ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಅಮೆರಿಕದ ಜನಪ್ರಿಯ ಎಸ್‌ಯುವಿ ಕಾರು ತಯಾರಕ ಸಂಸ್ಥೆಯಾದ ಜೀಪ್ ತನ್ನ ಹೊಚ್ಚ ಹೊಸ ಕಂಪಾಸ್ ಕಾರನ್ನು ಖರೀದಿಸುವವಾರಿಗೆ ಹೊಸ ಆಫರ್ ಒಂದನ್ನು ಘೋಷಣೆ ಮಾಡಿದೆ. ಜೀಪ್ ಕಂಪಾಸ್ ಕಾರಿನ ಖರೀದಿಯ ಮೇಲೆ 5 ವರ್ಷದ ವಾರೆಂಟಿಯನ್ನು ಪಡೆಯಬಹುದಾಗಿದ್ದು, ಇದನ್ನು ಈಗಗಾಲೆ ಖರೀದಿಸಿದ ಗ್ರಾಹಕರು ಕೂಡಾ ಪಡೆಯಬಹುದಾಗಿದೆ.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಜೀಪ್ ಸಂಸ್ಥೆಯು ತಮ್ಮ ಜೀಪ್ ಕಂಪಾಸ್ ಸ್ಸ್ಪೋರ್ಟ್ ವೇರಿಯಂಟ್‍ನ ಮೇಲೆ ರೂ. 25,000, ಜೀಪ್ ಕಂಪಾಸ್ ಲಾಂಗಿಟ್ಯೂಡ್ ವೇರಿಯಂಟ್ ಕಾರಿನ ಮೇಲೆ ಮತ್ತು ಜೀಪ್ ಕಂಪಾಸ್ ಟಾಪ್-ಎಂಡ್ ಲಿಮಿಟೆಡ್ ವೇರಿಯಂಟ್‍ನ ಮೇಲೆ ರೂ. 32,000ದ ಪರಿಚಯಾತ್ಮಕ ಬೆಲೆ (ಇನ್ಟ್ರೂಡಕ್ಟರಿ ಪ್ರೈಸ್)ಅನ್ನು ನೀಡುತ್ತಿದೆ. ಈ ಆಫರ್ ಕೇವಲ ಮಾರ್ಚ್ 31, 2019ರವರೆಗು ಮಾತ್ರ ಇರಲಿದ್ದು, ಜೂನ್ 1, 2019 ರಿಂದ ಬೆಲೆಯಲ್ಲಿ ಏರಿಕೆಯಾಗಲಿದೆ.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಮೊಪಾರ್ ವಿಸ್ತರಿತ ಖಾತರಿ ಯೋಜನೆಯು ಹೆಚ್ಚುವರಿ ಎರಡು ವರ್ಷಗಳವರೆಗೆ ಮತ್ತು ಮೂರು ವರ್ಷಗಳ ಅಥವಾ 1,00,000 ಕಿಮೀಗಳವರೆಗೆ ಅನಿರೀಕ್ಷಿತ ರಿಪೇರಿಗಾಗಿ ಮತ್ತು ವಾರದ ರಸ್ತೆಬದಿಯ ನೆರವಿಗಾಗಿ 1,00,000 ಕಿಮೀ ಪ್ರಮಾಣಿತ ವಾರೆಂಟಿ ಜೊತೆಗೆ ವಾಹನಗಳನ್ನು ಒಳಗೊಳ್ಳುತ್ತದೆ.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಜೀಪ್ ಸಂಸ್ಥೆಯ ಬಹುನೀರಿಕ್ಷಿತ ಕಂಪಾಸ್ ಎಸ್‌ಯುವಿ ಮಾದರಿಯೂ ಗ್ರಾಹಕರು ನೀರಿಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಸೌಲಭ್ಯ ಹೊಂದುವ ಮೂಲಕ ಜನಪ್ರಿಯತೆಗೆ ಕಾರಣವಾಗುತ್ತಿದ್ದು, ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯ ಬೆಲೆಯು ರೂ.15.16 ಲಕ್ಷಕ್ಕೆ ಮತ್ತು ಉನ್ನತ ಶ್ರೇಣಿಯ ಕಾರಿನ ಬೆಲೆ ರೂ.21.94 ಲಕ್ಷಕ್ಕೆ ಲಭ್ಯವಿದೆ.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಸ್ಪೋರ್ಟ್, ಲ್ಯಾಂಗಿಟ್ಯುಡ್ ಮತ್ತು ಲಿಮಿಟೆಡ್ ಎಂಬ ಮೂರು ಪ್ರಮುಖ ಆವೃತ್ತಿಗಳಲ್ಲಿ ಜೀಪ್ ಕಂಪಾಸ್ ಖರೀದಿಗೆ ಲಭ್ಯವಿದ್ದು, ಡೀಸೆಲ್ ಆವೃತ್ತಿಯಲ್ಲಿ ಮಾತ್ರ 4x4 ಡ್ರೈವ್ ಟೆಕ್ನಾಲಜಿ ಮಾದರಿಯನ್ನು ಪರಿಚಯಿಸಲಾಗಿದೆ. ಜೊತೆಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್‌ಇಡಿ ಡಿಆರ್‌ಎಲ್‌ಗಳ ಅಳವಡಿಕೆ ಹೊಂದಿದೆ.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಎಂಜಿನ್ ವೈಶಿಷ್ಟ್ಯತೆ

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ. ಹೀಗಾಗಿ ಡಿಸೇಲ್ ಕಾರು ಆವೃತ್ತಿಯು 171-ಬಿಎಚ್‌ಪಿ, 350ಎನ್ಎಂ ಟಾರ್ಕ್ ಉತ್ಪಾದಿಸಿದರೆ ಅದೇ ರೀತಿಯಾಗಿ ಪೆಟ್ರೋಲ್ ಆವೃತ್ತಿಗಳು 160-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ 7-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕಲ್ವಿಸಿರುವ ಜೀಪ್ ಕಾಂಪಾಸ್, ಆಟೋ , ಸ್ನೋ, ಸ್ಯಾಂಡ್ ಮತ್ತು ಮಡ್ ಮೂಡ್‌ಗಳಲ್ಲಿ ಚಾಲನೆಗೆ ಅವಕಾಶ ನೀಡಿದೆ.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಕಾರಿನ ವಿನ್ಯಾಸ

ಮತ್ತು ವೈಶಿಷ್ಟ್ಯತೆಗಳು ಹಿಂದೆಂದಿಗಿಂತಲೂ ಉತ್ತಮ ವಿನ್ಯಾಸಗಳನ್ನು ಹೊಚ್ಚ ಹೊಸ ಜೀಪ್ ಕಂಪಾಸ್ ಪಡೆದುಕೊಂಡಿದ್ದು, ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ದೊಡ್ಡದಾದ ಜೀಪ್ ಬ್ಯಾಡ್ಜ್‌ಗಳನ್ನು ಪಡೆದುಕೊಂಡಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಇನ್ನು 16 ಇಂಚಿನ ಮಿಶ್ರಲೋಹದ ಚಕ್ರಗಳು ಕೂಡಾ ಜೀಪ್ ಕಂಪಾಸ್ ಬಲಿಷ್ಠತೆ ಪುಷ್ಠಿ ನೀಡುವಂತಿದ್ದು, ಒಳಭಾಗದಲ್ಲಿನ ಡ್ಯುಯಲ್ ಟೋನ್ ಥೀಮ್ ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯದೇ ಇರಲಾರದು.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು ಮತ್ತು ಮೇಲ್ಛಾವಣೆ, ಅತ್ಯುತ್ತಮ ಆಸನ ವ್ಯವಸ್ಥೆ, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 5-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಪ್ರಸ್ತುತ ಸೌಲಭ್ಯಗಳನ್ನು ಹೊಂದಿದೆ.

ಜೀಪ್ ಕಂಪಾಸ್ ಕಾರು ಖರೀದಿಯ ಮೇಲೆ ಭರ್ಜರಿ ಆಫರ್..!

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ ಮತ್ತು ಎಬಿಎಸ್ ತಂತ್ರಜ್ಞಾನಗಳ ಜೋಡಣೆ ಮಾಡಲಾಗಿದೆ. ಇದಲ್ಲದೇ ಕೀ ಲೇಸ್ ಡ್ರೈವಿಂಗ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒದಗಿಸಲಾಗಿದೆ.

Source: NDTV Auto

Kannada
Read more on ಜೀಪ್ jeep
English summary
Jeep Compass Now Available With Five Years Extended Warranty Option. Read In Kannada
Story first published: Saturday, March 2, 2019, 14:43 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more