ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ತನ್ನ ಆಯ್ದ ಕಾರುಗಳ ಮೇಲೆ ಆಕರ್ಷಕ ರಿಯಾಯಿತಿ ಸೇರಿದಂತೆ ಹಲವಾರು ಆಫರ್‍‍ಗಳನ್ನು ನೀಡುತ್ತಿದೆ. ಈ ಆಫರ್‍‍ಗಳಲ್ಲಿ ಕಡಿಮೆ ಇ‍ಎಂಐ ಹಾಗೂ ಕಡಿಮೆ ಡೌನ್‍‍ಪೇಮೆಂಟ್‍, ವಿನಿಮಯ ಬೋನಸ್ ಸೇರಿವೆ.

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಜಾಗ್ವಾರ್ ಸರಣಿಯಲ್ಲಿರುವ ಎಕ್ಸ್‌ಇ, ಎಕ್ಸ್‌ಎಫ್ ಎಕ್ಸ್‌ಜೆ ಹಾಗೂ ಎಫ್-ಪೇಸ್ ಮಾದರಿಗಳ ಮೇಲೆ ಈ ಆಫರ್ ನೀಡಲಾಗುವುದು. ಎಕ್ಸ್‌ಇ ಸ್ಪೋರ್ಟ್ಸ್ ಸೆಡಾನ್ ಮೇಲೆ ರೂ.8.5 ಲಕ್ಷಗಳವರೆಗಿನ ಕೊಡೂಗೆಗಳನ್ನು ನೀಡಲಾಗುತ್ತದೆ. ಈ ಸೆಡಾನ್ ಕಾರ್ ಅನ್ನು ಜೀರೊ ಡೌನ್‌ಪೇಮೆಂಟ್ ಯೋಜನೆಯೊಂದಿಗೆ ಸಹ ನೀಡಲಾಗುತ್ತದೆ.

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಆದರೆ, ಅರ್ಹತೆಯ ಆಧಾರದ ಮೇಲೆ ಈ ಜೀರೊ ಡೌನ್‌ಪೇಮೆಂಟ್ ಅನ್ನು ಕಂಪನಿಯು ಅನುಮೋದಿಸಲಿದೆ. ಈ ಎಲ್ಲಾ ಕೊಡುಗೆಗಳು 2018ರ ಮಾದರಿಯ ಕಾರುಗಳಿಗೆ ಮಾತ್ರ ಅನ್ವಯಿಸಲಿದೆ. ಜಾಗ್ವಾರ್‌ನಿಂದ ಎಕ್ಸ್‌ಎಫ್ ಐಷಾರಾಮಿ ಸೆಡಾನ್ ಹಾಗೂ ಎಫ್-ಪೇಸ್ ಪರ್ಫಾರ್ಮೆನ್ಸ್ ಎಸ್‌ಯುವಿಗಳನ್ನು ರೂ.9 ಲಕ್ಷಗಳ ಕೊಡುಗೆಗಳೊಂದಿಗೆ ಜೀರೊ ಡೌನ್‌ಪೇಮೆಂಟ್ ಆಫರ್‌ನೊಂದಿಗೆ ನೀಡಲಾಗುತ್ತದೆ.

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಖರೀದಿದಾರರ ಅರ್ಹತೆಗೆ ಅನುಗುಣವಾಗಿ ಹಣಕಾಸು ಆಯ್ಕೆಗಳು ಬದಲಾಗಲಿವೆ. ಹಬ್ಬದ ಕೊಡುಗೆಗಳು 2018 ಮಾದರಿಗಳಿಗೆ ಮಾತ್ರ ಅನ್ವಯಿಸುತ್ತವೆ. ಎಫ್-ಪೇಸ್ ಎಸ್‌ಯುವಿಯನ್ನು ಒಂದು ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲಾಗುವುದು.

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಎಕ್ಸ್‌ಎಫ್ ಸೆಡಾನ್ ಅನ್ನು 5 ಮಾದರಿಗಳಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಎಕ್ಸ್‌ಎಫ್ ಸೆಡಾನ್‌ನ ಎಂಟ್ರಿ ಲೆವೆಲ್ ಮಾದರಿಯ ಹೊರತಾಗಿ, ಎರಡೂ ಮಾದರಿಗಳ ಎಲ್ಲಾ ವೇರಿಯಂಟ್‍‍ಗಳ ಮೇಲೆ ಈ ಆಫರ್‍‍ಗಳು ಲಭ್ಯವಿದೆ.

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಟಾಪ್ ಮಾದರಿಯ ಜಾಗ್ವಾರ್ ಎಕ್ಸ್‌ಜೆ ಸೆಡಾನ್ ಕಾರಿನ ಮೇಲೆ ಈ ದೀಪಾವಳಿಯಲ್ಲಿ ರೂ.31.4 ಲಕ್ಷಗಳ ಸೌಲಭ್ಯ ನೀಡಲಾಗುತ್ತದೆ. ಈ ರಿಯಾಯಿತಿಗಳು 2018ರ ಮಾದರಿಗಳಿಗೆ ಮಾತ್ರ ಅನ್ವಯಿಸುತ್ತವೆ. ಎಕ್ಸ್‌ಜೆ ಸೆಡಾನ್ ಅನ್ನು 3.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಎಕ್ಸ್‌ಜೆ ಸೆಡಾನ್ ಕಾರ್ ಅನ್ನು ಕೇವಲ ಒಂದು ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಎಫ್-ಟೈಪ್ ಸ್ಪೋರ್ಟ್ಸ್ ಕಾರಿನ ಮೇಲೆ ಲಭ್ಯವಿರುವ ಕೊಡುಗೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಹಬ್ಬದ ಹಿನ್ನೆಲೆಯಲ್ಲಿ ಡೀಲರ್‍‍ಗಳು ಕೆಲವು ರಿಯಾಯಿತಿಗಳನ್ನು ನೀಡುವ ಸಾಧ್ಯತೆಗಳಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಭಾರತದಲ್ಲಿ ಲ್ಯಾಂಡ್ ರೋವರ್ ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳ ಬಗ್ಗೆ ಹೇಳುವುದಾದರೆ, ಇವೊಕ್ ಹಾಗೂ ಇವೊಕ್ ಕನ್ವರ್ಟಿಬಲ್ ಕಾರುಗಳ ಮೇಲೆ ಕ್ರಮವಾಗಿ ರೂ.9 ಲಕ್ಷ ಹಾಗೂ ರೂ.12 ಲಕ್ಷಗಳ ಕೊಡುಗೆಗಳನ್ನು ನೀಡಲಾಗುತ್ತದೆ. ಗ್ರಾಹಕರ ಅರ್ಹತೆಗೆ ಅನುಗುಣವಾಗಿ ಕಂಪನಿಯಿಂದ ಜೀರೊ ಡೌನ್‌ಪೇಮೆಂಟ್ ಫೈನಾನ್ಸ್ ಆಯ್ಕೆಯೊಂದಿಗೆ ಅವುಗಳನ್ನು ನೀಡಲಾಗುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಡಿಸ್ಕವರಿ ಹಾಗೂ ಡಿಸ್ಕವರಿ ಸ್ಪೋರ್ಟ್ ಕಾರುಗಳ ಮೇಲೆ ಕ್ರಮವಾಗಿ ರೂ.16 ಲಕ್ಷ ಹಾಗೂ ರೂ.11 ಲಕ್ಷಗಳ ಕೊಡುಗೆಗಳನ್ನು ನೀಡಲಾಗುತ್ತದೆ. ಡಿಸ್ಕವರಿ ಸ್ಪೋರ್ಟ್ ಜೀರೊ ಡೌನ್‌ಪೇಮೆಂಟ್ ಫೈನಾನ್ಸ್ ಆಯ್ಕೆಯೊಂದಿಗೆ ಲಭ್ಯವಿದೆ. ಎರಡೂ ಮಾದರಿಗಳಲ್ಲಿರುವ ಆಯ್ದ ಟ್ರಿಮ್‍‍ಗಳ ಮೇಲೆ ಈ ಕೊಡುಗೆಗಳು ಲಭ್ಯವಿರಲಿವೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ವೆಲಾರ್ ಕಾರುಗಳ ಮೇಲೆ ಕ್ರಮವಾಗಿ ರೂ.40 ಲಕ್ಷ ಹಾಗೂ ರೂ.15 ಲಕ್ಷಗಳ ಕೊಡುಗೆಗಳನ್ನು ನೀಡಲಾಗುತ್ತದೆ. ವೆಲಾರ್ ಕಾರಿನ ಮೇಲೆ ಗ್ರಾಹಕರ ಅರ್ಹತೆಗೆ ಅನುಗುಣವಾಗಿ ಜೀರೊ ಡೌನ್‌ಪೇಮೆಂಟ್ ಹಣಕಾಸು ಸೌಲಭ್ಯವನ್ನು ನೀಡಲಾಗುತ್ತದೆ.

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ರೇಂಜ್ ರೋವರ್ ಸ್ಪೋರ್ಟ್ ಎಸ್‍‍ಯುವಿಯ ಆಯ್ದ ಮಾದರಿಗಳ ಮೇಲೆ ಈ ರಿಯಾಯಿತಿಗಳು ಅನ್ವಯವಾಗುತ್ತವೆ. ಈ ಕೊಡುಗೆಯು ವೆಲಾರ್ ಎಸ್‍‍ಯುವಿಯ ಎರಡೂ ಮಾದರಿಗಳನ್ನು ಒಳಗೊಂಡಿದೆ. ಭಾರತದಲ್ಲಿರುವ ಲ್ಯಾಂಡ್ ರೋವರ್‌ನ ಟಾಪ್ ಮಾದರಿಯಾದ ರೇಂಜ್ ರೋವರ್‌ ಮೇಲೆ ಈ ಹಬ್ಬದ ಹಿನ್ನೆಲೆಯಲ್ಲಿ ರೂ.60 ಲಕ್ಷಗಳ ಕೊಡುಗೆಯನ್ನು ನೀಡಲಾಗುತ್ತದೆ.

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಕಾರುಗಳ ಮೇಲೆ ನೀಡಲಾಗುವ ಎಲ್ಲಾ ಕೊಡುಗೆಗಳು ಡೀಲರ್‍‍ಗಳನ್ನು ಅವಲಂಬಿಸಿರುತ್ತವೆ. ನಿಮ್ಮ ಹಳೆಯ ಕಾರನ್ನು ನೀವು ಡೀಲರ್‍‍ಗಳಿಗೆ ಮಾರಾಟ ಮಾಡುವಾಗ ನೀಡುವ ವಿನಿಮಯ ಬೋನಸ್ ಅನ್ನು ಒಳಗೊಂಡಿರುತ್ತದೆ.

ಜಾಗ್ವಾರ್ ಕಾರುಗಳ ಮೇಲೆ ಭರ್ಜರಿ ಆಫರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇನ್ನೂ ಅನೇಕ ಐಷಾರಾಮಿ ಕಂಪನಿಗಳೂ ಸಹ ಸಹ ತಮ್ಮ ಮಾರಾಟವನ್ನು ಹೆಚ್ಚಿಸಲು ಹಬ್ಬದ ಋತುವಿನಲ್ಲಿ ಆಕರ್ಷಕ ರಿಯಾಯಿತಿಯನ್ನು ನೀಡಲಿವೆ. ಬೃಹತ್ ರಿಯಾಯಿತಿ ಹಾಗೂ ಆಕರ್ಷಕ ಹಣಕಾಸು ಸೌಲಭ್ಯಗಳೊಂದಿಗೆ ಕಂಪನಿಗಳು ದುಬಾರಿ ಹಾಗೂ ಐಷಾರಾಮಿ ಮಾದರಿಯ ಕಾರುಗಳನ್ನು ಜನರಿಗೆ ಸುಲಭವಾಗಿ ಖರೀದಿಸಲು ಅನುಕೂಲ ಮಾಡಿಕೊಡುತ್ತಿವೆ. ಹೊಸ ಬಿಎಸ್ 6 ಕಾರುಗಳನ್ನು ಮಾರಾಟ ಮಾಡಲು ಅನುಕೂಲವಾಗಲು ಹಳೆಯ ಕಾರುಗಳನ್ನು ಮಾರಾಟ ಮಾಡುತ್ತಿವೆ.

More from DriveSpark

Article Published On: Saturday, October 26, 2019, 15:49 [IST]
English summary
Jaguar Land Rover Discount Offers: Festive Benefits Available Across Models - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+