹ್ಯುಂಡೈ ಕೋನಾವನ್ನು ಚಾರ್ಜ್ ಮಾಡುತ್ತಿರಲಿಲ್ಲ ಹಾಗೂ ಚಾರ್ಜರ್ ಅನ್ನು ಸಹ ಅಳವಡಿಸಿರಲಿಲ್ಲ ಎಂದು ಪಿಯೆರೋ ಕೊಸೆಂಟಿನೊ ಹೇಳಿದ್ದಾರೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಅಗ್ನಿಶಾಮಕ ಇಲಾಖೆಯ ವಕ್ತಾರರ ಪ್ರಕಾರ ಗ್ಯಾರೇಜ್ ಒಳಗೆ ಬೆಂಕಿ ಬೀಳುವಂತಹದ್ದು ಏನೂ ಇರಲಿಲ್ಲವಾದ್ದರಿಂದ, ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದ್ದರಿಂದ ಎಲ್ಲಾ ಗಮನವನ್ನು ಎಲೆಕ್ಟ್ರಿಕ್ ವಾಹನದ ಮೇಲೆ ನೀಡಲಾಗಿದೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ವಾಹನ ನಿಲುಗಡೆ ಮಾಡಿರುವಾಗ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಬೀಳುತ್ತಿರುವುದು ಇದು ಮೊದಲ ಸಲವೇನಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ಬೇಸ್‍‍ಮೆಂಟಿನಲ್ಲಿ ಪಾರ್ಕಿಂಗ್ ಮಾಡಿದ್ದ ಟೆಸ್ಲಾ ಮಾಡೆಲ್ ಎಸ್ ಕಾರಿನಲ್ಲೂ ಬೆಂಕಿ ಕಾಣಿಸಿಕೊಂಡಿತ್ತು. ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಇತರ ಎರಡು ಕಾರುಗಳಿಗೂ ಬೆಂಕಿ ಆವರಿಸಿತ್ತು.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ತಗುಲಿರುವ ಹಲವಾರು ಉದಾಹರಣೆಗಳಿವೆ. ಆದರೆ ಎಲೆಕ್ಟ್ರಿಕ್ ವಾಹನವೊಂದು ಸ್ಫೋಟಗೊಂಡಿರುವುದು ಇದು ಮೊದಲನೇ ಸಲ. ಘಟನೆಯ ಬಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ತನಿಖೆ ನಡೆಸುತ್ತಿದ್ದು, ಹ್ಯುಂಡೈ ಕಂಪನಿ ಕೂಡ ತನಿಖೆ ನಡೆಸುವ ಸಾಧ್ಯತೆಗಳಿವೆ. ತನಿಖೆಯ ನಂತರವಷ್ಟೇ ಘಟನೆಗೆ ಕಾರಣಗಳೇನು ಎಂಬುದು ತಿಳಿದು ಬರಲಿದೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಹ್ಯುಂಡೈ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರ್ ಆದ ಕೋನಾವನ್ನು ಜುಲೈ 9ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಗೊಂಡಾಗ ಈ ಕಾರಿನ ಬೆಲೆ ರೂ.25.30 ಲಕ್ಷಗಳಾಗಿತ್ತು. ಈ ಕಾರಿನಲ್ಲಿ 100 ಕೆ‍‍ಡಬ್ಲ್ಯು ಮೋಟಾರ್ ಅಳವಡಿಸಲಾಗಿದ್ದು, 131 ಬಿ‍‍ಹೆಚ್‍‍ಪಿ ಹಾಗೂ 395 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಈ ಎಸ್‌ಯುವಿಯಲ್ಲಿ ವೇಗದ ಚಾರ್ಜ‍‍ರ್‍‍ಗಳಿದ್ದು ಉತ್ತಮವಾದ ಪರ್ಫಾಮೆನ್ಸ್ ನೀಡುತ್ತದೆ. ಒಂದು ಬಾರಿಗೆ ಪೂರ್ಣವಾಗಿ ಚಾರ್ಜ್ ಮಾಡಿದರೆ 452 ಕಿ.ಮೀ ದೂರದವರೆಗೆ ಚಲಿಸಬಹುದೆಂದು ಹೇಳಲಾಗಿದೆ. ಇದರಿಂದಾಗಿ ಹ್ಯುಂಡೈ ಕಂಪನಿಯು, ಈ ಎಲೆಕ್ಟ್ರಿಕ್ ಕಾರು ಬಿಡುಗಡೆಯಾದ ಕೇವಲ 10 ದಿನಗಳಲ್ಲಿ 120 ಬುಕ್ಕಿಂಗ್ ಹಾಗೂ 10,000ಕ್ಕೂ ಹೆಚ್ಚು ಟೆಸ್ಟ್ ಡ್ರೈವ್‍‍ಗಳನ್ನು ಪಡೆದಿತ್ತು.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಕೋನಾ ದೇಶಿಯ ಮಾರುಕಟ್ಟೆಯಲ್ಲಿ ಯಶಸ್ವಿನತ್ತ ಸಾಗಲು ಸಜ್ಜಾಗಿದೆ ಎಂಬುದು ಸ್ಪಷ್ಟವಾಗಿದೆ. ಮೈಲೇಜ್, ಚಾರ್ಜಿಂಗ್ ಸಮಯ, ಸುರಕ್ಷತೆ ಸೇರಿದಂತೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಿಗೆ ಇರುವ ಎಲ್ಲ ಆತಂಕಗಳನ್ನು ಇದು ದೂರಮಾಡಿದೆ.

ಸುಟ್ಟು ಕರಕಲಾದ ಹೊಚ್ಚ ಹೊಸ ಹ್ಯುಂಡೈ ಕೋನಾ

ಆದರೂ, ಈ ಘಟನೆಯು ಜನರು ಕಾರಿನ ಸುರಕ್ಷತಾ ಅಂಶವನ್ನು ಪ್ರಶ್ನಿಸಲು ಕಾರಣವಾಗಬಹುದು. ಹ್ಯುಂಡೈ ಖಂಡಿತವಾಗಿಯೂ ಈ ಸಮಸ್ಯೆಯನ್ನು ಪರಿಶೀಲಿಸಲಿದೆ. ಇದರ ಜೊತೆಗೆ ಎಲ್ಲಾ ಎಲೆಕ್ಟ್ರಿಕ್ ಕಾರುಗಳನ್ನೂ ಸಂಪೂರ್ಣವಾಗಿ ಪರಿಶೀಲಿಸುತ್ತದೆ.

News Source: CBC

Image Courtesy: Mathieu Daniel Wagner/Radio-Canada

Most Read Articles

Kannada
English summary
Hyundai Kona Electric Catches Fire & Explodes While Parked Inside A Garage - Read in kannada
Story first published: Tuesday, July 30, 2019, 11:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more