ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಕಿಯಾ ಮೋಟಾರ್ಸ್ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ತನ್ನ ಮೊದಲ ಕಾರು ಮಾದರಿಯಾದ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಅನಾವರಣಗೊಳಿಸಿ ಅಗಸ್ಟ್ 22ರಂದು ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಸೆಲ್ಟೊಸ್ ನಂತರ ಬಿಡುಗಡೆಯಾಗಿರುವ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡುವ ಮತ್ತೊಂದು ಜನಪ್ರಿಯ ಕಾರಿನ ಬಗ್ಗೆ ಕಿಯಾ ಈಗಾಗಲೇ ಸುಳಿವು ನೀಡಿದೆ. ಕಂಪ್ಯಾಕ್ಟ್ ಎಸ್‌ಯುವಿ ನಂತರ ಬಹು ಉಪಯೋಗಿ ಎಂಪಿವಿ ಮೇಲೆ ಭಾರೀ ನೀರಿಕ್ಷೆ ಇಟ್ಟುಕೊಂಡಿರುವ ಕಿಯಾ ಸಂಸ್ಥೆಯು ಟೊಯೊಟಾ ಜನಪ್ರಿಯ ಇನೋವಾ ಕ್ರಿಸ್ಟಾಗೆ ಪ್ರತಿಸ್ಪರ್ಧಿಯಾಗಿ ಕಾರ್ನಿವಾಲ್ ಆವೃತ್ತಿಯನ್ನು ರಸ್ತೆಗಿಳಿಸುತ್ತಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಭಾರೀ ನೀರಿಕ್ಷೆಯೊಂದಿಗೆ ಭಾರತೀಯ ಆಟೋ ಉದ್ಯಮಕ್ಕೆ ಕಾಲಿಟ್ಟಿರುವ ಕಿಯಾ ಸಂಸ್ಥೆಯು ದೇಶದ ಟಾಪ್ 3 ಕಾರು ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕೈಗೆಟುಕುವ ಬೆಲೆಯ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಹೀಗಾಗಿ ಭಾರತದಲ್ಲಿ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಕಿಯಾ ಸಂಸ್ಥೆಯು ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದೆ. ಹೀಗಾಗಿ ಸೆಲ್ಟೊಸ್ ಬಿಡುಗಡೆಯ ನಂತರ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕಾರ್ನಿವಾಲ್ ಮಾದರಿಯು ಭಾರತೀಯ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಇನೋವಾ ಕ್ರಿಸ್ಟಾಗಿಂತ ಕಾರ್ನಿವಾಲ್ ಹೇಗೆ ಭಿನ್ನ?

ಹೌದು, ಪ್ರತಿಯೊಬ್ಬ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇಂಥದೊಂದು ಪ್ರಶ್ನೆ ಮೂಡಲಾರದು. ಅದಕ್ಕಾಗಿ ಡ್ರೈವ್‌ಸ್ಪಾರ್ಕ್ ತಂಡವು ಎಂಪಿವಿ ವಿಭಾಗದಲ್ಲಿ ಬಹುದಿನಗಳಿಂದಲೂ ಅಧಿಪತ್ಯ ಹೊಂದಿರುವ ಇನೋವಾ ಕ್ರಿಸ್ಟಾಗಿಂತ ಕಿಯಾ ಕಾರ್ನಿವಾಲ್ ಕಾರು ಹೇಗೆ ಭಿನ್ನವಾಗಿರಲಿದೆ ಎನ್ನುವ ಕುರಿತು ಕೆಲವು ಮಹತ್ವದ ಅಂಶಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಬೆಲೆಯಲ್ಲಿ ಪೈಪೋಟಿ..!

ಬಹುತೇಕ ಕಾರು ಮಾಲೀಕರು ಕೂಡಾ ಯಾವುದೋ ಒಂದು ಕಾರನ್ನು ಖರೀದಿಸುವಾಗ ಅದಕ್ಕೆ ಸರಿಸಮನಾದ ಪ್ರತಿಸ್ಪರ್ಧಿ ಕಾರಿನ ಬಗೆಗೆ ತಿಳಿದುಕೊಳ್ಳದೇ ಇರಲಾರರು. ಆಗ ಎರಡು ಕಾರಿನಲ್ಲೂ ಒಂದೇ ಮಾದರಿಯ ಎಂಜಿನ್ ಸೇರಿದಂತೆ ಬಹುತೇಕ ಫೀಚರ್ಸ್‌ಗಳು ಇರುವಾಗ ಬೆಲೆ ಕಡಿಮೆ ಇರುವ ಕಾರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿಯೇ ನೀಡುತ್ತಾರೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಇದೀಗ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಕಿಯಾ ನಿರ್ಮಾಣದ ಕಾರ್ನಿವಾಲ್ ಕೂಡಾ ಪ್ರತಿಹಂತದಲ್ಲೂ ಇನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವಂತಹ ಫೀಚರ್ಸ್‌ಗಳನ್ನು ಹೊಂದಿರುವುದಲ್ಲದೇ ಬೆಲೆ ವಿಚಾರವಾಗಿಯು ಗಮನಸೆಳೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಕಾರು ಆನ್‌ರೋಡ್ ಬೆಲೆ ಪ್ರಕಾರ ಆರಂಭಿಕವಾಗಿ ರೂ. 18.84 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.29.71 ಲಕ್ಷ ಬೆಲೆ ಹೊಂದಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಕಿಯಾ ಕಾರ್ನಿವಾಲ್ ಕೂಡಾ ಹಲವು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾಗೆ ಪ್ರತಿ ಸ್ಪರ್ಧಿಯಾಗಿ ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ. 15 ಲಕ್ಷ ಆರಂಭಿಕವಾಗಿ ಮತ್ತು ರೂ. 25 ಲಕ್ಷ ಟಾಪ್ ಎಂಡ್ ಬೆಲೆಯನ್ನು ಪಡೆದುಕೊಳ್ಳುವ ನೀರಿಕ್ಷೆಯಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಕಾರಿನ ಗಾತ್ರ

ಪ್ರಸ್ತುತ ಮಾರುಕಟ್ಟೆಯಲ್ಲಿ ನ್ಯೂ ಜನರೇಷನ್ ಇನೋವಾ ಕ್ರಿಸ್ಟಾ ಕಾರು 7 ಸೀಟರ್ ಮತ್ತು 8 ಸೀಟರ್ ಆವೃತ್ತಿಯೊಂದಿಗೆ ಮಾರಾಟವಾಗುತ್ತಿದ್ದು, 4,735-ಎಂಎಂ ಉದ್ದ, 1,830-ಎಂಎಂ ಅಗಲ ಮತ್ತು1,795-ಎಂಎಂ ಎತ್ತರವನ್ನು ಪಡೆದುಕೊಂಡಿದೆ. ಇದು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಉತ್ತಮ ಆಯ್ಕೆಯಾಗಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಇನೋವಾ ಕ್ರಿಸ್ಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿರುವ ಕಿಯಾ ಕಾರ್ನಿವಾಲ್ ಕೂಡಾ ಆಸನ ಸೌಲಭ್ಯದಲ್ಲಿ ಗ್ರಾಹಕರನ್ನು ಸೆಳೆಯಲಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು 5, 115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಪಡೆದುಕೊಂಡಿರಲಿದೆ. ಅಂದರೇ ಇನೋವಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿರಲಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಎಂಜಿನ್ ಸಾಮಾರ್ಥ್ಯ

ಟೂರಿಸ್ಟ್ ಮತ್ತು ವ್ಯಯಕ್ತಿಯ ಬಳಕೆ ಕಾರುಗಳಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಗ್ರಾಹಕರ ಬೇಡಿಕೆಯಂತೆ 2.4-ಲೀಟರ್, 2.7-ಲೀಟರ್ ಮತ್ತು 2.8-ಲೀಟರ್ ಡಿಸೇಲ್ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿವೆ. ಇವುಗಳಲ್ಲಿ 2.4-ಲೀಟರ್ ಡಿಸೇಲ್ ಎಂಜಿನ್ ಮಾದರಿಯು ಟೂರಿಸ್ಟ್ ವಿಭಾಗದ ಬಳಕೆಯಲ್ಲಿ ಅತಿಹೆಚ್ಚು ಮಾರಾಟವಾಗುವ ದುಬಾರಿ ಕಾರು ಮಾದರಿಯಾಗಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಕಿಯಾ ಕಾರ್ನಿವಾಲ್ ಕೂಡಾ ಇನೋವಾ ಮಾದರಿಯಲ್ಲೇ ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 2.2-ಲೀಟರ್ ಟರ್ಬೋ ಡೀಸೆಲ್ ಜೊತೆ 3.3-ಲೀಟರ್ ವಿ6 ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಬೆಲೆ ತಗ್ಗಿಸುವುದಕ್ಕಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ತಾಂತ್ರಿಕ ಸೌಲಭ್ಯ ಮತ್ತು ಸುರಕ್ಷಾ ಸೌಲಭ್ಯಗಳು

ತಾಂತ್ರಿಕವಾಗಿ ಇನೋವಾ ಕ್ರಿಸ್ಟಾ ಕೂಡಾ ಉತ್ತಮ ಎಂಪಿವಿ ಮಾದರಿಯನ್ನು ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಆದ್ರೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಒದಗಿಸುವಲ್ಲಿ ಹಿಂದೆ ಬಿದ್ದಿರುವ ಟೊಯೊಟಾ ಸಂಸ್ಥೆಯು ಸದ್ಯ ಬೆಲೆಯಲ್ಲಿ ಇನ್ನಷ್ಟು ಹೊಸ ಫೀಚರ್ಸ್‌ಗಳನ್ನು ನೀಡಬಹುದಾಗಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಇದೇ ನಿಟ್ಟಿನಲ್ಲಿ ಕಾರ್ನಿವಾಲ್‌ನಲ್ಲಿ ಉತ್ತಮ ಫೀಚರ್ಸ್ ಪರಿಚಯಿಸುತ್ತಿರುವ ಕಿಯಾ ಸಂಸ್ಥೆಯು ಇನೋವಾ ಕ್ರಿಸ್ಟಾಗಿಂತಲೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ನೀಡುತ್ತಿದ್ದು, 10.1-ಇಂಚಿನ ಇನ್ಪೋಟೈನ್ ಸಿಸ್ಟಂ, ಕಿಯಾ ಯುವಿಒ ಕನೆಕ್ಟ್, ಕಾರ್ ಕನೆಕ್ಟಿವಿಟಿ ಸೂಟ್, ಲಾರ್ಜ್ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎರಡು ಸನ್‌ರೂಫ್, ಪವರ್ ಅಡ್ಜೆಸ್ಟ್‌ಬಲ್ ಡ್ರೈವರ್ ಸೀಟ್, ತ್ರಿ ಕ್ಲೈಮೆಟ್ ಜೋನ್ ಕಂಟ್ರೋಲ್ ಸೌಲಭ್ಯದೊಂದಿಗೆ ಸುರಕ್ಷತೆಗಾಗಿ 6 ಏರ್‌ಬ್ಯಾಗ್,ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಹೊಂದಿರಲಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಹೀಗಾಗಿ ಇನೋವಾ ಕ್ರಿಸ್ಟಾ ಆವೃತ್ತಿಗೆ ಪ್ರತಿಹಂತದಲ್ಲೂ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಕಿಯಾ ಕಾರ್ನಿವಾಲ್ ಕಾರು ಮಾದರಿಯು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಹೊಸ ಕಾರ್ನಿವಾಲ್ ಮಾದರಿಯು ಬಿಡುಗಡೆಯಾಗಲಿದೆ.

Most Read Articles

Kannada
English summary
Most important things of kia upcoming carnival mpv.
Story first published: Friday, July 12, 2019, 14:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X