ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ಹ್ಯುಂಡೈ ಸಂಸ್ಥೆಯು ಅಗಸ್ಟ್ ಅವಧಿಗಾಗಿ ತನ್ನ ಜನಪ್ರಿಯ ಕಾರುಗಳ ಖರೀದಿ ಮೇಲೆ ಗರಿಷ್ಠ ಪ್ರಮಾಣದ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ್ದು, ಆಯ್ದ ಕಾರು ಮಾದರಿಗಳ ಮೇಲೆ ರೂ.50 ಸಾವಿರದಿಂದ ರೂ.2.05 ಲಕ್ಷದ ತನಕ ಡಿಸ್ಕೌಂಟ್ ಘೋಷಣೆ ಮಾಡಿದೆ.

ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ಹೊಸ ನಿಯಮಾವಳಿಗಳು ಮತ್ತು ಇಂಧನ ಆಧರಿತ ವಾಹನಗಳ ನೋಂದಣಿಯ ಮೇಲೆ ಗರಿಷ್ಠ ಪ್ರಮಾಣದ ಶುಲ್ಕ ವಿಧಿಸುತ್ತಿರುವುದು ದೇಶಿಯ ಆಟೋ ಮಾರುಕಟ್ಟೆಯಲ್ಲಿ ಪ್ರತಿಕೂಲಕರ ವಾತಾವರಣ ಸೃಷ್ಠಿಯಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿವೆ. ಇದರಿಂದ ಸ್ಟಾಕ್ ಪ್ರಮಾಣವು ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುತ್ತಿದ್ದು, ಗ್ರಾಹಕರನ್ನು ಸೆಳೆಯಲು ಭಾರೀ ಪ್ರಮಾಣದ ಡಿಸ್ಕೌಂಟ್ ಆಫರ್‌ಗಳನ್ನು ನೀಡಲಾಗುತ್ತಿದೆ. ಹ್ಯುಂಡೈ ಕೂಡಾ ತನ್ನ ಪ್ರಮುಖ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ಗಳನ್ನು ಪ್ರಕಟಿಸಿದೆ.

ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್

ಹ್ಯುಂಡೈ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಡಿಸೈನ್ ಪ್ರೇರಿತ ಗ್ರಾಂಡ್ ಐ10 ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಟಾಕ್ ಕ್ಲಿಯೆರೆನ್ಸ್ ಸಂಬಂಧ ಗ್ರಾಂಡ್ ಐ10 ಖರೀದಿ ಮೇಲೆ ರೂ.95 ಸಾವಿರ ತನಕ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಈ ಹೊಸ ಆಫರ್ ಸ್ಟಾಕ್ ಮುಗಿಯುವ ತನಕ ಲಭ್ಯವಿರಲಿದ್ದು, ಡೀಲರ್ಸ್ ಮಟ್ಟದಲ್ಲಿ ಇನ್ನು ಕೆಲವು ಹೆಚ್ಚುವರಿ ಮಟ್ಟದ ಆಫರ್‌ಗಳು ದೊರೆಯಲಿವೆ.

ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ಎಕ್ಸ್‌ಸೆಂಟ್ ಕಂಪ್ಯಾಕ್ ಸೆಡಾನ್

ಟ್ಯಾಕ್ಸಿ ಮತ್ತು ವೈಯಕ್ತಿಯ ಬಳಕೆ ಕಾರು ಮಾದರಿಯಾಗಿರುವ ಎಕ್ಸ್‌ಸೆಂಟ್ ಕಂಪ್ಯಾಕ್ಟ್ ಸೆಡಾನ್ ಮಾದರಿಯು ಹ್ಯುಂಡೈ ಸಂಸ್ಥೆಯ ಜನಪ್ರಿಯ ಕಾರು ಆವೃತ್ತಿಯಾಗಿದ್ದು, ಎಕ್ಸ್‌ಸೆಂಟ್ ಕೂಡಾ ಮುಂಬರುವ ಡಿಸೆಂಬರ್ ಹೊತ್ತಿಗೆ ಹೊಸ ಡಿಸೈನ್ ಪ್ರೇರಣೆಯೊಂದಿಗೆ ಉನ್ನತಿಕರಣಗೊಳ್ಳಲಿದೆ. ಹೀಗಾಗಿ ಸ್ಟಾಕ್ ತೆರವು ಮಾಡಲಾಗುತ್ತಿದ್ದು, ಎಕ್ಸ್‌ಸೆಂಟ್ ಖರೀದಿ ಮೇಲೂ ರೂ.1 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.

ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ವೆರ್ನಾ ಸೆಡಾನ್

ಸಿ ಸೆಗ್ಮೆಂಟ್‌ನಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ವೆರ್ನಾ ಸೆಡಾನ್ ಆವೃತ್ತಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಉತ್ತಮ ಪೈಪೋಟಿ ಮಾದರಿಯಾಗಿದೆ. ಆದ್ರೆ ಕೆಲ ತಿಂಗಳಿನಿಂದ ಕಾರು ಮಾರಾಟವು ತಗ್ಗಿರುವ ಹಿನ್ನೆಲೆಯಲ್ಲಿ ವೆರ್ನಾ ಮೇಲೂ ಕೆಲವು ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ವೆರ್ನಾ ಮೇಲೆ ರೂ.65 ಸಾವಿರ ಡಿಸ್ಕೌಂಟ್ ಆಫರ್ ನೀಡಲಾಗುತ್ತಿದ್ದು, ಆಯ್ದ ಕೆಲವು ಡೀಲರ್ಸ್‌ನಲ್ಲಿ ಹೆಚ್ಚುವರಿ ಉಚಿತ ಸರ್ವಿಸ್‌ಗಳು ಕೂಡಾ ಲಭ್ಯವಿರಲಿವೆ.

ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ಸ್ಯಾಂಟ್ರೋ ಹ್ಯಾಚ್‌ಬ್ಯಾಕ್

ಕಳೆದ 2018ರ ನವೆಂಬರ್‌ನಲ್ಲಿ ಹೊಸ ಬದಲಾವಣೆಗಳೊಂದಿಗೆ ಮರಳಿ ಮಾರುಕಟ್ಟೆಗೆ ಪ್ರವೇಶಿಸಿರುವ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಖರೀದಿ ಮೇಲೆ ರೂ. 50 ಸಾವಿರ ಡಿಸ್ಕೌಂಟ್ ಘೋಷಿಸಲಾಗಿದ್ದು, ಮಾರುತಿ ಸೆಲೆರಿಯೊ ಮತ್ತು ಟಾಟಾ ಟಿಯಾಗೋ ಕಾರುಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಗರಿಷ್ಠ ಮಟ್ಟದ ಗ್ರಾಹಕರನ್ನು ಸೆಳೆಯಲು ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ.

ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ಎಲೈಟ್ ಐ20 ಮತ್ತು ಐ20 ಆಕ್ಟಿವ್

ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಸದ್ಯ ಸ್ವಿಫ್ಟ್ ನಂತರ 2ನೇ ಸ್ಥಾನದಲ್ಲಿರುವ ಎಲೈಟ್ ಐ20 ಮತ್ತು ಐ20 ಆಕ್ಟಿವ್ ಕಾರುಗಳ ಮೇಲೆ ಹ್ಯುಂಡೈ ಸಂಸ್ಥೆಯು ರೂ. 75 ಸಾವಿರ ಡಿಸ್ಕೌಂಟ್ ನೀಡಲಾಗಿದ್ದು, ಭಾರೀ ಪ್ರಮಾಣದಲ್ಲಿರುವ ಸ್ಟಾಕ್ ತಗ್ಗಿಸಲು ಈ ಆಫರ್‌ ನೀಡಲಾಗುತ್ತಿದೆ.

MOST READ: ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ಎಲಂಟ್ರಾ ಸೆಡಾನ್

ಹ್ಯುಂಡೈ ಸಂಸ್ಥೆಯು ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟ್ ಎಲಂಟ್ರಾ ಮಾದರಿಯನ್ನು ಕಳೆದ ಕೆಲದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದು, ಇದೀಗ ಭಾರತದಲ್ಲೂ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹೀಗಾಗಿ ಸ್ಟಾಕ್ ಪ್ರಮಾಣದ ಮೇಲೆ ರೂ. 2.05 ಲಕ್ಷದ ತನಕ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆವೃತ್ತಿಯು ಸೆಪ್ಟೆಂಬರ್ ಅಥವಾ ಅಕ್ಟೋಬರ್ ಅಂತ್ಯಕ್ಕೆ ಖರೀದಿಗೆ ಲಭ್ಯವಾಗಲಿದೆ.

MOST READ: ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ಟಕ್ಸನ್ ಎಸ್‌ಯುವಿ

ಹ್ಯುಂಡೈ ಸಂಸ್ಥೆಯ ಫ್ಯಾಗ್‌ಶಿಫ್ ಎಸ್‌ಯುವಿ ಮಾದರಿಯಾದ ಟಕ್ಸನ್ ಮಾದರಿ ಮೇಲೆ ರೂ.1.05 ಲಕ್ಷ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದ್ದು, ಪ್ರತಿ ವೆರಿಯೆಂಟ್ ಮೇಲೆ ವಿವಿಧ ಮಾದರಿಯ ಹೆಚ್ಚುವರಿ ಆಫರ್‌ಗಳು ಸಿಗಲಿವೆ. ಇದು 2.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನಲ್ಲಿ ಖರೀದಿ ಲಭ್ಯವಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಈ ಕಾರಿಗೆ ಭಾರೀ ಬೇಡಿಕೆಯಿದೆ.

MOST READ: ಒಂದೇ ನಂಬರ್‌ನಲ್ಲಿ ಎರಡು ಕಾರು- ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ಗರಿಷ್ಠ ಪ್ರಮಾಣದ ಡಿಸ್ಕೌಂಟ್ - ಹ್ಯುಂಡೈ ಕಾರು ಖರೀದಿಗೆ ಇದು ಸುವರ್ಣಾವಕಾಶ..!

ಇನ್ನು ಹ್ಯುಂಡೈ ನಿರ್ಮಾಣದ ಕ್ರೆಟಾ ಮತ್ತು ಹೊಸದಾಗಿ ಬಿಡುಗಡೆ ಮಾಡಲಾಗಿರುವ ವೆನ್ಯೂ ಮೇಲೆ ಯಾವುದೇ ಆಫರ್ ನೀಡಿಲ್ಲವಾದರೂ ಡೀಲರ್ಸ್ ಮಟ್ಟದಲ್ಲಿ ಕೆಲವು ವಿಶೇಷ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲಾಗುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆಯು ನೀಡಿರುವ ಆಫರ್‌ಗಳಿಗೆ ಪೈಪೋಟಿಯಾಗಿ ಹ್ಯುಂಡೈ ಕೂಡಾ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದೆ.

Article Published On: Tuesday, August 6, 2019, 14:07 [IST]
English summary
Discounts of up to Rs 2 lakh available on Hyundai hatchbacks, sedans and SUVs. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+