ದಕ್ಷಿಣ ಕೊರಿಯಾಕ್ಕೂ ಕಾಲಿಟ್ಟ ರಾಯಲ್ ಎನ್‍ಫೀಲ್ಡ್..!
ದೇಶಿಯ ದ್ವಿಚಕ್ರವಾಹನ ದೈತ್ಯ ರಾಯಲ್ ಎನ್‍ಫೀಲ್ಡ್ ಆಗ್ನೇಯ ಏಷ್ಯಾ ಮಾರುಕಟ್ಟೆಗೆ ತನ್ನ ಪ್ರವೇಶವನ್ನು ಪ್ರಕಟಿಸಿದ್ದು, ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ತನ್ನ ಮೊದಲ ಡೀಲರ್‍ಶಿಪ್ ಅನ್ನು ತೆರೆದಿದೆ. ಸಿಯೋಲ್ ಮೂಲದ ವಿಂಟೆಜ್ ಮೋಟಾರ್ಸ್ (ಕಿಹ್ಯುಂಗ್ ಇಂಟರ್ ನ್ಯಾಷನಲ್) ದಕ್ಷಿಣ ಕೊರಿಯಾದಲ್ಲಿ ರಾಯಲ್ ಎನ್ ಫೀಲ್ಡ್ ನ ಅಧಿಕೃತ ಡಿಸ್ಟ್ರಿಬ್ಯೂಟರ್ ಪಾರ್ಟ್‍ನರ್ ಆಗಿರಲಿದೆ. ರಾಯಲ್ ಎನ್‍ಫೀಲ್ಡ್ ತನ್ನ ಮೊದಲ ಪೂರ್ಣ ಪ್ರಮಾಣದ ಸೇಲ್ಸ್, ಸರ್ವಿಸ್ ಮತ್ತು ಸ್ಪೇರ್ ಫ್ಲಾಗ್‍ಶಿಪ್ ಸ್ಟೋರ್ ಅನ್ನು ಹನ್ನಾನ್ ದೇರೋ 42 ಗಿಲ್ ನಲ್ಲಿ ಶುರುಮಾಡಿದೆ.

ಕೊರಿಯಾದ ಸಿಯೋಲ್ ನಲ್ಲಿನ ರಾಯಲ್ ಎನ್‍ಫೀಲ್ಡ್ ಎಕ್ಸ್ ಕ್ಲೂಸಿವ್ ಸ್ಟೋರ್ ನ ಉದ್ಘಾಟನೆ ಬಗ್ಗೆ ಹೇಳಿಕೆ ನೀಡಿರುವ ಎಪಿಎಸಿಯ ಬ್ಯುಸಿನೆಸ್ ಹೆಡ್ ವಿಮಲ್ ಸಂಬ್ಲಿ ರವರು ನಮ್ಮ ಆದ್ಯತೆಯು ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ಅದರಲ್ಲೂ ಏಷ್ಯಾ ಪೆಸಿಫಿಕ್ ವಲಯದಲ್ಲಿ ವಿಸ್ತರಿಸುವತ್ತ ಮತ್ತು ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿದ್ದೇವೆ ಎಂದಿದ್ದಾರೆ.

ರಾಯಲ್ ಎನ್‍ಫೀಲ್ಡ್ ಎಪಿಎಸಿ ವಲಯದಲ್ಲಿ ನಿರಂತರವಾಗಿ ಪ್ರತಿ ವರ್ಷವು 20% ರಷ್ಟು ಅಭಿವೃದ್ಧಿ ಹೊಂದುತ್ತಿದೆ. ಕೊರಿಯಾವು ನಮ್ಮ ಬೆಳವಣಿಗೆಯಲ್ಲಿ ಮಹತ್ವದ ಅಧ್ಯಾಯವಾಗಿದ್ದು, ಮಾರುಕಟ್ಟೆ ವಿಸ್ತರಿಸಲು ಉತ್ಸುಕರಾಗಿದ್ದೇವೆ. ನಾವು ನಮ್ಮ ಎಲ್ಲಾ ಶಕ್ತಿಯನ್ನು ಅಳವಡಿಸಿ ಈ ದೇಶದಲ್ಲಿರುವ ಮೋಟಾರ್ ಸೈಕಲ್ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಕಂಪನಿಯ ಮಾರ್ಕೆಟ್ ಪ್ಲಾನ್‍ಗಳ ಬಗ್ಗೆ ಮಾತನಾಡಿದ ಕಿಹ್ಯುಂಗ್ ಮೋಟಾರ್ಸ್‍ನ ಸಿಇಒ ಪ್ಯಾಬ್ಲೋ ಲೀ ಜೂನಿಯರ್ ರವರು ನಾವು ರಾಯಲ್ ಎನ್‍ಫೀಲ್ಡ್ ನ ಪಾಲುದಾರರಾಗಲು ಹೆಮ್ಮೆಯಾಗುತ್ತಿದ್ದು, ಅವರ ಮೋಟಾರ್ ಸೈಕಲ್ ಬಗೆಗಿನ ಆಸಕ್ತಿಯನ್ನು ಕೊರಿಯಾದದ್ಯಂತ ಹರಡುತ್ತೇವೆ ಎಂದಿದ್ದಾರೆ.

ಹಾಗೆಯೇ ರಾಯಲ್ ಎನ್‍ಫೀಲ್ಡ್ ಮೋಟಾರ್ ಸೈಕಲ್ ಕೊರಿಯಾದ ದ್ವಿಚಕ್ರವಾಹನ ಸವಾರರಿಗಾಗಿಯೇ ಆಧುನಿಕ ಕ್ಲಾಸಿಕ್ ಮಿಶಿನ್‍ಗಳನ್ನು ಅಳವಡಿಸಿದ್ದು ದೂರ ಪ್ರಯಾಣಗಳಿಗೆ, ಲೀಜರ್ ರೈಡಿಂಗ್‍ಗಳಿಗೆ ಮತ್ತು ಸಿಟಿಯೊಳಗಿನ ಹೆವಿ ಟ್ರಾಫಿಕ್ ಗಳಿಗೆ ಹೇಳಿಮಾಡಿಸಿದಂತಿದ್ದು, ರಾಯಲ್ ಎನ್‍ಫೀಲ್ಡ್ 3 ಸಿಂಗಲ್ ಸಿಲಿಂಡರ್ ಮಾದರಿಯ ವಾಹನಗಳನ್ನು ದಕ್ಷಿಣ ಕೊರಿಯಾದಲ್ಲಿ ಮಾರಾಟ ಮಾಡಲಿದೆ.

ಅವುಗಳಲ್ಲಿ ಐಕಾನಿಕ್ ಬುಲೆಟ್ 500 ಅವುಗಳ ಬೆಲೆ ಎಸ್‍ಕೆ 5,50,000 ವೋನ್, ಕ್ಲಾಸಿಕ್ 500ಗಳ ಬೆಲೆ ಎಸ್‍ಕೆ 59,50,000 ವೋನ್ ಆಗಿರಲಿದ್ದು, ಅವುಗಳ ಎರಡನೇ ವೆರಿಯಂಟ್ ಕ್ಲಾಸಿಕ್ ಕ್ರೋಮ್ 500 ನ ಬೆಲೆ ಎಸ್‍ಕೆ 62,00,000 ಮತ್ತು ರಾಯಲ್ ಎನ್‍ಫೀಲ್ಡ್ ಹಿಮಾಲಯನ್ 410ಗಳ ಬೆಲೆ ಎಸ್‍ಕೆ ವೋನ್ 49,50,000 ಆಗಿರಲಿವೆ.

ರಾಯಲ್ ಎನ್‍ಫೀಲ್ಡ್ 50 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಲಂಡನ್, ಪ್ಯಾರಿಸ್, ಮ್ಯಾಡ್ರಿಡ್, ಸಾವೋ ಪೌಲೊ, ಮಿಲ್ ವಾಕಿ, ಬೊಗೊಟಾ, ಬ್ಯೂನೋ ಐರಿಸ್, ದುಬೈ, ಜಕಾರ್ತ, ಬ್ಯಾಂಕಾಕ್, ಹೆಚ್‍ಸಿಎಂಸಿ ಮತ್ತು ಸಿಯೋಲ್ ಸೇರಿದಂತೆ ಒಟ್ಟು 38 ಎಕ್ಸ್ ಕ್ಲೂಸಿವ್ ಸ್ಟೋರ್‍ಗಳನ್ನು ಪ್ರಪಂಚದದ್ಯಾಂತ ಹೊಂದಿದೆ.
MOST READ: ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ಇತ್ತೀಚಿಗಷ್ಟೆ ರಾಯಲ್ ಎನ್‍ಫೀಲ್ಡ್, 50 ವರ್ಷಗಳ ಹಳೆಯ ಟ್ವಿನ್ ಸಿಲಿಂಡರ್ ಗಳ ಉತ್ಪಾದನೆಯನ್ನು ಮತ್ತೆ ಶುರು ಮಾಡಿ, ಕಾಂಟಿನೆಂಟಲ್ ಜಿಟಿ 650 ಸಿಸಿ ಮತ್ತು ಇಂಟರ್ ಸೆಪ್ಟರ್ 650 ಸಿಸಿ ಗಳನ್ನು ಬಿಡುಗಡೆ ಮಾಡಿದೆ. ಕಾಂಟಿನೆಂಟಲ್ ಜಿಟಿ 650 ಸಿಸಿ ಮತ್ತು ಇಂಟರ್ ಸೆಪ್ಟರ್ 650 ಸಿಸಿ ವಾಹನಗಳನ್ನು ಇಷ್ಟಪಡುವ ಜನರು ಅಂತರ ರಾಷ್ಟ್ರಿಯ ಮಾರುಕಟ್ಟೆಯಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ ಮತ್ತು ಇವು ರಾಯಲ್ ಎನ್‍ಫೀಲ್ಡ್ ಕಂಪನಿಯ ಅಂತರರಾಷ್ಟ್ರಿಯ ಮಾರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ.


Click it and Unblock the Notifications