ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಜೀಪ್ ಕಂಪಾಸ್ ನವೀಕೃತ ಆವೃತ್ತಿ

ಜೀಪ್ ಇಂಡಿಯಾ ಕಂಪನಿಯು ತನ್ನ ಕಂಪಾಸ್ ಎಸ್‍‍ಯು‍‍ವಿ ಕಾರಿನ ನವೀಕೃತ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. 2020ರ ಜೀಪ್ ಕಂಪಾಸ್ ನವೀಕೃತ ಆವೃತ್ತಿಯಲ್ಲಿ ಸಣ್ಣಪುಟ್ಟ ಕಾಸ್ಮೇಟಿಕ್ ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸ ಎಂಜಿನ್ ಅಳವಡಿಸಲಾಗಿದೆ. ಕಾರ್‍‍ದೇಖೊ ವರದಿಗಳ ಪ್ರಕಾರ, ಜೀಪ್ ಕಂಪಾಸ್ ನವೀಕೃತ ಆವೃತ್ತಿಯನ್ನು ಮುಂದಿನ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಜೀಪ್ ಕಂಪಾಸ್ ನವೀಕೃತ ಆವೃತ್ತಿ

ತನ್ನ ಉತ್ಪನ್ನಗಳನ್ನು ಪ್ರೀಮಿಯಂ ಆಗಿ ಇರಿಸಲು ಬಯಸುವ ಜೀಪ್ ಫೇಸ್‌ಲಿಫ್ಟ್ ಮಾದರಿಯಲ್ಲಿ ಹಲವಾರು ಫೀಚರ್‍‍ಗಳನ್ನು ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಸೇರಿಸುವ ನಿರೀಕ್ಷೆಯಿದೆ. ಇದರಿಂದಾಗಿ ತನ್ನ ಪ್ರತಿಸ್ಪರ್ಧಿ ಕಂಪನಿಯ ಎಸ್‍‍ಯು‍‍ವಿಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆಯಿರಲಿದೆ. ವರದಿಗಳ ಪ್ರಕಾರ, ಜೀಪ್ ಕಂಪಾಸ್ ನವೀಕೃತ ಎಸ್‍‍ಯು‍‍ವಿಯ ಹೊರಭಾಗದಲ್ಲಿ ಸಣ್ಣಪುಟ್ಟ ಕಾಸ್ಮೆಟಿಕ್ ಅಪ್‍‍ಡೇಟ್‍‍ಗಳನ್ನು ಮಾಡಲಾಗಿದೆ. ಇಂಟಿರಿಯರ್‍‍ನಲ್ಲಿಯೂ ಸಹ ಕೆಲವೊಂದು ಅಪ್‍‍ಡೇಟ್‍‍ಗಳನ್ನು ಮಾಡಲಾಗಿದೆ.

ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಜೀಪ್ ಕಂಪಾಸ್ ನವೀಕೃತ ಆವೃತ್ತಿ

ಇದರಲ್ಲಿ ಹೆಚ್ಚುವರಿಯಾಗಿ ವೆಂಟಿಲೇಟೆಡ್ ಸೀಟ್, 360 ಡಿಗ್ರಿಯ ಕ್ಯಾಮೆರಾ, ಇ-ಸಿಮ್ ಎಂಬೆಡೆಡ್ ಕನೆಕ್ಟಿವಿಟಿ ತಂತ್ರಜ್ಞಾನ, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹಾಗೂ ಪವರ್ ಟೇಲ್‌ಗೇಟ್‍‍ಗಳು ಸೇರಿವೆ. 2020ರ ಜೀಪ್ ಕಂಪಾಸ್ ಎಸ್‌ಯುವಿಯಲ್ಲಿರುವ ಪ್ರಮುಖವಾದ ಅಪ್‌ಡೇಟ್‌ ಎಂದರೆ ಹೊಸದಾಗಿ ಅಳವಡಿಸಲಾಗಿರುವ 1.3 ಲೀಟರ್‍‍ನ ಟರ್ಬೊ ಪೆಟ್ರೋಲ್ ಎಂಜಿನ್. ಹಳೆಯ ಮಾದರಿಯ 1.4 ಲೀಟರ್ ಮಲ್ಟಿಜೆಟ್ ಪೆಟ್ರೋಲ್ ಬದಲಿಗೆ, ಬಿಎಸ್6 ಆಧಾರಿತ 1.3 ಲೀಟರ್ ಫೈರ್ ಫ್ಲೈ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು.

ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಜೀಪ್ ಕಂಪಾಸ್ ನವೀಕೃತ ಆವೃತ್ತಿ

2019ರ ಅಂತ್ಯದ ವೇಳೆಗೆ ಪ್ರೀ ಫೇಸ್‍‍ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹೊಸ ಟರ್ಬೊ-ಪೆಟ್ರೋಲ್ ಎಂಜಿನ್‍‍ಗಳನ್ನು, 150ಬಿ‍‍ಹೆಚ್‍‍ಪಿ ಹಾಗೂ 250ಎನ್‍ಎಂ ಟಾರ್ಕ್ ಮತ್ತು 180ಬಿ‍‍ಹೆಚ್‍‍ಪಿ ಮತ್ತು 270ಎನ್‍ಎಂ ಟಾರ್ಕ್ ಉತ್ಪಾದಿಸುವಂತೆ ಎರಡು ರೀತಿಯಲ್ಲಿ ಟ್ಯೂನ್ ಮಾಡಿ ನೀಡಲಾಗುವುದು. ಜೀಪ್ ಕಂಪನಿಯು, 180ಬಿ‍‍ಹೆಚ್‍‍ಪಿ ಮಾದರಿಯಲ್ಲಿ ಹೊಸದಾಗಿ 9 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಬಿಡುಗಡೆಗೊಳಿಸಲಿದೆ. 150 ಬಿಹೆಚ್‌ಪಿ ಟ್ಯೂನ್ಡ್ ಟ್ರಿಮ್‍ ಮಾದರಿಯಲ್ಲಿ 6 ಸ್ಪೀಡಿನ ಡಿಸಿಟಿ ಅಳವಡಿಸಲಾಗುವುದು.

ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಜೀಪ್ ಕಂಪಾಸ್ ನವೀಕೃತ ಆವೃತ್ತಿ

ಡೀಸೆಲ್ ಎಂಜಿನ್ ಮಾದರಿಗಳಲ್ಲಿ, ಜೀಪ್ 2.0 ಲೀಟರ್ ಘಟಕದೊಂದಿಗೆ ಮುಂದುವರಿಯಲಿದ್ದು, ಈಗಾಗಲೇ ತನ್ನ ಹೊಸ ಮಾದರಿಯಾದ ಟ್ರೈಲ್‌ಹಾಕ್‌ನಲ್ಲಿ ಬಿಎಸ್ 6 ಆಧಾರಿತ ಎಂಜಿನ್ ಅನ್ನು ಅಳವಡಿಸಿದೆ. ಬಿಎಸ್6 ಎಂಜಿನ್ ಅನ್ನು ಕೈಗೆಟುಕುವ ದರದಲ್ಲಿರುವ ಕಂಪಾಸ್ ಮಾದರಿಗಳಲ್ಲೂ ಅಳವಡಿಸಲಾಗುವುದು. ಬಿಎಸ್6 ಆಧಾರಿತ ಡೀಸೆಲ್ ಎಂಜಿನ್ ಸಹ ಬಿಎಸ್4 ಎಂಜಿನ್‌ನಂತೆಯೇ 173 ಬಿಹೆಚ್‌ಪಿ ಹಾಗೂ 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

9 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಕಡಿಮೆ ಸಾಮರ್ಥ್ಯದ 4x2 ಡೀಸೆಲ್ ಮಾದರಿಗಳಲ್ಲೂ ಸಹ ದೊರೆಯಲಿದೆ. ಜೀಪ್ ಕಂಪನಿಯು ಈಗಾಗಲೇ ಕಂಪಾಸ್ ಕಾರಿನ ಕೆಳ ಸಾಮರ್ಥ್ಯದ 4x4 ಮಾದರಿಗಳಲ್ಲಿ ಬಿಎಸ್6 ಆಧಾರಿತ ಎಂಜಿನ್‍‍ಗಳನ್ನು ಪರೀಕ್ಷಿಸುತ್ತಿದೆ. ಕೆಳ ಸಾಮರ್ಥ್ಯದ, ಬಿಎಸ್ 6 ಎಂಜಿನ್ ಹಾಗೂ 9ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ, ಮಾದರಿಗಳನ್ನು ಪರೀಕ್ಷಿಸುವಾಗ ಕ್ಯಾಮರಾದಲ್ಲಿ ಸೆರೆಯಾಗಿವೆ.

ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಜೀಪ್ ಕಂಪಾಸ್ ನವೀಕೃತ ಆವೃತ್ತಿ

ಜೀಪ್ ಕಂಪನಿಯು ಕಂಪಾಸ್ ಎಸ್‌ಯುವಿಯನ್ನು ಅಪ್‌ಡೇಟ್ ಮಾಡುವುದರ ಜೊತೆಗೆ, ದೇಶಿಯ ಮಾರುಕಟ್ಟೆಯಲ್ಲಿ ಹೊಸ 7 ಸೀಟರ್‍‍ನ ಎಸ್‍‍ಯು‍‍ವಿಯನ್ನು ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದೆ. ಜೀಪ್‌ನಿಂದ ಬಿಡುಗಡೆಯಾಗಲಿರುವ 7 ಸೀಟರ್‍‍ಗಳ ಎಸ್‌ಯುವಿ, ಕಂಪಾಸ್ ಎಸ್‌ಯುವಿಯ ಮೇಲೆ ಆಧಾರಿತವಾಗಿದೆ. ಈ ಎಸ್‍‍ಯು‍‍ವಿಯನ್ನು 2020ರ ಕೊನೆಯ ಭಾಗದಲ್ಲಿ ಅಥವಾ 2021 ರ ಆರಂಭದಲ್ಲಿ ಬಿಡುಗಡೆಗೊಳಿಸಲಾಗುವುದು.

ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಜೀಪ್ ಕಂಪಾಸ್ ನವೀಕೃತ ಆವೃತ್ತಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಜೀಪ್ ಕಂಪನಿಯು ಕಂಪಾಸ್ ಎಸ್‌ಯುವಿಯನ್ನು 2017ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಅಂದಿನಿಂದ, ಈ ಎಸ್‌ಯುವಿ ಭಾರತದಲ್ಲಿ ಕಂಪನಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಆದರೆ, ಸ್ಪರ್ಧೆಯು ಹೆಚ್ಚಾಗುತ್ತಿದ್ದಂತೆ, ಜೀಪ್ ಕಂಪನಿಯು ಪೈಪೋಟಿಯನ್ನು ಎದುರಿಸಲು ತನ್ನ ಕಾರ್ ಅನ್ನು ನವೀಕರಿಸುವ ಅಗತ್ಯವನ್ನು ಅರಿತುಕೊಂಡಿದೆ. ಹೊಸ 2020 ಜೀಪ್ ಕಂಪಾಸ್ ಅದನ್ನು ಮಾಡುವ ನಿರೀಕ್ಷೆಯಿದೆ. ಈಗಾಗಲೇ ದುಬಾರಿ ಎನಿಸಿರುವ ಈ ಎಸ್‍‍ಯು‍‍ವಿ ನವೀಕರಣದ ನಂತರ ಮತ್ತಷ್ಟು ದುಬಾರಿಯಾಗಲಿದೆ.

Most Read Articles

Kannada
Read more on ಜೀಪ್ jeep
English summary
2020 Jeep Compass Facelift India-Launch Soon — Will Receive Brand New BS6 Petrol Engine - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X