ಮತದಾನ ಮಾಡುವ ಬೈಕ್ ಸವಾರರಿಗೆ ಹೀರೋ ಕಡೆಯಿಂದ ಸ್ಪೆಷಲ್ ಆಫರ್
ಹೀಗಾಗಿ ಮತ ಚಲಾವಣೆಯ ಅರಿವು ಮೂಡಿಸಲು ಮುಂದಾಗಿರುವ ಹೀರೋ ಮೊಟೊಕಾರ್ಪ್ ಸೇರಿದಂತೆ ಹಲವು ಕಾರ್ಪೊರೇಟ್ ಸಂಸ್ಥೆಗಳು ಮತದಾನ ಪ್ರಕ್ರಿಯೆಯನ್ನು ಹೆಚ್ಚಿಸಲು ತಮ್ಮ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡುತ್ತಿದ್ದು, ದೇಶದ ವ್ಯವಸ್ಥೆಯನ್ನು ಬದಲಿಸಲು ಸಿಕ್ಕಿರುವ ಅವಕಾಶ ಕಳೆದುಕೊಳ್ಳಬೇಡಿ ಎನ್ನುವ ಆಶಯದೊಂದಿಗೆ ತಮ್ಮ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡುತ್ತಿವೆ.

ಮತದಾನ ಪ್ರತಿಯೊಬ್ಬರ ಹಕ್ಕು ಅಂತಾ ಗೊತ್ತಿದ್ದರೂ ಕೂಡಾ ನಗರಪ್ರದೇಶಗಳಲ್ಲಿರುವ ಬಹುತೇಕ ಮತದಾರರು ಮತದಾನಕ್ಕೆ ಚಕ್ಕರ್ ಹಾಕಿ ತಮ್ಮ ವ್ಯಯಕ್ತಿಯ ಕೆಲಸಗಳತ್ತ ಗಮನಹರಿಸುತ್ತಾರೆ. ನನ್ನ ಒಂದು ಮತದಿಂದ ಯಾವ ಬದಲಾವಣೆಯಾಗಬೇಕಿದೆ ಎನ್ನುವ ಧೋರಣೆಯೊಂದಿಗೆ ಮತದಾನದಿಂದ ವಂಚಿತರಾಗುತ್ತಾರೆ.

ಮತದಾನ ಪ್ರತಿಯೊಬ್ಬರ ಹಕ್ಕು ಅಂತಾ ಗೊತ್ತಿದ್ದರೂ ಕೂಡಾ ನಗರಪ್ರದೇಶಗಳಲ್ಲಿರುವ ಬಹುತೇಕ ಮತದಾರರು ಮತದಾನಕ್ಕೆ ಚಕ್ಕರ್ ಹಾಕಿ ತಮ್ಮ ವ್ಯಯಕ್ತಿಯ ಕೆಲಸಗಳತ್ತ ಗಮನಹರಿಸುತ್ತಾರೆ. ನನ್ನ ಒಂದು ಮತದಿಂದ ಯಾವ ಬದಲಾವಣೆಯಾಗಬೇಕಿದೆ ಎನ್ನುವ ಧೋರಣೆಯೊಂದಿಗೆ ಮತದಾನದಿಂದ ವಂಚಿತರಾಗುತ್ತಾರೆ.

ಕೇವಲ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮಾತ್ರವೇ ವೋಟರ್ ಐಡಿ ಪಡೆದುಕೊಳ್ಳುವ ಕೆಲವರು ಮತದಾನದಿಂದ ನಾಪತ್ತೆಯಾಗುತ್ತಾರೆ. ಇದರಿಂದಾಗಿ ಇಂತಹ ಆಲಾಸ್ಯವನ್ನು ಹೋಗಲಾಡಿಸಲು ಹೀರೋ ಸಂಸ್ಥೆ ಸೇರಿದಂತೆ ಹಲವಾರು ಕಾರ್ಪೊರೇಟ್ ಸಂಸ್ಥೆಗಳು ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿವೆ.

ದೇಶವನ್ನು ಬದಲಿಸಬಲ್ಲ ಮತದಾನ ಪ್ರಕ್ರಿಯೆಯನ್ನು ಹೆಚ್ಚಿಸಲು ಹೀರೋ ಸಂಸ್ಥೆಯು ತನ್ನ ಗ್ರಾಹಕರಿಗೆ ಹೊಸ ಆಫರ್ ಒಂದನ್ನು ಘೋಷಿಸಿದ್ದು, ಮತದಾನ ಮಾಡಿ ಬರುವ ಬೈಕ್ ಮಾಲೀಕರಿಗೆ ಕೇವಲ ರೂ. 199ಕ್ಕೆ ಜನರಲ್ ಬೈಕ್ ಸರ್ವಿಸ್ ನೀಡುವುದಾಗಿ ಪ್ರಕಟಣೆ ಹೊರಡಿಸಿದೆ.

ಹೌದು, ಮತದಾನ ಮಾಡಿ ಬರುವ ಪ್ರತಿಯೊಬ್ಬ ಬೈಕ್ ಮಾಲೀಕರಿಗೂ ರೂ.199ಕ್ಕೆ ಜನರಲ್ ಸರ್ವಿಸ್ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಹೀರೋ ಮೊಟೊಕಾರ್ಪ್ ಅಧಿಕೃತ ಮಾರಾಟ ಮಳಿಗೆಯಲ್ಲಿಯೇ ಜನರಲ್ ಸರ್ವಿಸ್‌ಗಳನ್ನು ನೀಡಲಿದೆ.

ಜನರಲ್ ಸರ್ವಿಸ್‌ನಲ್ಲಿ ಬೈಕ್ ಮಾಲೀಕರಿಗೆ ಪ್ರೆಷರ್ ವಾಟರ್ ಸರ್ವಿಸ್ ಜೊತೆಗೆ ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನು ಮಾತ್ರ ಸರಿಪಡಿಸಲಿದ್ದು, ಬಿಡಿಭಾಗಗಳು ಬೇಕಿದ್ದಲ್ಲಿ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತೆ.

ಹೀರೋ ಸಂಸ್ಥೆಯು ಘೋಷಣೆ ಮಾಡಿರುವ ಆಫರ್ ಪಡೆದುಕೊಳ್ಳುವ ಗ್ರಾಹಕರು ಕಡ್ಡಾಯವಾಗಿ ಮತದಾನ ಮಾಡಿರಬೇಕಿದ್ದು, ಪಕ್ಷ ಭೇದವಿಲ್ಲದೆ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಒಂದೇ ಒಂದು ಉದ್ದೇಶದಿಂದ ಇಂತದೊಂದು ವಿನೂತನ ಯೋಜನೆಗೆ ಚಾಲನೆ ನೀಡಲಾಗಿದೆ. ಹೀಗಾಗಿ ಹೊಸ ಆಫರ್ ಅನ್ನು ನೀವು ಮಿಸ್ ಮಾಡ್ಕೋಬೇಡಿ.
MOST READ: ಶಿವಮೊಗ್ಗದಲ್ಲಿ ನಡೆದ ಅಪಘಾತದ ವೇಳೆ ತನ್ನ ಸಾಮರ್ಥ್ಯವನ್ನ ನಿರೂಪಿಸಿದ ಟಾಟಾ ಹೆಕ್ಸಾ

ಇನ್ನು ಹೀರೋ ಮೊಟೊಕಾರ್ಪ್ ಸಂಸ್ಥೆಯು ವಿಶ್ವದ ಅತಿದೊಡ್ಡ ಬೈಕ್ ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಇದುವರೆಗೆ 8 ಕೋಟಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ ಹೊಸ ದಾಖಲೆ ಕಾರಣವಾಗಿದೆ.


Click it and Unblock the Notifications








