ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಬೆಂಗಳೂರು ಮಹಾನಗರದ ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ಬಿ‍ಎಂ‍‍ಟಿ‍‍ಸಿ ಸಾರ್ವಜನಿಕ ಜಾಹೀರಾತನ್ನು ನೀಡಿ, ರೂ.160 ಕೋಟಿಗಳ ಸಾಲವನ್ನು ಕೇಳಿದೆ. ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ವಿಚಿತ್ರವಾಗಿ, ವಿಶೇಷವಾಗಿ ಸಾಲ ಪಡೆಯಲಾಗುತ್ತಿದ್ದು, ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಈ ರೀತಿ ಮಾಡಿರುವುದಾಗಿ ಬಿ‍ಎಂ‍‍ಟಿ‍ಸಿ ಸ್ಪಷ್ಟನೆ ನೀಡಿದೆ.

ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಬಿ‍ಎಂ‍‍ಟಿ‍ಸಿ ಆರ್ಥಿಕ ಸಂಕಷ್ಟದಲ್ಲಿದ್ದು, ಉದ್ಯೋಗಿಗಳ ಪಿ‍ಎಫ್, ವಿಮಾ ಕಂತು ಹಾಗೂ ಗ್ರಾಚುಟಿ ಹಣವನ್ನು ಕಟ್ಟಲು ಹೆಣಗಾಡುತ್ತಿದೆ. ಜೂನ್ 13ರಂದುಕೆಲವು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದ್ದು, ಈ ರೀತಿಯಾಗಿ ಜಾಹೀರಾತು ನೀಡಲು ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿರುವುದಾಗಿ ಸಂಸ್ಥೆ ತಿಳಿಸಿದೆ. ಬಿ‍ಎಂ‍‍ಟಿ‍ಸಿ ಸಂಸ್ಥೆಯು ತನ್ನ ಬಾಕಿ ಪಾವತಿಗಾಗಿ ಸಾಲ ಪಡೆಯಲು ಚಿಂತಿಸಿದ್ದು, ರೂ.160 ಕೋಟಿ ಪಡೆಯುವ ಉತ್ತಮ ವಿಧಾನವನ್ನು ತಿಳಿಯಲು ಸಂಸ್ಥೆಯು ಬಯಸಿದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಸಂಸ್ಥೆಯು ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆಯಲು ಬಯಸಿದೆ. ಬಿ‍ಎಂ‍‍ಟಿ‍ಸಿ ಅಧ್ಯಕ್ಷರಾದ ಎನ್‍ಎ ಹ್ಯಾರಿಸ್ ರವರು ಮಾತನಾಡಿ, ಬಿ‍ಎಂ‍‍ಟಿ‍ಸಿಯು ಸಾಲ ಪಡೆಯಲು ಪಾರದರ್ಶಕವಾದ ವಿಧಾನವನ್ನು ಅನುಸರಿಸುತ್ತಿದ್ದು, ಎಲ್ಲಾ ಸಾರ್ವಜನಿಕ ಸೇವೆ ನೀಡುವ ಸಂಸ್ಥೆಗಳು ಈ ವಿಧಾನವನ್ನೇ ಅನುಸರಿಸಬೇಕೆಂದು ಹೇಳಿದ್ದಾರೆ.

ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಬ್ಯಾಂಕುಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಬದಲು ಜಾಹೀರಾತನ್ನು ನೀಡಿದ್ದೇವೆ. ನಮಗೆ ಹಣದ ಅವಶ್ಯಕತೆಯಿದೆ, ಬ್ಯಾಂಕುಗಳು ಈ ಜಾಹೀರಾತನ್ನು ನೋಡಿ ಮುಂದೆ ಬಂದು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಿವೆ ಎಂಬ ಭರವಸೆಯಿದೆ ಎಂದು ತಿಳಿಸಿದರು.

ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಜಾಹೀರಾತಿನಲ್ಲಿ ಕೆಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ. ಸಾಲವನ್ನು ಒಂದೇ ಕಂತಿನಲ್ಲಿ ನೀಡಬೇಕು. ಸಾಲದ ಅವಧಿಯು ಏಳು ವರ್ಷಗಳಾಗಿದೆ. ಸಾಲದ ಮರುಪಾವತಿಯು ಎರಡು ತಿಂಗಳ ನಂತರ ಶುರುವಾಗಲಿದೆ. ಈ ಸಾಲವನ್ನು ನೀಡುವಾಗ ಯಾವುದೇ ಮುಂಗಡ ಶುಲ್ಕ ಹಾಗೂ ಡಾಕ್ಯುಮೆಂಟ್ ಶುಲ್ಕಗಳನ್ನು ಪಡೆಯಬಾರದು ಎಂದು ತಿಳಿಸಲಾಗಿದೆ. ಜಾಹೀರಾತಿನಲ್ಲಿ ಆಸಕ್ತಿ ಹೊಂದಿರುವ ಬ್ಯಾಂಕುಗಳು ಏಳು ದಿನಗಳ ಒಳಗೆ ಬಿಡ್‍‍ನಲ್ಲಿ ಭಾಗವಹಿಸಬಹುದೆಂದು ತಿಳಿಸಿದೆ.

ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಬಿ‍ಎಂ‍‍ಟಿ‍‍ಸಿ ಮ್ಯಾನೇಜಿಂಗ್ ಡೈರೆಕ್ಟರ್ ಎನ್‍‍ವಿ ಪ್ರಸಾದ್‍‍ರವರು ಈ ಸಾಲವನ್ನು ಸಂಸ್ಥೆಯ ಪ್ರಾವಿಡೆಂಟ್ ಫಂಡ್ ಬಾಕಿ ಹಣವನ್ನು ಪಾವತಿಸಲು ಬಳಸಲಾಗುವುದು ಎಂದು ತಿಳಿಸಿದ್ದಾರೆ. ಬುಧವಾರದ ವೇಳೆಗೆ ಆಸಕ್ತಿ ಹೊಂದಿರುವ ಕೆಲ ಬ್ಯಾಂಕುಗಳು ಸಂಸ್ಥೆಗೆ ಅರ್ಜಿ ಸಲ್ಲಿಸಿವೆ.

ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಎಷ್ಟು ಬ್ಯಾಂಕುಗಳು ಅರ್ಜಿ ಸಲ್ಲಿಸಿವೆ ಎಂಬುದನ್ನು ಸಂಸ್ಥೆ ಬಹಿರಂಗ ಪಡಿಸಿಲ್ಲ. ಗುರುವಾರ ಬಿಡ್ ಸಲ್ಲಿಸುವ ಕೊನೆಯ ದಿನವಾಗಿದ್ದು, ನಂತರ ಎಷ್ಟು ಬ್ಯಾಂಕುಗಳು ಅರ್ಜಿ ಸಲ್ಲಿಸಿವೆ ಎಂಬುದು ಸ್ಪಷ್ಟವಾಗಲಿದೆ.

MOST READ: ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಯೋಗೇಶ್ ಗೌಡ ಎಂಬುವವರು ಆರ್‍‍ಟಿ‍ಐನಲ್ಲಿ ಪಡೆದಿರುವ ಮಾಹಿತಿಯ ಪ್ರಕಾರ, ಬಿ‍ಎಂ‍‍ಟಿ‍‍ಸಿ ಸಂಸ್ಥೆಯು ರೂ.1,000 ಕೋಟಿಗೂ ಅಧಿಕ ಸಾಲವನ್ನು ಹೊಂದಿದೆ. ಕಳೆದ ಐದು ವರ್ಷಗಳಿಂದೀಚೆಗೆ ಸಂಸ್ಥೆಯು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೂ.329 ಕೋಟಿ ಸಾಲ ಪಡೆದಿದೆ.

MOST READ: ಒಂದು ಲಕ್ಷ ಉತ್ಪಾದನಾ ಗುರಿ ತಲುಪಿದ ಸ್ಕೋಡಾ ರ್‍ಯಾಪಿಡ್

ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

44 ವರ್ಷಗಳಿಂದ ಅಸ್ತಿತ್ವದಲ್ಲಿರುವ ಕೆ‍ಎಸ್‍ಆರ್‍‍ಟಿ‍‍ಸಿ ಸಿಬ್ಬಂದಿ ಹಾಗೂ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಹೆ‍‍ಚ್‍‍ವಿ ಅನಂತ ಸುಬ್ಬರಾವ್‍‍ರವರು ಈ ಜಾಹೀರಾತನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿ ಮಾತನಾಡಿದ್ದಾರೆ.

MOST READ: ವಾಹನಗಳ ಬೆಲೆ ಏರಿಕೆ ಮಾಡಿದ ಮಹೀಂದ್ರಾ

ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಮೆಟ್ರೊಗೆ ರೂ.36,000 ಕೋಟಿ ನೀಡುವ ರಾಜ್ಯ ಸರ್ಕಾರವು, ಕಡೆಯ ಪಕ್ಷ ರೂ.2,000 ಕೋಟಿ ಸಬ್ಸಿಡಿ ನೀಡಿ ಬಿಎಂಟಿಸಿಯನ್ನು ಬೆಂಬಲಿಸಲು ಹಿಂಜರಿಯುತ್ತಿರುವುದು ವಿಷಾದಕರವಾಗಿದೆ ಎಂದು ಹೇಳಿದ್ದಾರೆ. ಬಿಎಂಟಿಸಿ ಸಂಸ್ಥೆಯು ನೌಕರರ ಗ್ರಾಚ್ಯುಟಿ, ಭವಿಷ್ಯನಿಧಿ ಮತ್ತು ವಿಮಾ ಪ್ರೀಮಿಯಂ ಪಾವತಿಗಳಿಗೆ ರೂ.300 ಕೋಟಿ ವ್ಯಯಿಸುತ್ತಿದೆ. ನಾವು ಮುಂದಿನ ವಾರ ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಕೋರಿ ಪ್ರತಿಭಟನೆ ನಡೆಸಲು ಚಿಂತಿಸುತ್ತಿದ್ದೇವೆ ಎಂದು ಅವರು ಹೇಳಿದರು.

Most Read Articles

Kannada
English summary
Under financial stress, BMTC puts out ad for Rs 160 crore loan - Read in kannada
Story first published: Thursday, June 20, 2019, 14:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more