ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಎಂಜಿ ಹೆಕ್ಟರ್ ಮಾದರಿಯು ಜೀಪ್ ಕಂಪಾಸ್‌ಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಜೂನ್ ಅವಧಿಯ ಕಾರು ಮಾರಾಟದಲ್ಲಿ ಕಂಪಾಸ್ ಎಸ್‌ಯುವಿ ಮಾದರಿಯು ಭಾರೀ ಪ್ರಮಾಣದ ಹಿನ್ನಡೆ ಅನುಭವಿಸಿದೆ. ಇದಕ್ಕೆ ಪ್ರಮುಖ ಕಾರಣ ಎಂಜಿ ಹೆಕ್ಟರ್ ಆಕರ್ಷಕ ಬೆಲೆಗಳೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯು ಈ ಹಿಂದೆ 2017ರ ಜುಲೈನಲ್ಲಿ ಬಿಡುಗಡೆಗೊಂಡಾಗ ಪ್ರತಿ ತಿಂಗಳು ಸರಾಸರಿಯಾಗಿ 2,500 ಯುನಿಟ್ ಮಾರಾಟ ಪ್ರಮಾಣವನ್ನು ಕಾಯ್ದುಕೊಂಡು ಬಂದಿತ್ತು. ಆದರೆ 2019ರ ಆರಂಭದಿಂದ ತೀವ್ರ ಕುಸಿತ ಅನುಭವಿಸಿರುವ ಜೀಪ್ ಕಂಪಾಸ್ ಮಾದರಿಯು ಜೂನ್ ಅವಧಿಯಲ್ಲಿ ಅತಿ ಕನಿಷ್ಠ ಕಾರುಗಳು ಮಾರಾಟವಾಗಿವೆ. 2018ರ ಕೊನೆಯಲ್ಲಿ 2,500ರಿಂದ 2 ಸಾವಿರಕ್ಕೆ ಕುಸಿತ ಕಂಡಿದ್ದ ಜೀಪ್ ಮಾರಾಟವು ಇದೀಗ 791ಕ್ಕೆ ಕುಸಿದಿದೆ.

ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

ಹೌದು, 2019ರ ಆರಂಭದಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್‌ನೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿದ್ದ ಜೀಪ್ ಕಂಪಾಸ್‌ ಮಾದರಿಗೆ ಇದೀಗ ಮತ್ತೊಂದು ಬಲಿಷ್ಠ ಕಾರು ಮಾದರಿಯಾದ ಎಂಜಿ ಹೆಕ್ಟರ್ ತೀವ್ರ ಪೈಪೋಟಿ ನೀಡುತ್ತಿದ್ದು, 2 ಸಾವಿರ ಇದ್ದ ಕಾರು ಮಾರಾಟವು 791ಕ್ಕೆ ನೆಲಕಚ್ಚಿದೆ.

ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

2018ರ ಜೂನ್ ಅವಧಿಯಲ್ಲಿ 1,478 ಕಂಪಾಸ್ ಕಾರುಗಳನ್ನು ಮಾರಾಟ ಮಾಡಿದ್ದ ಜೀಪ್ ಸಂಸ್ಥೆಯು ಕಳೆದ ಜೂನ್‌ನಲ್ಲಿ ಕೇವಲ 791 ಕಾರುಗಳನ್ನು ಮಾರಾಟ ಮಾಡಿದ್ದು, ಶೇ.46 ರಷ್ಟು ಕಾರು ಮಾರಾಟ ಪ್ರಮಾಣವು ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣವೇ ಅಗ್ಗದ ಬೆಲೆಗಳಲ್ಲಿ ರಸ್ತೆಗಿಳಿದಿರುವ ಎಂಜಿ ಹೆಕ್ಟರ್ ಎಸ್‌ಯುವಿ ಮಾದರಿಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

ಸದ್ಯ ಜೀಪ್ ಕಂಪಾಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಪೆಟ್ರೋಲ್ ಮಾದರಿಯು ರೂ. 15.65 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.21.68 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಮಾದರಿಯು ಜೀಪ್ ಕಂಪಾಸ್ ಕಾರು 1,368 ಸಿಸಿ ಎಂಜಿನ್‌ನೊಂದಿಗೆ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ಹಲವು ಆಧುನಿಕ ಡ್ರೈವ್ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

ಹಾಗೆಯೇ ಜೀಪ್ ಕಂಪಾಸ್‌ನಲ್ಲಿ ಡೀಸೆಲ್ ಎಂಜಿನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.62 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 27.06 ಲಕ್ಷ ಬೆಲೆ ಹೊಂದಿದ್ದು, 1,956ಸಿಸಿ ಎಂಜಿನ್‌ನೊಂದಿಗೆ 4x4 ಡ್ರೈವ್ ಟೆಕ್ನಾಲಜಿ ಸೇರಿದಂತೆ ಹಲವು ಹೊಸ ಆಧುನಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಜೀಪ್‌ಗೆ ತೀವ್ರ ಪೈಪೋಟಿಯಾಗಿರುವ ಎಂಜಿ ಹೆಕ್ಟರ್ ಮಾದರಿಯ ಕಂಪಾಸ್ ಕಾರಿನಂತೆಯೇ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಹೆಕ್ಟರ್ ಕಾರು ಕೂಡಾ ಪೆಟ್ರೋಲ್, ಡೀಸೆಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

ಹೆಕ್ಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯು ಆರಂಭಿಕವಾಗಿ ರೂ. 12.18 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 16.78 ಲಕ್ಷ ಬೆಲೆ ಹೊಂದಿದ್ದರೆ, ಡೀಸೆಲ್ ಮಾದರಿಯು ಆರಂಭಿಕವಾಗಿ ರೂ. 13.18 ಲಕ್ಷಕ್ಕೆ ಮತ್ತು ಎಂಡ್ ಮಾದರಿಯು ರೂ. 16.88 ಲಕ್ಷ ಬೆಲೆ ಹೊಂದಿದೆ.

ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

ಜೀಪ್ ಕಂಪಾಸ್ ಮಾದರಿಯಲ್ಲೇ ಎಂಜಿ ಹೆಕ್ಟರ್ ಕೂಡಾ ಪೆಟ್ರೋಲ್ ಮಾದರಿಯು 1,451 ಸಿಸಿ ಎಂಜಿನ್ ಹೊಂದಿದ್ದರೆ ಡೀಸೆಲ್ ಮಾದರಿಯು 1,956-ಸಿಸಿ ಎಂಜಿನ್ ಹೊಂದಿದೆ. ಹೀಗಾಗಿ ಕಂಪಾಸ್‌ಗೆ ತಾಂತ್ರಿಕವಾಗಿ ಸರಿಸಮನಾಗಿರುವ ಹೆಕ್ಟರ್ ಕಾರು ಭರ್ಜರಿ ಪೈಪೋಟಿ ನೀಡುತ್ತಿದೆ. ಜೊತೆಗೆ ಹೆಕ್ಟರ್ ಪೆಟ್ರೋಲ್ ಮಾದರಿಯಲ್ಲಿ ಹೈಬ್ರಿಡ್ ವರ್ಷನ್ ಕೂಡಾ ಖರೀದಿ ಲಭ್ಯವಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಅಧಿಕ ಮೈಲೇಜ್ ನೀಡುತ್ತಿದೆ.

ಎಂಜಿ ಹೆಕ್ಟರ್ ಅಬ್ಬರದ ಮುಂದೆ ನೆಲಕಚ್ಚಿದ ಜೀಪ್ ಕಂಪಾಸ್..!

ಇದರೊಂದಿಗೆ ಎಂಜಿ ಹೆಕ್ಟರ್ ಮತ್ತು ಟಾಟಾ ಹ್ಯಾರಿಯರ್‌ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಜೀಪ್ ಕಂಪಾಸ್ ಕಾರಿಗೆ ಮುಂಬರುವ ದಿನಗಳಲ್ಲಿ ಕಿಯಾ ಸೆಲ್ಟೊಸ್ ಕೂಡಾ ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಿದೆ.

Most Read Articles

Kannada
Read more on ಜೀಪ್ jeep
English summary
Jeep Compass Sales Down By 46 Percent In June 2019. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X