ಅದ್ಭುತ ಫಿಚರ್ಸ್‌ಗಳೊಂದಿಗೆ ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿ ಅನಾವರಣ
ಕಿಯಾ ಮೋಟಾರ್ಸ್ ಯುಎಸ್ ದೇಶದಲ್ಲಿ ತನ್ನ 2025ರ ಕಿಯಾ ಸೆಲ್ಟೋಸ್ (Kia Seltos) ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‍ಯುವಿ ಹೊಸ ಮಾದರಿಯ ವರ್ಷಕ್ಕೆ ಸೂಕ್ಷ್ಮವಾದ ನವೀಕರಣಗಳೊಂದಿಗೆ ಆಗಮಿಸುತ್ತದೆ. 2025ಕ್ಕೆ ಟ್ವೀಕ್ ಮಾಡಲಾದ ವೈಶಿಷ್ಟ್ಯಗಳ ಪಟ್ಟಿಯನ್ನು ಮತ್ತು ರೂಪಾಂತರದ ಶ್ರೇಣಿಯಾದ್ಯಂತ ಇತರ ಪರಿಷ್ಕರಣೆಗಳನ್ನು ಪಡೆಯುತ್ತದೆ. 2025ರ ಕಿಯಾ ಸೆಲ್ಟೋಸ್‌ನ ಹೆಚ್ಚಿನ ನವೀಕರಣಗಳು EX ಮತ್ತು ಟಾಪ್-ಎಂಡ್ SX ಟ್ರಿಮ್‌ಗಳಲ್ಲಿ ಕಂಡುಬರುತ್ತವೆ ಮತ್ತು ಈ ಎರಡೂ ಆವೃತ್ತಿಗಳು ರಿವರ್ಸ್‌ನಲ್ಲಿ ಪಾರ್ಕಿಂಗ್ ಡಿಸ್ಟೆಂಸ್ ವಾರ್ನಿಂಗ್ ಮತ್ತು ಸ್ಮಾರ್ಟ್ ಪವರ್ ಲಿಫ್ಟ್‌ಗೇಟ್ ಅನ್ನು ಪಡೆಯುತ್ತವೆ.
ಕಿಯಾ ಹೊಸ ಮಿಡ್-ಸ್ಪೆಕ್ 2025ರ ಸೆಲ್ಟೋಸ್ ಇಎಕ್ಸ್ ಟ್ರಿಮ್ ಅನ್ನು ಸನ್‌ರೂಫ್‌ನೊಂದಿಗೆ ಪರಿಚಯಿಸಿದೆ, ಅದು ಮೊದಲು ಲಭ್ಯವಿರಲಿಲ್ಲ ಮತ್ತು ಹೆಚ್ಚು ಮೌಲ್ಯಯುತವಾಗಿದೆ. ಕಂಪನಿಯು ಲೋ ರೂಪಾಂತರಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಕೈಬಿಟ್ಟಿದೆ, ವಿಶೇಷವಾಗಿ S ಟ್ರಿಮ್ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್‌ನಲ್ಲಿ ಸಣ್ಣ 4.25-ಇಂಚಿನ ಯುನಿಟ್ ಕಾಣೆಯಾಗಿದೆ.

ಇನ್ಸ್ಟ್ರುಮೆಂಟ್ ಕನ್ಸೋಲ್ ಡೌನ್‌ಗ್ರೇಡ್ ಆಗಿರಬಹುದು, ಡ್ರೈವರ್ ಸೈಡ್ ಪವರ್ ವಿಂಡೋ ಸ್ವಿಚ್‌ಗಾಗಿ ಆಟೋಮೇಕರ್ ಆಟೋ ಅಪ್/ಡೌನ್ ಕಾರ್ಯವನ್ನು ಸೇರಿಸಿದೆ, ಇದು ಅಚ್ಚುಕಟ್ಟಾಗಿ ಸೇರ್ಪಡೆಯಾಗಿದೆ. ಕಿಯಾ ಸೆಲ್ಟೋಸ್ ಎಸ್ ಯುಎಸ್ ನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. 2025ರ ಕಿಯಾ ಸೆಲ್ಟೋಸ್‌ನಲ್ಲಿನ ಇತರ ಬದಲಾವಣೆಗಳು ಕ್ಯಾಬಿನ್‌ನಾದ್ಯಂತ ನಡೆಸಿದೆ.
ಈ ಹೊಸ ಕಿಯಾ ಎಸ್‍ಯುವಿಯ ಕ್ಯಾಬಿನ್‌ನ ಒಟ್ಟಾರೆ ಫಿನಿಶಿಂಗ್ ಕೂಡ ಸುಧಾರಿಸಿದೆ. ಯುಎಸ್-ಸ್ಪೆಕ್ ಕಿಯಾ ಸೆಲ್ಟೋಸ್‌ನಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 146 bhp ಮತ್ತು 179 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ CVT ಆಟೋಮ್ಯಾಟಿಕ್ ಜೋಡಿಸಲಾಗಿದೆ.

ಈ ಮಾದರಿಯು 9.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು 1.6-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 195 bhp ಪವರ್ ಮತ್ತು 264 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 8-ಸ್ಪೀಡ್ ಆಟೋಮ್ಯಾಟಿಕ್ ಜೊತೆ ಜೋಡಿಸಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಇಂಡಿಯಾ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಕಾರು ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಭರ್ಜರಿಯಾಗಿ ಮಾರಾಟವಾಗಿ ಭಾರೀ ಸಂಚಲನವನ್ನು ಮೂಡಿಸಿತ್ತು. ಈ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍ಯುವಿ ಸೊಗಸಾದ ವಿನ್ಯಾಸ, ವೈಶಿಷ್ಟ್ಯ-ಪ್ಯಾಕ್ಡ್ ಇಂಟಿರಿಯರ್ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ.

ಈ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ಎಸ್‍ಯುವಿ ಬೇಡಿಕೆ ಹೆಚ್ಚಾದಂತೆ, ವಿಭಿನ್ನ ರೂಪಾಂತರಗಳಿಗಾಗಿ ಕಾಯುವ ಅವಧಿಯನ್ನು ವಾಹನ ತಯಾರಕರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಈ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








