ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

ಹ್ಯುಂಡೈ ಸಂಸ್ಥೆಯು ಇತ್ತೀಚೆಗೆ ತಮ್ಮ ಹೊಸ ವೆನ್ಯೂ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಬಿಡುಗಡೆಗೂ ಮುನ್ನವೇ ಈ ಕಾರು ಮಾರುಕಟ್ಟೆತಲ್ಲಿ ಹೆಚ್ಚಾಗಿಯೆ ಸದ್ದು ಮಾಡಿದೆ. ಹಾಗೆಯೆ ಹ್ಯುಂಡೈ ಸಂಸ್ಥೆಯಲ್ಲಿರುವ ಹೊಸ ಸ್ಯಾಂಟ್ರೋ ಮತ್ತು ಕ್ರೆಟಾ ಎಸ್‍ಯುವಿ ಕಾರುಗಳು ಮಾರುಕಟ್ಟೆಯಲ್ಲಿ ಉತ್ತಮವಾದ ಬೇಡಿಕೆಯನ್ನು ಪಡೆಯುತ್ತಿದ್ದು, 2019 ಮುಗಿಯುವುದರೊಳಗೆಯೆ ಇನ್ನು 4 ಕಾರುಗಳನ್ನು ಬಿಡುಗಡೆ ಮಾಡಲಿದೆ.

ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

ಹ್ಯುಂಡೈ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ವಾಹನಗಳನ್ನು ಪರಿಚಯಿಸುತ್ತಲೇ ಇದೆ. ಅವುಗಳಲ್ಲಿ ಕೆಲವು ಹಿಟ್ ಆದರೆ ಇನ್ನು ಕೆವಲು ಕಳಪೆ ಮಾರಾಟವನ್ನು ಕಂಡಿವೆ ಎಂದರೆ ತಪ್ಪಾಗಲಾರದು. ಹೀಗಾಗಿ ಭಾರತೀಯ ಗ್ರಾಹಕರ ರುಚಿಗೆ ಅನುಗುಣವಾಗಿ ಹ್ಯುಂಡೈ ಸಂಸ್ಥೆಯು ಇನ್ನು 4 ಕಾರುಗಳನ್ನು ಈ ವರ್ಷ ಮುಗಿಯುವುದರೊಳಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಅವುಗಳಲ್ಲಿ ಒಂದು ಎಲೆಕ್ಟ್ರಿಕ್, ಒಂದು ಸೆಡಾನ್ ಮತ್ತು ಒಂದು ಹ್ಯಾಚ್‍ಬ್ಯಾಕ್ ಮತ್ತು ಒಂದು ಎಸ್‍ಯುವಿ ಕಾರನ್ನು ಪರಿಚಯಿಸಲಿದೆ.

ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

1. ಹ್ಯುಂಡೈ ಕೋನಾ ಎಲೆಕ್ಟ್ರಿಕ್

ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರಾಗಿ ಕೋನಾ ಕಾರು ಕಾಲಿಡಲಿದ್ದು, ಈ ಕಾರು ಈ ವರ್ಷದ ಮೂರನೆಯ ಅಥವಾ ನಾಲ್ಕನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಾರು ಸ್ಥಳೀಯವಾಗಿ ಉತ್ಪಾದನೆಯಾಗುವುದರಿಂದ ಹೆಚ್ಚಿನ ಮಟ್ಟದಲ್ಲಿ ನಿರೀಕ್ಷೆಯನ್ನುಂಟು ಮಾಡಿದೆ. ಹ್ಯುಂಡೈ ಕೋನಾ ಕಾರು ವೆನ್ಯೂ ಕಾರಿನಲ್ಲಿ ನೀಡಲಾದ ಸ್ಪ್ಲಿಟ್ ಹೆಡ್‍ಲ್ಯಾಂಪ್ ಡಿಸೈನ್ ಅನ್ನು ಪಡೆದುಕೊಂಡಿರಲಿದೆ.

ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

ಇವುಗಳಲ್ಲದೆಯೆ ಹ್ಯುಂಡೈ ಸಂಸ್ಥೆಯು ಈ ಕಾರಿಗೆ ಎಲ್ಇಡಿ ಟೈಲ್‍ ಲ್ಯಾಂಪ್ಸ್ ಮತ್ತು ಹೊಸ ಬಂಪರ್ ಅನ್ನು ನೀಡಲಾಗುತಿದೆ. ಇನ್ನು ಕಾರಿನ ಒಳಭಾಗದಲ್ಲಿ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಇನ್ನಿತರೆ ಮಾಡಲ್‍‍ಗಳಿಗಿಂತಲೂ ವಿಭಿನ್ನವಾದ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒದಗಿಸಲಾಗಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು 39.2 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿರಲಿದ್ದು, ಇದು ಒಂದು ಬಾರಿಯ ಚಾರ್ಜ್‍ಗೆ ಸುಮಾರು 345 ಕಿಲೋಮೀಟರ್‍‍ನ ರೇಂಜ್ ನೀಡಲಿದೆ.

ಬಿಡುಗಡೆಯ ಅವಧಿ (ಅಂದಾಜು): 2019ರ ಮೂರನೆಯ ಅಥವಾ ನಾಲ್ಕನೆಯ ತ್ರೈಮಾಸಿಕ ಅವಧಿ.

ಬೆಲೆ (ಅಂದಾಜು): ರೂ. 25 ಲಕ್ಷ (ಎಕ್ಸ್ ಶೋರುಂ)

ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

2. ಹ್ಯುಂಡೈ ಗ್ರ್ಯಾಂಡ್ ಐ10

ಹ್ಯುಂಡೈ ಗ್ರ್ಯಾಂಡ್ ಐ10 ಕಾರು ಸಧ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಸಂಸ್ಥೆಯು ಈ ಕಾರನ್ನು ಮತ್ತಷ್ಟು ನವೀಕರಿಸಿ ಮತ್ತೆ ಬಿಡುಗಡೆ ಮಾಡಲಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಮುಂಭಾಗದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲಿಲ್ಲವಾದರೂ, ನವೀಕರಿಸಲಾದ ಹೊಸ ಹೆಡ್‍ಲ್ಯಾಂಪ್ಸ್ ಹಾಗು ಬಂಪರ್ ಅನ್ನು ನೀಡಲಾಗುತ್ತಿದೆ.

ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

ಇನ್ನು ಕಾರಿನ ಸೈಡ್ ಪ್ರೊಫೈಲ್‍ನಲ್ಲಿ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗುತ್ತಿದ್ದು, ಹಿಂಭಾಗದಲ್ಲಿ ಎಲ್ಇಡಿ ಟೈಲ್‍ಲೈಟ್ಸ್ ಅನ್ನು ನೀಡಲಾಗುತ್ತಿದೆ. ಹಾಗೆಯೆ ಕಾರಿನ ಒಳಭಾಗದಲ್ಲಿ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲೈಮೇಟ್ ಕಂಟ್ರೋಲಅರ್, ಕನೆಕ್ಟಿವಿಟಿ ಫೀಚರ್ ಸೇರಿದಂತೆ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ. ಈ ಕಾರು ಪ್ರಸ್ತುತ ಮಾರಾಟವಾಗುತ್ತಿರುವ ಪೆಟ್ರೋಲ್ ಎಂಜಿನ್ ಅನ್ನೆ ಹೊತ್ತು ಬರಲಿದೆ ಎನ್ನಲಾಗಿದೆ.

ಬಿಡುಗಡೆಯ ಅವಧಿ (ಅಂದಾಜು): 2019ರ ಅಂತ್ಯಕ್ಕೆ

ಬೆಲೆ (ಅಂದಾಜು): ರೂ. 5-8 ಲಕ್ಷ (ಎಕ್ಸ್ ಶೋರುಂ)

ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

3. ಹ್ಯುಂಡೈ ಎಲಾಂಟ್ರಾ ಫೇ‍ಸ್‍ಲಿಫ್ಟ್

ಹ್ಯುಂಡೈ ಸಂಸ್ಥೆಯು ಜಾಗತಿಕವಾಗಿ ತಮ್ಮ ಹತ್ತುಹಲವು ವಿಶೇಷತೆಗಳೊಂದಿಗೆ ನವೀಕರಿಸಲಾದ ಎಲಾಂಟ್ರಾ ಮಾಡಲ್ ಅನ್ನು ಇದೇ ವರ್ಷದ ಅಂತ್ಯದ ವೇಳೆ ಬಿಡುಗಡೆ ಮಾಡಲಿದ್ದು, ಪ್ರಸ್ತುತ ಇರುವ ಕಾರಿಗಿಂತಲೂ ವಿಭಿನ್ನವಾದ ವಿನ್ಯಾಸವನ್ನು ಹೊತ್ತು ಬರಲಿದೆ. ಈ ಬಾರಿ ಈ ಕಾರಿನಲ್ಲಿ ಹೊಸ ಎಲ್ಇಡಿ ಆಧಾರಿತ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್ ಹಾಗು ಹ್ಯುಂಡೈ ಸಂಸ್ಥೆಯ ಸಿಗ್ನೆಚರ್ ಗ್ರಿಲ್ ಅನ್ನು ನೀಡಲಾಗುತ್ತಿದೆ.

ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

ಕಾರಿನ ಸೈಡ್ ಪ್ರೊಫೈಲ್ ಯಾವುದೇ ಬದಲಾವಣೆಗಳನ್ನು ಪಡೆದಿರುವುದಿಲ್ಲವಾಗಿದ್ದು, ಹೊಸ ಅಲಾಯ್ ವ್ಹೀಲ್ಸ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಒದಗಿಸಲಾಗುತ್ತಿದೆ. ಹ್ಯುಂಡೈ ಸಂಸ್ಥೆಯು ಈ ಕಾರಿಗೆ ಹ್ಸ ಬಂಪರ್ ಮತ್ತು ಇಂಟೀರಿಯರ್ ಅನ್ನು ಸಂಪೂರ್ಣವಾಗಿ ಬದಲಾಯಿಸಲಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಲಾಗುತ್ತಿದೆ. ಎಂಜಿನ್ ಪರವಾಗಿ ಈ ಕಾರು ಪ್ರಸ್ತುತ ಇರುವ ಎಂಜಿನ್ ಅನ್ನೆ ಹೊತ್ತು ಬರಲಿದೆ.

ಬಿಡುಗಡೆಯ ಅವಧಿ (ಅಂದಾಜು): 2019ರ ಅಂತ್ಯಕ್ಕೆ

ಬೆಲೆ (ಅಂದಾಜು): ರೂ. 14-18 ಲಕ್ಷ (ಎಕ್ಸ್ ಶೋರುಂ)

ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

4. ಹ್ಯುಂಡೈ ಟಕ್ಸನ್ ಫೇಸ್‍ಲಿಫ್ಟ್

ಹ್ಯುಂಡೈ ಸಂಸ್ಥೆಯು ತಮ್ಮ ಟಕ್ಸನ್ ಎಸ್‍ಯುವಿ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಇದೇ ವರ್ಷದ ತ್ರೈಮಾಸಿಕ ಅಥವಾ ನಾಲ್ಕನೆಯ ತ್ರೈಮಾಸಿನ ಅವಧಿಯಲ್ಲಿ ಬಿಡುಗಡೆ ಮಾಡಲಿದ್ದು, ಫೇಸ್‍ಲಿಫ್ಟ್ ಮಾದರಿಯು ಎಲಾಂಟ್ರಾ ಮಾಡಲ್‍ನೊಂದಿಗೆ ಹೋಲಿಸಿದರೆ ಕೊಂಚ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಕಾರಿನ ಹೊರಭಾಗದಲ್ಲಿ ಟ್ವೀಕ್ಡ್ ಹೆಡ್‍ಲ್ಯಾಂಪ್ ಕ್ಲಸ್ಟರ್, ನವೀಕರಿಸಲಾದ ಬಂಪರ್ ಮತ್ತು ಹೊಸ ಗ್ರಿಲ್ ಹಾಗು ಹೊಸ ಲಾಯ್ ವ್ಹೀಲ್‍ಗಳನ್ನು ನೀಡಲಾಗುತ್ತಿದೆ.

ಈ ವರ್ಷದಲ್ಲಿ ಇನ್ನು 4 ಹ್ಯುಂಡೈ ಕಾರುಗಳು ಬಿಡುಗಡೆಯಾಗಲಿವೆಯಂತೆ.!

ಇನ್ನು ಕಾರಿನ ಹಿಂಭಾಗದಲ್ಲಿ ಹೊಸ ಟೈಲ್ ಲ್ಯಾಂಪ್ಸ್ ಅನ್ನು ಹೊರತು ಪಡಿಸಿ ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ. ಕಾರಿನ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ ಹೊಸ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗುತ್ತಿದೆ. ಪ್ರಸ್ತುತ ಇರುವ ಟಕ್ಸನ್ ಕಾರಿಗಿಂತಲೂ ಈ ಕಾರು ಹಲವಾರು ಬದಲಾವಣೆಗಳನ್ನು ಪಡೆದು ಬರಲಿದ್ದು, ಎಂಜಿನ್ ಪರವಾಗಿ ಯಾವುದೇ ಬದಲಾವಣೆಯನ್ನು ಕಾಣಲಾಗದು.

ಬಿಡುಗಡೆಯ ಅವಧಿ (ಅಂದಾಜು): 2019ರ ಅಂತ್ಯಕ್ಕೆ

ಬೆಲೆ (ಅಂದಾಜು): ರೂ. 18-24 ಲಕ್ಷ (ಎಕ್ಸ್ ಶೋರುಂ)

Source: gaadiwaadi

Article Published On: Wednesday, May 22, 2019, 13:18 [IST]
English summary
Hyundai To Launch 4 More Cars In Indian Market Before 2020. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+