ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಎಸ್‍ಪಿ ಎಸ್‍ಯುವಿ ಕಾರು

2018ರ ಫೆಬ್ರುವರಿಯಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲಿ ಮೊದಲ ಬಾರಿಗೆ ಕಾಣಿಸಿಕೊಂಡು ನೋಡುಗರನ್ನು ತನ್ನತ್ತ ಸೆಳೆದ ಕಿಯಾ ಎಸ್‍ಪಿ ಕಾರು ಜೂನ್ 20, 2019ರಂದು ಅನಾವರಣವಾಗಲಿದ್ದು, ಈಗಾಗಲೇ ಹಲವಾರು ಬಾರಿ ಭಾರತೀಯ ರಸ್ತೆಗಳಲ್ಲಿ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸುವಾಗ ಕಾಣಿಸಿಕೊಂಡಿದೆ.

ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಸಂಸ್ಥೆಯ ಎಸ್‍ಪಿ ಎಸ್‍ಯುವಿ ಕಾರು

ದಕ್ಷಿಣ ಕೊರಿಯಾ ಮೂಲದ ಕಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಭಾರತೀಯ ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆ ತರಲಿರುವ ಬಹುನೀರಿಕ್ಷಿತ ಕಾರು ಉತ್ಪಾದನಾ ಸಂಸ್ಥೆ ಅಂದ್ರೆ ತಪ್ಪಾಗುದಿಲ್ಲ. ಈಗಾಗಲೇ ಭಾರತದಲ್ಲಿ ಮೊದಲ ಹಂತವಾಗಿ ಬಿಡುಗಡೆಯಾಗುವ ತನ್ನ ಹೊಸ ಕಾರು ಉತ್ಪನ್ನಗಳ ಬಗ್ಗೆ ಮಾಹಿತಿ ಹೊರಹಾಕಿರುವ ಕಿಯಾ ಸಂಸ್ಥೆಯು ಸದ್ಯದಲ್ಲೇ ಮಾರುಕಟ್ಟೆಗೆ ಪ್ರವೇಶಿಸುವ ತವಕದಲ್ಲಿದೆ.

ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಸಂಸ್ಥೆಯ ಎಸ್‍ಪಿ ಎಸ್‍ಯುವಿ ಕಾರು

ಕಿಯಾ ಇಂಡಿಯಾ ಸಂಸ್ಥೆಯು ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದರಲ್ಲಿ ಮೊದಲಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದೇ ಎಸ್‌ಪಿ2ಐ ಕಾನ್ಸೆಪ್ಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್‌ಗಳನ್ನು ನಡೆಸುತ್ತಿದೆ.

ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಸಂಸ್ಥೆಯ ಎಸ್‍ಪಿ ಎಸ್‍ಯುವಿ ಕಾರು

ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿರುವ ಎಸ್‌ಪಿಐ2 ಕಾರು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುವ ತವಕದಲ್ಲಿದ್ದು, ಸ್ಪಾಟ್ ಟೆಸ್ಟಿಂಗ್ ಸಂದರ್ಭದಲ್ಲಿ ಅನೀರಿಕ್ಷಿತವಾಗಿ ಎದುರಾದ ಪ್ರತಿಸ್ಫರ್ಧಿ ಬ್ರೆಝಾ ಕಾರನ್ನು ಹಿಂದಿಕ್ಕಿ ಮುಂದೆ ಚಲಿಸಿದ್ದು ವಿಶೇಷವಾಗಿತ್ತು.

ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಸಂಸ್ಥೆಯ ಎಸ್‍ಪಿ ಎಸ್‍ಯುವಿ ಕಾರು

ಸ್ಪಾಟ್ ಟೆಸ್ಟ್ ಮಾಡುತ್ತಿರುವ ಚಿತ್ರದಲ್ಲಿ, ಕೊರಿಯಾದ ಕಾರು ತಯಾರಕ ಕಂಪನಿಯ ಹೊಸ ಎಸ್‍ಯುವಿ ಯನ್ನು ತೋರಿಸಲಾಗಿದೆ. ಈ ಚಿತ್ರದಲ್ಲಿ ವಾಹನವನ್ನು ಕವರ್ ನಿಂದ ಮುಚ್ಚಿ ಸ್ಪಾಟ್ ಟೆಸ್ಟ್ ಮಾಡುತ್ತಿರುವ ಹೊಸ ಕಿಯಾ ಎಸ್‍ಯುವಿ ಯ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಚಿತ್ರದಲ್ಲಿ ತೋರಿಸಿರುವಂತೆ ಮುಂಭಾಗದಲ್ಲಿ ಎಲ್ಇಡಿ ಇಂಡೀಕೇಟರ್ ಗಳನ್ನು ಅಳವಡಿಸಲಾಗಿದೆ. ಎಸ್‍ಯುವಿಯ ಮುಂಭಾಗದಲ್ಲಿ ಫಾಸ್ಕಿಯಾ ಇದ್ದು, ಗ್ರಿಲ್ ನ ಬಳಿ ಟೈಗರ್ ಚಿಹ್ನೆ ಇದ್ದು, ಎರಡೂ ಬದಿಯಲ್ಲಿ ಎಲ್ಇಡಿ ಹೆಡ್ ಲ್ಯಾಂಪ್‍ಗಳಿವೆ.

ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಸಂಸ್ಥೆಯ ಎಸ್‍ಪಿ ಎಸ್‍ಯುವಿ ಕಾರು

17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದ್ದು, ಮುಂಭಾಗದಲ್ಲಿರುವ ಗ್ರಿಲ್ ನ ಕೆಳಗೆ ದೊಡ್ಡ ಏರ್ ಡ್ಯಾಮ್ ಇದ್ದು, ಮುಂಭಾಗದಲ್ಲಿರುವ ಬಂಪರ್ ನ ಬಳಿ ಸಮವಾಗಿರುವ ಫಾಗ್ ಲ್ಯಾಂಪ್ ಗಳಿವೆ. ಹಿಂಭಾಗದಲ್ಲೂ ಎಲ್ಇಡಿ ಟೇಲ್ ಲೈಟ್‍ಗಳನ್ನು ಅಳವಡಿಸಲಾಗಿದೆ.

ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಸಂಸ್ಥೆಯ ಎಸ್‍ಪಿ ಎಸ್‍ಯುವಿ ಕಾರು

ಈ ಕಿಯಾ ಎಸ್‍ಯುವಿಯು ರೂಫ್ ಮೌಂಟೆಡ್ ಸ್ಟಾಪ್ ಲ್ಯಾಂಪ್ , ರೂಫ್ ರೇಲ್ಸ್, ಶಾರ್ಕ್ ಫಿನ್ ಆಂಟೇನಾ, ಮುಂಭಾಗ ಹಾಗೂ ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್ ಗಳನ್ನು ಹೊಂದಿದೆ. ಹೊಸ ಕಿಯಾ ಎಸ್‍ಯುವಿ ಇನ್ನೂ ಹೆಚ್ಚಿನ ಗುಣಮಟ್ಟದ ಫೀಚರ್ ಗಳನ್ನು ಮತ್ತು ಕನೆಕ್ಟಿವಿಟಿ ಎಕ್ವಿಪ್ ಮೆಂಟ್‍ಗಳನ್ನು ಒಳಗೊಂಡಿದೆ.

ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಸಂಸ್ಥೆಯ ಎಸ್‍ಪಿ ಎಸ್‍ಯುವಿ ಕಾರು

ಇವುಗಳಲ್ಲಿ ಲಾರ್ಜ್ ಟಚ್‍ಸ್ಕ್ರೀನ್ ಇನ್ಫೊಟೇನ್ಮೆಂಟ್ ಮತ್ತು ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಳು ಸೇರಿವೆ. ಕಿಯಾ ಅನೇಕ ವಿಶೇಷತೆಗಳನ್ನು ತನ್ನ ಸೋದರ ಸಂಸ್ಥೆಯಾದ ಹ್ಯುಂಡೈ ಕ್ರೆಟಾ ದಿಂದ ಪಡೆದಿದೆ. ಇವುಗಳಲ್ಲಿ ಚಿಕ್ಕ ಚಿಕ್ಕ ಡಿಸೈನ್ ಗಳು, ಬಾಡಿ ಪ್ಯಾನೆಲ್ ಗಳು ಮತ್ತು ಇಂಟಿರಿಯರ್ ಗಳು ಸೇರಿವೆ.

ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಸಂಸ್ಥೆಯ ಎಸ್‍ಪಿ ಎಸ್‍ಯುವಿ ಕಾರು

ಕಿಯಾ ಎಸ್‍ಯುವಿ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಬರುವ ಸಾಧ್ಯತೆಗಳಿವೆ, ಪವರ್ ಹಾಗೂ ಟಾರ್ಕ್ ಉತ್ಪಾದನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದ್ದು, ಎರಡೂ ಎಂಜಿನ್ ಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಸಾಧ್ಯತೆಗಳಿವೆ.

ಜೂನ್ 20ರಂದು ಅನಾವರಣಗೊಳ್ಳಲಿದೆ ಕಿಯಾ ಸಂಸ್ಥೆಯ ಎಸ್‍ಪಿ ಎಸ್‍ಯುವಿ ಕಾರು

ಕಿಯಾ ಇತ್ತೀಚಿಗೆ ಕಿಯಾ ಎಸ್‍ಪಿ ಎಸ್‍ಯುವಿಯ ಟ್ರಯಲ್ ಮಾದರಿಯ ಉತ್ಪಾದನೆಯನ್ನು ಮಾಡುವುದಾಗಿ ಘೋಷಿಸಿತ್ತು. ಈ ಹೊಸ ಎಸ್‍ಯುವಿ ಕಾನ್ಸೆಪ್ಟ್ ನ ಮೇಲೆ ಆಧಾರವಾಗಿದ್ದು, ಮೊದಲ ಬಾರಿಗೆ 2018ರ ಆಟೋ ಎಕ್ಸ್ ಪೋ ನಲ್ಲಿ ಅನಾವರಣಗೊಳಿಸಲಾಗಿತ್ತು. ಕಿಯಾ ಈ ಮಾದರಿಯ ಕಾರಿಗೆ ಇನ್ನೂ ಯಾವುದೇ ಹೆಸರಿಟ್ಟಿಲ್ಲ, ಆದರೆ ಟ್ರೇಲ್ ಸ್ಟರ್ ಅಥವಾ ಟಸ್ಕರ್ ಎಂಬ ಹೆಸರಿಡಬಹುದು.

More from DriveSpark

Article Published On: Wednesday, May 8, 2019, 8:30 [IST]
English summary
Kia SP SUV To Be Revealed In India On 20 June — Save The Date! Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+