ಇಸುಝು ಕಾರುಗಳ ಸಿಗಲಿದೆ ಮೇಲೆ ಭಾರೀ ರಿಯಾಯಿತಿ
ಇಸುಝು ತನ್ನ ಸರಣಿಯಲ್ಲಿರುವ ಎಲ್ಲಾ ವಾಹನಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯು ವಿ-ಕ್ರಾಸ್ ಬೇಸ್ ಹಾಗೂ ಎಂಯು - ಎಕ್ಸ್ ಮಾದರಿಗಳು ಹಾಗೂ ಎಲ್ಲಾ ಕಮರ್ಶಿಯಲ್ ಡಿ-ಮ್ಯಾಕ್ಸ್ ಹಾಗೂ ಎಸ್-ಕ್ಯಾಬ್ ಮಾದರಿಗಳ ಮೇಲೆ ದೊರೆಯಲಿದೆ. ಈ ರಿಯಾಯಿತಿಯನ್ನು 2019ರ ಅಕ್ಟೋಬರ್ 31ರವರೆಗೆ ನೀಡಲಾಗುವುದು.

ಇಸುಝು ಕಂಪನಿಯು ವಿವಿಧ ಮಾದರಿಗಳ ಮೇಲೆ ರೂ.50,000ದಿಂದ ರೂ.2 ಲಕ್ಷಗಳವರೆಗೆ ರಿಯಾಯಿತಿಯನ್ನು ನೀಡಲಿದೆ. ಆಟೋಮೊಬೈಲ್ ಉದ್ಯಮವು ಕುಸಿತವನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಈ ಪ್ರಮಾಣದ ರಿಯಾಯಿತಿಯನ್ನು ನೀಡಲಾಗುತ್ತಿದೆ. ಕಂಪನಿಯು ರಿಯಾಯಿತಿಯನ್ನು ನೀಡುತ್ತಿದ್ದರೂ, ಡೀಲರ್‍ಗಳು ಕಂಪನಿಯು ಸ್ಪಷ್ಟನೆ ನೀಡಿದ ನಂತರ ರಿಯಾಯಿತಿ ನೀಡಲಾಗುವುದೆಂದು ತಿಳಿಸಿದ್ದಾರೆ.

ಡೀಲರ್‍ಗಳೂ ಸಹ ಇಸುಝು ವಾಹನಗಳ ಮೇಲೆ ಹೆಚ್ಚುವರಿ ರಿಯಾಯಿತಿ ನೀಡುವ ಸಾಧ್ಯತೆಗಳಿವೆ. ಡಿ - ಮ್ಯಾಕ್ಸ್ ವಿ-ಕ್ರಾಸ್ ಲೈಫ್ ಸ್ಟೈಲ್ ಪಿಕ್ ಅಪ್ ಮೂಲ ಮಾದರಿಯ ಬೆಲೆ ರೂ.16.54 ಲಕ್ಷಗಳಾದರೆ, ಎಂಯು - ಎಕ್ಸ್ ಎಸ್‍ಯುವಿಯ ಬೆಲೆ ರೂ.27.35 ಲಕ್ಷಗಳಾಗಿದೆ.

ಈ ದರಗಳು ಭಾರತದಲ್ಲಿನ ಎಕ್ಸ್ ಶೋರೂಂ ಬೆಲೆಗಳಾಗಿವೆ. ಈ ಬೆಲೆಗಳು ರಿಯಾಯಿತಿ ನೀಡುವುದಕ್ಕಿಂತ ಮುಂಚಿನ ಬೆಲೆಗಳಾಗಿವೆ. ಇಸುಝು ಕಂಪನಿಯ ವಕ್ತಾರರೊಬ್ಬರು ಮಾತನಾಡಿ, ಗ್ರಾಹಕರು ಹಬ್ಬದ ಅಂಗವಾಗಿ ಆಕರ್ಷಕ ಬೆಲೆಗಳಲ್ಲಿ ಕಾರುಗಳನ್ನು ಖರೀದಿಸುವಂತಾಗಲಿ ಎಂಬ ಉದ್ದೇಶದಿಂದ ಈ ರಿಯಾಯಿತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ರಿಯಾಯಿತಿ ಹಾಗೂ ವಿಶೇಷ ಕೊಡುಗೆಗಳನ್ನು ಅಕ್ಟೋಬರ್ 31ರವರೆಗೆ ನೀಡಲಾಗುವುದು. ಇಸುಜು ಕಂಪನಿಯು ಇತ್ತೀಚಿಗೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ವಿ -ಕ್ರಾಸ್ ಡಿ -ಮ್ಯಾಕ್ಸ್ ಝಡ್ ಪ್ರೆಸ್ಟೀಜ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು.

ಪಿಕ್ ಅಪ್ ಝಡ್ ಪ್ರೆಸ್ಟೀಜ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.19.99 ಲಕ್ಷಗಳಾದರೆ, ಹೈ ಝಡ್ ಮಿಡ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.17 ಲಕ್ಷಗಳಾಗಿದೆ.

ಇಸುಝು ವಿ -ಕ್ರಾಸ್ ಝಡ್ ಪ್ರೆಸ್ಟೀಜ್ ಮಾದರಿಯಲ್ಲಿ ಹೊಸ 1.9 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 148 ಬಿಹೆಚ್‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಯುನಿಟ್ ಅಳವಡಿಸಲಾಗಿದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಮೂಲ ಹಾಗೂ ಮಧ್ಯ ಮಾದರಿಯ ಡಿ -ಮ್ಯಾಕ್ಸ್ ವಿ - ಕ್ರಾಸ್‍ನಲ್ಲಿ 2.5 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 134 ಬಿಹೆಚ್‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಎರಡೂ ಮಾದರಿಯಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಎಲ್ಲಾ ಮಾದರಿಗಳಲ್ಲೂ ಕಂಪನಿಯ ಶಿಫ್ಟ್ ಆನ್ ದಿ ಫ್ಲೈ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಅಳವಡಿಸಲಾಗಿದೆ. ಇಸುಝು ಕಂಪನಿಯ ಎಲ್ಲಾ ವಾಹನಗಳು ಬಿಎಸ್ 4 ಎಂಜಿನ್ ಹೊಂದಿವೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಬಿಎಸ್ 6 ಎಂಜಿನ್‍ಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, 2020ರ ಏಪ್ರಿಲ್ 1ರ ವೇಳೆಗೆ ಬಿಎಸ್6 ಎಂಜಿನ್‍ಗಳನ್ನು ತನ್ನ ಸರಣಿಯ ಎಲ್ಲಾ ವಾಹನಗಳಲ್ಲಿ ಅಳವಡಿಸುವ ಸಾಧ್ಯತೆಗಳಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಆಟೋಮೊಬೈಲ್ ಉದ್ಯಮವು ಕುಸಿತವನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಭಾರೀ ಪ್ರಮಾಣದ ರಿಯಾಯಿತಿಗಳನ್ನು ನೀಡಿ ಗ್ರಾಹಕರನ್ನು ಸೆಳೆಯಬಹುದು. ಭಾರೀ ಪ್ರಮಾಣದ ರಿಯಾಯಿತಿ ಅಥವಾ ಕೊಡುಗೆಗಳನ್ನು ನೀಡಿದರೆ ಸಹಜವಾಗಿಯೇ ಗ್ರಾಹಕರು ಹೊಸ ವಾಹನಗಳನ್ನು ಖರೀದಿಸುತ್ತಾರೆ. ಹೊಸ ಮಾಲಿನ್ಯ ನಿಯಮಗಳು ಜಾರಿಗೆ ಬರುವ ಮುನ್ನ ಇಸುಝು ಕಂಪನಿಯು ಇನ್ನಷ್ಟು ರಿಯಾಯಿತಿಗಳನ್ನು ನೀಡುವ ಸಾಧ್ಯತೆಗಳಿವೆ.


Click it and Unblock the Notifications








