Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೆಲ್ಟೊಸ್ ನಂತರ 7 ಸೀಟರ್ ಎಂಪಿವಿ ಬಿಡುಗಡೆ ಮಾಡಲಿದೆ ಕಿಯಾ ಮೋಟಾರ್ಸ್
ಕಿಯಾ ಮೋಟಾರ್ಸ್ ಸಂಸ್ಥೆಯು ನಿನ್ನೆಯಷ್ಟೇ ತನ್ನ ಮೊದಲ ಕಾರು ಮಾದರಿಯಾದ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸುವ ಮೂಲಕ ಮುಂದಿನ ಅಗಸ್ಟ್ ಆರಂಭದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇದೇ ವೇಳೆ ಸೆಲ್ಟೊಸ್ ಬಿಡುಗಡೆಯ ನಂತರ ಮುಂದಿನ ಕಾರು ಯಾವುದು ಎನ್ನುವ ಬಗ್ಗೆ ಸುಳಿವು ನೀಡಿದೆ.

ಭಾರೀ ನೀರಿಕ್ಷೆಯೊಂದಿಗೆ ಭಾರತೀಯ ಆಟೋ ಉದ್ಯಮಕ್ಕೆ ಕಾಲಿಟ್ಟಿರುವ ಕಿಯಾ ಸಂಸ್ಥೆಯು ದೇಶದ ಟಾಪ್ 3 ಕಾರು ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕೈಗೆಟುಕುವ ಬೆಲೆಯ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಹೀಗಾಗಿ ಭಾರತದಲ್ಲಿ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಕಿಯಾ ಸಂಸ್ಥೆಯು ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದೆ.

2018ರ ಫೆಬ್ರುವರಿಯಲ್ಲಿ ಮೊದಲ ಬಾರಿಗೆ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗುವ ಮೂಲಕ ಕಾರು ಮಾರಾಟವನ್ನು ಅಧಿಕೃತ ಘೋಷಣೆ ಮಾಡಿದ್ದ ಕಿಯಾ ಸಂಸ್ಥೆಯು ಇದೀಗ ತನ್ನ ಮೊದಲ ಕಾರು ಮಾದರಿಯಾಗಿ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುತ್ತಿದೆ.

ಅಗಸ್ಟ್ ಆರಂಭದಲ್ಲಿ ಸೆಲ್ಟೊಸ್ ಬಿಡುಗಡೆಯ ನಂತರ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರುಗಳ ಬಿಡುಗಡೆ ಮೇಲೆ ಒತ್ತು ನೀಡಲಿರುವ ಕಿಯಾ ಸಂಸ್ಥೆಯು ರೂ.9 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ 7 ಸೀಟರ್ ಮಾದರಿಯೊಂದನ್ನು ಬಿಡುಗಡೆ ಮಾಡಲಿದೆಯೆಂತೆ.

ಈ ಕುರಿತಂತೆ ಸೆಲ್ಟೊಸ್ ಕಾರು ಅನಾವರಣದಲ್ಲಿ ಭಾಗಿಯಾಗಿದ್ದ ಕಿಯಾ ಗ್ಲೋಬಲ್ ಹೆಡ್ ಹಾನ್ ವೂ ಪಾರ್ಕ್ ಅವರು ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದು, ಸೆಲ್ಟೊಸ್ ನಂತರ ಭಾರತದಲ್ಲಿ ಒಂದು ಹೊಸ ಎಂಪಿವಿ ಮಾದರಿ ಬಿಡುಗಡೆಯ ಯೋಜನೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಕಿಯಾ ಬಿಡುಗಡೆ ಮಾಡಲಿರುವ ಮಧ್ಯಮ ಗಾತ್ರದ ಎಂಪಿವಿ ಮಾದರಿಯು ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರಿಗೆ ಭರ್ಜರಿ ಪೈಪೋಟಿ ನೀಡವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಿಯಾ ಈಗಾಗಲೇ ಸೆಲ್ಟೊಸ್ ಜೊತೆಗೆ ಹೊಸ ಎಂಪಿವಿ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು, ಮಾಹಿತಿಗಳ ಪ್ರಕಾರ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಕೆರನ್ಸ್ ಎಂಪಿವಿ ಡಿಸೈನ್ ಪ್ರೇರಣೆಯೊಂದಿಗೆ ಹೊಸ ಎಂಪಿವಿ ಬಿಡುಗಡೆಗೊಳಿಸಲಿದೆ.

ಕಿಯಾ ಹೊಸ ಎಂಪಿವಿ ಕಾರು 4,600-ಎಂಎಂ ಉದ್ದ ಹೊಂದಿರಲಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ ಎರ್ಟಿಗಾಗಿಂತಲೂ 200-ಎಂಎಂ ಹೆಚ್ಚು ಉದ್ದವಾಗಿರುವುದಲ್ಲದೇ ಮಹೀಂದ್ರಾ ಮರಾಜೋಗಿಂತ 15-ಎಂಎಂ ಹೆಚ್ಚುವರಿ ಉದ್ದವಿರಲಿದೆ.

ಇನ್ನು ಕೆಲವು ಮಾಹಿತಿಗಳ ಪ್ರಕಾರ, ಕಿಯಾ ಸಂಸ್ಥೆಯು ಸದ್ಯ ಅನಾವರಣಗೊಳಿಸಲಾಗಿರುವ 5 ಸೀಟರ್ ಸೆಲ್ಟೊಸ್ ಕಾರು ಮಾದರಯಲ್ಲೇ ಹೊಸ ವಿನ್ಯಾಸದ 7 ಸೀಟರ್ ಕಾರನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದ್ದು, ಸೆಲ್ಟೊಸ್ ಬಿಡುಗಡೆಯ ನಂತರವಷ್ಟೇ ಹೊಸ ಕಾರಿನ ಬಗೆಗೆ ಮತ್ತಷ್ಟು ಮಾಹಿತಿ ತಿಳಿಯಲಿದೆ.

ಹಾಗೆಯೇ ಕಿಯಾ ಸಂಸ್ಥೆಯು 9 ಸೀಟರ್ ಮಾದರಿಯ ಕಾರ್ನಿವಾಲ್ ಎಂಪಿವಿ ಮಾದರಿಯನ್ನು ಸಹ ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗಿಂತಲೂ ದುಬಾರಿಯಾಗಿರುವ ಕಾರಣ ಮಧ್ಯಮ ಗಾತ್ರದ ಎಂಪಿವಿಗೆ ಬಿಡುಗಡೆಗೆ ಎದುರು ನೋಡುತ್ತಿದೆ.

ಇದಲ್ಲದೇ ಕಿಯಾ ಸಂಸ್ಥೆಯು ಸೆಲ್ಟೊಸ್ ಬಿಡುಗಡೆಯ ನಂತರ ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರು ಆವೃತ್ತಿಗಳನ್ನು ಮುಂದಿನ 2 ವರ್ಷಗಳ ಅವಧಿಯಲ್ಲಿ ಬಿಡುಗಡೆ ಮಾಡಲಿದ್ದು, ಇದರಲ್ಲಿ 2 ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಂಡಿದೆ.

ಇದಕ್ಕಾಗಿಯೇ ಬರೋಬ್ಬರಿ 7 ಸಾವಿರ ಕೋಟಿ ಬಂಡವಾಳದೊಂದಿಗೆ ಆಂಧ್ರಪ್ರದೇಶದಲ್ಲಿ ಹೊಸ ಕಾರು ಉತ್ಪಾದನಾ ಘಟಕವನ್ನು ತೆರೆದಿದ್ದು, ಇಲ್ಲಿ ವಾರ್ಷಿಕವಾಗಿ 3 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಮಾಡುವ ಗುರಿಹೊಂದಿದೆ.
Source: AutoCar India