ಬಹಿರಂಗವಾಯ್ತು ಕಿಯಾ ಮೋಟಾರ್ಸ್ ಡೀಲರ್‍ಗಳ ಪಟ್ಟಿ
ಬಹುನಿರೀಕ್ಷತ ಕಿಯಾ ಕಂಪನಿಯ ಸೆಲ್ಟೋಸ್ ಎಸ್‍ಯುವಿಯನ್ನು ಆಗಸ್ಟ್22 ರಂದು ಬಿಡುಗಡೆಗೊಳಿಸಲಾಗುತ್ತಿದ್ದು, ಕೊರಿಯಾ ಮೂಲದ ಕಂಪನಿಯು ದೇಶಾದ್ಯಂತ ತನ್ನ ಡೀಲರ್‍ಶಿಪ್‍ಗಳನ್ನು ಆರಂಭಿಸುವ ಕಾರ್ಯದಲ್ಲಿ ನಿರತವಾಗಿದೆ. ಕಂಪನಿಯು ತನ್ನ ವಾಹನದ ಡೀಲರ್‍ಶಿಪ್‍ಗಳ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಕಾರ್ ನ್ಯೂಸ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್‌ವೊಂದು ಕಿಯಾ ಅಧಿಕೃತ ಡೀಲರ್‌ಗಳ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಿದೆ.

ಈ ವೀಡಿಯೊದಿಂದ ದೇಶದಲ್ಲಿರುವ ಕಿಯಾ ಡೀಲರ್‍ಗಳ ಬಗ್ಗೆ ಮಾಹಿತಿ ದೊರೆತಿದೆ. ದೊಡ್ಡ ನಗರಗಳು ನಿರೀಕ್ಷೆಯಂತೆ ಹೆಚ್ಚು ಡೀಲರ್‍ಗಳನ್ನು ಹೊಂದಿವೆ. ಕಿಯಾ ಡೀಲರ್‍ಗಳ ಪೂರ್ಣ ಪಟ್ಟಿಯನ್ನು ಕಿಯಾ ಮೋಟಾರ್ಸ್ ಅತಿ ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಿದೆ. ಕಿಯಾ ಡೀಲರ್ಸ್ ಬಗ್ಗೆಗಿನ ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

ದೆಹಲಿ: ಮೋತಿ ನಗರ, ಸಫ್‍ದರ್‍ಜಂಗ್, ಪಹರಗಂಜ್ ಹಾಗೂ ಪೀರಘರಿ
ಪುಣೆ: ಹಡಪ್ಸರ್, ಸತಾರಾ ರಸ್ತೆ, ವನೆಸಾ ನಗರ ಹಾಗೂ ಟಿಕಲ್ ರಸ್ತೆ
ಮುಂಬೈ: ವರ್ಲಿ, ಪೊವಾಯ್, ಅಂಧೇರಿ ಹಾಗೂ ಮಲಾಡ್
ಬೆಂಗಳೂರು: ವೈಟ್‌ಫೀಲ್ಡ್, ಜೆಪಿ ನಗರ, ಸರ್ಜಾಪುರ ಹಾಗೂ ಲಾಲ್‌ಬಾಗ್ ಮುಖ್ಯ ರಸ್ತೆ.

ಇದರ ಹೊರತಾಗಿ ಕಿಯಾ ಕಂಪನಿಯು ಗುರುಗ್ರಾಮ್, ಚೆನ್ನೈ, ಕೇರಳ, ರಾಜಸ್ಥಾನ, ಪಂಜಾಬ್, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಡೀಲರ್‍ಶಿಪ್‍ಗಳನ್ನು ಸ್ಥಾಪಿಸಿದೆ. ಹೊಸ ಕಿಯಾ ಸೆಲ್ಟೋಸ್ ಅನ್ನು ಒಟ್ಟು ಎಂಟು ಮಾದರಿಗಳಲ್ಲಿ, ಮೂರು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಲಾಗುವುದು. 1.5 ಲೀಟರ್‍ನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.4 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಬ ಎರಡು ಪೆಟ್ರೋಲ್ ಮಾದರಿಗಳಲ್ಲಿ ಹಾಗೂ 1.5 ಲೀಟರ್‍ನ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‍ಗಳಲ್ಲಿ ಮಾರಾಟ ಮಾಡಲಾಗುವುದು.

ಮೂರು ಎಂಜಿನ್‍ಗಳಲ್ಲಿ ಆರು ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗುವುದು. ಇವುಗಳ ಜೊತೆಗೆ ಮೂರು ವಿಭಿನ್ನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ಗಳಿರಲಿವೆ. ಡೀಸೆಲ್ ಎಂಜಿನ್‍ನಲ್ಲಿ 6 ಸ್ಪೀಡ್‍ನ ಟಾರ್ಕ್ ಅಳವಡಿಸಲಾಗುತ್ತದೆ. ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೊಲ್ ಎಂಜಿನ್ ಸಿವಿಟಿಯನ್ನು ಹೊಂದಿರಲಿದೆ. 1.4 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 7 ಸ್ಪೀಡ್‍ನ ಡಿಸಿಟಿ ಗೇರ್ ಬಾಕ್ಸ್ ಹೊಂದಿರಲಿದೆ.

ಹೊಸ ಕಿಯಾ ಸೆಲ್ಟೋಸ್ ಎಸ್‌ಯುವಿಯ ಇಂಟಿರಿಯರ್‍ನಲ್ಲಿ ಹಲವಾರು ಫೀಚರ್‍ಗಳಿರಲಿವೆ. ಈ ಸೆಗ್‍ಮೆಂಟಿನಲ್ಲಿ ಮೊದಲ ಬಾರಿಗೆ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ಹಾಗೂ 8 ಇಂಚಿನ ಹೆಡ್ಸ್-ಅಪ್ ಡಿಸ್‍ಪ್ಲೇಗಳಿರಲಿವೆ. ಈ ಎಸ್‌ಯುವಿಯಲ್ಲಿ 10.25 ಇಂಚಿನ ಫ್ಲೋಟಿಂಗ್ ಟೈಪ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಇರಲಿದೆ. ಈ ಸ್ಕ್ರೀನ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‍ಪ್ಲೇಗಳಿಗೆ ಹೊಂದಾಣಿಕೆಯಾಗಲಿದೆ. ಕಿಯಾ ಸೆಲ್ಟೋಸ್ ಎಸ್‍ಯುವಿಯಲ್ಲಿ ಅಳವಡಿಸಲಾಗಿರುವ 360 ಡಿಗ್ರಿ ಕ್ಯಾಮೆರಾ ಡಿಸ್‍ಪ್ಲೇ 10.25 ಇಂಚಿನ ಸ್ಕ್ರೀನ್‍ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಕಾರಿನ ಮುಂಭಾಗದಲ್ಲಿ ವೆಂಟೆಡ್ ಸೀಟುಗಳು ಹಾಗೂ 10 ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟುಗಳಿವೆ. ಬಿಡುಗಡೆಯಾದ ನಂತರ, ಹೊಸ ಕಿಯಾ ಸೆಲ್ಟೋಸ್ ಎಸ್‌ಯುವಿಯು ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಚರ್ ಹಾಗೂ ಈ ಸೆಗ್‍ಮೆಂಟಿನಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕ್ರೆಟಾಗಳಿಗೆ ಪೈಪೋಟಿ ನೀಡಲಿದೆ. ಕಿಯಾ ಮೋಟಾರ್ಸ್ ಬಿಡುಗಡೆಯ ಸಮಯದಲ್ಲಿ ಬೆಲೆಗಳನ್ನು ಬಹಿರಂಗಪಡಿಸಲಿದೆ. ಆದರೆ ಕಾರಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರಗಳಂತೆ ರೂ.12ಲಕ್ಷದಿಂದ 15 ಲಕ್ಷಗಳವರೆಗೆ ಇರುವ ಸಾಧ್ಯತೆಗಳಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕಿಯಾ ಮೋಟಾರ್ಸ್ ತನ್ನ ಎಸ್‍ಯುವಿಯನ್ನು ದೊಡ್ಡ ರೀತಿಯಲ್ಲಿ ಬಿಡುಗಡೆಗೊಳಿಸಲು ಬಯಸಿದೆ. ಇದಕ್ಕಿರುವ ಉತ್ತಮ ಮಾರ್ಗವೆಂದರೆ ವಾಹನದ ಬೆಲೆಯನ್ನು ಕೈಗೆಟುಕುವ ದರದಲ್ಲಿ ನಿಗದಿಪಡಿಸುವುದು ಹಾಗೂ ಅದನ್ನು ಸಾಧ್ಯವಾದಷ್ಟು ಜನರಿಗೆ ತಲುಪುವಂತೆ ಮಾಡುವುದು. ಕಿಯಾ ತನ್ನ ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ಮುನ್ನವೇ ಡೀಲರ್‍ಶಿಪ್‍ಗಳನ್ನು ತೆರೆದು ಜನರಿಗೆ ಹತ್ತಿರವಾಗಲು ಬಯಸುತ್ತಿದೆ. ಆಲ್ ದಿ ಬೆಸ್ಟ್ ಕಿಯಾ ಮೋಟಾರ್ಸ್.


Click it and Unblock the Notifications