ಒಂದು ಲಕ್ಷ ಉತ್ಪಾದನಾ ಗುರಿ ತಲುಪಿದ ಸ್ಕೋಡಾ ರ್‍ಯಾಪಿಡ್
ಸ್ಕೋಡಾ ಇಂಡಿಯಾ, ರ್‍ಯಾಪಿಡ್ ಸೆಡಾನ್ ಕಾರಿನ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಅತಿ ಕಡಿಮೆ ಅವಧಿಯಲ್ಲಿ ಒಂದು ಲಕ್ಷ ಸಂಖ್ಯೆಯ ಉತ್ಪಾದನಾ ಗುರಿ ತಲುಪಿದೆ. ಈ ಹಿನ್ನೆಲೆಯಲ್ಲಿ ಪುಣೆಯ ಚಕಾನ್‍ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ವಿಶೇಷ ಆವೃತ್ತಿಯ ಮಾಂಟೆ ಕಾರ್ಲೊ ಕಾರ್ ಅನ್ನು ಬಿಡುಗಡೆಗೊಳಿಸಿತು.

ರ್‍ಯಾಪಿಡ್ ಕಾರಿನಲ್ಲಿರುವ ಮಾಂಟೆ ಕಾರ್ಲೊ ಬ್ಯಾಡ್ಜ್ ಅನ್ನು ಸ್ಕೋಡಾದ ಹಳೆಯ ರ್‍ಯಾಲಿ ಮಾಂಟೆ ಕಾರ್ಲೊ ಕಾರಿನ ಗೌರವಾರ್ಥ ಅಳವಡಿಸಲಾಗಿದೆ. ಸ್ಕೋಡಾ ಕಂಪನಿಯು, ಕಳೆದ ನೂರು ವರ್ಷಗಳಲ್ಲಿ ಮೂರು ಬಾರಿ, ರ್‍ಯಾಪಿಡ್ ಹೆಸರಿನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದೆ. 1930ರ ದಶಕದಲ್ಲಿ ಸ್ಕೋಡಾ ಟೈಪ್ 901 ರ್‍ಯಾಪಿಡ್ ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಎರಡನೇಯ ಬಾರಿಗೆ 1980ರ ದಶಕದಲ್ಲಿ ರೇರ್ ಎಂಜಿನ್ ಹೊಂದಿದ್ದ ರ್‍ಯಾಪಿಡ್ ಕೂಪೆ ಕಾರನ್ನು ಬಿಡುಗಡೆಗೊಳಿಸಲಾಗಿತ್ತು.

ಕೊನೆಯದಾಗಿ ದೇಶಿಯ ಮಾರುಕಟ್ಟೆಯಲ್ಲಿ ರ್‍ಯಾಪಿಡ್ ಹೆಸರಿನ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲಾಯಿತು. ಸ್ಕೋಡಾ ಆಟೋ ಇಂಡಿಯಾದ ಸೇಲ್ಸ್, ಸರ್ವಿಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾದ ಜಾಕ್ ಹೋಲಿಸ್‍ರವರು ಈ ಬಗ್ಗೆ ಮಾತನಾಡಿದ್ದಾರೆ.

ರ್‍ಯಾಪಿಡ್ ಕಂಪನಿಯು ತನ್ನ ಕಾರುಗಳಲ್ಲಿ ವಿಭಿನ್ನ ವಿನ್ಯಾಸ, ಮನಮೋಹಕ ಇಂಟಿರಿಯರ್, ಸುರಕ್ಷತೆಯ ಜೊತೆಗೆ ಕನೆಕ್ಟಿವಿಟಿ ಫೀಚರ್‍ಗಳನ್ನು ನೀಡುತ್ತಲೇ ಬಂದಿದೆ ಎಂದು ತಿಳಿಸಿದರು. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ಆಟೋಮೊಬೈಲ್ ಉದ್ಯಮದ ಉತ್ಪಾದನೆಯಲ್ಲಿ ಮೈಲಿಗಲ್ಲು ಸಾಧಿಸಿರುವುದು ಕಂಪನಿಯು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವುದನ್ನು ತೋರಿಸುತ್ತದೆ.

ಈ ಸಾಧನೆಯು ಶಕ್ತಿಶಾಲಿಯಾದ ಉತ್ಪನ್ನಗಳನ್ನು ಮಾರಾಟ ಮಾಡುವ ನಮ್ಮ ಬದ್ದತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಸ್ಕೋಡಾ ರ್‍ಯಾಪಿಡ್ ಮಾಂಟೆ ಕಾರ್ಲೊ ಕಾರಿನ ಪೆಟ್ರೋಲ್ ಆವೃತ್ತಿಯು 16 ವಾಲ್ವ್, ಡಿಒಹೆಚ್‍ಸಿ, 1.6 ಲೀಟರಿನ ಎಂಜಿನ್ ಹೊಂದಿದ್ದು, 104 ಬಿಹೆಚ್‍ಪಿ ಪವರ್ ಹಾಗೂ 153 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. 6 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು ಸಹ ನೀಡಲಾಗುವುದು.
MOST READ: ವಾಹನಗಳ ಬೆಲೆ ಏರಿಕೆ ಮಾಡಿದ ಮಹೀಂದ್ರಾ

ಈ ಕಾರನ್ನು ಡೀಸೆಲ್ ಮಾದರಿಯಲ್ಲಿಯೂ ಸಹ ಮಾರಾಟ ಮಾಡಲಾಗುತ್ತಿದೆ. 1.5 ಲೀಟರ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ 109 ಬಿಹೆಚ್‍ಪಿ ಪವರ್ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಿದ್ದು, 7 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ಸಹ ನೀಡಲಾಗುವುದು.
MOST READ: ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍ಗೆ 55 ಸಾವಿರ ದಂಡ

ಸ್ಕೋಡಾ ರ್‍ಯಾಪಿಡ್ ಮಾಂಟೆ ಕಾರ್ಲೊ ಕಾರ್ ಅನ್ನು ಕಾರ್ಬನ್ ಬ್ಲಾಕ್, ಬ್ರಿಲಿಯಂಟ್ ಸಿಲ್ವರ್, ಸಿಲ್ಕ್ ಬ್ಲೂ, ಕ್ಯಾಪುಚಿನೊ ಬೀಜ್, ಫ್ಲಾಶ್ ರೆಡ್ ಹಾಗೂ ಕ್ಯಾಂಡಿ ವೈಟ್ ಎಂಬ ಆರು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಸ್ಕೋಡಾ ರ್‍ಯಾಪಿಡ್ ಮಾಂಟೆ ಕಾರ್ಲೊ ಕಾರುಗಳ ಬೆಲೆಯು ರೂ.11.39 ಲಕ್ಷಗಳಿಂದ ರೂ.14.25 ಲಕ್ಷಗಳ ನಡುಗೆ ಇರಲಿದೆ. (ಎಕ್ಸ್ ಶೋರೂಂ ದರ).
MOST READ: ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಈ ಮೈಲಿಗಲ್ಲನ್ನು ಸಾಧಿಸಿದ್ದಕ್ಕೆ ಸ್ಕೋಡಾ ಹಾಗೂ ಫೋಕ್ಸ್ ವ್ಯಾಗನ್ ಕಂಪನಿಗೆ ಅಭಿನಂದನೆಗಳು. ರ್‍ಯಾಪಿಡ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಸ್ಕೋಡಾದ ಯಶಸ್ವಿ ಕಾರುಗಳಲ್ಲಿ ಒಂದಾಗಿದೆ. ಒಂದು ಕಾರಿನ ಮಾದರಿಯ ಒಂದು ಲಕ್ಷ ಕಾರುಗಳನ್ನು ಉತ್ಪಾದಿಸುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಸ್ಕೋಡಾ ನಿಜಕ್ಕೂ ದೊಡ್ಡ ಸಾಧನೆಯನ್ನು ಮಾಡಿದೆ. ಸ್ಕೋಡಾ ಕಂಪನಿಯ ಮುಂದಿನ ಎಲ್ಲಾ ಯೋಜನೆಗಳಿಗೂ ಶುಭ ಕೋರುತ್ತೇವೆ.


Click it and Unblock the Notifications








