ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಅನಾವರಣಗೊಳಿಸಲಿದೆ ಹ್ಯುಂಡೈ

ಬಹುರಾಷ್ಟ್ರೀಯ ಆಟೋಮೊಬೈಲ್ ಕಂಪನಿಯಾದ ಹ್ಯುಂಡೈ ಮೋಟಾರ್ ಗ್ರೂಪ್ ಹೊಸ ಕಂಟ್ಯೂನಿಯಸ್ ವೇರಿಯೆಬಲ್ ವಾಲ್ವ್ ಡ್ಯೂರೇಷನ್ (ಸಿವಿವಿಡಿ) ಟೆಕ್ನಾಲಜಿಯನ್ನು ಅನಾವರಣಗೊಳಿಸುವುದಾಗಿ ಘೋಷಿಸಿದೆ. ಹೊಸ ಸಿವಿವಿಡಿ ಟೆಕ್ನಾಲಜಿಯನ್ನು ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಕಿಯಾ ಹಾಗೂ ಹ್ಯುಂಡೈ ಕಾರುಗಳಲ್ಲಿ ಅಳವಡಿಸಲಾಗುವುದಾಗಿ ಹ್ಯುಂಡೈ ಕಂಪನಿ ತಿಳಿಸಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಅನಾವರಣಗೊಳಿಸಲಿದೆ ಹ್ಯುಂಡೈ

ಕಂಪನಿಯು ಇತ್ತೀಚಿಗಷ್ಟೇ, ತಾನೇ ಅಭಿವೃದ್ಧಿಪಡಿಸಿರುವ ತನ್ನ ಹೊಸ ತಂತ್ರಜ್ಞಾನದ ಜಿ1.6 ಟಿ-ಜಿಡಿ‍ಐ ಸ್ಮಾರ್ಟ್ ಸ್ಟ್ರೀಮ್ ಎಂಜಿನ್ ಅನ್ನು ಅನಾವರಣಗೊಳಿಸಿತ್ತು. ಹ್ಯುಂಡೈ ಮೋಟಾರ್ ಗ್ರೂಪ್‍‍ನ ಪ್ರಕಾರ, ಸಿವಿವಿಡಿ ಟೆಕ್ನಾಲಜಿಯಿಂದಾಗಿ ಮಾಲಿನ್ಯ ಪ್ರಮಾಣದಲ್ಲಿ 12%ನಷ್ಟು ಇಳಿಕೆಯಾಗಲಿದೆ. ಇದರ ಜೊತೆಗೆ ಪರ್ಫಾಮೆನ್ಸ್ ನಲ್ಲಿ 4% ಹಾಗೂ ಫ್ಯೂಯಲ್ ಎಫಿಶಿಯೆನ್ಸಿಯಲ್ಲಿ 5%ನಷ್ಟು ಸುಧಾರಣೆಯಾಗಲಿದೆ.

ಹ್ಯುಂಡೈ ಮೋಟಾರ್ ಗ್ರೂಪ್‍‍ನ ಎನ್ ಡಿವಿಷನ್‍‍ನ ರೀಸರ್ಚ್ ಹಾಗೂ ಡೆವಲಪ್‍‍ಮೆಂಟ್‍‍ನ ಮುಖ್ಯಸ್ಥರಾದ ಅಲ್ಬರ್ಟ್ ಬಿಯರ್‍‍ಮನ್‍‍‍ರವರು ಮಾತನಾಡಿ, ಸಿವಿವಿಡಿ ಟೆಕ್ನಾಲಜಿಯಲ್ಲಿನ ಸುಧಾರಣೆಯು ಕಂಪನಿಯು ಪವರ್‍‍ಟ್ರೇನ್ ಟೆಕ್ನಾಲಜಿಯಲ್ಲಿ ಬಲಿಷ್ಟವಾಗುತ್ತಿರುವುದನ್ನು ತೋರಿಸುತ್ತದೆ. ಕಂಪನಿಯು ಹೊಸತನವನ್ನು ಮುಂದುವರೆಸಲು ತನ್ನ ಪ್ರಯತ್ನಗಳನ್ನು ಮುಂದುವರೆಸಲಿದೆ. ತಂತ್ರಜ್ಞಾನದ ವಿಷಯದಲ್ಲಿ ಬದಲಾವಣೆಗಳನ್ನು ತರಲು ಹಾಗೂ ಕಂಪನಿಯ ವ್ಯವಹಾರ ಮಾದರಿಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದರು.

ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಅನಾವರಣಗೊಳಿಸಲಿದೆ ಹ್ಯುಂಡೈ

ಹೊಸ ಸ್ಮಾರ್ಟ್ ಸ್ಟ್ರೀಮ್ ಜಿ1.6 ಟಿ-ಜಿಡಿಐ ಎಂಜಿನ್, 4 ವಾಲ್ವ್ ಟರ್ಬೊ ಪೆಟ್ರೋಲ್ ಯೂನಿಟ್ ಹೊಂದಿದ್ದು, 180 ಬಿಹೆಚ್‍‍ಪಿ ಪವರ್ ಹಾಗೂ 265 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಸಿವಿವಿಡಿ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಎಂಜಿನ್, ಲೋ ಪ್ರೆಷರ್ ಎಕ್ಸಾಸ್ಟ್ ಗ್ಯಾಸ್ ರೀ ಸರ್ಕ್ಯೂಲೇಷನ್ ಟೆಕ್ನಾಲಜಿಯನ್ನು ಹೊಂದಿದೆ. ಇದರಿಂದಾಗಿ ಕಾರುಗಳಲ್ಲಿನ ಇಂಧನ ದಕ್ಷತೆಯು ಮತ್ತಷ್ಟು ಹೆಚ್ಚಾಗಲಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಅನಾವರಣಗೊಳಿಸಲಿದೆ ಹ್ಯುಂಡೈ

ಮುಂಬರಲಿರುವ ಹ್ಯುಂಡೈ ಸೋನಾಟಾ ಟರ್ಬೊ ಕಾರ್ ಅನ್ನು 2019ರ ಎರಡನೇ ಭಾಗದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಕಾರು ಹೊಸ ಸ್ಮಾರ್ಟ್ ಸ್ಟ್ರೀಮ್ ಜಿ1.6 ಟಿ-ಜಿಡಿ‍ಐ ಎಂಜಿನ್ ಹೊಂದಿದೆ. ಈ ಎಂಜಿನ್ ಅನ್ನು ಹ್ಯುಂಡೈ ಹಾಗೂ ಕಿಯಾ ಕಂಪನಿಗಳ ಭವಿಷ್ಯದ ಕಾರುಗಳಲ್ಲಿಯೂ ಸಹ ಅಳವಡಿಸಲಾಗುವುದು. ಹ್ಯುಂಡೈ ಮೋಟಾರ್ಸ್ ಎಂದು ಕರೆಯಲ್ಪಡುವ ಹ್ಯುಂಡೈ ಮೋಟಾರ್ ಗ್ರೂಪ್ ದಕ್ಷಿಣ ಕೊರಿಯಾ ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದೆ.

ಕಂಪನಿಯು ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಕಂಪನಿಯು ದೇಶದ ಪ್ರಮುಖ ಕಾರು ತಯಾರಕರಲ್ಲಿ ಒಂದಾಗಿದೆ. ಹ್ಯುಂಡೈ ಮೋಟಾರ್ ಕಂಪನಿಯನ್ನು, 1998ರಲ್ಲಿ ಕಿಯಾ ಮೋಟಾರ್ಸ್ ನಿಂದ 51% ಶೇರುಗಳನ್ನು ಖರೀದಿಸಿದ ನಂತರ ರಚಿಸಲಾಯಿತು.

ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಅನಾವರಣಗೊಳಿಸಲಿದೆ ಹ್ಯುಂಡೈ

ಹ್ಯುಂಡೈ ಕಂಪನಿಯು ಎಂದಿಗೂ ಯಾವಾಗಲೂ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುತ್ತದೆ. ಹೊಸ ಸಿವಿವಿಡಿ ತಂತ್ರಜ್ಞಾನವು ಅದನ್ನು ಸಾಬೀತುಪಡಿಸಿದೆ. ಹೊಸ ತಂತ್ರಜ್ಞಾನದ ಎಂಜಿನ್ ಅನ್ನು ಬಿಎಸ್ 6 ಹಾಗೂ ಯುರೋ 6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ಆ ಪ್ರಶ್ನೆಗೆ ಕೇವಲ ಈ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿರುವ ಎಂಜಿನಿಯರ್‍‍ಗಳು ಮಾತ್ರ ಉತ್ತರಿಸಬಲ್ಲರು.

Most Read Articles

Kannada
English summary
Hyundai Motor Group Unveil New CVVD Engine Technology — Does It Better BS-VI Norms? - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X