ಬಿಡುಗಡೆಗಾಗಿ ಅಂತಿಮ ಹಂತದ ರೋಡ್ ಟೆಸ್ಟ್‌ನಲ್ಲಿ 2019ರ ಜೀಪ್ ರ‍್ಯಾಂಗ್ಲರ್
ಐಷಾರಾಮಿ ಕಾರು ಉತ್ಪಾದನಾ ಜೀಪ್ ಸಂಸ್ಥೆಯು ಭಾರತದಲ್ಲಿ 2019ರ ರ‍್ಯಾಂಗ್ಲರ್ ಎಸ್‌ಯುವಿ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಕೈಗೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದೆ.

2017ರ ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಹೊಸ ಮಾದರಿಯ ರ‍್ಯಾಂಗ್ಲರ್ ಎಸ್‌ಯುವಿ ಕಾರುಗಳನ್ನು ಪ್ರದರ್ಶನಗೊಳಿಸಿದ್ದ ಜೀಪ್ ಸಂಸ್ಥೆಯು ಇದೀಗ ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, ಪುಣೆ ನಗರದ ಹೊರಭಾಗದಲ್ಲಿ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿರುವಾಗ ಮೂರು ಬಾಗಿಲು ಆವೃತ್ತಿಯಾದ ರ‍್ಯಾಂಗ್ಲರ್ ರೂಬಿಕಾನ್ ಸಾಕಷ್ಟು ಆಕರ್ಷಣೆಗೆ ಕಾರಣವಾಗಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡಿರುವ ರ‍್ಯಾಂಗ್ಲರ್ ಎಸ್‌ಯುವಿ ಕಾರು ಈ ಹಿಂದಿನ ಮಾದರಿಗಿಂತಲೂ ಭಾರೀ ಬದಲಾವಣೆ ಹೊಂದಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ದೊಡ್ಡದಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಹಗಲಿನ ರನ್ನಿಂಗ್ ಲೈಟ್‌ಗಳನ್ನು ಫೆಂಡರ್‌ಗಳಲ್ಲಿ ಹೊಂದಿದೆ.

ಜೊತೆಗೆ ಕಾರಿನ ವಿಂಡೋಗಳುಜೊತೆಗೆ ಕಾರಿನ ಕಿಟಕಿಗಳು ಈ ಹಿಂದಿನ ಮಾದರಿಗಳಿಂತ ಸ್ವಲ್ಪ ಮಟ್ಟಿಗೆ ದೊಡ್ಡದಾಗಿದ್ದು, ವಿಸ್ತರಿತ ವಿಂಡ್ ಸ್ಕ್ರೀನ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್. ವೀಲ್ ಮತ್ತು ಪರಿಷ್ಕರಿಸಿದ ಬಂಪರ್ ಕೂಡಾ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಇನ್ನು ಕಾರಿನ ಇಂಟಿರಿಯರ್ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಈ ಹಿಂದಿನ ಮಾದರಿಯಂತೆಯೇ ಬಹುತೇಕ ಫೀಚರ್ಸ್‌ಗಳು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಸುಧಾರಿತ ಡ್ಯಾಶ್‌ಬೋರ್ಡ್, ಚಾಲಕನ ಭಾಗದಲ್ಲಿ 7 ಇಂಚಿನ್ ಎಲ್‌ಸಿಡಿ ಮಾಹಿತಿ ಪರದೆ ಮತ್ತು 8.4 ಇಂಚಿನ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದಿದೆ.

ಹಾಗೆಯೇ 4ನೇ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗುತ್ತಿರುವ 2019ರ ಜೀಪ್ ರ‍್ಯಾಂಗ್ಲರ್ ಮಾದರಿಗಳು ಈ ಬಾರಿ ವೀಲ್‌ಬೇಸ್‌ನಲ್ಲೂ ಬದಲಾವಣೆ ಹೊಂದಿದ್ದು, ಪರಿಣಾಮ ಲೆಗ್ ರೂಮಂ ವಿಸ್ತರಣೆ ಮಾಡುವ ಮೂಲಕ ಆಪ್ ರೋಡ್ ಪ್ರಿಯರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗಿದೆ.

ಎಂಜಿನ್ ಸಾಮರ್ಥ್ಯ
ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಹೊಸ ಜೀಪ್ ರ‍್ಯಾಂಗ್ಲರ್ ಆವೃತ್ತಿಗಳು 2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಇದೇ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಇದರೊಂದಿಗೆ ಹೈ ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗೆ ಸಾಂಪ್ರದಾಯಿಕ ಎಂಜಿನ್‌ಗಳನ್ನು ಹೊರತುಪಡಿಸಿ 3.0-ಲೀಟರ್ ವಿ6 ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಕೂಡಾ ಲಭ್ಯವಿರಲಿದ್ದು, ಮೂರು ಬಾಗಿಲು ಮತ್ತು ಐದು ಬಾಗಿಲು ಆಯ್ಕೆಯೊಂದಿಗೆ ಹೊಸ ಕಾರು ಮಾರುಕಟ್ಟೆಗೆ ಬರಲಿದೆ.
MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಹೊಸ ಕಾರುಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಲಿರುವ ಹೊಸ ಜೀಪ್ ರ‍್ಯಾಂಗ್ಲರ್ ಕಾರು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.55 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.65 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.
Source: Zig Wheels


Click it and Unblock the Notifications