ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ದೇಶದ ಬಹುತೇಕ ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಮಳೆಯೇ ಬಾರದೆ ಹನಿ ನೀರಿಗೂ ಪರದಾಟುವಂತಹ ಪರಿಸ್ಥಿತಿ ಎದುರಾಗಿದ್ದರೆ ಮುಂಬೈನಲ್ಲಿ ಮಾತ್ರ ಮಾಹಾಮಳೆಯು ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಮಳೆನೀರು ನುಗ್ಗಿದ ಪರಿಣಾಮ ಪ್ರಮುಖ ರಸ್ತೆಗಳು ಹಾಳಾಗಿ ಸಂಚಾರ ವ್ಯವಸ್ಥೆಯೇ ಸಂಪೂರ್ಣ ಹದಗೆಟ್ಟುಹೋಗಿದ್ದು, ಬಹುತೇಕ ವಾಹನಗಳು ಮಳೆ ನೀರಿನಲ್ಲಿಯೇ ಕೆಟ್ಟುನಿಂತಿವೆ. ಹೀಗಾಗಿ ಮಹಾಮಳೆಯಿಂದಾಗಿ ತೊಂದರೆಗೆ ಸಿಲುಕಿರುವ ತನ್ನ ಗ್ರಾಹಕರ ನೆರವಿಗಾಗಿ ಹ್ಯುಂಡೈ ಸಂಸ್ಥೆಯು ಟಾಸ್ಕ್ ಫೋರ್ಸ್ ರಚಿಸಿದೆ.

ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ಮಳೆ ನೀರು ನುಗ್ಗಿ ಹಾನಿಗಿಡಾದ ಪ್ರದೇಶಗಳಲ್ಲಿನ ಗ್ರಾಹಕರ ನೇರವಿಗಾಗಿ ವಿಶೇಷ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಿರುವ ಹ್ಯುಂಡೈ ಸಂಸ್ಥೆಯು ನಿಗದಿತ ಅವಧಿಯಲ್ಲಿ ಮಳೆನೀರು ನುಗ್ಗಿ ತೊಂದರೆಗೆ ಈಡಾದ ಕಾರುಗಳಲ್ಲಿನ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ಘೋಷಿಸಿದ್ದು, ಕಾರುಗಳನ್ನು ಟೋಯಿಂಗ್ ಮಾಡಲು 24 ಟೋಯಿಂಗ್ ಟ್ರಕ್ ಮತ್ತು 36 ಫ್ಲ್ಯಾಟ್‌ಬೆಡ್ ಟ್ರಕ್‌ಗಳನ್ನು ನಿಯೋಜಿಸಿದೆ. ಜೊತೆಗೆ ಬರೋಬ್ಬರಿ 33 ಸಾವಿರದಷ್ಟು ಸುರಕ್ಷತೆ ಕುರಿತಾಗಿ ಅರಿವು ಮೂಡಿಸುವ ಸಂದೇಶಗಳನ್ನು ರವಾನಿಸಿದ್ದು, ಶೀಘ್ರದಲ್ಲೇ ಹಾನಿಗಿಡಾದ ಕಾರುಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.

ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ಹಾಗೆಯೇ (0124- 4343937) ಟೋಲ್ ಫ್ರೀ ದೂರವಾಣಿ ಸಂಖ್ಯೆಯನ್ನು ನೀಡಿರುವ ಹ್ಯುಂಡೈ ಸಂಸ್ಥೆಯು, 100ಕ್ಕೂ ಹೆಚ್ಚು ನುರಿತ ಆಟೋ ಮೊಬೈಲ್ ಟೆಕ್ನಿಷಿಯನ್‌ಗಳನ್ನು ಮಳೆಯಿಂದ ಹಾನಿಗಿಡಾದ ವಾಹನಗಳ ತಪಾಸಣೆ ಮತ್ತು ಸೇವೆಗಾಗಿಯೇ ನೇಮಕ ಮಾಡಿದೆ.

ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ಮಳೆ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯು ಗ್ರಾಹಕರಲ್ಲಿ ಅರಿವು ಮೂಡಿಸುತ್ತಿರುವ ಹ್ಯುಂಡೈ ಸಂಸ್ಥೆಯು ಕಾರುಗಳ ತಪಾಸಣೆಯನ್ನು ಉಚಿತವಾಗಿ ಕೈಗೊಂಡಿದ್ದು, ಬೀಡಿಭಾಗಗಳ ಸೇವೆ ಮೇಲೆ ಶೇ.50ರಷ್ಟು ಡಿಸ್ಕೌಂಟ್ ಘೋಷಿಸಿದೆ.

ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ಇದರೊಂದಿಗೆ ದೇಶದ ಅತಿದೊಡ್ಡ ಕಾರು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಸಹ ಮುಂಬೈ ಮಾಹಾಮಳೆಯಲ್ಲಿ ಸಿಲುಕಿದ ತನ್ನ ನೆಚ್ಚಿನ ಗ್ರಾಹಕರಿಗೆ ಪರಿಹಾರ ಒದಗಿಸುತ್ತಿದ್ದು, ಮಹಾಮಳೆಯಿಂದ ಹಾನಿಗಿಡಾದ ಪ್ರದೇಶದಲ್ಲಿರುವ ಕಾರು ಮಾಲೀಕರಿಗೆ ಪ್ರತ್ಯೇಕವಾಗಿ ಸೇವಾ ಕೇಂದ್ರಗಳು ತೆರಿದಿದೆ. ಬರೋಬ್ಬರಿ 3.5 ಲಕ್ಷ ಗ್ರಾಹಕರಿಗೆ ಮಳೆಯಿಂದ ಕಾರಿಗೆ ಹಾನಿಯಾಗದಂತೆ ವಹಿಸಬಹುದಾದ ಅಗತ್ಯ ಕ್ರಮಗಳ ಕುರಿತು ನಿರಂತರ ಸಂದೇಶಗಳನ್ನು ರವಾನಿಸುವ ಮೂಲಕ ವಾಹನಗಳು ಮಳೆ ನೀರಿನಲ್ಲಿ ಕೊಚ್ಚಿಹೋಗದಂತೆ ತಡೆಯಲು ಬೇಕಿರುವ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದೆ.

ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ಮಹಾಮಳೆಗೆ ಸಿಲುಕಿರುವ ವಾಹನ ಮಾಲೀಕರ ನೆರವಿಗಾಗಿ ಆಯ್ದ ಪ್ರದೇಶಗಳಲ್ಲಿ ತಾತ್ಕಾಲಿಕ 24x7 ಸೇವಾ ಕೇಂದ್ರಗಳನ್ನು ತೆರಿದಿರುವ ಮಾರುತಿ ಸುಜುಕಿ ಸಂಸ್ಥೆಯು, ಬೀಡಿಭಾಗಗಳು ಮತ್ತು ಎಂಜಿನ್‌ನಲ್ಲಿ ನೀರು ಸೇರಿಕೊಳ್ಳುವುದರಿಂದ ಆಗುವ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ನೀಡಲು ಹೆಚ್ಚುವರಿ ಆಟೋ ತಜ್ಞರನ್ನು ನೇಮಕ ಮಾಡಿದೆ.

ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ಜೊತೆಗೆ ವಿಮಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಗ್ರಾಹಕರಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ವಿಮಾ ಪರಿಹಾರವನ್ನು ಬಿಡುಗಡೆಗೊಳಿಸುವಲ್ಲಿ ನೆರವಾಗುತ್ತಿದೆ. ಇದರಿಂದ ಮಹಾಮಳೆಯಲ್ಲಿ ಸಿಲುಕಿದ್ದ ವಿವಿಧ ಪ್ರದೇಶಗಳಲ್ಲಿನ ಮಾರುತಿ ಸುಜುಕಿ ಗ್ರಾಹಕರಿಗೆ ಇದು ಅನುಕೂಲಕರವಾಗಿದ್ದು, ಮಳೆ ನಡುವೆಯೂ ತುರ್ತು ಸೇವೆ ಒದಗಿಸುತ್ತಿರುವ ಮಾರುತಿ ಸುಜುಕಿ ಕಾರ್ಯಕ್ಕೆ ಗ್ರಾಹಕರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ಪ್ರತಿಯೊಬ್ಬ ಕಾರು ಮಾಲೀಕರು ಕೂಡಾ ಮಳೆಗಾಲದ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಒಳಿತು. ಯಾಕೇಂದ್ರೆ ತಗ್ಗುಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗುವ ಮಳೆ ನೀರಿನಿಂದಾಗಿ ವಾಹನಗಳ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋಗುವ ಸಾಧ್ಯತೆಗಳಿರುತ್ತವೆ. ಇದು ನೇರವಾಗಿ ವಾಹನಗಳ ಎಂಜಿನ್ ಮೇಲೆ ಪರಿಣಾಮ ಬೀರುತ್ತದೆ.

ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ಇನ್ನು ಪ್ರತಿಯೊಬ್ಬ ಕಾರು ಮಾಲೀಕರು ಕೂಡಾ ಮಳೆಗಾಲದ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಒಳಿತು. ಯಾಕೇಂದ್ರೆ ತಗ್ಗುಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗುವ ಮಳೆ ನೀರಿನಿಂದಾಗಿ ವಾಹನಗಳ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋಗುವ ಸಾಧ್ಯತೆಗಳಿರುತ್ತವೆ. ಇದು ನೇರವಾಗಿ ವಾಹನಗಳ ಎಂಜಿನ್ ಮೇಲೆ ಪರಿಣಾಮ ಬೀರುತ್ತದೆ.

ಮುಂಬೈ ಮಹಾಮಳೆ: ತುರ್ತು ಸೇವೆಗಾಗಿ ಹ್ಯುಂಡೈನಿಂದ ಟಾಸ್ಕ್ ಫೋರ್ಸ್

ಇದರಿಂದಾಗಿ ಇಂಧನದಲ್ಲಿ ನೀರಿನ ಮಿಶ್ರಣವಾಗಿ ಕಾರಿನ ಎಂಜಿನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ನಿಮ್ಮ ವಾಹನಗಳಲ್ಲೂ ಇಂತದ್ದೆ ಸಮಸ್ಯೆಯಾಗಿದ್ದಲ್ಲಿ ಸ್ವಯಂ ಪ್ರೇರಿತವಾಗಿ ಪರಿಹಾರ ಕಂಡುಕೊಳ್ಳುವುದಕ್ಕಿಂತ ಕೂಡಲೇ ನುರಿತ ತಜ್ಞರಲ್ಲಿ ಪರಿಹಾರ ಕಂಡುಕೊಳ್ಳುವುದು ಒಳಿತು.

Most Read Articles

Kannada
English summary
Hyundai Launches A Relief Task Force Program To Support Flood Affected Customers.
Story first published: Saturday, July 13, 2019, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X