ಮತ್ತೆ ಅಖಾಡಕ್ಕೆ ಕಿಯಾ ಮದಗಜದ ಎಂಟ್ರಿ: ಈ ದೈತ್ಯ ಕಾರು ಬಂದರೆ, ಸಾಮಾನ್ಯರಿಗೂ ಲಕ್ಷುರಿ ಪಕ್ಕಾ!

ಭಾರತದಲ್ಲಿ ಎಂಪಿವಿ ಕಾರುಗಳಿಗೆ ತನ್ನದೇ ಆದ ಸ್ಥಾನಮಾನವಿದೆ. ಸದ್ಯಕ್ಕೆ ಭಾರತದಲ್ಲಿ ಎಂಪಿವಿ ಸೆಗ್ಮೆಂಟ್ ಅನ್ನು ಆಳುತ್ತಿರುವುದು ಟೊಯೊಟಾ ಇನ್ನೋವಾ ಎಂಬುದು ಎಲ್ಲರಿಗೂ ತಿಳಿದಿದೆ. ಈ ಸಗ್ಮೆಂಟ್‌ನಲ್ಲಿ ಇನ್ನೋವಾಗೆ ಸ್ಪರ್ಧೆಯನ್ನು ಒಡ್ಡಲು ಮಾರುತಿ ಸುಜುಕಿ ಎರ್ಟಿಗಾವನ್ನು ಲಾಂಚ್ ಮಾಡಿತ್ತಾದರೂ, ಅಷ್ಟಾಗಿ ಯಶಸ್ಸು ಕಂಡಿಲ್ಲವೆನ್ನಬಹುದು.

ಆದರೆ ಎಂಪಿವಿ ಸೆಗ್ಮೆಂಟ್‌ನಲ್ಲಿ ಇನ್ನೋವಾ ಕಾರನ್ನೂ ಮೀರಿಸುವಂತಹ, ನಿರೀಕ್ಷೆಯೂ ಮಾಡದ ರೀತಿಯಲ್ಲಿ ಸದ್ಯಕ್ಕೆ ಸ್ಪರ್ಧೆಯನ್ನು ಒಡ್ಡಿದ್ದು ಮಾತ್ರ ದಕ್ಷಿಣ ಕೊರಿಯಾದ ಪ್ರಖ್ಯಾತ ಕಾರು ನಿರ್ಮಾಣ ಕಂಪನಿಯಾದ ಕಿಯಾ. ಹೌದು ಕಿಯಾದ ಎಂಪಿವಿಯಾದ ಕಾರ್ನಿವಲ್‌ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಕಂಡಿದೆ. ಆದರೆ ಕಾರಣಾಂತರಗಳಿಂದ ಈ ಕಾರಿನ ಮಾರಾಟ ಭಾರತದಲ್ಲಿ ಸ್ಥಗಿತಗೊಳಿಸಲಾಗಿತ್ತು.

Kia Carnival Facelift Spied Without Camouflage In India

ನಿಮಗೆಲ್ಲಾ ತಿಳಿದಿರುವಂತೆ ಕಿಯಾ ಕಂಪನಿಯು ಕಾರ್ನಿವಲ್‌ (Kia Carnival Facelift) ಕಾರು ಮಾದರಿಯ ಫೇಸ್‌ಲಿಫ್ಟ್‌ ಅನ್ನು ಅಭಿವೃದ್ದಿಪಡಿಸುತ್ತಿದ್ದು ಈಗಾಗಲೇ ಈ ಸುದ್ದಿ ಎಲ್ಲೆಡೆಯೂ ಹರಿದಾಡಿದೆ. ಆದರೆ ಇದೇ ಮೊದಲ ಬಾರಿಗೆ ಕ್ಯಾಮೋ ಫ್ಲಾಗ್‌ ಇಲ್ಲದೆ ಭಾರತೀಯ ಹೆದ್ದಾರಿಗಳಲ್ಲಿ ಕಿಯಾ ಈ ಕಾರ್ನಿವಲ್‌ ಪರೀಕ್ಷಾರ್ಥ ಚಾಲನೆಯನ್ನು ನಡೆಸುತ್ತಿದ್ದು ಇದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.

ಹೊಸ ಕಿಯಾ ಕಾರ್ನಿವಲ್‌ ಅನ್ನು 2023 ಆಟೋ ಎಕ್ಸ್‌ಪೋದಲ್ಲಿ ಕೆಎ೪ ಕಾರಿನ ಮಾದರಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದರು. ಇದೀಗ ಈ ಕಾರಿನ ಸ್ಪೈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಡಿಸೈನ್‌ನಲ್ಲಿ ಸಂಪೂರ್ಣ ಬದಲಾವಣೆಯನ್ನು ಕಾಣಬಹುದಾಗಿದೆ. ಮಾಹಿತಿಗಳ ಪ್ರಕಾರ ಈ ವರ್ಷವೇ ಕಾರ್ನಿವಲ್‌ ಅನ್ನು ಲಾಂಚ್ ಮಾಡಲಿದೆ ಎಂದು ತಿಳಿದು ಬಂದಿದೆ.

Kia Carnival Facelift Spied Without Camouflage In India

ಇದಕ್ಕಿಂತಲೂ ಮುಂಚೆ ಕಿಯಾ ಕಂಪನಿಯು ಕಾರೆನ್ಸ್‌ ಫೇಸ್‌ಲಿಫ್ಟ್‌ ಅನ್ನು ಸಹ ಲಾಂಚ್‌ ಮಾಡಲಿದೆ. ಸದ್ಯಕ್ಕೆ ಕಾರೆನ್ಸ್ ಕಾರು ಮಾದರಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿದ್ದ ಕಿಯಾ ಕಾರ್ನಿವಲ್‌ ಬಗ್ಗೆ ನೊಡುವುದಾದರೆ, ಭಾರತದಲ್ಲಿ ಕಿಯಾ ಕಾರ್ನಿವಲ್ ರೂ.30.99 ಲಕ್ಷದಿಂದ ರೂ.35.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿತ್ತು ಹಾಗೂ ಏಳು ಆಸನ ವ್ಯವಸ್ಥೆಯಲ್ಲಿ ಮೂರು ರೂಪಾಂತರದಲ್ಲಿ ಸಿಗುತ್ತಿತ್ತು. ಇದರ 2.2 ಲೀಟರ್ ಡೀಸೆಲ್ ಎಂಜಿನ್, 200 PS ಗರಿಷ್ಠ ಪವರ್ ಹಾಗೂ 440 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಹೈಲೈಟ್.

Kia Carnival Facelift Spied Without Camouflage In India

ಕಿಯಾ ಕಾರ್ನಿವಲ್ ಎಂಪಿವಿ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದ್ದು, 3 ಜೋನ್ ಕ್ಲೇಮೇಟ್ ಕಂಟ್ರೋಲ್, ಡುಯೆಲ್ ಪ್ಯಾನಲ್ ಸನ್‌ರೂಫ್, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಿಡಲ್ ರೋ ಆಕ್ಯುಪೆಟ್ಸ್ ಗಾಗಿ 10.1-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಇದಿಷ್ಟೇ ಅಲ್ಲದೆ, 540 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 23, 2024, 18:19 [IST]
English summary
Kia carnival facelift spied without camouflage in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+