ಹೊಸ Hero Karizma XMR ವಿಶೇಷತೆಗಳು: 210cc ವಿಭಾಗಕ್ಕೆ ಉತ್ತಮ ಕೊಡುಗೆ!

ಹೀರೋ ಕಂಪನಿಯು ಅಂತಿಮವಾಗಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಮೋಟಾರ್‌ಸೈಕಲ್ ಬಗ್ಗೆ ಹೆಚ್ಚಿನ ಭರವಸೆಯನ್ನು ಹೊಂದಿದ್ದು, ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳು ಇಲ್ಲಿವೆ.

ಬೆಲೆ: ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್ ರೂ. 1,72,900 (ಎಕ್ಸ್ ಶೋ ರೂಂ) ಬೆಲೆಗೆ ಬಿಡುಗಡೆಯಾಗಿದೆ. ಇದು ಕೇವಲ ಪರಿಚಯಾತ್ಮಕ ಬೆಲೆಯಾಗಿದ್ದು, ಮುಂಬರುವ ತಿಂಗಳುಗಳಲ್ಲಿ ಮಾದರಿಯು ಸ್ವಲ್ಪ ಹೆಚ್ಚು ದುಬಾರಿಯಾಗುವ ನಿರೀಕ್ಷೆಯಿದೆ. ಉಳಿದಂತೆ ಈ ಬೈಕ್ ತನ್ನ ಹಳೆಯ ಮಾದರಿಯಂತೆ ಕೆಲ ವಿನ್ಯಾಸ ಅಂಶಗಳನ್ನು ಹಾಗೇ ಉಳಿಸಿಕೊಂಡಿದೆ.

new-hero-karizma-xmr-motorcycle-specs-features-price

ವಿನ್ಯಾಸ: ಹೊಸ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್ ತೀಕ್ಷ್ಣವಾದ ವಿನ್ಯಾಸದೊಂದಿಗೆ ಸಂಪೂರ್ಣ-ಫೇರ್ಡ್ ಮೋಟಾರ್‌ಸೈಕಲ್ ಆಗಿದೆ. ಕೆಲವು ಹೈಲೈಟ್ ಮಾಡುವ ಅಂಶಗಳೆಂದರೆ ಇದರ ಮಸ್ಕುಲರ್ ಇಂಧನ ಟ್ಯಾಂಕ್, ಸ್ಪ್ಲಿಟ್ ಸೀಟ್‌ಗಳು, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಸ್ಟಬ್ಬಿ ಎಕ್ಸಾಸ್ಟ್, ಸ್ಲಿಮ್ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಸೇರಿದಂತೆ ಹೆಚ್ಚಿನವುಗಳನ್ನು ಒಳಗೊಂಡಿದೆ.

ಒಟ್ಟಾರೆಯಾಗಿ, ಹೊಸ ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್‌ನ ವಿನ್ಯಾಸವು ತುಂಬಾ ಯೂತ್‌ಫುಲ್ ಮತ್ತು ಸ್ಪೋರ್ಟಿಯಾಗಿದೆ ಎಂದು ಹೇಳಬಹುದು. ಇದಲ್ಲದೇ, ಹೊಸ Hero Karizma XMR ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ ಐಕಾನಿಕ್ ಹಳದಿ, ಟರ್ಬೊ ರೆಡ್ ಮತ್ತು ಮ್ಯಾಟ್ ಫ್ಯಾಂಟಮ್ ಬ್ಲಾಕ್.

new-hero-karizma-xmr-motorcycle-specs-features-price

ವೈಶಿಷ್ಟ್ಯಗಳು: ಹೊಸ ಹೀರೋ ಕರಿಜ್ಮಾ XMR ಮೋಟಾರ್‌ಸೈಕಲ್ ಆಟೋ ಆನ್/ಆಫ್ ಕಾರ್ಯದೊಂದಿಗೆ ಪ್ರೊಜೆಕ್ಟರ್ LED ಹೆಡ್‌ಲ್ಯಾಂಪ್‌ಗಳು, ಡೇಂಜರ್ ಸ್ವಿಚ್, ಬ್ಯಾಕ್‌ಲಿಟ್ ಸ್ವಿಚ್‌ಗಿಯರ್, LED ಟೈಲ್‌ಲ್ಯಾಂಪ್‌ಗಳು, LED ಟರ್ನ್ ಇಂಡಿಕೇಟರ್‌ಗಳು ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ಹೊಸ LCD ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಕಾಲ್/SMS ಅಲರ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಗೇರ್ ಇಂಡಿಕೇಟರ್, ಟ್ರಿಪ್ ಮೀಟರ್‌ಗಳು, ಕಡಿಮೆ ಇಂಧನ ಎಚ್ಚರಿಕೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಹಾರ್ಡ್‌ವೇರ್: ಹೊಸ ಹೀರೋ ಕರಿಜ್ಮಾ XMR ಮೋಟಾರ್‌ಸೈಕಲ್ ಹೊಸ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್‌ನಿಂದ ಆಧಾರವಾಗಿದೆ. ಇದಲ್ಲದೆ, ಮುಂಭಾಗದಲ್ಲಿ 37mm ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ 6-ಹಂತದ ಪ್ರೀ-ಲೋಡ್ ಹೊಂದಾಣಿಕೆ ಮಾಡಬಹುದಾದ ಮೊನೊಷಾಕ್ ಸಸ್ಪೆನ್ಶನ್ ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ 300mm ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಚಿಕ್ಕದಾದ 230mm ಡಿಸ್ಕ್ ಬ್ರೇಕ್‌ ಹೊಂದಿದೆ. ಇದಲ್ಲದೆ, ಡ್ಯುಯಲ್-ಚಾನೆಲ್ ಎಬಿಎಸ್ ಬ್ರೇಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ.

new-hero-karizma-xmr-motorcycle-specs-features-price

ಪವರ್‌ಟ್ರೇನ್: ಹೀರೋ ಕರಿಜ್ಮಾ XMR ಮೋಟಾರ್‌ಸೈಕಲ್ 210cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಅನ್ನು 9,250rpm ನಲ್ಲಿ 25.15bhp ಮತ್ತು 7,250rpm ನಲ್ಲಿ 20.4Nm ಪೀಕ್ ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. 210cc ಎಂಜಿನ್‌ಗೆ ಈ ಮಟ್ಟದ ಪವರ್ ನೀಡಿರುವುದು ಶ್ಲಾಘನೀಯ ಎಂದೇ ಹೇಳಬಹುದು.

ಹೊಸ ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್‌ನಲ್ಲಿರುವ ಈ ಎಂಜಿನ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಹೊಸ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಒಟ್ಟಾರೆ ಈ ಮೋಟಾರ್‌ ಸೈಕಲ್ ಈಗಿನ 200 ಸಿಸಿ ಬೈಕ್‌ಗಳ ಸ್ಪರ್ಧೆಯನ್ನು ಎದುರಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಬಹುದು. ಇದರ ಬುಕಿಂಗ್‌ಗಳನ್ನು ನೋಡಿದ ಬಳಿಕ ಬೈಕ್ ಯಾವ ಮಟ್ಟಕ್ಕೆ ಯಶಸ್ವಿಯಾಗಿದೆ ಎಂಬುದನ್ನು ಹೇಳಬಹುದು.

new-hero-karizma-xmr-motorcycle-specs-features-price

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, August 29, 2023, 17:37 [IST]
English summary
New hero karizma xmr motorcycle specs features price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+