2020ಕ್ಕೆ ರಸ್ತೆಗಿಳಿಯಲಿದೆ ಜೀಪ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಾಟ್ ಚಿಪ್ಸ್‌ನಂತೆ ಮಾರಾಟವಾಗುತ್ತಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಪೈಪೋಟಿಯಾಗಿ ಜೀಪ್ ಇಂಡಿಯಾ ಸಂಸ್ಥೆಯು ಮಹತ್ವದ ಯೋಜನೆಯೊಂದನ್ನು ರೂಪಿಸುತ್ತಿದ್ದು, ಕೈಗೆಟುವ ಬೆಲೆಯಲ್ಲಿ ಸಣ್ಣ ಗಾತ್ರದ ಎಸ್‌ಯುವಿ ಕಾರು ಮಾದರಿಯಾದ ರೆನೆಗೆಡ್ ಹೋಲಿಕೆಯ ಹೊಸ ಕಾರು ಮಾದರಿಯೊಂದನ್ನು ಬಿಡುಗಡೆಗಾಗಿ ಸಿದ್ದಗೊಂಡಿದೆ.

ಹೊಸ ಕಾರಿನ ಬಿಡುಗಡೆಯ ಬಗ್ಗೆ ಈಗಾಗಲೇ ಜೀಪ್ ಸಂಸ್ಥೆಯು ಸುಳಿವು ನೀಡಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆ ಇಂತದೊಂದು ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಜೊತೆಗೆ ಹೊಸ ಕಾರನ್ನು 4x4 ಡ್ರೈವ್ ವೈಶಿಷ್ಟ್ಯತೆಗಳೊಂದಿಗೆ ಪರಿಚಯಿಸುತ್ತಿರುವ ಜೀಪ್ ಸಂಸ್ಥೆಯು ಆಪ್ ರೋಡ್ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಸುಜುಕಿ ವಿಟಾರಾ ಬ್ರೆಝಾ, ಎಕ್ಸ್‌ಯುವಿ300, ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿಯಾಗಿ ಅಭಿವೃದ್ದಿಗೊಳ್ಳಲಿದ್ದು, ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟ ಹೊಂದಿರುವ ರೆನೆಗ್ರೆಡ್ ಕಾರಿನ ತಳಹದಿಯಲ್ಲೇ ಸಣ್ಣ ಗಾತ್ರದ ಎಸ್‌ಯುವಿಗಳನ್ನು ಅಭಿವೃದ್ಧಿಪಡಿಸಲಿದೆ.

ಜೊತೆಗೆ ಜೀಪ್ ಸಂಸ್ಥೆಯು ನಿರ್ಮಾಣ ಮಾಡಲಿರುವ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ನೆಕ್ಸ್ಟ್ ಜನರೇಷನ್ ಫಿಯೆಟ್ ಪಾಂಡಾ ಕಾರಿನ ಕೆಲವು ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಮಹತ್ವದ ಬದಲಾವಣೆಯೊಂದಿಗೆ ಹೊಸ ಕಾರು ಬಿಡುಗಡೆಯಾಗಲಿದೆ.

ಇದಕ್ಕೆ ಕಾರಣ ಫಿಯೆಟ್ ಪಾಂಡಾ ಕಾರುಗಳು ಈಗಾಗಲೇ ಮುಂದುವರಿದ ಕೆಲ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದ ಜನಪ್ರಿಯತೆಯೊಂದಿಗೆ ಮಾರಾಟವಾಗುತ್ತಿದ್ದು, ಅದೇ ತಂತ್ರಗಾರಿಕೆಯನ್ನು ಜೀಪ್ ಸಂಸ್ಥೆಯು ತನ್ನ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲೂ ಅಳವಡಿಸುವ ಇರಾದೆಯಲ್ಲಿದೆ. ಹಾಗೆಯೇ ಹೊಸ ಕಾರಿನಲ್ಲಿ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಸೇರಿದಂತೆ ಹಲವು ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೊಂದಿರುವ ಫಿಯೆಟ್ ಪಾಂಡಾ ಕಾರುಗಳು ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಈ ಹಿನ್ನೆಲೆ ಭಾರತದಲ್ಲಿ ಜೀಪ್ ಬಿಡುಗಡೆ ಮಾಡುವ ಹೊಸ ಕಾರು ಕೂಡಾ ಜನಪ್ರಿಯತೆ ಹೊಂದುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ಮೂಲಗಳ ಪ್ರಕಾರ, 2020ರ ಮಧ್ಯಂತರದಲ್ಲಿ ಹೊಸ ಕಾರುನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವ ಜೀಪ್ ಸಂಸ್ಥೆಯು ಹೊಸ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.

ಕಾರಿನ ಬೆಲೆಗಳು(ಅಂದಾಜು)
ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಜೀಪ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 8.50 ಲಕ್ಷದಿಂದ ರೂ.12 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.
MOST READ: ವರ್ಷಾಂತ್ಯದಲ್ಲಿ ಎಂಜಿ ಮೋಟಾರ್ ಇಜೆಡ್ಎಸ್ ಕಾರು ಬಿಡುಗಡೆ ಪಕ್ಕಾ..!

ಇದರಿಂದಾಗಿ ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ, ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್, ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದ್ದು, ಹೊಸ ಕಾರಿನ ಮೇಲೆ ವಿಧಿಸಲಾಗುವ ಬೆಲೆಗಳ ಆಧಾರದ ಮೇಲೆ ಜೀಪ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿ ಭವಿಷ್ಯವು ನಿರ್ಧಾರವಾಗಲಿದೆ ಎನ್ನಬಹುದು.
MOST READ: ಈ ತಪ್ಪುಗಳನ್ನು ಮಾಡಿದರೆ ಲೈಸೆನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಇದಲ್ಲದೇ ಪ್ರಸ್ತುತ ಮಾರುಕಟ್ಟೆಯಲ್ಲಿ ಜೀಪ್ ಸಂಸ್ಥೆಯು ಪ್ರತಿಸ್ಪರ್ಧಿ ಕಾರು ಉತ್ಪಾದನಾ ಸಂಸ್ಥೆಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದು, ಕಂಪಾಸ್ ಎಸ್‌ಯುವಿ ಕಾರಿನ ಮಾರಾಟವು ಕಳೆದ ಒಂದು ವರ್ಷದಲ್ಲಿ ಶೇ.70ರಷ್ಟು ಕುಸಿತವಾಗಿದೆ. ಹೀಗಾಗಿ ಜೀಪ್ ಸಂಸ್ಥೆಯ ಕಾರು ಮಾರಾಟ ಸುಧಾರಣೆಗೆ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಅತಿಅವಶ್ಯಕವಾಗಿದೆ.
MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಇನ್ನು ಜೀಪ್ ಸಂಸ್ಥೆಯು ಭಾರತದಲ್ಲಿ ಫಿಯೆಟ್ ಕ್ಲೈಸರ್ ಆಟೋ ಮೊಬೈಲ್ ಸಂಸ್ಥೆಯ ಜೊತೆಗೂಡಿ ಸ್ಥಳೀಯ ಮಟ್ಟದಲ್ಲೇ ಬೀಡಿಭಾಗಗಳನ್ನು ಬಳಸಿಕೊಂಡು ಅಗ್ಗದ ಬೆಲೆಯಲ್ಲಿ ಕಾರು ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ನೀಡಿದ್ದು, 2019ರ ಅಂತ್ಯದ ವೇಳೆಗೆ ವಾರ್ಷಿಕವಾಗಿ 2.40 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಹೊಂದಿದೆ.
Source: Business Standard


Click it and Unblock the Notifications








