ಮೇ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು
ಮೇ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಎಂದಿನಂತೆ ಈ ಬಾರಿಯೂ ಹೀರೋ ಮೋಟೊಕಾರ್ಪ್ ಕಂಪನಿಯ ಸ್ಪ್ಲೆಂಡರ್ ಬೈಕ್ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ದೇಶಿಯ ಮೋಟಾರ್‍ಸೈಕಲ್ ಸೆಗ್‍ಮೆಂಟಿನಲ್ಲಿ, ಹೀರೋ ಕಂಪನಿಯ ಸ್ಪ್ಲೆಂಡರ್ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಮೇ ತಿಂಗಳಿನಲ್ಲಿ 2,67,450 ಸ್ಪ್ಲೆಂಡರ್ ಬೈಕುಗಳನ್ನು ಮಾರಾಟ ಮಾಡಲಾಗಿದೆ. ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಸುಮಾರು 40,000 ಬೈಕುಗಳನ್ನು ಹೆಚ್ಚು ಮಾರಾಟ ಮಾಡಲಾಗಿದೆ. ಇತ್ತೀಚೆಗಷ್ಟೇ ಹೀರೋ ಕಂಪನಿಯು, ದೇಶಿಯ ಮಾರುಕಟ್ಟೆಯಲ್ಲಿ ಸ್ಪ್ಲೆಂಡರ್ ಬೈಕಿನ 25 ವರ್ಷಗಳ ಸಂಭ್ರಮವನ್ನು ಆಚರಿಸಿತು.

ಈ ಸಂದರ್ಭದಲ್ಲಿ, ಹೀರೋ ಕಂಪನಿಯು, ಸ್ಪ್ಲೆಂಡರ್ ಬೈಕಿನ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿತು. ವಿಶೇಷ ಆವೃತ್ತಿಯ ಸ್ಪ್ಲೆಂಡರ್ ಮೋಟಾರ್‍ಸೈಕಲ್‍ನಲ್ಲಿ ಹೆಚ್ಚಿನ ಕಾಸ್ಮೆಟಿಕ್ ಅಪ್‍ಡೇಟ್‍ಗಳನ್ನು ಮಾಡಲಾಗಿರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.
| ಸ್ಥಾನ | ಬೈಕ್ ಮಾದರಿಗಳು | ಮೇ 2019ರಲ್ಲಿನ ಮಾರಾಟ |
| 1 | ಹೀರೋ ಸ್ಪ್ಲೆಂಡರ್ | 2,67,450 |
| 2 | ಹೀರೋ ಹೆಚ್‍ಎಫ್ ಡೀಲಕ್ಸ್ | 1,83,255 |
| 3 | ಹೋಂಡಾ ಸಿಬಿ ಶೈನ್ | 92,069 |
| 4 | ಬಜಾಜ್ ಪಲ್ಸರ್ | 86,145 |
| 5 | ಹೀರೋ ಪ್ಯಾಶನ್ | 69,663 |
| 6 | ಹೀರೋ ಗ್ಲಾಮರ್ | 69,379 |
| 7 | ಬಜಾಜ್ ಪ್ಲಾಟಿನಾ | 59,938 |
| 8 | ಟಿವಿಎಸ್ ಅಪಾಚೆ | 41,398 |
| 9 | ಬಜಾಜ್ ಸಿಟಿ | 38,709 |
| 10 | ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 | 35,998 |

ಹೀರೋ ಕಂಪನಿಯ ಎಚ್‌ಎಫ್ ಡೀಲಕ್ಸ್ ಬೈಕ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸ್ಪ್ಲೆಂಡರ್‌ನಂತೆಯೇ ಕಾಣುವ ಈ ಬೈಕ್, ದೇಶಿಯ ಮಾರುಕಟ್ಟೆಯಲ್ಲಿ ಸ್ಥಿರವಾಗಿ ಮಾರಾಟವಾಗುತ್ತಿದೆ. 2019 ರ ಮೇ ತಿಂಗಳಲ್ಲಿ 1,83,255 ಹೀರೋ ಎಚ್‌ಎಫ್ ಡೀಲಕ್ಸ್ ಬೈಕುಗಳನ್ನು ಮಾರಾಟ ಮಾಡಲಾಗಿದೆ.

ಹೋಂಡಾ ಕಂಪನಿಯ ಸಿಬಿ ಶೈನ್ ಬೈಕ್ ಮೂರನೇ ಸ್ಥಾನದಲ್ಲಿದೆ. ಜಪಾನ್ ಮೂಲದ ಹೋಂಡಾ ಕಂಪನಿಯು, ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಮೊಟೊಕಾರ್ಪ್‌ನ ಪ್ರಬಲ ಪ್ರತಿಸ್ಪರ್ಧಿಗಳಲ್ಲಿ ಒಂದಾಗಿದೆ. ಸಿಬಿ ಶೈನ್, ಮೋಟಾರ್ ಸೈಕಲ್ ಸೆಗ್‍ಮೆಂಟಿನಲ್ಲಿರುವ ಹೋಂಡಾ ಕಂಪನಿಯ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ಮೇ ತಿಂಗಳಿನಲ್ಲಿ 92,069 ಸಿಬಿ ಶೈನ್ ಬೈಕುಗಳನ್ನು ಮಾರಾಟ ಮಾಡಲಾಗಿದೆ. ಪಟ್ಟಿಯ ಮಧ್ಯ ಭಾಗದಲ್ಲಿ ಬಜಾಜ್, ಹೀರೋ ಮತ್ತು ಟಿವಿಎಸ್ ಕಂಪನಿಯ ಬೈಕುಗಳಿವೆ.
MOST READ: ವಾಹನ ಮಾಲೀಕರಿಂದ ಪ್ರತಿಭಟನೆ- ಮಕ್ಕಳನ್ನು ಶಾಲೆಗಳಿಗೆ ತಲುಪಿಸಿದ ಪೊಲೀಸರು

ಪಲ್ಸರ್ ಸರಣಿಯ ಬೈಕುಗಳು ನಾಲ್ಕನೇ ಸ್ಥಾನದಲ್ಲಿದ್ದರೆ, ಹೀರೋ ಪ್ಯಾಶನ್, ಹೀರೋ ಗ್ಲಾಮರ್, ಬಜಾಜ್ ಪ್ಲಾಟಿನಾ ಹಾಗೂ ಟಿವಿಎಸ್ ಅಪಾಚೆ ಬೈಕುಗಳು ನಂತರದ ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿರುವ ಕೊನೆಯ ಎರಡು ಸ್ಥಾನಗಳಲ್ಲಿ ಬಜಾಜ್ ಸಿಟಿ 100 ಮತ್ತು ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕುಗಳಿವೆ.
MOST READ: ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿಎಂಟಿಸಿ..!

38,709 ಬೈಕುಗಳ ಮಾರಾಟದೊಂದಿಗೆ ಸಿಟಿ100 ಒಂಬತ್ತನೇ ಸ್ಥಾನದಲ್ಲಿದ್ದರೆ, 35,998 ಬೈಕುಗಳ ಮಾರಾಟದೊಂದಿಗೆ, ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಹತ್ತನೇ ಸ್ಥಾನದಲ್ಲಿದೆ.
MOST READ: ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ಡೈವ್‍ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಅಗ್ರ ಐದು ಸ್ಥಾನಗಳಲ್ಲಿ ಬಹುತೇಕ ಬಾರಿ ಹೆಚ್ಚಿನ ಬದಲಾವಣೆಗಳಾಗುತ್ತಿಲ್ಲ. ಆದರೆ ಪ್ರತಿ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೊಸ ಬೈಕುಗಳ ಮಾರಾಟದ ಆಧಾರದ ಮೇಲೆ ಕೊನೆಯ ಐದು ಸ್ಥಾನಗಳಲ್ಲಿ ಬದಲಾವಣೆಗಳಾಗುತ್ತವೆ. ಎಷ್ಟೇ ಹೊಸ ಬೈಕುಗಳು ಬಂದರೂ ಹೀರೋ ಮೋಟೊಕಾರ್ಪ್ ಬೈಕುಗಳ ಸೆಗ್‍ಮೆಂಟಿನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸುತ್ತಲೇ ಇದೆ.


Click it and Unblock the Notifications








