ಡಿಜಿಟಲ್ ಕೀ ತಂತ್ರಜ್ಞಾನದೊಂದಿಗೆ ಬರಲಿದೆ ಹ್ಯುಂಡೈ ಸೊನಾಟಾ..!
ಹ್ಯುಂಡೈ ತನ್ನ ಮೂರನೇ ತಲೆಮಾರಿನ 2020ರ ಹ್ಯುಂಡೈ ಸೊನಾಟಾ ಕಾರನ್ನು ನ್ಯೂಯಾರ್ಕ್ ಅಂತರರಾಷ್ಟ್ರಿಯ ಆಟೋ ಶೋನಲ್ಲಿ ಈ ವಾರ ಅನಾವರಣಗೊಳಿಸಿತು. ಈ ಸೆಡಾನ್ ನಲ್ಲಿ ಇರುವ ಹೊಸ ಫೀಚರ್ ಎಂದರೆ ಅದು ಡಿಜಿಟಲ್ ಕೀ.

ಸೊನಾಟಾ ಕಾರು 1980ರಿಂದಲೇ ಮಾರುಕಟ್ಟೆಯಲ್ಲಿದ್ದರೂ 2020ರ ಹ್ಯುಂಡೈ ಸೊನಾಟಾದಲ್ಲಿರುವ ಟೆಕ್ನಾಲಜಿಯನ್ನು ಈ ಮೊದಲು ಯಾವುದೇ ಕಾರಿನಲ್ಲಿ ಅಳವಡಿಸಿರಲಿಲ್ಲ. ಹ್ಯುಂಡೈ ನ ಡಿಜಿಟಲ್ ಕೀ, ನಿಯರ್ ಫೀಲ್ಡ್ ಕಮ್ಯೂನಿಕೇಷನ್ ಟೆಕ್ನಾಲಜಿಯನ್ನು ಬಳಸಿ ಸ್ಮಾರ್ಟ್ ಫೋನ್ ಅನ್ನು ಕೀ ಯಾಗಿ ಬದಲಿಸುತ್ತದೆ. ಇದನ್ನು ಡೆಡಿಕೇಟೆಡ್ ಹ್ಯುಂಡೈ ಅಪ್ಲಿಕೇಷನ್ ನಿಂದ ಮಾಡಲಾಗಿದೆ. ಈ ಆಪ್ ಯಾರಿಗೆ, ಎಷ್ಟು ಹೊತ್ತು ಆಕ್ಸೆಸ್ ನೀಡಬೇಕು ಎಂಬ ಆಯ್ಕೆಯನ್ನು ಮಾಲೀಕರಿಗೆ ನೀಡುತ್ತದೆ.

ಯಾವ ಸ್ಮಾರ್ಟ್ ಫೋನಿಗೆ ಆಕ್ಸೆಸ್ ನೀಡಬೇಕು ಎಂಬ ಆಯ್ಕೆಯನ್ನು ಸಹ ನೀಡುತ್ತದೆ. ಈ ಫೋನ್ ಕಾರಿನ ವ್ಯಾಪ್ತಿಯಲ್ಲಿದ್ದರೆ ಮಾತ್ರ ಕಾರನ್ನು ನಿಯಂತ್ರಿಸುತ್ತದೆ. (ಇದು ಕೆಲವೇ ಸೆಂ.ಮೀಟರ್ ವ್ಯಾಪ್ತಿಗೆ ಒಳಪಟ್ಟಿದೆ). ಈ ಆಪ್ ದೂರದಿಂದ ರಿಮೋಟ್ ಫಂಕ್ಷನ್‍ಗಳಾದ ಸೌಂಡಿಂಗ್ ಅಲಾರಂ, ಪ್ಯಾನಿಕ್ ಬಟನ್‍ಗಳನ್ನು ಒತ್ತುವುದು ಮತ್ತು ಎಂಜಿನ್ ಸ್ಟಾರ್ಟ್ ಮಾಡುವ ಕೆಲಸಗಳನ್ನು ಮಾಡುತ್ತದೆ.

ಈ ಆಕ್ಸೆಸ್ ಪ್ರತಿಯೊಬ್ಬ ಬಳಕೆದಾರನಿಗೂ ಬೇರೆ ಬೇರೆಯಾಗಿರುತ್ತದೆ. ಕಾರಿನ ಫೀಚರ್ ಕಡಿಮೆ ಇದ್ದರೆ, ವೆಹಿಕಲ್ ಬಳಕೆಯನ್ನುಕಡಿಮೆ ಮಾಡಬಹುದು. ಡಿಜಿಟಲ್ ಕೀಯನ್ನು ಯಾವಾಗ ಬೇಕಾದರೂ ದೂರದಿಂದಲೇ ರದ್ದು ಪಡಿಸಬಹುದು. ಈ ಡಿಜಿಟಲ್ ಕೀಯನ್ನು ಸದ್ಯಕ್ಕೆ ಆಂಡ್ರಾಯಿಡ್ ಫೋನ್‍ಗಳಿಗೆ ಮಾತ್ರ ನೀಡಲಾಗಿದ್ದು, ಬಾಹ್ಯ ಕೀಗಳ ಸೆಟ್ ಗಳನ್ನೂ ಜೊತೆಯಲ್ಲಿ ನೀಡಲಾಗಿದೆ.

ಹಲವು ವರ್ಷಗಳ ಕಾಲ ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಕಾರಣ ಹ್ಯುಂಡೈ ಕಂಪನಿಯು ಸೊನಾಟಾ ಕಾರುಗಳ ಮಾರಾಟವನ್ನು 2015ರಲ್ಲಿ ಸ್ಥಗಿತಗೊಳಿಸಿತ್ತು. 2001ರಲ್ಲಿ ಬಿಡುಗಡೆಯಾದ ಮೊದಲ ತಲೆಮಾರಿನ ಹ್ಯುಂಡೈ ಕಾರು ಭಾರಿ ಜನಪ್ರಿಯವಾದ ಕಾರಣ ಜಾಗ್ವಾರ್ ಶೇಪಿನ ಹ್ಯುಂಡೈ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಮಾದರಿಯ ಕಾರು ಹೋಂಡಾ ಅಕಾರ್ಡ್ ಕಾರಿನ ಮುಂದೆ ಹೆಚ್ಚು ಸದ್ದು ಮಾಡಿತ್ತು.

ಎರಡನೇ ತಲೆಮಾರಿನ ಹ್ಯುಂಡೈ ಸೊನಾಟಾ ಎಂಬೆರಾ ಕಾರನ್ನು 2005ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಕಾರು ಟೊಯೊಟಾ ಕ್ಯಾಮ್ರಿ ಮತ್ತು ಸ್ಕೋಡಾ ಸೂಪರ್ಬ್ ಕಾರುಗಳ ಮುಂದೆ ತನ್ನ ಪ್ರಭಾವ ಬೀರಲು ವಿಫಲವಾಗಿತ್ತು.

ಮತ್ತೆ 2012ರಲ್ಲಿ ಬಿಡುಗಡೆಯಾದ ಸೊನಾಟಾ ಮೂರನೇ ತಲೆಮಾರಿನ ಕಾರು ಫ್ಲ್ಯುಯಿಡಿಕ್ ಸ್ಟೈಲ್ ನಿಂದ ಅತ್ಯಾಕರ್ಷಕವಾಗಿತ್ತು. ಈಗಾಗಲೇ ತನ್ನ ಬ್ರಾಂಡ್ ವ್ಯಾಲ್ಯೂ ಕಳೆದುಕೊಂಡಿರುವ ಸೊನಾಟಾ ಕಳೆದ ಆರು ತಿಂಗಳ ಅವಧಿಯಲ್ಲಿ ತಿಂಗಳಿಗೆ ಕೇವಲ 10 ಕಾರುಗಳಂತೆ ಮಾರಾಟವಾಗಿದೆ.
MOST READ: ದಕ್ಷಿಣ ಕೊರಿಯಾಕ್ಕೂ ಕಾಲಿಟ್ಟ ರಾಯಲ್ ಎನ್‍ಫೀಲ್ಡ್..!

ಹೀಗಾಗಿ ಹೊಸ ತಲೆಮಾರಿನ ಸೊನಾಟಾ ಮೂಲಕ ಗ್ರಾಹಕರ ಆದ್ಯತೆಗೆ ಹೆಚ್ಚಿನ ಗಮನ ಹರಿಸಿರುವ ಹ್ಯುಂಡೈ ಸಂಸ್ಥೆಯು ವಿಶ್ವದರ್ಜೆಯ ಸೌಲಭ್ಯಗಳನ್ನು ನೀಡಲು ಮುಂದಾಗಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಇನ್ನು ಡಿಜಿಟಲ್ ಕೀ ಮಾದರಿಯ 2020ರ ಹ್ಯುಂಡೈ ಸೊನಾಟಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಬಗ್ಗೆ ಯಾವುದೇ ಖಚಿತತೆ ಇಲ್ಲವಾದರೂ ಮುಂಬರುವ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಕಾರು ಮಾರಾಟದ ಪ್ರಮುಖ ಮಾನದಂಡಗಳಾಗಿರಲಿವೆ.

ಟ್ರಿವಿಯಾ ಬಗೆಗೆ
ಎನ್ಎಫ್‍ಸಿ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‍ಎಫ್ಐಡಿ) ಯ ಮಾದರಿಯಾಗಿದೆ. ಇದು ಹೆಚ್ಚಿನ ತಂತ್ರಜ್ಞಾನದ ಸುರಕ್ಷತೆಯನ್ನು ಒದಗಿಸುತ್ತದೆ. ಎನ್ಎಫ್‍ಸಿ ವೈರ್‍ಲೆಸ್ ತಂತ್ರಜ್ಣಾನವು ಡೆಟಾ ಕಮ್ಯೂನಿಕೇಷನ್ ಡಿವೈಸ್ ಮತ್ತು ರೀಡರ್ ಗಳನ್ನು ಕೆಲವೇ ಸೆಂಟಿಮೀಟರ್ ಗಳ ಅಂತರದಲ್ಲಿ ಇಟ್ಟಾಗ ಕಾರ್ಯನಿರ್ವಹಿಸುತ್ತವೆ.


Click it and Unblock the Notifications








