ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಹೋಂಡಾ ಕಂಪನಿಯು ತನ್ನ 2020ರ ಹೊಸ ಸಿ‍ಆರ್-ವಿ ಫೇಸ್‍‍ಲಿಫ್ಟ್ ಕಾರ್ ಅನ್ನು ಅಮೇರಿಕಾದಲ್ಲಿ ಅನಾವರಣಗೊಳಿಸಿದೆ. ಈ ಕಾರ್ ಅನ್ನು ಅಮೇರಿಕಾದಲ್ಲಿ ಈ ವರ್ಷದ ಡಿಸೆಂಬರ್‍‍ನಲ್ಲಿ ಬಿಡುಗಡೆಗೊಳಿಸಲಾಗುವುದು. ಸದ್ಯ ಮಾರುಕಟ್ಟೆಯಲ್ಲಿರುವ ಸಿ‍ಆರ್ ವಿ ಎಸ್‍‍ಯುವಿಯನ್ನು ಇದೇ ಮೊದಲ ಬಾರಿಗೆ ನವೀಕರಣಗೊಳಿಸಲಾಗಿದೆ.

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಹೊಸ ಕಾರಿನ ಹೊರಭಾಗದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದರೆ, ಇಂಟಿರಿಯರ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. 2020ರ ಹೋಂಡಾ ಸಿ‍ಆರ್-ವಿ ಕಾರು ಭಾರತದಲ್ಲಿ ಮುಂದಿನ ವರ್ಷದ ಕೊನೆಯ ಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಕಾರಿನ ಹೊರಭಾಗದಲ್ಲಾಗಿರುವ ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೊಸ ಬಂಪರ್ ಅಳವಡಿಸಲಾಗಿದೆ. ಈಗಿರುವ ಕಾರಿನ ಮುಂಭಾಗದಲ್ಲಿ ಅಡ್ಡವಾದ ಬಾರ್‍‍ಗಳಿದ್ದರೆ, ಹೊಸ ಕಾರಿನಲ್ಲಿ ದೊಡ್ಡ ಗಾತ್ರದ ಹನಿಕೂಂಬ್ ಮೆಶ್ ಇರಲಿದೆ.

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಫೇಸ್‍‍ಲಿಫ್ಟ್ ಕಾರಿನಲ್ಲಿ ದೊಡ್ಡ ಎಲ್‍ಇ‍‍ಡಿ ಫಾಗ್ ಲ್ಯಾಂಪ್, ಏರ್ ಡ್ಯಾಮ್‍‍ಗಳ ಮೇಲೆ ಕ್ರೋಮ್ ಅಸೆಂಟ್, ಫಾಗ್ ಲ್ಯಾಂಪ್ ಹೌಸಿಂಗ್‍‍ಗಳಿರಲಿವೆ. ಕಾರಿನ ಸೈಡ್‍‍ನಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಕಾರಿನ ಹಿಂಭಾಗದಲ್ಲಿ ಹೊಸ ವಿನ್ಯಾಸದ ಬಂಪರ್ ಹಾಗೂ ಡಾರ್ಕ್ ಟೇಲ್ ಲ್ಯಾಂಪ್‍‍ಗಳನ್ನು ಅಳವಡಿಸಲಾಗುತ್ತದೆ.

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಟಾಪ್ ಮಾದರಿಯ ಕಾರುಗಳಲ್ಲಿ 19 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗುತ್ತದೆ. ಇಂಟಿರಿಯರ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಕಾರಿನಲ್ಲಿರುವಂತಹ 7 ಇಂಚಿನ ಟಚ್‍‍ಸ್ಕ್ರೀನ್ ಜೊತೆಗೆ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗಳಿರಲಿವೆ.

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಇದರ ಜೊತೆಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೋಲ್ ಹಾಗೂ ಡ್ಯುಯಲ್ ಜೋನ್ ಏರ್ ಕಂಡಿಷನಿಂಗ್‍‍ಗಳಿವೆ. ಕಾರಿನ ಬಗೆಗಿನ ಮಾಹಿತಿಯನ್ನು ನೀಡುವುದಕ್ಕಾಗಿ ಹೋಂಡಾ ಸೆನ್ಸ್ ಸೂಟ್‍‍ಗಳಿವೆ. ಸುರಕ್ಷಾ ಫೀಚರ್‍‍ಗಳಿಗಾಗಿ ಸ್ಟಾಂಡರ್ಡ್ ಆದ ಏರ್ ಬ್ಯಾಗ್, ಎ‍‍ಬಿ‍ಎಸ್ ಹಾಗೂ ಇಬಿ‍‍ಡಿಗಳಿರಲಿವೆ.

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಇದರ ಜೊತೆಗೆ ಆಟೋಮೇಟೆಡ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಹಾಗೂ ಲೇನ್ ಕೀಪಿಂಗ್ ಅಸಿಸ್ಟ್ ಗಳಿರಲಿವೆ. ಇದೇ ಮೊದಲ ಬಾರಿಗೆ ಹೈಬ್ರಿಡ್ ಎಂಜಿನ್ ಅಳವಡಿಸಲಾಗುತ್ತಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

2.0 ಲೀಟರಿನ, 4 ಸಿಲಿಂಡರ್‍‍ನ ಪೆಟ್ರೋಲ್ ಎಂಜಿನ್ ಹಾಗೂ ಎರಡು ಎಲೆಕ್ಟ್ರಿಕ್ ಮೋಟರ್‍‍ಗಳು ಜಂಟಿಯಾಗಿ 209 ಬಿ‍‍ಹೆಚ್‍‍‍ಪಿ ಪವರ್ ಉತ್ಪಾದಿಸಲಿವೆ. ಈ ಹೈಬ್ರಿಡ್ ಎಂಜಿನ್‍‍ನ ಬಳಕೆಯಿಂದಾಗಿ ಇಂಧನವನ್ನು ಬಳಸುವ ಪ್ರಮಾಣವು ಕಡಿಮೆಯಾಗಲಿದೆ. ಈ ಕಾರಿನಲ್ಲಿ ಅಳವಡಿಸಲಾಗುವ ಎ‍‍ಡಬ್ಲ್ಯುಡಿ ಸಿಸ್ಟಂ ಹಿಂದಿನ ವ್ಹೀಲ್‍‍ಗಳಿಗೆ ಪವರ್ ಕಳುಹಿಸುತ್ತದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಹೊಸ ಕಾರಿನಲ್ಲಿ 1.5 ಲೀಟರಿನ ಟರ್ಬೊಚಾರ್ಜ್ಡ್ 4 ಸಿಲಿಂಡರ್‍‍ನ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 187 ಬಿ‍‍ಹೆಚ್‍‍ಪಿ ಪವರ್ ಹಾಗೂ 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಹೈಬ್ರಿಡ್ ಎಂಜಿನ್ ಅನ್ನು ಅಮೇರಿಕಾದಲ್ಲಿ ಅಭಿವೃದ್ಧಿಪಡಿಸಲಾಗಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರಿನಲ್ಲಿ ಈ ಎಂಜಿನ್ ಅನ್ನು ಬಳಸಿಕೊಳ್ಳಲಾಗುವುದೇ ಇಲ್ಲವೇ ಎಂಬುದನ್ನು ಕಂಪನಿಯು ಸ್ಪಷ್ಟ ಪಡಿಸಿಲ್ಲ. 2020ರ ಕೊನೆಯ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಸಿ‍ಆರ್-ವಿಯ ಬೆಲೆಯು ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಕಾರಿನ ಬೆಲೆಗಿಂತ ಹೆಚ್ಚಾಗಿರಲಿದೆ.

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ಈ ಹೊಸ ಕಾರಿನ ಬೆಲೆಯು ರೂ.28.27 ಲಕ್ಷದಿಂದ ರೂ.32.77 ಲಕ್ಷಗಳವರೆಗೆ ಇರಲಿದೆ. ಮಾರುಕಟ್ಟೆಯಲ್ಲಿರುವ ಹಳೆಯ ಹೋಂಡಾ ಸಿಆರ್‍-ವಿ ಕಾರ್ ಅನ್ನು ರೂ.4.15 ಲಕ್ಷಗಳವರೆಗೆ ರಿಯಾಯಿತಿ ನೀಡಿ ಮಾರಾಟ ಮಾಡಲಾಗುತ್ತಿದೆ.

ಅನಾವರಣಗೊಂಡ ಹೋಂಡಾ ಸಿ‍ಆರ್-ವಿ ಫೇಸ್‍‍ಲಿಫ್ಟ್

ನವೀಕೃತ ಆವೃತ್ತಿಯ ಹೋಂಡಾ ಸಿ‍ಆರ್-ವಿ ಕಾರು ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ಎಂಡೀವರ್, ಟೊಯೊಟಾ ಫಾರ್ಚೂನರ್, ಫೋಕ್ಸ್ ವ್ಯಾಗನ್ ಟಿಗ್ವಾನ್ ಹಾಗೂ ಹ್ಯುಂಡೈನ ಸಾಂಟಾಫೆ ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Thursday, September 19, 2019, 18:29 [IST]
English summary
2020 Honda CRV Facelift debuts with new features - Read in kannada
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+