ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಸಂಚಲನ ಮೂಡಿಸಿರುವ ಕಿಯಾ ಮೋಟಾರ್ಸ್ ನಿರ್ಮಾಣದ ಸೆಲ್ಟೊಸ್ ಕಾರು ಮುಂದಿನ ತಿಂಗಳು 22ಕ್ಕೆ ಬಿಡುಗಡೆಯಾಗುತ್ತಿದ್ದು, ಹೊಸ ಖರೀದಿಗಾಗಿ ಈಗಾಗಲೇ 15 ಸಾವಿರಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಕಾರು ಖರೀದಿ ಪ್ರಕ್ರಿಯೆ ಜೋರಾಗಿದ್ದು, ಕಿಯಾ ಸಂಸ್ಥೆಯ ಅಧಿಕೃತ ಡೀಲರ್ಸ್‌ಗಳಲ್ಲಿ ಸೆಲ್ಟೊಸ್ ಕಾರುಗಳನ್ನು ಆಸಕ್ತ ಗ್ರಾಹಕರಿಗೆ ಟೆಸ್ಟ್ ಡ್ರೈವ್ ಕಲ್ಪಿಸಲಾಗುತ್ತಿದೆ.

ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಇನ್ನು ಡೀಸೆಲ್ ಮತ್ತು ಪೆಟ್ರೋಲ್ ಎರಡೂ ಎಂಜಿನ್‌ ಮಾದರಿಗಳಲ್ಲೂ ಖರೀದಿ ಲಭ್ಯವಿರುವ ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ 5 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 3 ವೆರಿಯೆಂಟ್‌ಗಳಿರಲಿವೆ. ಪೆಟ್ರೋಲ್‌ನಲ್ಲಿ ಜಿಟಿಕೆ, ಜಿಟಿಎಕ್ಸ್ ಮತ್ತು ಜಿಟಿಕೆ ಪ್ಲಸ್ ವೆರಿಯೆಂಟ್‌ ಖರೀದಿಗೆ ಲಭ್ಯವಿದ್ದಲ್ಲಿ ಡೀಸೆಲ್‌ನಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳನ್ನು ಖರೀದಿಸಬಹುದಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಸೆಲ್ಟೊಸ್ ಕಾರು ಬಿಎಸ್-6 ಪ್ರೇರಿತ 1.5-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಹೊಂದಿರಲಿದ್ದು, ಇದರೊಂದಿಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಒದಗಿಸಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಇದರಲ್ಲಿ ಸಾಮಾನ್ಯ ಕಾರುಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದ್ದರೆ ಟರ್ಬೋ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಸ್ಮಾರ್ಟ್ ಸ್ಟ್ರೀಮ್ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಇನ್ನು ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಹಾಗೆಯೇ ಸೆಲ್ಟೊಸ್ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಇದರೊಂದಿಗೆ ಕಾರಿನ ಲುಕ್ ಹೆಚ್ಚಿಸಲು ಅಲ್ಲಲ್ಲಿ ಬ್ರಿಡ್ಜ್ ಕ್ರೋಮ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಮತ್ತು ಡ್ಯುಯಲ್ ಸನ್‌ರೂಫ್ ಕೂಡಾ ಹೊಸ ಕಾರಿನ ಖದರ್ ಹೆಚ್ಚಿಸಿದೆ. ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಪ್ಯಾಕೇಜ್ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಸುರಕ್ಷಾ ಸೌಲಭ್ಯಗಳು

ಶೇ.73ರಷ್ಟು ಅತ್ಯುತ್ತಮ ಸ್ಟೀಲ್ ಪಡೆದುಕೊಂಡಿರುವ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಕಾರಿನ ಉದ್ದಳತೆ

ಕ್ರೆಟಾ ಕಾರಿಗಿಂತಲೂ 45-ಎಂಎಂ ಹೆಚ್ಚುವರಿ ಉದ್ದ ಪಡೆದಿರುವ ಸೆಲ್ಟೊಸ್ ಕಾರು 4,315-ಎಂಎಂ ಉದ್ದ, 1,800-ಎಂಎಂ ಅಗಲ, 2,610-ಎಂಎಂ ವೀಲ್ಹ್‌ಬೆಸ್, 1,620-ಎಂಎಂ ಎತ್ತರ ಮತ್ತು 190-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಬೂಟ್ ಸ್ಪೆಸ್ ಸಾಮರ್ಥ್ಯವು ಕೂಡಾ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಕಾರಿನ ಬೆಲೆಗಳು(ಅಂದಾಜು)

ಆಕರ್ಷಕ ಬೆಲೆಗಳಲ್ಲಿ ಸೆಲ್ಟೊಸ್ ಕಾರು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿರುವ ಕಿಯಾ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಯನ್ನು ರೂ. 15 ಲಕ್ಷಕ್ಕೆ ನಿಗದಿ ಮಾಡಬಹುದೆಂದು ಅಂದಾಜಿಸಲಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಸೆಲ್ಟೊಸ್- ಆಸಕ್ತ ಗ್ರಾಹಕರನ್ನು ಟೆಸ್ಟ್ ಡ್ರೈವ್‌ಗೆ ಆಹ್ವಾನಿಸಿದ ಕಿಯಾ..!

ಒಟ್ಟಿನಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯುತ್ತಮ ಮಾದರಿಯಾಗಲಿರುವ ಕಿಯಾ ಸೆಲ್ಟೊಸ್ ಕಾರು ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಗೂ ಈ ಕಾರು ಉತ್ತಮ ಪೈಪೋಟಿಯಾಗುವ ನೀರಿಕ್ಷೆಯಲ್ಲಿದೆ.

Image Source: Team BHP

Most Read Articles

Kannada
English summary
Kia Seltos Display units reaches dealerships nation wide before launch. Read in Kannada.
Story first published: Thursday, July 25, 2019, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X