ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಕಾರಿನಲ್ಲೇ ಇಂಟರ್‌ನೆಟ್ ಸೌಲಭ್ಯ ಹೊಂದಿರುವ ಮೊದಲ ಮಧ್ಯಮ ಗಾತ್ರದ ಎಸ್‌ಯುವಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಎಂಜಿ ಹೆಕ್ಟರ್‌ಗೆ ಪೈಪೋಟಿಯಾಗಿ ಕಿಯಾ ಮೋಟಾರ್ಸ್ ಕೂಡಾ ವೋಡಾಫೋನ್ ಸಂಸ್ಥೆಯ ಇ-ಸಿಮ್ ಮೂಲಕ ಸೆಲ್ಟೊಸ್ ಕಾರಿನಲ್ಲಿ ಇನ್‌ಬಿಲ್ಟ್ ಇಂಟರ್‌ನೆಟ್ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.

ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಇನ್‍‌ಬಿಲ್ಟ್ ಇಂಟರ್‌ನೆಟ್ ಸೌಲಭ್ಯದ ಮೂಲಕ ಕಾರು ಸರ್ವಿಸ್ ಸೌಲಭ್ಯಗಳನ್ನು ಮತ್ತಷ್ಟು ಸುಲಭವಾಗಿಸಲು ವೋಡಾಫೋನ್ ‌ಜೊತೆಗೂಡಿರುವ ಕಿಯಾ ಸಂಸ್ಥೆಯು ಹ್ಯುಂಡೈ ಸಂಸ್ಥೆಯ ಬ್ಲ್ಯೂ ಲಿಂಕ್ ಪ್ಯಾಕೇಜ್ ಮಾದರಿಯಲ್ಲಿ ಇ-ಸಿಮ್ ಜೋಡಣೆ ಮಾಡಲು ಸಿದ್ದವಾಗಿದ್ದು, ಇದು ಕಾರು ಮಾಲೀಕರಿಗೆ ಒಂದೇ ಸೂರಿನಡಿ ಹಲವು ಸೇವೆ ಸೌಲಭ್ಯಗಳನ್ನು ನೀಡಲಿದೆ. ಜೊತೆಗೆ ಕಾರು ಸುರಕ್ಷತೆಗೂ ಇದು ಹೆಚ್ಚು ಸಹಕಾರಿಯಾಗಲಿದ್ದು, ನ್ಯಾವಿಗೆಷನ್, ವೆಹಿಕಲ್ ಟ್ರ್ಯಾಕಿಂಗ್, ಥೆಪ್ಟ್ ಅಲರ್ಟ್ ಸೇರಿದಂತೆ ವಿವಿಧ ಮಾದರಿಯ ಸುಧಾರಿತ ಮಾಹಿತಿ ತಂತ್ರಜ್ಞಾನವು ಈ ಪ್ಯಾಕೇಜ್‌ನಲ್ಲಿದೆ.

ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಇಂತದ್ದೆ ಸೌಲಭ್ಯ ಇದೀಗ ಎಂಜಿ ಹೆಕ್ಟರ್ ಜನಪ್ರಿಯತೆಗೆ ಕಾರಣವಾಗಿದ್ದು, ಕಿಯಾ ಕೂಡಾ ತನ್ನ ಸೆಲ್ಟೊಸ್ ಕಾರು ಮಾಲೀಕರಿಗೆ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಜೊತೆಗೆ ಕಾರಿನ ಸುರಕ್ಷತೆಗೂ ಸಹಕಾರಿಯಾಗುವಂತೆ ವೋಡಾಫೋನ್ ಜೊತೆಗೂಡಿ ಇ-ಸಿಮ್ ಸೌಲಭ್ಯವನ್ನು ಜೋಡಣೆ ಮಾಡಲು ಸಿದ್ದತೆ ನಡೆಸಿದೆ.

ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಇನ್ನು ಕಳೆದ ಅಗಸ್ಟ್ 22ರಂದು ಬಿಡುಗಡೆಗೊಂಡಿರುವ ಸೆಲ್ಟೊಸ್ ಕಾರು ಮೊದಲ ತಿಂಗಳಿನಲ್ಲೇ 6 ಸಾವಿರ ಯುನಿಟ್ ಮಾರಾಟ ದಾಖಲೆ ಮಾಡುವ ಮೂಲಕ ಸೆಪ್ಟೆಂಬರ್ ಅವಧಿಯಲ್ಲೂ ಒಟ್ಟು 7,750 ಕಾರುಗಳ ಮಾರಾಟದೊಂದಿಗೆ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಆಕರ್ಷಕ ಬೆಲೆ, ಸುಧಾರಿತ ತಂತ್ರಜ್ಞಾನ ಬಳಕೆಯಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಕಿಯಾ ಸೆಲ್ಟೊಸ್ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 16.99 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ. ಪ್ರತಿ ಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಂತಲೂ ಹೆಚ್ಚಿನ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದು, ಆಕರ್ಷಕ ಬೆಲೆಗಳೊಂದಿಗೆ ಎಸ್‌ಯುವಿ ಪ್ರಿಯರ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 6 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 9 ವೆರಿಯೆಂಟ್‌ಗಳನ್ನು ಹೊಂದಿದ್ದು, ಟೆಕ್ ಲೈನ್‌ನಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಮತ್ತು ಜಿಟಿ ಲೈನ್‌ನಲ್ಲಿ ಜಿಟಿಕೆ, ಜಿಟಿಎಕ್ಸ್ ಮತ್ತು ಜಿಟಿಕೆ ಪ್ಲಸ್, ಜಿಟಿಕೆ ಪ್ಲಸ್ ಎಎಂಟಿ ವೆರಿಯೆಂಟ್‌ಗಳಲ್ಲಿ ಲಭ್ಯವಿವೆ. ಟೆಕ್ ಲೈನ್‌ ಕಾರು ಮಾದರಿಗಳು ಸಾಮಾನ್ಯ ಚಾಲನಾ ತಂತ್ರಜ್ಞಾನ ಹೊಂದಿದ್ದರೆ ಜಿಟಿ ಲೈನ್‌ ಕಾರುಗಳು ಸಾಮಾನ್ಯ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ವೈಶಿಷ್ಟ್ಯತೆ ಹೊಂದಿವೆ.

ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಜಿಟಿಎಕ್ಸ್ ಪ್ಲಸ್ ಎಎಂಟಿ ವರ್ಷನ್ ಮಾದರಿಯು ಬಿಎಸ್-6 ನಿಯಮ ಅನುಸಾರ ಅಭಿವೃದ್ಧಿಗೊಂಡಿರುವ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ, ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ. ಜಿಟಿ ಲೈನ್ ಹೊರತುಪಡಿಸಿ ಟೆಕ್ ಲೈನ್ ಕಾರುಗಳಲ್ಲಿ ಪ್ರತಿ ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತಿ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿದೆ.

MOST READ: ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದೆ. ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದೆ.

MOST READ: ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಸುರಕ್ಷಾ ಸೌಲಭ್ಯಗಳು

ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

MOST READ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಎಂಜಿ ಹೆಕ್ಟರ್ ಮಾದರಿಯಲ್ಲೇ ಇ-ಸಿಮ್ ಸೌಲಭ್ಯ ಹೊಂದಲಿದೆ ಕಿಯಾ ಸೆಲ್ಟೊಸ್

ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯ ಹೊಸ ಕಾರಿನ ಖದರ್ ಹೆಚ್ಚಿಸಿದೆ.

Most Read Articles

Kannada
English summary
South Korean carmaker Kia Motors India has signed a pact with Vodafone Idea to provide direct internet facility for its Seltos SUV's UVO connected cars system.
Story first published: Tuesday, October 8, 2019, 18:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X