ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಕಿಯಾ ಮೋಟಾರ್ಸ್ ಸಂಸ್ಥೆಯು ಇದೇ ತಿಂಗಳ 22ರಂದು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ ವಾಹನವನ್ನಾಗಿ ಸೆಲ್ಟೋಸ್ ಎಸ್‍ಯುವಿ ಕಾರನ್ನು ಬಿಡಗಡೆ ಮಾಡಲಿದ್ದು, ಈ ಕಾರಿನ ನಂತರ ಕಾರ್ನಿವಲ್ ಎಂಬ ಐಷಾರಾಮಿ ಎಂಪಿವಿ ಕಾರನ್ನು ಟೊಯೊಟಾ ಇನೊವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಬಿಡುಗಡೆ ಮಾಡಲಿದೆ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಟೊಯೊಟಾ ಇನೋವಾ ಕ್ರಿಸ್ಟಾ ಪ್ರತಿಸ್ಪರ್ಧಿಯಾಗಿ ದೇಶಿಯ ಮಾರುಕಟ್ಟೆ ಪ್ರವೇಶಿಸಲಿರುವ ಈ ಕಾರು 2020ರ ಫೆಬ್ರುವರಿಯಲ್ಲಿ ನಡೆಸಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಮಾರಾಟಕ್ಕೆ ಲಭ್ಯವಾಗಲಿದೆ. ಬಿಡುಗಡೆಗು ಮುನ್ನ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಸಮಯದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಈ ಕುರಿತಾದ ಚಿತ್ರಗಳು ಇಲ್ಲಿದೆ ನೋಡಿ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಮಾರುಕಟ್ಟೆಯಲ್ಲಿ ಟೊಯೊಟಾ ಕ್ರಿಸ್ಟಾ ಕಾರುಗಳುಗೆ ಪೈಪೋಟಿ ನೀಡಲಿರುವ ಕಿಯಾ ಕಾರ್ನಿವಲ್ ಎಂಪಿವಿ ಕಾರು, ಪ್ರೀಮಿಯಂ ಉಪಕರಣಗಳನ್ನು ಪಡೆಯಲಿದ್ದು, ಕ್ರಿಸ್ಟಾ ಗಿಂತಲೂ ಅಧಿಕವಾದ ವೈಶಿಷ್ಟ್ಯತೆಗಳನ್ನು ಪಡೆಯಲಿದ್ದು, ಗಾತ್ರವನ್ನು ಸಹ ಹೆಚ್ಚಿನದಾಗಿ ಪಡೆಯಲಿದೆ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಕಿಯಾ ನಿರ್ಮಾಣದ ಕಾರ್ನಿವಲ್ ಕೂಡಾ ಪ್ರತಿಹಂತದಲ್ಲೂ ಇನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವಂತಹ ಫೀಚರ್ಸ್‌ಗಳನ್ನು ಹೊಂದಿರುವುದಲ್ಲದೇ ಬೆಲೆ ವಿಚಾರವಾಗಿಯು ಗಮನಸೆಳೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಕಾರು ಆನ್‌ರೋಡ್ ಬೆಲೆ ಪ್ರಕಾರ ಆರಂಭಿಕವಾಗಿ ರೂ. 18.84 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.29.71 ಲಕ್ಷ ಬೆಲೆ ಹೊಂದಿದೆ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಕಿಯಾ ಕಾರ್ನಿವಲ್ ಕೂಡಾ ಹಲವು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾಗೆ ಪ್ರತಿ ಸ್ಪರ್ಧಿಯಾಗಿ ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ. 15 ಲಕ್ಷ ಆರಂಭಿಕವಾಗಿ ಮತ್ತು ರೂ. 25 ಲಕ್ಷ ಟಾಪ್ ಎಂಡ್ ಬೆಲೆಯನ್ನು ಪಡೆದುಕೊಳ್ಳುವ ನೀರಿಕ್ಷೆಯಿದೆ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಕಾರಿನ ಗಾತ್ರ

ಕಿಯಾ ಕಾರ್ನಿವಲ್ 7 ಸೀಟರ್, 8 ಸೀಟರ್ ಮತ್ತು 11 ಸೀಟರ್ ಮಾದರಿಯಲ್ಲಿ ಬಿಡುಗಡೆಯಾಗಬಹುದಾಗಿದ್ದು, ಟೊಯೊಟಾ ಇನೊವಾ ಕ್ರಿಸ್ಟಾ ಕಾರಿಗಿಂತಲೂ 380ಎಂಎಂ ಉದ್ದ, 155ಎಂಎಂ ಅಗಲ ಮತ್ತು ಕ್ಯಾಬಿಕ್‍ನ ಒಳಭಾಗದಲ್ಲಿಯು ಸಹ ವಿಸ್ತರಿಸಲಾಗಿದೆ. ಒಟ್ಟಾರೆಯಾಗಿ ಕಿಯಾ ಕಾರ್ನಿವಲ್ ಕಾರು 5,115 ಎಂಎಂ ಉದ್ದ, 1,985ಎಂಎಂ ಅಗಲ, 1,740ಎಂಎಂ ಎತ್ತರವಾದ ವಿನ್ಯಾಸವನ್ನು ಹೊಂದಿದ್ದು, 3060ಎಂಎಂನ ವ್ಹೀಲ್ ಬೇಸ್ ಅನ್ನು ಸಹ ಹೊಂದಿದೆ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಕಿಯಾ ಕಾರ್ನಿವಲ್ ಕಾರು ಫ್ರಂಟ್ ವ್ಹೀಲ್ ಡ್ರೈವ್ ಪ್ಲಾಟ್‍‍ಫಾರ್ಮ್‍ನಲ್ಲಿ ನಿರ್ಮಾಣವಾಗಿರಲಿದ್ದು, ಇನೋವಾ ಕ್ರಿಸ್ಟಾ ಕಾರು ರಿಯರ್ ವ್ಹೀಲ್ ಡ್ರೈವ್, ಲ್ಯಾಡರ್ ಫ್ರೆಮ್‍ನಿಂದ ನಿರ್ಮಾಣವಾಗಿದೆ. ಆದುದಾರಿಂದ ಕಾರ್ನಿವಲ್ ಕಾರಿನಲ್ಲಿ ಮೂರನೆಯ ಸಾಲಿನ ಸೀಟ್‍‍ಗಳಲ್ಲಿ ಆರಾಮದಾಯಕವಾಗಿ ಸಂಚರಿಸಬಹುದಾಗಿದ್ದು, ಕಾರಿನೊಳಗೆ ಏರಲು ಕೂಡಾ ಅಷ್ಟೆ ಸುಲಭವಾಗುತ್ತೆ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಕೇವಲ ಬಟನ್ ಪುಶ್ ಮಾಡಿ ಡೋರ್ ಎಳೆದುಕೊಳ್ಳಬಹುದಾದ ವ್ಯವಸ್ಥೆಯಿದ್ದು, ಇದರ ಜೊತೆಗೆ ಡ್ಯುಯಲ್ ಸನ್‌ರೂಫ್, ತ್ರಿ ಜೋನ್ ಏರ್ ಕಂಡಿಷನ್ ಸಿಸ್ಟಂ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯವನ್ನು ಪಡೆದಿರುವುದು ಎಂಪಿವಿ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದೆ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ವೈಶಿಷ್ಟ್ಯತೆಗಳು

ಕಿಯಾ ಕಾರ್ನಿವಲ್ ಎಂಪಿವಿ ಕಾರಿನಲ್ಲಿ ಕಿಯಾ ಸಂಸ್ಥೆಯ ಯುವಿಒ ಕನೆಕ್ಟ್ ಇನ್-ಕಾರ್ ಕನೆಕ್ಟಿವಿಟಿ ಸ್ಯೂಟ್, ದೊಡ್ಡ ಗಾತ್ರದ ಇನ್ಫೋಟೈನ್ಮೆಂಟ್ ಸಿಸ್ಟಂ, ಎರಡು ಸನ್‍ರೂಫ್, ಮೆಮೊರಿ ಫಂಕ್ಷನ್ ಒಳಗೊಂಡ ಎಲೆಕ್ಟ್ರಿಕ್ ಸಹಾಯದಿಂದ ಅಡ್ಜಸ್ಟ್ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, 3 ಜೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಇನ್ನಿತರೆ ಸೇಫ್ಟಿ ಕಿಟ್‍ಗಳನ್ನು ಪಡೆಯಲಿದೆ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಎಂಜಿನ್ ಸಾಮರ್ಥ್ಯ

ಕಿಯಾ ಕಾರ್ನಿವಲ್ ಎಂಪಿವಿ ಕಾರು ದೇಶಿಯ ಮಾರುಕಟ್ಟೆಯಲ್ಲಿ 2.2 ಲೀಟರ್ 4ಸಿಲೆಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದ್ದು, ಈ ಎಂಜಿನ್ 202ಬಿಹೆಚ್‍ಪಿ ಮತ್ತು 441ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗಯೆ ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಕಿಯಾ ನಿರ್ಮಾಣದ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 8-ಸೀಟರ್ ಮತ್ತು 11 ಸೀಟರ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಯಾವ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.

ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಾ ಕಿಯಾ ಕಾರ್ನಿವಲ್.?

ಈ ಕಾರನ್ನು ದೇಶಿಯವಾಗಿ ಭಾಗಶಃ ಜೋಡಿಸಲಾಗುವುದಾಗಿದ್ದು, ಎಂಜಿನ್ ಅನ್ನು ಮಾತ್ರ ಫುಲ್ಲಿ ಬ್ಯುಲ್ಟ್ ಯೂನಿಟ್ ಆಗಿ ಆಮದು ಮಾಡಿಕೊಳ್ಳಲಾಗುವುದು. ಈ ರೀತಿಯಾದ ವ್ಯವಹಾರ ನಡೆದಿದ್ದೆ ಆದಲ್ಲಿ ಕಾರಿನ ಬೆಲೆಯು ದುಬಾರಿಯಾಗಿರಲಿದ್ದು, ಸುಮಾರು 25-26 ಲಕ್ಷದ ಬೆಲೆಯನ್ನು ಪಡೆದಿರಲಿದೆ ಎಂದು ಅಂದಾಜಿಸಲಾಗುತ್ತಿದೆ.

Source: Zigwheels

More from DriveSpark

Article Published On: Monday, August 5, 2019, 17:37 [IST]
English summary
Kia Carnival MPV Spied Testing In India Ahead Of Launch. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+