ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಕಿಯಾ ತನ್ನ ಮೊದಲ ವಾಹನವನ್ನು ಆಗಸ್ಟ್ 22ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಸೆಲ್ಟೋಸ್ ಎಂದು ಕರೆಯಲ್ಪಡುವ ಕಾಂಪ್ಯಾಕ್ಟ್ ಎಸ್‌ಯುವಿ ಕಿಯಾ ಕಂಪನಿಯ ಹೊಸ ವಾಹನವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಾರಾಟವಾಗಲಿದೆ. ಸೆಲ್ಟೋಸ್‌ನಲ್ಲಿನ ಪ್ಲಾಟ್‌ಫಾರ್ಮ್ ಹಾಗೂ ಎಂಜಿನ್ ಆಯ್ಕೆಗಳನ್ನು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾದೊಂದಿಗೆ ಹಂಚಿಕೊಳ್ಳಲಿದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಇದು ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಕಂಪನಿಯ ಮೊದಲ ಕಾರ್ ಆಗಿರುವ ಕಾರಣ ಸೆಲ್ಟೋಸ್ ಕಾರಿನಲ್ಲಿ ಅನೇಕ ಫೀಚರ್‍‍ಗಳನ್ನು ಹಾಗೂ ಈ ಸೆಗ್‍‍ಮೆಂಟಿನಲ್ಲಿಯೇ ಅತ್ಯುತ್ತಮವಾದ ಸ್ಪೆಸಿಫಿಕೇಷನ್‍‍ಗಳನ್ನು ಅಳವಡಿಸಲಾಗುವುದು ಎಂದು ಕಂಪನಿಯು ತಿಳಿಸಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಕಾರಿಗೆ ಹ್ಯುಂಡೈ ಕ್ರೆಟಾ ಹಾಗೂ ಟಾಟಾ ಹ್ಯಾರಿಯರ್ ಕಾರುಗಳು ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ. ಕಿಯಾ ಸೆಲ್ಟೋಸ್ ಹೊಂದಿರುವ, ಕ್ರೆಟಾ ಹಾಗೂ ಟಾಟಾ ಹ್ಯಾರಿಯರ್ ಹೊಂದಿಲ್ಲದೇ ಇರುವ 15 ವೈಶಿಷ್ಟ್ಯಗಳ ಬಗ್ಗೆ ನೋಡೋಣ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಏರ್ ಪ್ಯೂರಿಫೈಯರ್

ಕಿಯಾ ಸೆಲ್ಟೋಸ್ ದೇಶಿಯ ಮಾರುಕಟ್ಟೆಯಲ್ಲಿ ಏರ್ ಫಿಲ್ಟರ್‌ ಹೊಂದಿರುವ ಮೊದಲ ಕಾರ್ ಅಲ್ಲ. ಹ್ಯುಂಡೈ ವೆನ್ಯೂ ಈ ಫೀಚರ್ ಹೊಂದಿದ ಮೊದಲ ಕಾರ್ ಆಗಿದೆ. ಆದರೆ ಈ ಸೆಗ್‍‍ಮೆಂಟಿನಲ್ಲಿ ಈ ಫೀಚರ್ ಹೊಂದಿದ ಮೊದಲ ಎಸ್‍‍ಯುವಿಯಾಗಿದೆ. ಹೆಸರೇ ಹೇಳುವಂತೆ ಏರ್ ಫಿಲ್ಟರ್, ಕ್ಯಾಬಿನ್ ಒಳಗಿನ ಗಾಳಿಯನ್ನು ಶುದ್ಧೀಕರಿಸುತ್ತದೆ. ಈ ಫೀಚರ್‍‍ನಿಂದ ಹೆಚ್ಚು ಕಲುಷಿತವಾಗಿರುವ ಮೆಟ್ರೋ ನಗರಗಳಲ್ಲಿ ಅನುಕೂಲವಾಗಲಿದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

10.25-ಇಂಚಿನ ಇನ್ಫೋಟೈನ್ಮೆಂಟ್

ಹ್ಯಾರಿಯರ್ 8.8-ಇಂಚಿನ ಟಚ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ. ಈ ಸೆಗ್‍‍ಮೆಂಟಿನಲ್ಲಿ ಇದೊಂದು ಮೈಲಿಗಲ್ಲಾಗಿದೆ. ಆದರೆ ಕಿಯಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೆಲ್ಟೋಸ್‌ಗೆ 10.25 ಇಂಚಿನ ದೊಡ್ಡ ಗಾತ್ರದ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹೊಂದಿದೆ. ಕ್ರೆಟಾ ಅಥವಾ ಹ್ಯಾರಿಯರ್ ಇಷ್ಟು ದೊಡ್ಡದಾದ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿಲ್ಲ. ಈ ಸೆಗ್‍‍ಮೆಂಟಿನಲ್ಲಿ ಎಂಜಿ ಹೆಕ್ಟರ್ ವಾಹನವು ಮಾತ್ರ ಸೆಲ್ಟೋಸ್‌ಗಿಂತ ದೊಡ್ಡದಾದ 10.4 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಸ್ಮಾರ್ಟ್ ಕಾರ್ ಫೀಚರ್ಸ್ (ಯುವಿಎ)

ಭಾರತದಲ್ಲಿ ಬಿಡುಗಡೆಯಾದ ಕಾರುಗಳೆಲ್ಲವೂ ಒಂದು ಟನ್ ಟೆಕ್ ಗಿಮಿಕ್ರಿಗಳನ್ನು ಹೊಂದಿದ್ದವು. ಎಂಜಿ ಹೆಕ್ಟರ್ ಹಾಗೂ ಹ್ಯುಂಡೈನ ವೆನ್ಯೂ ಇವುಗಳಿಗೆ ಒಂದು ಪ್ರಮುಖ ಉದಾಹರಣೆ. ಇವೆರಡೂ ಕಾರುಗಳಲ್ಲಿ ಸ್ಮಾರ್ಟ್ ಕನೆಕ್ಟಿವಿಟಿ ಫೀಚರ್‍‍ಗಳೊಂದಿಗೆ ಇಂಟರ್ನೆಟ್ ಸಪೋರ್ಟ್ ಹಾಗೂ ಧ್ವನಿ ಗುರುತಿಸುವಿಕೆಯಂತಹ ಫೀಚರ್‍‍ಗಳನ್ನು ಹೊಂದಿದ್ದವು. ಕಿಯಾ ಸೆಲ್ಟೋಸ್ ಸಹ ಈ ಸಾಲಿಗೆ ಸೇರಿದೆ. ಎಂ2ಎಂ ಚಿಪ್‌ ಹೊಂದಿದ್ದು, ಈ ಚಿಪ್ ಇಂಟರ್ನೆಟ್‌ಗೆ ಸಂಪರ್ಕ ನೀಡುತ್ತದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಇದರ ಇನ್ಫೋಟೈನ್‌ಮೆಂಟ್ ಸಿಸ್ಟಂ ಯುವಿಒ ಸಂಪರ್ಕವನ್ನು ಹೊಂದಿದ್ದು, ಅಡ್ವಾನ್ಸ್ಡ್ ಕನೆಕ್ಟೆಡ್ ಕಾರ್ ಟೆಕ್ನಾಲಜಿಯು ಸುರಕ್ಷತಾ ಫೀಚರ್‍‍ಗಳನ್ನು ನೀಡುತ್ತದೆ. ಯುವಿಒ ಸಂಪರ್ಕವು ನ್ಯಾವಿಗೇಷನ್, ಸೇಫ್ಟಿ ಹಾಗೂ ಸೆಕ್ಯೂರಿಟಿ, ವೆಹಿಕಲ್ ಮ್ಯಾನೇಜ್‍‍ಮೆಂಟ್, ರಿಮೋಟ್ ಕಂಟ್ರೋಲ್ ಮತ್ತು ಕನ್ವಿನಿಯನ್ಸ್ ಎಂಬ ಐದು ವಿಭಿನ್ನ ವಿಭಾಗಗಳ ಅಡಿಯಲ್ಲಿ 37 ಸ್ಮಾರ್ಟ್ ಫೀಚರ್‍‍ಗಳನ್ನು ಹೊಂದಿದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಫಾಗ್‌ಲ್ಯಾಂಪ್‌ಗಳು

ಈಗ ನಾವು ಎಲ್ಇಡಿ ಡಿಆರ್‍ಎಲ್‍‍ಗಳನ್ನು, ಟೇಲ್ ಲ್ಯಾಂಪ್‍‍ಗಳನ್ನು ಹಾಗೂ ಫಾಗ್ ಲ್ಯಾಂಪ್‍‍ಗಳನ್ನು ಕಾಣುತ್ತಿದ್ದೇವೆ. ಆದರೆ ಪೂರ್ಣ ಪ್ರಮಾಣದ ಎಲ್ಇಡಿ ಹೆಡ್‍‍ಲೈಟ್ ಅನ್ನು ಸೆಲ್ಟೋಸ್ ವಾಹನದಲ್ಲಿ ಈ ಸೆಗ್‍‍‍ಮೆಂಟಿನಲ್ಲಿ ಮೊದಲನೆಯ ಬಾರಿಗೆ ಅಳವಡಿಸಲಾಗಿದೆ. ಈ ಎಸ್‍‍ಯು‍‍ವಿಯ ಎರಡೂ ಬದಿಯಲ್ಲಿ ಟೈಗರ್ ನೋಸ್ ಗ್ರಿಲ್‍‍ಗಳು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸ್ಟೈಲಿಶ್ ಆದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತವೆ. ಫಾಗ್‌ಲ್ಯಾಂಪ್‌ ಹಾಗೂ ಟೇಲ್‍‍ಲೈಟ್‌ಗಳು ಪೂರ್ಣ ಪ್ರಮಾಣದ ಎಲ್ಇಡಿ ಯೂನಿಟ್‍‍ಗಳಾಗಿವೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಸ್ಮಾರ್ಟ್ ಹೆಚ್‍‍‍ಯು‍‍ಡಿ

ಹೆಡ್ಸ್-ಅಪ್ ಡಿಸ್ಪ್ಲೇ‍‍ಗಳು ಹೊಸ ತಂತ್ರಜ್ಞಾನವಲ್ಲ. ಹೈ-ಎಂಡ್ ಕಾರುಗಳಲ್ಲಿ ಈ ಫೀಚರ್‍‍ಗಳನ್ನು ಮುಂಚಿನಿಂದಲೂ ಅಳವಡಿಸಲಾಗುತ್ತಿದೆ. ಆದರೆ ಕಿಯಾ ಸೆಲ್ಟೋಸ್ ಈ ಸೆಗ್‍‍ಮೆಂಟಿನಲ್ಲಿ ಈ ಡಿಸ್‍‍ಪ್ಲೇ ಹೊಂದಿರುವ ಮೊದಲ ಕಾರು ಎಂಬ ಹೆಗ್ಗಳಿಕೆ ಹೊಂದಲಿದೆ. ಕಿಯಾ ಈ ಫೀಚರ್‍‍ಗೆ ಸ್ಮಾರ್ಟ್ 8.0 ಸಿಸ್ಟಂ ಎಂಬ ಹೆಸರಿಟ್ಟಿದೆ. 8.0 ಎನ್ನುವುದು ಈ ಫೀಚರ್‍‍‍ನ ಗಾತ್ರವಲ್ಲ. ಹೆಚ್‍‍ಯು‍‍ಡಿ ಫೀಚರ್ ಕಾರಿನ ಬಗೆಗಿನ ಮಾಹಿತಿಗಳನ್ನು ವಿಂಡ್‌ಸ್ಕ್ರೀನ್‌ನ ಮುಂಭಾಗದಲ್ಲಿ ತೋರಿಸುತ್ತದೆ. ಇದರಿಂದಾಗಿ ಚಾಲಕನು ಕಾರು ಚಾಲನೆಯಲ್ಲಿರುವಾಗಲೇ ಕಾರಿನ ಎಲ್ಲಾ ಅಂಕಿಅಂಶಗಳನ್ನು ತಿಳಿದುಕೊಳ್ಳಬಹುದು.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಎಲ್ಲಾ ವ್ಹೀಲ್‍‍ಗಳಲ್ಲಿಯೂ ಡಿಸ್ಕ್ ಬ್ರೇಕ್

ಹ್ಯುಂಡೈ ಕ್ರೆಟಾ ಹಾಗೂ ಟಾಟಾ ಹ್ಯಾರಿಯರ್ ವಾಹನಗಳಲ್ಲಿ ಮುಂಭಾಗದ ಎರಡೂ ವ್ಹೀಲ್‍‍ಗಳಲ್ಲಿ ಡಿಸ್ಕ್ ಬ್ರೇಕ್‌ಗಳಿವೆ. ಈ ಫೀಚರ್ ಆ ವಾಹನಗಳ ಟಾಪ್ ಎಂಡ್ ಮಾದರಿಗಳಲ್ಲೂ ಇವೆ. ಆದರೆ ಕಿಯಾ ಸೆಲ್ಟೋಸ್‍‍ನ ನಾಲ್ಕು ವ್ಹೀಲ್‍‍ಗಳಲ್ಲಿ ಡಿಸ್ಕ್ ಬ್ರೇಕ್‌ಗಳಿದ್ದು, ಎಸ್‍‍ಯುವಿಯನ್ನು ನಿಯಂತ್ರಿಸಲು ಸಹಕಾರಿಯಾಗಿವೆ. ಸೆಲ್ಟೋಸ್‍‍ನಲ್ಲಿರುವ ಎಲ್ಲಾ ನಾಲ್ಕು ಡಿಸ್ಕ್ ವೆಂಟಿಲೇಟೆಡ್ ಆಗಿದ್ದು, ಗರಿಷ್ಠ ಪ್ರಮಾಣದ ಬ್ರೇಕಿಂಗ್ ಖಚಿತಪಡಿಸುತ್ತವೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಹಿಂಭಾಗದಲ್ಲಿ ಒರಗುವ ಆಸನಗಳು

ಸೆಲ್ಟೋಸ್‍‍ನಲ್ಲಿರುವ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ, ಕಿಯಾ ಸೆಲ್ಟೋಸ್ ಕಾರಿನಲ್ಲಿರುವ ಹಿಂಬದಿಯ ಸೀಟನ್ನು ಆಸನವನ್ನು ಸ್ವಲ್ಪ ಮಟ್ಟಿಗೆ ಒರಗುವಂತೆ ಮಾಡುತ್ತದೆ. ಸೆಲ್ಟೋಸ್‍‍ನಲ್ಲಿ ಎರಡು ಹಂತದ ಹಿಂಭಾಗದ ಒರಗುವ ಆಸನಗಳಿದ್ದು ಪ್ರಯಾಣಿಕರು ಅದನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು. ಹ್ಯುಂಡೈ ಕ್ರೆಟಾ ಹಾಗೂ ಟಾಟಾ ಹ್ಯಾರಿಯರ್ ವಾಹನಗಳಲ್ಲಿ ಈ ಫೀಚರ್‍‍ಗಳನ್ನು ಅಳವಡಿಸಲಾಗಿಲ್ಲ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಆಂಬಿಯೆಂಟ್ ಮೂಡ್ ಲೈಟಿಂಗ್

ಕಿಯಾ ಸೆಲ್ಟೋಸ್‍‍ನಲ್ಲಿರುವ ಹಲವಾರು ಫೀಚರ್‍‍ಗಳಲ್ಲಿ ಆಂಬಿಯೆಂಟ್ ಮೂಡ್ ಲೈಟಿಂಗ್‌ ಸಹ ಒಂದು. ಇದನ್ನು ವಿವಿಧ ಬಣ್ಣಗಳಿಗೆ ಬದಲಾಯಿಸಬಹುದು. ಮುಂಭಾಗದ ಬಾಗಿಲಿನ ಸ್ಪೀಕರ್‌ಗಳ ಸುತ್ತ ಹಾಗೂ ಇತರ ಜಾಗಗಳ ನಡುವೆ ಹ್ಯಾಂಡ್ ಗ್ಲೌಸ್ ಬಾಕ್ಸ್ ಮೇಲಿರುವಂತಹ ಜಾಗಗಳಲ್ಲಿ ಇದನ್ನು ಅಳವಡಿಸಲಾಗಿದೆ. ಆಂಬಿಯೆಂಟ್ ಲೈಟಿಂಗ್ ಕ್ಯಾಬಿನ್‌ಗೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಈ ಸೆಗ್‍‍ಮೆಂಟಿನಲ್ಲಿ ಇತ್ತೀಚಿಗೆ ಬಿಡುಗಡೆಯಾದ ಎಂಜಿ ಹೆಕ್ಟರ್ ಮಾತ್ರ ಈ ಫೀಚರ್ ಹೊಂದಿದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಟರ್ಬೊ ಪೆಟ್ರೋಲ್ ಎಂಜಿನ್

ಕಿಯಾ ಸೆಲ್ಟೋಸ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ದೊರೆಯಲಿದ್ದು, ಇದರಲ್ಲಿ ಎರಡು ಪೆಟ್ರೋಲ್ ಎಂಜಿನ್ ಹಾಗೂ ಒಂದು ಡೀಸೆಲ್ ಎಂಜಿನ್ ಸೇರಿವೆ. ಇವುಗಳ ಪೈಕಿ 1.4ಲೀಟರ್‍‍ನ ಟರ್ಬೊ ಪೆಟ್ರೋಲ್ ಎಂಜಿನ್ ಅತ್ಯಂತ ಬಲಶಾಲಿಯಾದ ಆಯ್ಕೆಯಾಗಿದೆ. ಈ ಎಂಜಿನ್ 140 ಬಿಎಚ್‌ಪಿ ಹಾಗೂ 244 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ6 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಹಾಗೂ 7 ಸ್ಪೀಡಿನ ಡಿಸಿಟಿ ಅಳವಡಿಸಲಾಗಿದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

360 ಡಿಗ್ರಿ ಕ್ಯಾಮೆರಾ

ಹ್ಯುಂಡೈ ಕ್ರೆಟಾ ಹಾಗೂ ಟಾಟಾ ಹ್ಯಾರಿಯರ್ ವಾಹನಗಳಲ್ಲಿ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ನೀಡಲಾಗಿದೆ. ಆದರೆ ಅವುಗಳು 360 ಡಿಗ್ರಿ ಕ್ಯಾಮೆರಾ ಫೀಚರ್ ಹೊಂದಿಲ್ಲ. ಈ ಫೀಚರ್‍‍ನಿಂದ ಕಾರನ್ನು ಎಲ್ಲಾ ಭಾಗಗಳಿಂದ ನೋಡಬಹುದಾಗಿದ್ದು, ಕೆಲವು ಸಣ್ಣ ಜಾಗಗಳಲ್ಲಿ ವಾಹನ ನಿಲುಗಡೆ ಮಾಡಲು ಅನುಕೂಲವಾಗಲಿದೆ. ಸೆಲ್ಟೋಸ್‌ನಲ್ಲಿ ದೊಡ್ಡ ಗಾತ್ರದ 10.25 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅಳವಡಿಸಲಾಗಿದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಟಿಪಿಎಂಎಸ್

ಟಿಪಿಎಂಎಸ್ ಅಥವಾ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನಿಂದಾಗಿ ಇನ್ಸ್ ಟ್ರೂಮೆಂಟ್ ಕನ್ಸೋಲ್‌ನಲ್ಲಿರುವ ಎಂಐಡಿ ಪರದೆಯ ಮೂಲಕ ಪ್ರತಿ ಟೈರ್‌ನಲ್ಲಿನ ಗಾಳಿಯ ಒತ್ತಡದ ಬಗ್ಗೆ ತಿಳಿಯಬಹುದು. ದೆ. ಮಹೀಂದ್ರಾ ಎಕ್ಸ್‌ಯುವಿ 500 ಸಹ ಈ ಫೀಚರ್ ಅನ್ನು ಹೊಂದಿದೆ. ಆದರೆ ಟಾಟಾ ಹ್ಯಾರಿಯರ್ ಹಾಗೂ ಹ್ಯುಂಡೈ ಕ್ರೆಟಾ ಈ ಫೀಚರ್ ಅನ್ನು ಹೊಂದಿಲ್ಲ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಯುವಿ ಕಟ್ ಗ್ಲಾಸ್

ಹೆಸರೇ ಸೂಚಿಸುವಂತೆ ಯುವಿ ಕಟ್ ಗ್ಲಾಸ್, ವಿಶೇಷ ರೀತಿಯ ವಿಂಡೋ ಗ್ಲಾಸ್‍‍ಗಳಾಗಿವೆ. ಇವುಗಳು ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ ಬಣ್ಣದ ಗ್ಲಾಸುಗಳಾಗಿವೆ. ಇವುಗಳು ಭಾರತೀಯ ಮೋಟಾರು ವಾಹನ ಕಾನೂನುಗಳನ್ನು ಪಾಲಿಸುತ್ತವೆ. ಮಾರುತಿ ಸುಜುಕಿ ಬಲೆನೊ ಹಾಗೂ ಹಿಂದಿನ ತಲೆಮಾರಿನ ಕ್ರೆಟಾದಂತಹ ಬಜೆಟ್ ಸೆಗ್‍‍ಮೆಂಟಿನ ಕೆಲವು ಕಾರುಗಳಲ್ಲಿ ಈ ಫೀಚರ್‍ಅನ್ನು ಅಳವಡಿಸಲಾಗಿತ್ತು. ಕಿಯಾ ಸೆಲ್ಟೋಸ್ ಈ ಸೆಗ್‍‍ಮೆಂಟಿನಲ್ಲಿ ಈ ರೀತಿಯ ಫೀಚರ್ ಹೊಂದಿರುವ ಏಕೈಕ ಕಾರ್ ಆಗಲಿದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಬ್ಲೈಂಡ್‌ಸ್ಪಾಟ್ ಮಾನಿಟರಿಂಗ್

ಸೆಲ್ಟೋಸ್ ಕಾರ್ ಅನ್ನು ಸುರಕ್ಷಿತ ಕಾರನ್ನಾಗಿ ಮಾಡುವ ಬಗ್ಗೆ ಕಿಯಾ ಸಂಪೂರ್ಣ ಗಮನ ಹರಿಸಿದೆ. ಅದಕ್ಕಾಗಿ ಕಾರಿನಲ್ಲಿ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ಅಳವಡಿಸಿದೆ. ಈ ಸಿಸ್ಟಂ ಲೇನ್ ಬದಲಾವಣೆ ವೇಳೆಯಲ್ಲಿ ಹಾಗೂ ಹಠಾತ್ ತಿರುವುಗಳ ಸಮಯದಲ್ಲಿ ಅಪಘಾತಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಡೆಡಿಕೇಟೆಡ್ ಸೆನ್ಸಾರ್‍‍ಗಳ ಸಹಾಯದಿಂದ ಚಾಲಕನಿಗೆ ನೆರವಾಗಲಿದೆ. ಚಾಲಕನ ಕುರುಡುತನವನ್ನು ಗ್ರಹಿಸಿ, ಎಚ್ಚರಿಕೆ ಬೆಳಕು ಅಥವಾ ಬೀಪ್ ಶಬ್ದದ ಮೂಲಕ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

ಫ್ರಂಟ್ ಪಾರ್ಕಿಂಗ್ ಸೆನ್ಸಾರ್‍‍ಗಳು

ಹೊಸ ಸುರಕ್ಷತಾ ನಿಯಮಗಳ ಪ್ರಕಾರ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಮುಂಭಾಗದ ಪಾರ್ಕಿಂಗ್ ಸೆನ್ಸಾರ್‍‍‍ಗಳನ್ನು ಹೆಚ್ಚಿನ ಕಾರುಗಳಲ್ಲಿ ಅಳವಡಿಸಲಾಗಿಲ್ಲ. ಕಿಯಾ ಸೆಲ್ಟೋಸ್ ಕಾರಿನಲ್ಲಿ ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಅನ್ನು ಅಳವಡಿಸಿದೆ. ಟಾಟಾ ಹ್ಯಾರಿಯರ್ ಹಾಗೂ ಹ್ಯುಂಡೈ ಕ್ರೆಟಾಗಳು ಈ ಫೀಚರ್ ಹೊಂದಿಲ್ಲ.

ಕಿಯಾ ಸೆಲ್ಟೋಸ್‍ ಹೊಂದಿರುವ 15 ವಿಭಿನ್ನ ಫೀಚರ್‍‍ಗಳಿವು

3 ವಿಧದ ಎಟಿ

ಕಿಯಾ ಸೆಲ್ಟೋಸ್‍‍ನಲ್ಲಿ ಒಟ್ಟು 4 ಬಗೆಯ ಟ್ರಾನ್ಸ್ ಮಿಷನ್ ಆಯ್ಕೆಗಳಿರಲಿವೆ. 6 ಸ್ಪೀಡ್ ಮ್ಯಾನುವಲ್‍‍ನ ಒಂದು ಆಯ್ಕೆ ಇದ್ದರೆ, ಆಟೊಮ್ಯಾಟಿಕ್‍‍ನ ಮೂರು ಆಯ್ಕೆಗಳಿರಲಿವೆ. 7 ಸ್ಪೀಡ್‍‍ನ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ (ಡಿಸಿಟಿ) ಆಟೋಮ್ಯಾಟಿಕ್, ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್ ಮಿಷನ್ ಹಾಗೂ ಟಾರ್ಕ್ ಕನ್ವರ್ಟರ್ ಟ್ರಾನ್ಸ್ ಮಿಷನ್‍‍ಗಳಿರಲಿವೆ. ಕಿಯಾ 3 ಎಂಜಿನ್ ಹಾಗೂ 4 ಟ್ರಾನ್ಸ್ ಮಿಷನ್‍‍ಗಳೊಂದಿಗೆ ಅನೇಕ ಸರಣಿಯ ಮಾದರಿಗಳನ್ನು ನೀಡುವ ನಿರೀಕ್ಷೆಗಳಿವೆ. ದೇಶಿಯ ಮಾರುಕಟ್ಟೆಯಲ್ಲಿ ಮೂರು ವಿಭಿನ್ನ ರೀತಿಯ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಪಡೆದ ಮೊದಲ ಕಾರು ಇದಾಗಿದೆ.

Most Read Articles

Kannada
English summary
15 features the Kia Seltos has that the Hyundai Creta & Tata Harrier don’t - Read in kannada
Story first published: Sunday, July 7, 2019, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more