ಶಿವಮೊಗ್ಗದಲ್ಲಿ ನಡೆದ ಅಪಘಾತದ ವೇಳೆ ತನ್ನ ಸಾಮರ್ಥ್ಯವನ್ನ ನಿರೂಪಿಸಿದ ಟಾಟಾ ಹೆಕ್ಸಾ
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸೇಫ್ಟಿಯಾದ ಕಾರು ಎಂದು ಯಾರನ್ನಾದರೂ ಕೇಳಿದರೆ ಟಾಟಾ ನೆಕ್ಸಾನ್ ಮತ್ತು ಟಾಟಾ ಹ್ಯಾರಿಯರ್ ಎಂದು ಹೇಳುತ್ತಾರೆ. ಏಕೆಂದರೆ ಇತ್ತೀಚೆಗೆ ಗ್ರಾಹಕರು ಮೈಲೇಜ್ ಮತ್ತು ಬೆಲೆಯನ್ನು ಮಾತ್ರವಲ್ಲದೆ ಸೇಫ್ಟಿ ಪರವಾಗಿ ಕೂಡಾ ಗಮನಿಸುತ್ತಿದ್ದಾರೆ. ಈ ನಿಟ್ಟನಲ್ಲಿ ಹಲವಾರು ವರ್ಷಗಳಿಂದ ತಮ್ಮ ಕಾರುಗಳಲ್ಲಿ ಹೆಚ್ಚಿನ ಸುರಕ್ಷಾ ಸಾಧನಗಳನ್ನು ಮತ್ತು ಉತ್ತಮ ನಿರ್ಮಾಣದ ಗುಣಮಟ್ಟವನ್ನು ಟಾಟಾ ಮೋಟಾರ್ಸ್ ನೀಡುತ್ತಲೇ ಬಂದಿದೆ.

ಈ ಹಿಂದೆಯೇ ನಾವು ಅಪಘಾತದ ವೇಳೆ ಟಾಟಾ ಹ್ಯಾರಿಯರ್ ಮತ್ತು ಟಾಟಾ ನೆಕ್ಸಾನ್ ಕಾರಿನ ನಿರ್ಮಾಣದ ಗುಣಮಟ್ಟದ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೆವು. ಇದೀಗ ಟಾಟಾ ಹೆಕ್ಸಾ ಎಸ್‍ಯುವಿ ಕಾರು ಕೂಡಾ ಆ ಪಟ್ಟಿಯಲ್ಲಿ ಸೇರಿಕೊಂಡಿದ್ದು, ಶಿವಮೊಗ್ಗದ ಬಳಿ ನಡೆದ ಅಪಘಾತದಲ್ಲಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೌದು, ಕೆಲವು ದಿನಗಳ ಹಿಂದಷ್ಟೆ ಶಿವಮೊಗ್ಗ ತಾಲೂಕಿನ ಕುಂಸಿಯ ಬಳಿ ಟಾಟಾ ಹೆಕ್ಸಾ ಕಾರು ಅಪಘಾತಕ್ಕೀಡಾಗಿದ್ದು, ಹೆದ್ದಾರಿಯ ಪಕ್ಕದಲ್ಲಿದ್ದ ಹೈ ಟೆನ್ಷನ್ (ಹೈ ವೋಲ್ಟೇಜ್) ಕಂಬಕ್ಕೆ ಗುದ್ದಿದ್ದೆ. ಗುದ್ದಿದ ನಂತರ ಕಾರಿನಲ್ಲಿದ್ದ ಕುಟುಂಬವು ಸಣ್ಣ ಪುಟ್ಟ ಗಾಯಗಳನ್ನು ಹೊರತು ಪಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿತ್ರವನ್ನು ಗಮನಿಸಿದರೆ ಕಾರು ಯಾವ ಸ್ಥಿತಿಯಲ್ಲಿದೆ ಎಂದು ನೀವು ಊಹಿಸಿಕೊಳ್ಳಬಹುದು. ಆದ್ರೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಏನೂ ಆಗಿಲ್ಲವೆಂದು ಕಾರಿನ ಚಾಲಕನು ಹೇಳಿದ್ದು ಟಾಟಾ ಹೆಕ್ಸಾ ಕಾರಿನ ನಿರ್ಮಾಣದ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ.

ಇಷ್ಟೆ ಅಲ್ಲದೆ ಅಪಘಾತದ ನಂತರ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಸಹ ಕಾರಿನ ನಿರ್ಮಾಣದ ಗುಣಾಮಟ್ಟದ ಬಗ್ಗೆ ಹೊಗಳಿದ್ದು, ಅಪಘಾತದ ನಂತರ ಕಾರಿನ ಬಾಗಿಲುಗಳನ್ನು ತೆರೆಯುವುದಕ್ಕಾಗಿ ಹೆಚ್ಚು ಶ್ರಮ ನೀಡಬೇಕಾಗಿರಲಿಲ್ಲ ಹಾಗು ಅಪಘಾತ ನಡೆದ ತಕ್ಷಣವೇ ಮುಂಭಾಗದಲಿದ್ದ ಏರ್‍ಬ್ಯಾಗ್‍ಗಳು ತೆರೆದುಕೊಂಡಿರುವುದು ಕಾರಿನಲ್ಲಿದ್ದವರು ಪ್ರಾಣಕ್ಕೆ ಯಾವುದೇ ತೊಂದರೆಗಳಾಗಿಲ್ಲ.

ಇನ್ನು ಟಾಟಾ ಹೆಕ್ಸಾ ಕಾರಿನ ಬಗ್ಗೆ ಹೇಳುವುದಾದರೆ ಈ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 13.16 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಟಾಟಾ ಮೋಟಾರ್ಸ್ ಸಂಸ್ಥೆಯಲ್ಲಿ ದೊರೆಯುತ್ತಿರುವ ಪ್ರೀಮಿಯಂ ಎಸ್‍ಯುವಿಗಳಲ್ಲಿ ಇದು ಕೂಡಾ ಒಂದಾಗಿದೆ.

ಎಂಜಿನ್ ಸಾಮರ್ಥ್ಯ
ಟಾಟಾ ಹೆಕ್ಸಾ ಕಾರುಗಳು 2179ಸಿಸಿ ಡೀಸೆಲ್ ಎಂಜಿನ್ ಸಹಾಯದಿಂದ 153 ಬಿಹೆಚ್‍ಪಿ ಮತ್ತು 400ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣಾವನ್ನು ಹೊಂದಿದ್ದು, ಎಂಜಿನ್ ಅನ್ನು ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಷ್ಟೆ ಅಲ್ಲದೆಯೆ ಈ ಕಾರು ಪ್ರತೀ ಲೀಟರ್ ಪೆಟ್ರೋಲ್‍ಗೆ ಸಮರು 17.6 ಕಿಲೋಮೀಟರ್‍ನ ಮೈಲೇಜ್ ನೀಡಬಲ್ಲದು.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸೇಫ್ಟಿ ಫೀಚರ್ಸ್
ಪ್ರಯಾಣಿಕರ ಸುರಕ್ಷತೆಯ ಅನುಸಾರ ಟಾಟಾ ಹೆಕ್ಸಾ ಕಾರಿನಲ್ಲಿ ಎಬಿಎಸ್, ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಸೆಂಟ್ರಲ್ ಲಾಕಿಂಗ್ ಸಿಸ್ಟಂ, ಚೈಲ್ಡ್ ಲಾಕ್ ಸೇಫ್ಟಿ, ಡ್ರೈವರ್ ಮತ್ತು ಪ್ಯಾಸ್ಸೆಂಜರ್ ಏರ್‍ಬ್ಯಾಗ್, ಆ್ಯಂಟಿ ಥೆಫ್ಟ್ ಅಲಾರಂ, ರಿಯರ್ ಸೀಟ್‍ಬೆಲ್ಟ್ಸ್, ಹಾಲೊಜೆನ್ ಹೆಡ್‍ಲ್ಯಾಂಪ್ಸ್, ಕ್ರ್ಯಾಶ್ ಸೆನ್ಸಾರ್ ಮತ್ತು ಆಂಟಿ ಥೆಫ್ಟ್ ಡಿವೈಸ್ ಅನ್ನು ಅಳವಡಿಸಲಾಗಿದೆ.
MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಹಾಗೆಯೇ ಮುಂಭಾಗದಲ್ಲಿ ಡಬಲ್ ವಿಶ್‍ಬೋನ್ ಸಸ್ಪೆಂಷನ್, ಹಿಂಭಾಗದಲ್ಲಿ 5 ಲಿಂಕ್ ಥಿಗ್ಡ್ ಆಕ್ಸ್ಲ್ ಸಸ್ಪೆಂಷನ್ ಅನ್ನು ನೀಡಲಾಗಿದೆ. ಜೊತೆಗೆ ಮುಂಭಾಗದಲ್ಲಿ ಹಾಗು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಒಟ್ಟಿನಲ್ಲಿ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್‍ನ ಕಾರುಗಳು ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಸುರಕ್ಷತೆಯ ವಿಚಾರದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದೆ ಎಂದರೇ ಮೆಚ್ಚಲೇಬೇಕು.
Source: Gaadiwaadi


Click it and Unblock the Notifications








