ಜಾಹೀರಾತು ಪರದೆಯಲ್ಲಿ ಬಹಿರಂಗವಾಯ್ತು ಹ್ಯುಂಡೈ ವೆನ್ಯೂ ಕಾರ್ ಡಿಸೈನ್
ಹ್ಯುಂಡೈ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಮುಂದಿನ ತಿಂಗಳು ಮೇ 17ಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿರುವ ವೆನ್ಯೂ ಕಾರು ಹಲವು ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಮಾರುಕಟ್ಟೆ ಪ್ರವೇಶಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟವು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆ ಹ್ಯುಂಡೈ ಕೂಡಾ ತನ್ನ ತನ್ನ ಕಾರ್ಲಿನೋ ಕಾನೆಪ್ಟ್ ಮಾದರಿಯನ್ನು ವೆನ್ಯೂ ಹೆಸರಿನೊಂದಿಗೆ ಬಿಡುಗಡೆಗಾಗಿ ಸಜ್ಜಾಗಿದೆ. ಇದೇ ತಿಂಗಳು 17ರಂದು ಅಮೆರಿಕದಲ್ಲಿ ನಡೆಯಲಿರುವ ನ್ಯೂಯಾರ್ಕ್ ಆಟೋಮೇಳದಲ್ಲಿ ಅನಾವರಣಗೊಳ್ಳಲಿರುವ ಹೊಸ ಕಾರು ಮುಂದಿನ ತಿಂಗಳು ಮೇ 17ರಂದು ಬಿಡುಗಡೆಯಾಗಲಿದ್ದು, ಟೈಮ್ಸ್ ಸ್ಕ್ವೆರ್‌ನಲ್ಲಿ ಹಾಕಲಾಗಿಲುವ ಹೊಸ ಕಾರಿನ ಜಾಹೀರಾತು ಬೋರ್ಡ್ ಒಂದರಲ್ಲಿ ಬಹಿರಂಗವಾದ ಡಿಸೈನ್‌ಗಳು ಕಾರು ಪ್ರಿಯರ ಆಕರ್ಷಣೆ ಕಾರಣವಾಗಿವೆ.

ಕ್ರೆಟಾ ಕಾರಿನಂತೆಯೇ ಹೊಸ ವಿನ್ಯಾಸ ಹೊಂದಿರುವ ಹೊಸ ವೆನ್ಯೂ ಕಾರು ಆಕರ್ಷಕ ಹೊರವಿನ್ಯಾಸ ಹೊಂದಿದ್ದು, ಮಾರುತಿ ಬ್ರೆಝಾ ಕಾರಿಗೆ ಪ್ರಬಲ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ ಎನ್ನುವುದು ಕಾರಿನ ವಿನ್ಯಾಸಗಳಲ್ಲೇ ಬಹಿರಂಗವಾಗಿದೆ.

ಇನ್ನು ಹೊಸ ವೆನ್ಯೂ ಕಾರು ಉತ್ಪಾದನೆಗಾಗಿ ಈಗಾಗಲೇ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಿರುವ ಹ್ಯುಂಡೈ, ಹೊಸ ಕಾರಿನಲ್ಲಿ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಲಭ್ಯವಿರುವ ಬ್ಲ್ಯೂ ಲಿಂಕ್ ಪ್ಯಾಕೆಜ್ ಸೌಲಭ್ಯವನ್ನು ಘೋಷಣೆ ಮಾಡಿರುವುದು ಕಾರು ಮಾರಾಟ ಹೊಸ ಮೈಲಿಗಲ್ಲಿ ಸಾಧಿಸುವ ಮೊದಲ ಸುಳಿವು ನೀಡಿದೆ.

ಜಾಗತಿಕ ಮಟ್ಟದಲ್ಲಿ ಕಾರುಗಳ ಕಳ್ಳತನ ತಡೆಯಲು ವಿನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿತ್ತಿದ್ದು, ಇದರಲ್ಲಿ ಬ್ಯೂ ಲಿಂಕ್ ಕೂಡಾ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಇದೇ ಸೌಲಭ್ಯವು ಹ್ಯುಂಡೈ ವೆನ್ಯೂ ಕಾರಿನಲ್ಲೂ ನೀಡಲಾಗುತ್ತಿದ್ದು, ಕಾರಿನ ಸುರಕ್ಷತೆಗೆ ಹೆಚ್ಚಿನ ಭದ್ರತೆ ಸಿಗಲಿದೆ.

ಬ್ಯೂ ಲಿಂಕ್ ಆಪ್ ಮೂಲಕ ಕಾರಿನ ಇನ್ಪೋಟೈನ್‍ಮೆಂಟ್ ಸೌಲಭ್ಯವನ್ನು ಸಂಪೂರ್ಣವಾಗಿ ಮೊಬೈಲ್‌ನಲ್ಲಿಯೇ ನಿಯಂತ್ರಿಸಬಹುದಾಗಿದ್ದು, ಥೆಫ್ಟ್ ನೋಟಿಫಿಕೇಷನ್, ಆಟೋ ಕ್ರ್ಯಾಶ್ ನೋಟಿಫಿಕೇಷನ್ ಮತ್ತು ಅಸಿಸ್ಟ್, ರೋಡ್ ಸೈಡ್ ಅಸಿಸ್ಟ್, ಪ್ಯಾನಿಕ್ ನೋಟಿಫಿಕೇಷನ್ ಪಡೆದುಕೊಳ್ಳಬಹುದಾಗಿದೆ.

ಸುರಕ್ಷತೆ, ಭದ್ರತೆ, ರಿಮೋಟ್, ವಾಹನ ತಾಂತ್ರಿಕ ನಿರ್ವಹಣೆ (VRM), ಸ್ಥಳ ಆಧಾರಿತ ಸೇವೆಗಳು (LBS),ಅಲರ್ಟ್ ಸರ್ವೀಸ್ ಮತ್ತು ಸರ್ವರ್ ಧ್ವನಿ ಗುರುತಿಸುವಿಕೆ ಎಂಬ ಪ್ರಮುಖ ವಿಭಾಗಗಳಲ್ಲಿ ಬ್ಯೂ ಲಿಂಕ್ ಕಾರು ಮಾಲೀಕರಿಗೆ ಸೇವೆಗಳನ್ನು ನೀಡಲಿದ್ದು, ಯಾವುದೇ ಕ್ಷಣದಲ್ಲಾದರೂ ನಿಮ್ಮ ಕಾರಿಗೆ ಸಂಪೂರ್ಣ ಸುರಕ್ಷತೆ ನೀಡಬಲ್ಲದು.
MOST READ: ಮತದಾನ ಮಾಡುವ ಬೈಕ್ ಸವಾರರಿಗೆ ಹೀರೋ ಕಡೆಯಿಂದ ಸ್ಪೆಷಲ್ ಆಫರ್

ಮತ್ತೊಂದು ಪ್ರಮುಖ ವಿಚಾರ ಅಂದ್ರೆ ವೆನ್ಯೂ ಕಾರಿನ ನೀಡಲಾಗಿರುವ ಜಿಯೋ ಫೆನ್ಸ್ ಸೌಲಭ್ಯವು ನಿಮ್ಮ ಕಾರಿಗೆ ಎಷ್ಟು ಭದ್ರತೆ ನೀಡಲಿದೆ ಅಂದ್ರೆ, ನೀವು ಒಂದು ನೀರ್ದಿಷ್ಟ ಪ್ರದೇಶವನ್ನು ಬ್ಯೂ ಲಿಂಕ್ ಮೂಲಕ ಗುರುತು ಮಾಡಿಟ್ಟಲ್ಲಿ ಆ ಪ್ರದೇಶವನ್ನು ದಾಟಿ ನಿಮ್ಮ ಕಾರು ಹೊರಹೊದಲ್ಲಿ ನಿಮ್ಮನ್ನ ತಕ್ಷಣವೇ ಎಚ್ಚರಿಸುತ್ತೆ.

ಜೊತೆಗೆ ರಿಯರ್ ಟೈಮ್ ವೆಹಿಕಲ್ ಟ್ರ್ಯಾಕಿಂಗ್ ಮೂಲಕ ಕಳ್ಳತನವಾದ ಕಾರನ್ನು ಕೆಲವೇ ನಿಮಿಷಗಳಲ್ಲಿ ಪತ್ತೆ ಮಾಡಬಹುದಾಗಿದೆ. ಹಾಗೆಯೇ ರಿಮೋಟ್ ಮೂಲಕವೇ ಎಂಜಿನ್ ಸ್ಟಾರ್ಟ್/ಸ್ಟಾಪ್, ಲಾಕ್/ಅನ್‌ಲಾಕ್, ಹಾರ್ನ್ ಮತ್ತು ಲೈಟ್ ಕಂಟ್ರೋಲ್, ಫೈಂಡ್ ಮೈ ಕಾರ್ ಲೋಕೇಷನ್, ಶೇರ್ ಮೈ ಕಾರ್ ಮತ್ತು ರಿಯರ್ ಟೈಮ್ ಮೂಲಕ ಟ್ರಾಫಿಕ್ ಇನ್‌ಫಾರ್ಮೆಷನ್ ಪಡೆದುಕೊಳ್ಳಬಹುದಾದ ಸೌಲಭ್ಯ ಈ ಕಾರಿನಲ್ಲಿದೆ.

ವೆನ್ಯೂ ಕಾರುಗಳು ಒಟ್ಟು ಮೂರು ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗುತ್ತಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ 1.0 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಮತ್ತು 1.4 ಲೀಟರ್ ಎಂಜಿನ್ ಹೊಂದಿರಲಿದೆ. ಹಾಗೆಯೇ 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿರಲಿದೆ.
MOST READ: ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಇನ್ನು ಹೊಸ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, 6 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, 4 ಏರ್‌ಬ್ಯಾಗ್, ಸನ್‌ರೂಫ್, ಡ್ಯುಯಲ್ ಟೋನ್ ಬಾಡಿ ಕಲರ್, ಡ್ಯುಯಲ್ ಟೋನ್ ಇಂಟಿರಿಯರ್, ರಿಯರ್ ವ್ಯೂ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್, ಸ್ಮಾರ್ಟ್ ಕೆನೆಕ್ಟಿವಿಟಿ ಮತ್ತು ಲಾರ್ಜ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಹಲವು ಮಾದರಿಯ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಕಾರಿನ ಬೆಲೆಗಳು(ಅಂದಾಜು) ಹೊಸ ವೆನ್ಯೂ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.40 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.11 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.
Source: Ed Kim


Click it and Unblock the Notifications