ಮತ್ತೆ ರಾಜನಾಗಲು ಬರ್ತೀನಿ: ನೂತನ 'Hero ಕರಿಜ್ಮಾ' ಪ್ರದರ್ಶನ.. ಬೆಂಕಿ ಗುರು!

ಭಾರತದ ಮಾರುಕಟ್ಟೆಯಲ್ಲಿ ಹೀರೋ ಮೊಟೊಕಾರ್ಪ್ ಮಾರಾಟ ಮಾಡುವ ದ್ವಿಚಕ್ರ ವಾಹನಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಅಷ್ಟರಮಟ್ಟಿಗೆ ಖ್ಯಾತಿಗಳಿಸಿವೆ. ಇದೀಗ, ಕಂಪನಿ ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ತೀರ್ಮಾನಿಸಿದ್ದು, ಹೊಚ್ಚ ಹೊಸ ಕರಿಜ್ಮಾ XMR ಬೈಕ್‌ನ್ನು ಡೀಲರ್ ಈವೆಂಟ್ ನಲ್ಲಿ ಪ್ರದರ್ಶನ ಮಾಡಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ.

ಸದ್ಯ, ಈ ಬೆಳವಣಿಗೆಯನ್ನು ಗಮನಿಸಿದರೆ, ಒಂದು ಕಾಲದ ಯುವಕರ ಹಾಟ್ ಫೇವೆರೆಟ್ ಕರಿಜ್ಮಾ ಶೀಘ್ರದಲ್ಲಿಯೇ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರಲ್ಲಿ ಎರಡು ಮಾತಿಲ್ಲ. ಈ ಮೋಟಾರ್‌ಸೈಕಲ್‌ನ ಸ್ಪೈ ಶಾಟ್‌ಗಳು ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗಿದ್ದವು. ನಿಮಗೆ ಗೊತ್ತಿರಲಿ.. ಕಂಪನಿಯು 'ಕರಿಜ್ಮಾ XMR' ಮತ್ತು 'ಕರಿಜ್ಮಾ XMR 210' ಹೆಸರನ್ನು ಈಗಾಗಲೇ ಟ್ರೇಡ್‌ಮಾರ್ಕ್ ಮಾಡಿದೆ.

Im Back... ಸೈಡ್‌ಗೆ ಹೋಗಿ: ನೂತನ Hero ಕರಿಜ್ಮಾ ಪ್ರದರ್ಶನ, ಬೆಂಕಿ ಗುರು!

ಹೀರೋ (Hero) ಕಂಪನಿ, 'ಕರಿಜ್ಮಾ ZMR' 2003ರಲ್ಲಿ ಭಾರತದ ಗ್ರಾಹಕರಿಗಾಗಿ ಬಿಡುಗಡೆ ಮಾಡಿತ್ತು. ಆ ಕಾಲದಲ್ಲಿ ಈ ಮೋಟಾರ್‌ಸೈಕಲ್‌ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಿ, ಬ್ರ್ಯಾಂಡ್‌ಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಬಹುತೇಕ ಯುವಕರ ಹಾಟ್ ಫೆವರೇಟ್ ಆಗಿತ್ತು. ವರ್ಷಗಳು ಕಳೆದಂತೆ ಕರಿಜ್ಮಾ ಬೈಕ್ ಹಲವು ನವೀಕರಣಗಳನ್ನು ಪಡೆದುಕೊಂಡಿತು. ಆದರೂ ಖರೀದಿದಾರರನ್ನು ಸೆಳೆಯಲು ವಿಫಲವಾಯಿತು. ಇದರಿಂದ 2019ರಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಯಿತು.

ಮುಂಬರಲಿರುವ ಹೊಸ ಕರಿಜ್ಮಾ ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರದಲ್ಲಿ ಸಾಕಷ್ಟು ಪ್ರಮುಖ ಬದಲಾವಣೆಗಳನ್ನು ಪಡೆದಿರಲಿದೆ. ಮುಖ್ಯವಾಗಿ ಟೂ ಪೀಸ್ ಸೀಟ್, ಡ್ಯುಯಲ್-ಟೋನ್ ಫ್ಯುಯೆಲ್ ಟ್ಯಾಂಕ್, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಅಡ್ಜಸ್ಟ್ಏಬಲ್ ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್, ಜೊತೆಗೆ ಈ ಮೋಟಾರ್ ಸೈಕಲ್ ಡ್ಯುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿರಲಿದೆ.

ನೂತನ ಹೀರೋ ಕರಿಜ್ಮಾದ ಎಂಜಿನ್ ಪವರ್ ಹಾಗೂ ಟಾರ್ಕ್ ಉತ್ಪಾದನೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ, 210 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿರಲಿದೆ. ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಸಿಗಬಹುದು. ಹಳೆಯ ಕರಿಜ್ಮಾ ZMRನ, 223 ಸಿಸಿ ಸಿಂಗಲ್ ಸಿಲಿಂಡರ್ ಫ್ಯುಯೆಲ್ ಇಂಜೆಕ್ಟ್ದ್ ಎಂಜಿನ್, 20 bhp ಪವರ್, 19.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತಿತ್ತು.

ಹೀರೋ ಕಂಪನಿ, ಮುಂಬರುವ ತಿಂಗಳಲ್ಲಿ ಬಿಡುಗಡೆಗೊಳಿಸಲಿರುವ ಕರಿಜ್ಮಾ ಬೈಕ್ ಬೆಲೆ ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೂ ರೂ.1.8 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಲಾಗಿದ್ದು, ಸುಜುಕಿ Gixxer SF (ಬೆಲೆ: ರೂ.1.92 ಲಕ್ಷ, 2.02 ಲಕ್ಷ) ಹಾಗೂ ಯಮಹಾ R15 V4 (ಬೆಲೆ: ರೂ.1.81 ಲಕ್ಷ ಹಾಗೂ 1.94 ಲಕ್ಷ)ಗೆ ಪ್ರತಿಸ್ಪರ್ಧಿಯಾಗಲಿದೆ.

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೂ ಕಾಲಿಟ್ಟಿರುವ ಹೀರೋ ಮೋಟೊಕಾರ್ಪ್, 'ವಿಡಾ' ಸರಣಿ ಸ್ಕೂಟರ್ ಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಕರಿಜ್ಮಾ ಸೇರಿದಂತೆ ಮತ್ತಷ್ಟು ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅದರಲ್ಲೂ ಐಷಾರಾಮಿ ಬೈಕ್ ತಯಾರಕ ಹಾರ್ಲೆ ಡೇವಿಡ್‌ಸನ್ ಸಹಯೋಗದೊಂದಿಗೆ ಅತ್ಯಾಕರ್ಷಕ ಬೈಕ್ ಗಳನ್ನು ತಯಾರಿಸುತ್ತಿದ್ದು, ಇವೆರೆಡು ಕಂಪನಿಗಳಿಂದ ಅತ್ಯತ್ತಮ ದ್ವಿಚಕ್ರ ವಾಹನ ಬರುವುದು ಖಚಿತ ಎಂದು ಹೇಳಬಹುದು.

ಇನ್ನು, ಮುಂಬರುವ ಕೆಲವೇ ತಿಂಗಳಲ್ಲಿ ಯುವಕರ ಹಾಟ್ ಫೇವೆರೆಟ್ ಕರಿಜ್ಮಾ ಲಾಂಚ್ ಆಗಲಿದ್ದು, ಈಗ ಡೀಲರ್ ಈವೆಂಟ್ ನಲ್ಲಿ ಪ್ರದರ್ಶನ ಮಾಡಲಾಗಿದೆ. ಇದು ಯುವ ಗ್ರಾಹಕರಲ್ಲಿ ದೊಡ್ಡಮಟ್ಟದಲ್ಲಿ ನೀರಿಕ್ಷೆ ಹುಟ್ಟುಹಾಕಿದೆ. ದಶಕಗಳ ಕಾಲ ಭಾರತದ ಮಾರುಕಟ್ಟೆ ಪಾರುಪಾತ್ಯ ಮೆರೆದಿದ್ದ ಈ ಕರಿಜ್ಮಾ, ಮತ್ತೊಮ್ಮೆ ಹೇಗೆ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Wednesday, May 17, 2023, 16:19 [IST]
English summary
Hero karizma xmr showcased dealers event
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+