ಭಾರತದ 'ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್ ಕಾರಿನ ಹೊಸ ಟಿವಿಸಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರುಗಳಲ್ಲಿನ ಸುರಕ್ಷತೆಯ ವಿಷಯದಲ್ಲಿ ಹೊಸ ಟ್ರೆಂಡ್ ಅನ್ನು ಸೃಷ್ಠಿಸಿದ್ದ ಟಾಟಾ ನೆಕ್ಸಾನ್ ಕಾರಿನ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಟಾಟಾ ನೆಕ್ಸಾನ್ ಕಾರು ಗ್ಲೋಬಲ್ ಎನ್‍ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಒಟ್ಟು 5 ಕ್ಕೆ 5 ಅಂಕವನ್ನು ಪಡೆದು ಭಾರತದ ಮೊದಲ ಸೇಫೆಸ್ಟ್ ಎಸ್‍ಯುವಿ ಕಾರೆಂಬ ಬಿರುದನ್ನು ಪಡೆದಿತ್ತು.

ಭಾರತದ 'ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್ ಕಾರಿನ ಹೊಸ ಟಿವಿಸಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ನೆಕ್ಸಾನ್ ಕಾರಿನ ಹೊಸ ಟಿವಿಸಿಯನ್ನು ಬಿಡುಗಡೆ ಮಾಡಲಾಗಿದ್ದು, ನೆಕ್ಸಾನ್ ಕಾರು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಈ ವಿಡಿಯೋನಲ್ಲಿ ಒಂದು ಹಾಸ್ಯ ಚಟಾಕಿಯ ದೃಶ್ಯದಿಂದ ಹೇಳಲು ಮುಂದಾಗಿದ್ದಾರೆ. ಅಂದರೇ ಅಪಘಾತವು ಯಾವಾಗ ಬೇಕಾದರೂ ಸಂಬವಿಸಬಹುದು, ಅವುಗಳನ್ನು ಎದುರಿಸಲು ನಾವು ಬಲವಾಗಿರಬೇಕು ಎಂಬ ಸಂದೇಶವನ್ನು ಗ್ರಾಹಕರಿಗೆ ಹೇಳಲು ಮುಂದಾಗಿದೆ ಟಾಟಾ ಮೋಟಾರ್ಸ್.

ಭಾರತದ 'ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್ ಕಾರಿನ ಹೊಸ ಟಿವಿಸಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ನೆಕ್ಸಾನ್ ಕಾರು ಸೇಫೆಸ್ಟ್ ಕಾರು ಎಂಬ ಖ್ಯಾತಿಯನ್ನು ಹೊಂದಿದ್ದರೂ ಸಹ ಈ ಕಾರಿನ ಮಾರಾಟದ ಸಂಖ್ಯೆಯು ಕಡಿಮೆಯೆ ಇದೆ ಅಂತ ಹೆಳ್ಬೊದು. ಯಾಕಂದ್ರೆ ಮೇ ತಿಂಗಳ ಕಾಂಪ್ಯಾಕ್ಟ್ ಎಸ್‍ಯುವಿ ಕಾರು ಮಾರಾಟದಲ್ಲಿ ಟಾಟಾ ನೆಕ್ಸಾನ್ ಕಾರು ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ.

ಇದಕ್ಕೆ ಕಾರಣವೆಂದರೆ ಇತ್ತೀಚೆಗೆ ಬಿಡುಗಡೆಗೊಂಡ ಮಹೀಂದ್ರಾ ಎಕ್ಸ್‌‌ಯುವಿ 300 ಮತ್ತು ಹ್ಯುಂಡೈ ವೆನ್ಯೂ ಕಾರುಗಳು ತಮ್ಮಲ್ಲಿರುವ ವೈಶಿಷ್ಟ್ಯತೆ ಮತ್ತು ಆಕರ್ಷಕ ವಿನ್ಯಾಸದಿಂದ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತನ್ನ ಸೆಳೆದಿದೆ. ಹೀಗಾಗಿ ಮೊದಲನೆಯ ಸ್ಥಾನದಲ್ಲಿ ಮಾರುತಿ ಸುಜುಕಿ ಬ್ರೆಝಾ, ಎರಡನೆಯ ಸ್ಥಾನದಲ್ಲಿ ಹ್ಯುಂಡೈ ವೆನ್ಯೂ, ಮೂರನೆಯ ಸ್ಥಾನದಲ್ಲಿ ಮಹೀಂದ್ರಾ ಎಕ್ಸ್‌‌ಯುವಿ 300 ಹಾಗು ನಾಲ್ಕನೆಯ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದ 'ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್ ಕಾರಿನ ಹೊಸ ಟಿವಿಸಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುತ್ತೇವೆ - ಟಾಟಾ ಮೋಟಾರ್ಸ್

ಕಳೆದ ದಿನಗಳ ಹಿಂದಷ್ಟೆ ಜಿನೆವಾನಲ್ಲಿ ನಡೆದ 2019ರ ಜೆನೆವಾ ಮೋಟಾರ್ ಶೋನಲ್ಲಿ ತಮ್ಮ ಅಲ್‍ಟ್ರೋಜ್ ಪ್ರೀಮಿಯಂ ಹ್ಯಾಚ್‍ಬ್ಯಾಕ್, ಅಲ್‍ಟ್ರೋಜ್ ಎಲೆಕ್ಟ್ರಿಕ್ ಕಾರು, ಹೆಚ್2ಎಕ್ಸ್ (ಹಾರ್ನ್‍ಬಿಲ್) ಮತ್ತು ಹೆಚ್7ಎಕ್ಸ್ (ಬುಜ್ಜಾರ್ಡ್) ಎಂಬ ಕಾರುಗಳನ್ನು ಅನಾವರಣಗೊಳಿಸಿದ್ದು, ಇದರ ಜೊತೆಗೆ ಈ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಅನುಸಾರ ಹಲವಾರು ಸೇಫ್ಟಿ ಫೀಚರ್‍‍ಗಳನ್ನು ಅಳವಡಿಸಿ ಸೇಫ್ಟಿಯಲ್ಲಿ 5 ಸ್ಟಾರ್ ರೇಟಿಂಗ್ ಪಡೆಯುವ ಹಾಗೆ ಉತ್ಪನ್ನ ಮಾಡುತ್ತೇವೆ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.

ಭಾರತದ 'ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್ ಕಾರಿನ ಹೊಸ ಟಿವಿಸಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಕಳೆದ ಮೂರು ವರ್ಷದಿಂದ ಮಾರಾಟದಲ್ಲಿ ಅಧಿಕ ಸಂಖ್ಯೆಯನ್ನು ಕಾಣುತ್ತಿರುವ ಟಾಟಾ ಮೋಟಾರ್ಸ್ ಭಾರತದಲ್ಲಿ ಶೇಕಡ 7ರಷ್ಟು ಪಾಲುದಾರೆಕಯನ್ನು ಹೊಂದಿದೆ. ಟಾಟಾ ಮೋಟಾರ್ಸ್ ಸಂಸ್ಥೆಯು ಮುಂದಿನ 3 ರಿಂದ 5ವರ್ಷಗಳೊಳಗೆ ತಮ್ಮದೇ ಸಂಸ್ಥೆಯ 'ಆಲ್ಫಾ' ಮತ್ತು 'ಒಮೊಗಾ' ಪ್ಲಾಟ್‍ಪಾರ್ಮ್‍ನ ಅಡಿಯಲ್ಲಿ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ಸಹ ಹೇಳಿಕೊಂಡಿದೆ.

ಭಾರತದ 'ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್ ಕಾರಿನ ಹೊಸ ಟಿವಿಸಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ವಿಶಿಷ್ಟ ವಿನ್ಯಾಸಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಗಳು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿದೆ.

ಭಾರತದ 'ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್ ಕಾರಿನ ಹೊಸ ಟಿವಿಸಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ನೆಕ್ಸಾನ್ ಕಾರುಗಳಲ್ಲಿ ಚಾಲಕ ಮತ್ತು ಪ್ರಯಾಣಿಕ ಸೀಟುಗಳ ಕಡೆಗೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಐಸೋಫೆಕ್ಸ್ ಚೈಲ್ಡ್ ಮೌಟೆಂಡ್ ಸೀಟುಗಳು ಮತ್ತು ಬಲಿಷ್ಠ ಬಾಡಿ ಕಿಟ್ ಹೊಂದಿರುವುದು ಕಾರಿನ ಮೌಲ್ಯವನ್ನ ಹೆಚ್ಚಿಸಿದೆ.

ಭಾರತದ 'ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್ ಕಾರಿನ ಹೊಸ ಟಿವಿಸಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದೆ. ಈ ಮೂಲಕ ಯುವ ಸಮುದಾಯ ನೆಚ್ಚಿನ ಆಯ್ಕೆಯಾಗಿರುವ ನೆಕ್ಸಾನ್ ಕಾರುಗಳು ಇದೀಗ ಸುರಕ್ಷತೆಯಲ್ಲೂ ಮುನ್ನಡೆ ಸಾಧಿಸಿವೆ ಎನ್ನಬಹುದು.

Article Published On: Thursday, June 13, 2019, 14:00 [IST]
English summary
India's Safest Car Tata Nexons New TVC Out. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+