ಇದು ಭಾರತದ ಬಲಿಷ್ಠ ಸ್ಕೋಡಾ ಕಾರ್ ಅಂತೆ..!
ಸ್ಕೋಡಾ ಒಕ್ಟಿವಿಯಾ ವಿಆರ್‍ಎಸ್ ದೇಶಿಯ ಮಾರುಕಟ್ಟೆಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಜೆಕ್ ಮೂಲದ ಕಾರು ತಯಾರಕ ಕಂಪನಿ ಸ್ಕೋಡಾ ಒಕ್ಟಿವಿಯಾ ಸೆಡಾನ್ ಅನ್ನು 2002ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಳಿಸಿತು.

ತನ್ನ ಪರ್ಫಾಮೆನ್ಸ್ ನಿಂದಾಗಿ ಈ ಕಾರು ಬಹಳ ಜನಪ್ರಿಯವಾಗಿತ್ತು. ಇದಾದ ನಂತರ ಲೌರಾ ಆರ್‍ಎಸ್ ಕಾರ್ ಅನ್ನು ಬಿಡುಗಡೆಗೊಳಿಸಲಾಯಿತು. ಬಹಳಷ್ಟು ವರ್ಷಗಳ ನಂತರ ಸ್ಕೋಡಾ ಕಂಪನಿಯು ಒಕ್ಟಿವಿಯಾ ವಿಆರ್‍ಎಸ್ ಕಾರ್ ಅನ್ನು ಬಿಡುಗಡೆಗೊಳಿಸಿತು. ಒಕ್ಟಿವಿಯಾ ವಿಆರ್‍ಎಸ್ ಕಾರ್ ಅನ್ನು ಭಾರತದಲ್ಲಿ 2017ರ ಸೆಪ್ಟೆಂಬರ್ 1 ರಂದು ಬಿಡುಗಡೆಗೊಳಿಸಲಾಯಿತು. ಆಗ ಈ ಕಾರಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.24.62 ಲಕ್ಷಗಳಾಗಿತ್ತು.
ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿ ಅಪಾರವಾದ ಜನಪ್ರಿಯತೆಯನ್ನು ಹೊಂದಿತು. ಒಕ್ಟಿವಿಯಾ ವಿಆರ್‍ಎಸ್ ಬಲಶಾಲಿಯಾದ ಕಾರು ಎಂದು ಜನಪ್ರಿಯವಾಗಿದ್ದರೂ, ಟರ್ಬೊ ಎಕ್ಟ್ರೀಮ್ ಬಿಡುಗಡೆಗೊಳಿಸಿರುವ ಈ ವೀಡಿಯೊದಲ್ಲಿರುವ ಕಾರನ್ನು ಭಾರತದ ಅತ್ಯಂತ ಬಲಶಾಲಿಯಾದ ಒಕ್ಟಿವಿಯಾ ವಿಆರ್‍ಎಸ್ ಕಾರು ಎಂದು ಹೇಳಿಕೊಂಡಿದೆ.

ಈ ಕೆಂಪು ಒಕ್ಟಿವಿಯಾ ವಿಆರ್‍ಎಸ್ ಕಾರ್ ಅನ್ನು ಸುಮಾರು ರೂ. 16 ಲಕ್ಷ ಖರ್ಚು ಮಾಡಿ ಮಾಡಿಫೈ ಮಾಡಲಾಗಿದೆ. ಈ ಕಾರ್ ಅನ್ನು ಮಾರಾಟಕ್ಕೂ ಇಡಲಾಗಿದೆ. ಕಾರಿನ ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವ್ಹೀಲ್‍ಗಳನ್ನು ಹೊಂದಿದೆ.

ಈ ಕಾರಿನ ಆಫ್ಟರ್ ಮಾರ್ಕೆಟ್ ರಿಮ್‍ಗಳನ್ನು ಮೈಕೆಲಿನ್ ಪಿಎಸ್ 4 ಟಯರ್‍ಗಳಿಂದ ಬದಲಿಸಲಾಗಿದೆ. ಕಾರಿನ ಹೊರಭಾಗದಲ್ಲಿ ಅಲ್ಲಲ್ಲಿ ಸ್ವಲ್ಪ ಪ್ರಮಾಣದ ಕಪ್ಪು ಬಣ್ಣದ ಸ್ಟೈಲಿಂಗ್ ಬಿಟ್‌ಗಳಿವೆ. ಈ ಕಾರಿನ ಒಳಭಾಗದಲ್ಲಿ ಮುಖ್ಯವಾದ ಬದಲಾವಣೆಯಾಗಿದೆ. ಒಳಭಾಗವೆಂದರೆ ಎಂಜಿನ್ ಮತ್ತು ಇತರ ಮೆಕಾನಿಕಲ್ ಅಂಶಗಳನ್ನು ಮಾಡಿಫೈ ಮಾಡಲಾಗಿದೆ. ಮೊದಲನೆಯದಾಗಿ, ಇದು ಮೂರು ಹಂತದ ರೀಮ್ಯಾಪ್ ಅನ್ನು ಪಡೆಯುತ್ತದೆ, ಇದರಿಂದಾಗಿ ಭಾರಿ ಪ್ರಮಾಣದ ಪವರ್ ಉತ್ಪಾದಿಸಲಿದೆ.

ಈ ಕಾರು ಈಗ ಸುಮಾರು 425 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಆದರೆ ಇದು ಕೇವಲ ರೀಮ್ಯಾಪ್‌ನಿಂದ ಮಾತ್ರ ಸಾಧ್ಯವಾಗಿಲ್ಲ. ಬದಲಿಗೆ ಕಾರಿನಲ್ಲಿ ಮಾಡಲಾಗಿರುವ ವಿವಿಧ ಮಾಡಿಫೈಗಳಿಂದಾಗಿ ಸಾಧ್ಯವಾಗಿದೆ. ಒಕ್ಟಿವಿಯಾ ವಿಆರ್‍ಎಸ್ ಕಾರಿನಲ್ಲಿ 2 ಲೀಟರ್‍ನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 220 ಬಿಹೆಚ್‍ಪಿ ಹಾಗೂ 350 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍ಗಳು

ಈ ಎಂಜಿನ್ ಕಾರಿನಲ್ಲಿರುವ ಮುಂಭಾಗದ ವ್ಹೀಲ್‍ಅನ್ನು 6 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನಿಂದ ಚಲಿಸುವಂತೆ ಮಾಡುತ್ತದೆ. ಇದು ಬಲಿಷ್ಟವಾದ ಸಸ್ಪೆಂಷನ್ ಸೆಟ್‍ಅಪ್ ಅಳವಡಿಸಿರುವುದರಿಂದ ರೆಗ್ಯುಲರ್ ಒಕ್ಟಿವಿಯಾಗಿಂತ ಹೆಚ್ಚು ತೀಕ್ಷ್ಣವಾಗಿ ಕಾರ್ಯನಿರ್ವಹಿಸುತ್ತಿದೆ.

ದೊಡ್ಡ ಗಾತ್ರದಲ್ಲಿರುವ ಟರ್ಬೊ, ದೊಡ್ಡ ಇಂಟರ್‍ಕೂಲರ್‍ನ ಅಗತ್ಯವನ್ನು ತಿಳಿಸುತ್ತದೆ. ಆದ ಕಾರಣ ಈ ಕಾರಿನಲ್ಲಿ ವ್ಯಾಗ್ನರ್ ಆಫ್ಟರ್ ಮಾರ್ಕೆಟ್ ಇಂಟರ್‍ಕೂಲರ್ ಅಳವಡಿಸಲಾಗಿದೆ. ಟರ್ಬೊಚಾರ್ಜರ್ ಕಾರ್ಯ ನಿರ್ವಹಿಸುವಾಗ ಬಿಸಿಯಾಗುವ ಕಾರಣ, ಇದನ್ನು ಕೂಲಾಗಿಸಲು ಇಂಟರ್‍ಕೂಲರ್ ಅನ್ನು ಬಳಸಲಾಗುತ್ತದೆ.
MOST READ: ಹೆಚ್ಚು ಮಾರಾಟವಾಗುವ ಸ್ಕೂಟರ್‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಆರ್600 ಏರ್ ಫಿಲ್ಟರ್ ಹಾಗೂ ಮಿಲ್‍ಟೆಕ್‌ನಿಂದ ಪಡೆಯಲಾಗಿರುವ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಸಿಸ್ಟಂಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಪವರ್ ಔಟ್‍ಪುಟ್ ಹೆಚ್ಚಾಗಿರುವುದರಿಂದ, ಈ ಕಾರಿಗೆ ದೊಡ್ಡ ಗಾತ್ರದ ಬ್ರೇಕುಗಳು ಬೇಕಾಗುತ್ತವೆ. ಆದ ಕಾರಣ ಆಫ್ಟರ್ ಮಾರ್ಕೆಟ್ ಬ್ರೇಕ್ ರಿಮ್‍ಗಳ ಜೊತೆಯಲ್ಲಿ ಸೆರಾಮಿಕ್ ಬ್ರೇಕ್ ಪ್ಯಾಡ್ ಹಾಗೂ ಆಫ್ಟರ್ ಮಾರ್ಕೆಟ್ ರೋಟೊರ್‍ಗಳನ್ನು ಅಳವಡಿಸಲಾಗಿದೆ.
MOST READ: ಮೇ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಸಸ್ಪೆಂಷನ್ ಅನ್ನು ಮತ್ತಷ್ಟು ಬದಲಿಸಲಾಗಿದ್ದು, ಈಗ ಬಿಲ್‍ಸ್ಟೈನ್ ಬಿ12 ಸ್ಪೋರ್ಟ್ಸ್ ಡ್ಯಾಂಪರ್‍ಗಳನ್ನು ಅಳವಡಿಸಲಾಗಿದೆ. ಕಾರಿನ ಮಾರಾಟದ ವಿಷಯಕ್ಕೆ ಬರುವುದಾದರೆ, 2017 ರ ಮಾದರಿಯ ಈ ಕಾರು ದೆಹಲಿಯಲ್ಲಿದ್ದು ರೂ.36 ಲಕ್ಷಗಳಿಗೆ ಮಾರಾಟ ಮಾಡಲಾಗುವುದು. ಬೇಡಿಕೆಯ ಮೇರೆಗೆ ಕಾರಿನ ಸರ್ವಿಸ್ ಬಗ್ಗೆಗಿನ ಪೂರ್ಣ ಮಾಹಿತಿಯನ್ನು ನೀಡಲಾಗುವುದು. ಈ ಸೆಡಾನ್ ಖರೀದಿಸಲು ನೀವು ಆಸಕ್ತಿ ಹೊಂದಿದ್ದರೆ ಯೂಟ್ಯೂಬ್ ವೀಡಿಯೊದಲ್ಲಿರುವ ವಿಳಾಸವನ್ನು ಸಂಪರ್ಕಿಸಿ.
Source: Turbo Xtreme


Click it and Unblock the Notifications








