ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31,000 ವರೆಗು ಡಿಸ್ಕೌಂಟ್

ಹ್ಯುಂಡೈ ಸಂಸ್ಥೆಯು 2018ರ ಅಕ್ಟೋಬರ್‍‍ನಲ್ಲಿ ತಮ್ಮ ಜನಪ್ರಿಯ ಸ್ಯಾಂಟೋ ಕಾರನ್ನು ಮರು ಬಿಡುಗಡೆ ಮಾಡಲಾಗಿದ್ದು, ಬಿಡುಗಡೆಯಾದ ಸುಮಾರು 6 ತಿಂಗಳ ನಂತರ ಈ ಕಾರಿನ ಖರೀದಿಯ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಹೌದು, ಗಾಡಿವಾಡಿ ವರದಿಗಳ ಪ್ರಕಾರ ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ರೂ. 11,000 ಸಾವಿರದ ನಗದು ರಿಯಾಯಿತಿ ಮತ್ತು ರೂ. 20,000 ವರೆಗಿನ ಎಕ್ಸ್ಚೆಂಜ್ ಬೋನಸ್ ಅನ್ನು ಗ್ರಾಹಕರು ಪಡೆಯಬಹುದಾಗಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಮಾರ್ಚ್ 2019 ಸ್ಯಾಂಟ್ರೋ ಕಾರುಗಳ ಮಾರಾಟದಲ್ಲಿ 8280 ಯೂನಿಟ್ ಮಾರಾಟವಾದರೆ ಇನ್ನು ಏಪ್ರಿಲ್ 2019ರಲ್ಲಿ ಸ್ಯ್ಮಾರು 6906 ಯೂನಿಟ್ ಮಾತ್ರ ಮಾರಾಟವಾಗಿದೆ. ಈಗಾಗಲೇ ಹ್ಯುಂಡೈ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಸಮರು 50,000 ಕ್ಕು ಹೆಚ್ಚಿನ ಸ್ಯಾಂಟ್ರೋ ಕಾರನ್ನು ಮಾರಾಟ ಮಾಡಲಾಗಿದ್ದು, ಇನ್ನು ಕೆಲ್ವೇ ದಿನಗಳಲ್ಲಿ ಈ ಕಾರಿನ ಬೆಲೆಯನ್ನು ಏರಿಸಲಿದೆ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಇನ್ನು ಹೊಸ ಸ್ಯಾಂಟ್ರೋ ಕಾರು ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಇಂಧನ ಆಯ್ಕೆಯನ್ನು ಹೊಂದಿದ್ದು, ಟಾಲ್-ಬಾಯ್ ಡಿಸೈನ್ ಹೊಂದಿರುವ ಹೊಸ ಕಾರು ವ್ಯಯಕ್ತಿಕ ಬಳಕೆಯ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುತ್ತಿದೆ. ಬಿಡುಗಡೆಯಾಗಿರುವ ಹೊಸ ಸ್ಯಾಂಟ್ರೋ ಕಾರು ಐದು ಪ್ರಮುಖ ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಸೌಲಭ್ಯಗಳಿಗೆ ಅನುಗುಣವಾಗಿ ಡಿ-ಲೈಟ್, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟ್ರಾ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಹಳೆಯ ಮಾದರಿಯ ಸ್ಯಾಂಟ್ರೋ ಕಾರಿಗೂ ಮತ್ತು ಹೊಸ ಸ್ಯಾಂಟ್ರೋ‌ ಕಾರಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಮಹತ್ವದ ಬದಲಾವಣೆ ಕಂಡಿರುವ ಹೊಸ ಸ್ಯಾಂಟ್ರೋ ಕಾರು ಹೊಚ್ಚ ಹೊಸ ಡಿಸೈನ್ ಪ್ರೇರಿತ ಕಾಸ್‌ಕ್ಯಾಡಿಂಗ್ ಬ್ಲ್ಯಾಕ್ ಗ್ರಿಲ್, ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಕಾರಿನ ಹಿಂಭಾಗ ಡಿಸೈನ್ ಕೂಡಾ ಗುರತರ ಬದಲಾವಣೆ ಪಡೆದುಕೊಂಡಿದ್ದು, ದೊಡ್ಡ ಗಾತ್ರದ ವಿಂಡ್ ಶಿಲ್ಡ್, ನವೀಕೃತ ಟೈಲ್ ಲೈಟ್ ಕ್ಲಸ್ಟರ್, ಹೈ ಸ್ಟಾಪ್ ಲ್ಯಾಂಪ್, ಹೊಸ ರಿಯರ್ ಬಂಪರ್ ಸೌಲಭ್ಯದಿಂದಾಗಿ ನೋಡಲು ಗ್ರಾಂಡ್ ಐ10 ನಂತೆಯೇ ಲುಕ್ ಪಡೆದುಕೊಂಡಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಹಾಗೆಯೇ ಪ್ರೀಮಿಯಂ ಇಂಟಿರಿಯರ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಹೊಸ ಸ್ಯಾಂಟ್ರೋ ಕಾರು ಒಳಭಾಗದ ವಿನ್ಯಾಸಗಳು ಸಹ ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷವಾಗಿದ್ದು, ವೀಲ್ಹ್ ಆರ್ಚ್‌ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರಿನ ಕ್ಯಾಬಿನ್ ಸ್ಥಳಾವಕಾಶ ಕೂಡಾ ಹೆಚ್ಚಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುವ ಡ್ಯುಯಲ್ ಥೀಮ್ ಡ್ಯಾಶ್ ಬೋರ್ಡ್, ಡೋರ್ ಟ್ರಿಮ್, ಗ್ರಾಂಡ್ ಐ10 ಮಾದರಿಯಲ್ಲಿ ಎಸಿ ವೆಂಟ್ಸ್ ಮತ್ತು ಸ್ಟೀರಿಂಗ್ ವೀಲ್ಹ್, ಸಿಲ್ವರ್ ಅಕ್ಸೆಂಟ್ ಮತ್ತು ಹಿಂಬದಿಯ ಪ್ರಯಾಣಿಕರಿಗೂ ಪ್ರತ್ಯೇಕ ಎಸಿ ವೆಂಟ್ಸ್ ನೀಡಲಾಗಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಪ್ರೀಮಿಯಂ ವೈಶಿಷ್ಟ್ಯತೆಗಳಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಮಿರರ್‌ ಲಿಂಕ್, ಎಲೆಕ್ಟ್ರಿಕ್ ಅಡ್ಜೆಸ್ಟ್‌ಮೆಂಟ್ ರಿಯರ್ ವ್ಯೂವ್ ಮಿರರ್, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಸೌಲಭ್ಯವಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಎಂಜಿನ್ ಸಾಮರ್ಥ್ಯ

ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರು 1.1-ಲೀಟರ್ (1,100 ಸಿಸಿ) ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಇದಲ್ಲದೇ ಹೊಸ ಸ್ಯಾಂಟ್ರೋ ಕಾರಿನ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಲಭ್ಯವಿರಲಿದ್ದು, ಇದು ಅತ್ಯುತ್ತಮ ಮೈಲೇಜ್ ನೀಡಬಲ್ಲ ಕಾರು ಮಾದರಿಯಾಗಿ ಮತ್ತಷ್ಟು ಜನಪ್ರಿಯತೆ ಹೊಂದಲಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಮೈಲೇಜ್

ಹ್ಯುಂಡೈ ಸಂಸ್ಥೆಯ ಅಧಿಕೃತ ಮಾಹಿತಿ ಪ್ರಕಾರ ಪೆಟ್ರೋಲ್ ಎಂಜಿನ್ ಸ್ಯಾಂಟ್ರೋ ಕಾರುಗಳು ಪ್ರತಿ ಲೀಟರ್‌ಗೆ 20.3 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಸ್ಯಾಂಟ್ರೋ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 30.5 ಕಿ.ಮಿ ಗರಿಷ್ಠ ಮೈಲೇಜ್ ನೀಡಲಿವೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಲಭ್ಯವಿರುವ ಬಣ್ಣಗಳು

ಗ್ರೀನ್, ಫೈರ್ಲಿ ರೆಡ್, ಇಂಪಿರಿಯರ್ ಬ್ಲಿಜ್, ಮರಿಯನ್ ಬ್ಲ್ಯೂ, ಸ್ಟಾರ್ ಡಸ್ಟ್, ಟೈಫೂನ್ ಸಿಲ್ವರ್ ಮತ್ತು ಪೊಲಾರ್ ವೈಟ್ ಬಣ್ಣಗಳಲ್ಲಿ ಹೊಸ ಸ್ಯಾಂಟ್ರೋ ಲಭ್ಯವಾಗಲಿದೆ.

ಹೊಸ ಹ್ಯುಂಡೈ ಸ್ಯಾಂಟ್ರೋ ಕಾರಿನ ಖರೀದಿಯ ಮೇಲೆ ಪಡೆಯಿರಿ ರೂ. 31000 ವರೆಗು ಡಿಸ್ಕೌಂಟ್

ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಡ್ರೈವರ್ ಸೈಡ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಪ್ಯಾಸೆಂಜರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ಯಾಮೆರಾ, ಸ್ಪೀಡ್ ಸೆಸ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯಗಳನ್ನು ನೀಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ.

Most Read Articles

Kannada
English summary
Hyundai Santro Discount Offers — Up To Rs 31,000 Worth Of Benefits. Read In Kannada
Story first published: Wednesday, May 8, 2019, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X