ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಕೊರಿಯಾದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಎಕ್ಸೆಂಟ್ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಹ್ಯುಂಡೈ ಕಾಂಪ್ಯಾಕ್ಟ್ ಸೆಡಾನ್‍‍ಗಳ ಮೇಲೆ ರೂ.1.25 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ 2014ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಈ ಕಾಂಪ್ಯಾಕ್ಟ್ ಸೆಡಾನ್ ಅನ್ನು ಬಿಡುಗಡೆಗೊಳಿಸಿತ್ತು. ಭಾರತದಲ್ಲಿ ಬಿಡುಗಡೆಯಾದಾಗಿನಿಂದಲೂ ಈ ಕಾಂಪ್ಯಾಕ್ಟ್ ಸೆಡಾನ್ ಅನ್ನು ಹೆಚ್ಚಾಗಿ ಟ್ಯಾಕ್ಸಿ ಕ್ಯಾಬ್ ಆಗಿ ಗ್ರಾಹಕರು ಬಳಸುತ್ತಿದ್ದಾರೆ. ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮತ್ತು ಮಾರಾಟವನ್ನು ಹೆಚ್ಚಿಸಲು ಹ್ಯುಂಡೈ ಕಾಂಪ್ಯಾಕ್ಟ್ ಸೆಡಾನ್‍‍ಗಳ ಭಾರೀ ರಿಯಾಯಿತಿಯನ್ನು ಘೋಷಿಸಿದೆ.

ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಕಂಪನಿಯ ಎಕ್ಸೆಂಟ್ ಎಸ್ ಮತ್ತು ಎಸ್‍ಎಕ್ಸ್ ಪೆಟ್ರೋಲ್ ರೂಪಾಂತರಗಳ ವಿಶೇಷ ಬೆಲೆಯು ರೂ.5.39 ಲಕ್ಷಗಳಾಗಿವೆ. ಎಕ್ಸೆಂಟ್ ಎಸ್ ಸ್ಟ್ಯಾಂಡರ್ಡ್ ರೂಪಾಂತರವು ರೂ.7.09 ಲಕ್ಷ ಬೆಲೆಯನ್ನು ಹೊಂದಿದೆ. ರಿಯಾಯಿತಿ ಬಳಿಕ ಹೊಸ ಬೆಲೆಯು ರೂ.5.99 ಲಕ್ಷಗಳಾಗಿವೆ. ಈ ಮಾದರಿಗಳಿಗೆ ಒಟ್ಟು ರಿಯಾಯಿತಿ ರೂ.1.25 ಲಕ್ಷ ಉಳಿದ ಹ್ಯುಂಡೈ ಮಾದರಿಗಳಿಗೆ ರೂ.1,05,000 ರಿಯಾಯಿತಿಯನ್ನು ಘೋಷಿಸಲಾಗಿದೆ.

ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಎಕ್ಸೆಂಡ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 83 ಬಿಹೆಚ್‍‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.2 ಲೀಟರ್ ಮೂರು-ಸಿಲಿಂಡರ್ ಡೀಸೆಲ್ ಎಂಜಿನ್ 75 ಬಿ‍ಹೆಚ್‍‍ಪಿ ಪವರ್ ಮತ್ತು 190 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಎಕ್ಸೆಂಟ್ ಕಾರು 7 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಆ್ಯಪಲ್ ಕಾರ್‍‍ಪ್ಲೇ, ಆಂಡಾಯ್ಡ್ ಆಟೋ, ಎಸಿ ವೆಂಟ್ಸ್, ರಿವರ್ಸಿಂಗ್ ಕ್ಯಾಮೆರಾವನ್ನು ಹೊಂದಿದೆ.

ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಈ ಕಾಂಪ್ಯಾಕ್ಟ್ ಸೆಡಾನ್‍‍‍ನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಜೊತೆಗೆ ಡ್ಯಯಲ್ ಏರ್‍‍ಬ್ಯಾಗ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಮುಂದಿನ ವರ್ಷದ ಆರಂಭದಲ್ಲಿ ಹೊಸ ಜನರೇಷನ್ ಹ್ಯುಂಡೈ ಎಕ್ಸೆಂಟ್ ಬಿಡುಗಡೆಯಾಗಲಿದೆ. ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಈಗಾಗಲೇ ಹೊಸ ಎಕ್ಸೆಂಟ್ ಅನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆ. ಈ ಹೊಸ ಕಾರ್ ಅನ್ನು ಭಾರತದ ರಸ್ತೆಗಳಲ್ಲಿ ಈಗಾಗಲೇ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿರುವ ಹೊಸ ಎಕ್ಸೆಂಟ್ ಕಾರು ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ. ಹೊಸ ಕಾರು ಹಲವಾರು ವೈಶಿಷ್ಟ್ಯಗಳಿಂದ ಕೂಡಿರಲಿದೆ, ಇದರಲ್ಲಿ ಆ್ಯಪಲ್ ಕಾರ್‍‍ಪ್ಲೇ, ಆಂಡ್ರಾಯ್ಡ್ ಮತ್ತು ಹ್ಯುಂಡೈನ ಬ್ಲೂಲಿಂಕ್ ಕನೆಕ್ಟಿವಿಟಿ ಹೊಂದಿರುವ ಕಾರ್ ಟಿಕ್ ಹೊಂದಿರಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಹ್ಯುಂಡೈ ಈಗ ಕಾಂಪ್ಯಾಕ್ಟ್ ಸೆಡಾನ್‍‍ನಲ್ಲಿ ರೂ.1.25 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಅಲ್ಲದೇ ಬಿಎಸ್-6 ಎಂಜಿನ್ ಹೊಂದಿರುವ ಹೊಸ ಹ್ಯುಂಡೈ ಎಕ್ಸೆಂಟ್ ಕಾರು ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅದಕ್ಕೂ ಮೊದಲು ಬಿಎಸ್-4 ಎಂಜಿನ್‍ ಮಾದರಿಗಳ ಮಾರಾಟವನ್ನು ಹೆಚ್ಚಿಸಲು ಈ ಭರ್ಜರಿ ರಿಯಾಯಿತಿ ಘೋಷಿಸಿರುವ ಸಾಧ್ಯತೆಗಳಿವೆ.

Article Published On: Thursday, November 7, 2019, 12:03 [IST]
English summary
Hyundai Xcent gets discounts worth up to Rs 1.25 lakh - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+