Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಹನಗಳ ಬೆಲೆ ಏರಿಕೆ ಮಾಡಿದ ಮಹೀಂದ್ರಾ
ಮಹೀಂದ್ರಾ ಕಂಪನಿಯು ಕಳೆದ ಕೆಲವು ತಿಂಗಳುಗಳಿಂದ ತನ್ನ ಕಂಪನಿಯ ಬಹುತೇಕ ವಾಹನಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಾ ಬಂದಿತ್ತು. ಹೊಸ ಉತ್ಪನ್ನಗಳಾದ ಎಕ್ಸ್ ಯುವಿ 300 ಮತ್ತು ಅಲ್ಟುರಾಸ್ ಜಿ4 ಹೊರತುಪಡಿಸಿ, ತನ್ನ ಬೇರೆಲ್ಲಾ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿತ್ತು.

ಈಗ ಮಹೀಂದ್ರಾ ಕಂಪನಿಯು ತನ್ನ ಎಲ್ಲಾ ವಾಹನಗಳ ಬೆಲೆಯನ್ನು ಏರಿಸುವುದಾಗಿ ತಿಳಿಸಿದೆ. ಮಹೀಂದ್ರಾ ಕಂಪನಿಯು ತನ್ನ ವಾಹನಗಳ ಬೆಲೆಯನ್ನು ಸುಮಾರು ರೂ.36,000ಗಳವರೆಗೆ ಏರಿಕೆ ಮಾಡಿದೆ. ಮಹೀಂದ್ರಾ ಕಂಪನಿಯು, ಹೊಸ ಸುರಕ್ಷಾ ನಿಯಮಗಳನ್ನು ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಸಲಾಗಿದೆ. ಎಲ್ಲಾ ಪ್ರಯಾಣಿಕ ವಾಹನಗಳ ಬೆಲೆಯನ್ನು 2019ರ ಜುಲೈ 1ರಿಂದ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.

ಹೊಸ ಸುರಕ್ಷಾ ನಿಯಮಗಳ ಅನುಸಾರ ಚಾಲಕರಿಗೆ ಏರ್‍ಬ್ಯಾಗ್ ನೀಡುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಚಾಲಕರಿಗೆ, ಸಹ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮ್ಯಾಂಡರ್, ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿ ಸ್ಪೀಡ್ ಅಲರ್ಟ್ ಸಿಸ್ಟಂಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.

ಕಂಪನಿಯು ಎಸ್‍ಯುವಿ ಮಾದರಿಯ ಸ್ಕಾರ್ಪಿಯೋ, ಬೊಲೆರೊ, ಟಿಯುವಿ 300, ಕೆಯುವಿ 100 ಎನ್‍ಎಕ್ಸ್ ಟಿ ಕಾರುಗಳಲ್ಲಿ ಹೆಚ್ಚಿನ ಪ್ರಮಾಣದ ಬೆಲೆ ಏರಿಕೆ ಮಾಡಲಿದೆ. ಆದರೆ ಎಕ್ಸ್ ಯುವಿ 500 ಹಾಗೂ ಮರಾಜೊ ವಾಹನಗಳ ಬೆಲೆಗಳಲ್ಲಿ ಸ್ವಲ್ಪ ಪ್ರಮಾಣದ ಬೆಲೆ ಏರಿಕೆಯಾಗಲಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಆಟೋಮೊಟಿವ್ ಸೆಕ್ಟರ್‍ನ ಅಧ್ಯಕ್ಷರಾದ ರಾಜನ್ ವಡೇರಾರವರು ಮಾತನಾಡಿ, ನಾವು ಹೊಸ ಸುರಕ್ಷಾ ನಿಯಮಗಳನ್ನು ಸ್ವಾಗತಿಸುತ್ತೇವೆ. ನಾವು ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡಲು ಬದ್ದರಾಗಿದ್ದೇವೆ. ನಮಗೆ ಪ್ರತಿಯೊಬ್ಬರ ಜೀವದ ಅರಿವಿದೆ. ಸುರಕ್ಷತಾ ನಿಯಮಗಳಿಗೆ ನಾವು ಸಹ ನಮ್ಮ ಕೊಡುಗೆಯನ್ನು ನೀಡಲಿದ್ದೇವೆ. ಆದರೆ ಈ ಸುರಕ್ಷತಾ ಕ್ರಮಗಳನ್ನು ಅಳವಡಿಸುವುದು ವೆಚ್ಚದಾಯಕವಾಗಿರುವುದರಿಂದ ಅನಿವಾರ್ಯವಾಗಿ ಬೆಲೆ ಏರಿಸಲೇ ಬೇಕಾಗಿದೆ ಎಂದು ತಿಳಿಸಿದರು.
MOST READ: ಅನಾವರಣಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಬೈಕ್

ಹೊಸ ಸುರಕ್ಷಾ ನಿಯಮಗಳ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಪ್ರಪಂಚದಲ್ಲಿಯೇ ಹೆಚ್ಚಿನ ಪ್ರಮಾಣದ ರಸ್ತೆ ಅಪಘಾತಗಳಾಗುತ್ತಿವೆ. 2017ರಲ್ಲಿ 1,47,913 ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರೆ, 4,70,975 ಜನ ಗಾಯಗೊಂಡಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು ಹೊಸ ಸುರಕ್ಷಾ ನಿಯಮಗಳನ್ನು ಜಾರಿಗೊಳಿಸಿದೆ.
MOST READ: ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍ಗಳು

ಇದರ ಪ್ರಕಾರ ಏಪ್ರಿಲ್ 2019ರಿಂದ ಎಲ್ಲಾ ದ್ವಿ ಚಕ್ರವಾಹನಗಳ ತಯಾರಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು. ಇದರನ್ವಯ 125ಸಿಸಿ ಗಿಂತ ಹೆಚ್ಚಿನ ಸಾರ್ಮರ್ಥ್ಯ ಹೊಂದಿರುವ ಬೈಕುಗಳಲ್ಲಿ ಎಬಿಎಸ್ ಕಡ್ಡಾಯವಾಗಿರಲಿದೆ. 125 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕುಗಳಲ್ಲಿ ಕಾಂಬಿ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಕಡ್ಡಾಯವಾಗಲಿದೆ.
MOST READ: ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

2019ರ ಜುಲೈ 1ರಿಂದ ತಯಾರಾಗುವ ಎಲ್ಲಾ ಕಾರುಗಳಲ್ಲಿ ಏರ್‍ಬ್ಯಾಗ್, ಸ್ಪೀಡ್ ವಾರ್ನಿಂಗ್ ಸಿಸ್ಟಂ, ಸೀಟ್ ಬೆಲ್ಟ್ ರಿಮ್ಯಾಂಡರ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‍ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ. ಆದ ಕಾರಣ ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಅನಿವಾರ್ಯವಾಗಿ ಏರಿಕೆ ಮಾಡುತ್ತಿವೆ.