ಆಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ನೆಕ್ಸ್ಟ್ ಜನರೇಷನ್ ಜೀಪ್ ರ‍್ಯಾಂಗ್ಲರ್

ಐಷಾರಾಮಿ ಕಾರು ಉತ್ಪಾದನಾ ಜೀಪ್ ಸಂಸ್ಥೆಯು ಭಾರತದಲ್ಲಿ ನೆಕ್ಸ್ಟ್ ಜನರೇಷನ್ ರ‍್ಯಾಂಗ್ಲರ್ ಎಸ್‌ಯುವಿ ಆವೃತ್ತಿಯ ಬಿಡುಗಡೆಗಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಹೊಸ ಕಾರು ಮಾದರಿಯು ಮುಂದಿನ ತಿಂಗಳು ಅಗಸ್ಟ್ ಅಂತ್ಯದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಆಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ನೆಕ್ಸ್ಟ್ ಜನರೇಷನ್ ಜೀಪ್ ರ‍್ಯಾಂಗ್ಲರ್

ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಹೊಸ ಮಾದರಿಯ ರ‍್ಯಾಂಗ್ಲರ್ ಎಸ್‌ಯುವಿ ಕಾರುಗಳನ್ನು ಪ್ರದರ್ಶನಗೊಳಿಸಿದ್ದ ಜೀಪ್ ಸಂಸ್ಥೆಯು ಇದೀಗ ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, ಮೂರು ಬಾಗಿಲು ಆವೃತ್ತಿಯಾದ ರ‍್ಯಾಂಗ್ಲರ್ ರೂಬಿಕಾನ್ ಸಾಕಷ್ಟು ಆಕರ್ಷಣೆಗೆ ಕಾರಣವಾಗಿದೆ. ಇಲ್ಲಿ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ರೂಬಿಕಾನ್ ಹೆಸರನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಳಸಲು ನಿರ್ಧರಿಸಿರುವ ಜೀಪ್ ಸಂಸ್ಥೆಯು ಅದೇ ಕಾರನ್ನು ಭಾರತದಲ್ಲಿ ಮಾಬ್ ಹೆಸರಿನೊಂದಿಗೆ ಬಿಡುಗಡೆ ಮಾಡುತ್ತಿರುವುದಾಗಿ ವರದಿಯಾಗಿದೆ.

ಆಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ನೆಕ್ಸ್ಟ್ ಜನರೇಷನ್ ಜೀಪ್ ರ‍್ಯಾಂಗ್ಲರ್

ಇನ್ನು ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡಿರುವ ರ‍್ಯಾಂಗ್ಲರ್ ಎಸ್‌ಯುವಿ ಕಾರು ಈ ಹಿಂದಿನ ಮಾದರಿಗಿಂತಲೂ ಭಾರೀ ಬದಲಾವಣೆ ಹೊಂದಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ದೊಡ್ಡದಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಹಗಲಿನ ರನ್ನಿಂಗ್ ಲೈಟ್‌ಗಳನ್ನು ಫೆಂಡರ್‌ಗಳಲ್ಲಿ ಹೊಂದಿದೆ.

ಆಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ನೆಕ್ಸ್ಟ್ ಜನರೇಷನ್ ಜೀಪ್ ರ‍್ಯಾಂಗ್ಲರ್

ಜೊತೆಗೆ ಕಾರಿನ ವಿಂಡೋಗಳುಜೊತೆಗೆ ಕಾರಿನ ಕಿಟಕಿಗಳು ಈ ಹಿಂದಿನ ಮಾದರಿಗಳಿಂತ ಸ್ವಲ್ಪ ಮಟ್ಟಿಗೆ ದೊಡ್ಡದಾಗಿದ್ದು, ವಿಸ್ತರಿತ ವಿಂಡ್ ಸ್ಕ್ರೀನ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್. ವೀಲ್ ಮತ್ತು ಪರಿಷ್ಕರಿಸಿದ ಬಂಪರ್ ಕೂಡಾ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಆಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ನೆಕ್ಸ್ಟ್ ಜನರೇಷನ್ ಜೀಪ್ ರ‍್ಯಾಂಗ್ಲರ್

ಇನ್ನು ಕಾರಿನ ಇಂಟಿರಿಯರ್ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಈ ಹಿಂದಿನ ಮಾದರಿಯಂತೆಯೇ ಬಹುತೇಕ ಫೀಚರ್ಸ್‌ಗಳು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಸುಧಾರಿತ ಡ್ಯಾಶ್‌ಬೋರ್ಡ್, ಚಾಲಕನ ಭಾಗದಲ್ಲಿ 7 ಇಂಚಿನ್ ಎಲ್‌ಸಿಡಿ ಮಾಹಿತಿ ಪರದೆ ಮತ್ತು 8.4 ಇಂಚಿನ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದಿದೆ. ಹಾಗೆಯೇ 4ನೇ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗುತ್ತಿರುವ 2019ರ ಜೀಪ್ ರ‍್ಯಾಂಗ್ಲರ್‌ ಮಾದರಿಗಳು ಈ ಬಾರಿ ವೀಲ್‌ಬೇಸ್‌ನಲ್ಲೂ ಬದಲಾವಣೆ ಹೊಂದಿದ್ದು, ಪರಿಣಾಮ ಲೆಗ್ ರೂಮಂ ವಿಸ್ತರಣೆ ಮಾಡುವ ಮೂಲಕ ಆಪ್ ರೋಡ್ ಪ್ರಿಯರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗಿದೆ.

ಆಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ನೆಕ್ಸ್ಟ್ ಜನರೇಷನ್ ಜೀಪ್ ರ‍್ಯಾಂಗ್ಲರ್

ಎಂಜಿನ್ ಸಾಮರ್ಥ್ಯ

ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಹೊಸ ಜೀಪ್ ರ‍್ಯಾಂಗ್ಲರ್ ಆವೃತ್ತಿಗಳು 2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಇದೇ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಆಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ನೆಕ್ಸ್ಟ್ ಜನರೇಷನ್ ಜೀಪ್ ರ‍್ಯಾಂಗ್ಲರ್

ಇದರೊಂದಿಗೆ ಹೈ ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗೆ ಸಾಂಪ್ರದಾಯಿಕ ಎಂಜಿನ್‌ಗಳನ್ನು ಹೊರತುಪಡಿಸಿ 3.0-ಲೀಟರ್ ವಿ6 ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ ಆಯ್ಕೆ ಕೂಡಾ ಲಭ್ಯವಿರಲಿದ್ದು, ಮೂರು ಬಾಗಿಲು ಮತ್ತು ಐದು ಬಾಗಿಲು ಆಯ್ಕೆಯೊಂದಿಗೆ ಹೊಸ ಕಾರು ಮಾರುಕಟ್ಟೆಗೆ ಬರಲಿದೆ.

ಆಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ನೆಕ್ಸ್ಟ್ ಜನರೇಷನ್ ಜೀಪ್ ರ‍್ಯಾಂಗ್ಲರ್

ಹೊಸ ಕಾರುಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಲಿರುವ ಹೊಸ ಜೀಪ್ ರ‍್ಯಾಂಗ್ಲರ್‌ ಕಾರು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.55 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.65 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

Source:overdrive

Most Read Articles

Kannada
Read more on ಜೀಪ್ jeep
English summary
According to a media report, Jeep is likely to launch the Wrangler Rubicon in the third quarter of this year. The report also claims that the vehicle could be badged as the Moab in India.
Story first published: Saturday, July 13, 2019, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X