ಅನಾವರಣಗೊಂಡ ಹ್ಯುಂಡೈ ವೆನ್ಯೂ - ಮುಂದಿನ ತಿಂಗಳು ಬಿಡುಗಡೆ

ಪ್ಯಾಸೆಂಜರ್ ವಾಹನಗಳಲ್ಲಿ ಮಾರುತಿ ಸುಜುಕಿಯ ನಂತರ ಹ್ಯುಂಡೈ ಸಂಸ್ಥೆ ಇದ್ದು, ಇದೀಗ ಹ್ಯುಂಡೈ ಸಂಸ್ಥೆಯು ಮೇ.23 ರಂದು ತಮ್ಮ ವೆನ್ಯೂ ಎಂಬ ಹೊಸ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಲಿದೆ. ಈ ನಿಟ್ಟಿನಲ್ಲಿ ದೇಶಿಯ ಮರಕಟ್ಟೆಯಲ್ಲಿ ಕಾರು ಬಿಡುಗಡೆಗೂ ಮುನ್ನವೇ ನ್ಯೂ ಯಾರ್ಕ್‍ನಲ್ಲಿ ನಡೆಯುತ್ತಿರುವ ನ್ಯೂ ಯಾರ್ಕ್ ಆಟೋ ಶೊನಲ್ಲಿ ಅಧಿಕೃತವಾಗಿ ಅನಾವಣಗೊಳಿಸಲಾಗಿದೆ.

ಅನಾವರಣಗೊಂಡ ಹ್ಯುಂಡೈ ವೆನ್ಯೂ - ಮುಂದಿನ ತಿಂಗಳು ಬಿಡುಗಡೆ

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿರುವ ವೆನ್ಯೂ ಕಾರು ಹಲವು ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಮಾರುಕಟ್ಟೆಗೆ ಪ್ರವೇಶಿಸುವುದು ಈಗಾಗಲೇ ಬಹುತೇಕ ಖಚಿತವಾಗಿದೆ. ಹೀಗಾಗಿ ಬಿಡುಗಡೆಗೂ ಮೊದಲೇ ವೆನ್ಯೂ ಖರೀದಿಗಾಗಿ ಭಾರೀ ಪ್ರಮಾಣದ ಬೇಡಿಕೆ ಸಲ್ಲಿಕೆಯಾಗುತ್ತಿದ್ದು, ಇದೀಗ ಬಿಡುಗಡೆ ಮಾಡಲಾಗಿರುವ ಹೊಸ ಕಾರಿನ ಟೀಸರ್‌ವೊಂದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.ಅಷ್ಟೆ ಅಲ್ಲದೆಯೆ ಹ್ಯುಂಡೈ ವೆನ್ಯೂ ಕಾರಿನ ಖರೀದಿಗಾಗಿ ಈಗಾಗಲೆ ದೇಶದಲ್ಲಿನ ಕೆಲ ಹ್ಯುಂಡೈ ಡೀಲರ್‍‍ಗಳು ಈ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಹ ಪ್ರಾರಂಬಭಿಸಿದ್ದಾರೆ.

ಅನಾವರಣಗೊಂಡ ಹ್ಯುಂಡೈ ವೆನ್ಯೂ - ಮುಂದಿನ ತಿಂಗಳು ಬಿಡುಗಡೆ

ಕ್ರೆಟಾ ಕಾರಿನಂತೆಯೇ ಹೊಸ ವಿನ್ಯಾಸ ಹೊಂದಿರುವ ಹೊಸ ವೆನ್ಯೂ ಕಾರು ಆಕರ್ಷಕ ಹೊರವಿನ್ಯಾಸ ಹೊಂದಿದ್ದು, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ ಎನ್ನುವುದು ಹೊಸ ಟೀಸರ್‌ನಲ್ಲಿ ಸ್ಪಷ್ಟವಾಗಿದೆ.

ಅನಾವರಣಗೊಂಡ ಹ್ಯುಂಡೈ ವೆನ್ಯೂ - ಮುಂದಿನ ತಿಂಗಳು ಬಿಡುಗಡೆ

ಹಾಗೆಯೇ ಹೊಸ ವೆನ್ಯೂ ಕಾರು ಉತ್ಪಾದನೆಗಾಗಿ ಈಗಾಗಲೇ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಿರುವ ಹ್ಯುಂಡೈ ಸಂಸ್ಥೆಯು ಹೊಸ ಕಾರಿನಲ್ಲಿ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಲಭ್ಯವಿರುವ ಬ್ಲ್ಯೂ ಲಿಂಕ್ ಪ್ಯಾಕೆಜ್ ಸೌಲಭ್ಯವನ್ನು ಘೋಷಣೆ ಮಾಡಿರುವುದು ಕಾರು ಮಾರಾಟ ಹೊಸ ಮೈಲಿಗಲ್ಲಿ ಸಾಧಿಸುವ ಮೊದಲ ಸುಳಿವು ನೀಡಿದೆ.

ಅನಾವರಣಗೊಂಡ ಹ್ಯುಂಡೈ ವೆನ್ಯೂ - ಮುಂದಿನ ತಿಂಗಳು ಬಿಡುಗಡೆ

ಜಾಗತಿಕ ಮಟ್ಟದಲ್ಲಿ ಕಾರುಗಳ ಕಳ್ಳತನ ತಡೆಯಲು ವಿನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿತ್ತಿದ್ದು, ಇದರಲ್ಲಿ ಬ್ಯೂ ಲಿಂಕ್ ಕೂಡಾ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಇದೇ ಸೌಲಭ್ಯವು ಹ್ಯುಂಡೈ ವೆನ್ಯೂ ಕಾರಿನಲ್ಲೂ ನೀಡಲಾಗುತ್ತಿದ್ದು, ಕಾರಿನ ಸುರಕ್ಷತೆಗೆ ಹೆಚ್ಚಿನ ಭದ್ರತೆ ಸಿಗಲಿದೆ. ಹಾಗೆಯೇ ಜಿಯೋ ಫೆನ್ಸ್ ಸೌಲಭ್ಯವು ನಿಮ್ಮ ಕಾರಿಗೆ ಮತ್ತಷ್ಟು ಭದ್ರತೆ ನೀಡಲಿದ್ದು, ನೀವು ಒಂದು ನೀರ್ದಿಷ್ಟ ಪ್ರದೇಶವನ್ನು ಬ್ಯೂ ಲಿಂಕ್ ಮೂಲಕ ಗುರುತು ಮಾಡಿಟ್ಟಲ್ಲಿ ಆ ಪ್ರದೇಶವನ್ನು ದಾಟಿ ನಿಮ್ಮ ಕಾರು ಹೊರಹೊದಲ್ಲಿ ನಿಮ್ಮನ್ನು ತಕ್ಷಣವೇ ಎಚ್ಚರಿಸುವಂತಹ ತಂತ್ರಜ್ಞಾನ ಇದಾಗಿದೆ.

ಅನಾವರಣಗೊಂಡ ಹ್ಯುಂಡೈ ವೆನ್ಯೂ - ಮುಂದಿನ ತಿಂಗಳು ಬಿಡುಗಡೆ

ಜೊತೆಗೆ ರಿಯರ್ ಟೈಮ್ ವೆಹಿಕಲ್ ಟ್ರ್ಯಾಕಿಂಗ್ ಮೂಲಕ ಕಳ್ಳತನವಾದ ಕಾರನ್ನು ಕೆಲವೇ ನಿಮಿಷಗಳಲ್ಲಿ ಪತ್ತೆ ಮಾಡಬಹುದಾಗಿದೆ. ಹಾಗೆಯೇ ರಿಮೋಟ್ ಮೂಲಕವೇ ಎಂಜಿನ್ ಸ್ಟಾರ್ಟ್/ಸ್ಟಾಪ್, ಲಾಕ್/ಅನ್‌ಲಾಕ್, ಹಾರ್ನ್ ಮತ್ತು ಲೈಟ್ ಕಂಟ್ರೋಲ್, ಫೈಂಡ್ ಮೈ ಕಾರ್ ಲೋಕೇಷನ್, ಶೇರ್ ಮೈ ಕಾರ್ ಮತ್ತು ರಿಯರ್ ಟೈಮ್ ಮೂಲಕ ಟ್ರಾಫಿಕ್ ಇನ್‌ಫಾರ್ಮೆಷನ್ ಪಡೆದುಕೊಳ್ಳಬಹುದಾದ ಸೌಲಭ್ಯ ಈ ಕಾರಿನಲ್ಲಿದೆ.

ಅನಾವರಣಗೊಂಡ ಹ್ಯುಂಡೈ ವೆನ್ಯೂ - ಮುಂದಿನ ತಿಂಗಳು ಬಿಡುಗಡೆ

ವೆನ್ಯೂ ಕಾರುಗಳು ಒಟ್ಟು ಮೂರು ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗುತ್ತಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ 1.0 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಮತ್ತು 1.4 ಲೀಟರ್ ಎಂಜಿನ್ ಹೊಂದಿರಲಿದೆ. ಹಾಗೆಯೇ 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿರಲಿದೆ.

ಅನಾವರಣಗೊಂಡ ಹ್ಯುಂಡೈ ವೆನ್ಯೂ - ಮುಂದಿನ ತಿಂಗಳು ಬಿಡುಗಡೆ

ಇನ್ನು ಹೊಸ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, 6 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, 4 ಏರ್‌ಬ್ಯಾಗ್, ಸನ್‌ರೂಫ್, ಡ್ಯುಯಲ್ ಟೋನ್ ಬಾಡಿ ಕಲರ್, ಡ್ಯುಯಲ್ ಟೋನ್ ಇಂಟಿರಿಯರ್, ರಿಯರ್ ವ್ಯೂ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್, ಸ್ಮಾರ್ಟ್ ಕೆನೆಕ್ಟಿವಿಟಿ ಮತ್ತು ಲಾರ್ಜ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಹಲವು ಮಾದರಿಯ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಅನಾವರಣಗೊಂಡ ಹ್ಯುಂಡೈ ವೆನ್ಯೂ - ಮುಂದಿನ ತಿಂಗಳು ಬಿಡುಗಡೆ

ಕಾರಿನ ಬೆಲೆಗಳು(ಅಂದಾಜು)

ಹೊಸ ವೆನ್ಯೂ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.40 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.11 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Hyundai Venue Unveiled — India Launch Next Month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X