ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಹೊಸ ವಾಹನಗಳ ಮಾರಾಟದಲ್ಲಿ ಭಾರತೀಯ ಆಟೋ ಉದ್ಯಮ ಯಶಸ್ವಿ ಮುನ್ನಡೆ ಸಾಧಿಸುತ್ತಿದ್ದು, ಹಲವು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇವುಗಳಲ್ಲಿ ಕಿಯಾ ಕೂಡಾ ಒಂದಾಗಿದ್ದು, ಬಿಡುಗಡೆಯಾಗುತ್ತಿರುವ ತನ್ನ ಮೊದಲ ಸೆಲ್ಟೊಸ್ ಎಸ್‌ಯುವಿ ಪ್ರದರ್ಶನ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿನ ಭವಿಷ್ಯ ಯೋಜನೆಗಳ ಬಗೆಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಕಿಯಾ ಸಂಸ್ಥೆಯು ಸಣ್ಣ ಗಾತ್ರದ ಕಾರುಗಳಿಂದ ಹಿಡಿದು ಐಷಾರಾಮಿ ಕಾರುಗಳನ್ನು ಮಾರಾಟ ಮಾಡುವ ಮೂಲಕ ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮುನ್ನಡೆ ಸಾಧಿಸುತ್ತಿದ್ದು, ಭಾರತದಲ್ಲೂ ತನ್ನ ಯಶಸ್ವಿ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿದೆ. ಇದರಲ್ಲಿ ಸೆಲ್ಟೊಸ್ ಕಾರು ಅಗಸ್ಟ್ ಆರಂಭದಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಹೊಸ ಕಾರಿನ ಪ್ರದರ್ಶನ ವೇಳೆ ಸಣ್ಣ ಕಾರುಗಳ ಬಿಡುಗಡೆಯ ಕುರಿತಾಗಿ ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದೆ.

ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಸಣ್ಣ ಕಾರುಗಳ ಬಿಡುಗಡೆ ಇಲ್ಲಾ..

ಹೌದು, ಕಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಎಸ್‌ಯುವಿ ಮತ್ತು ಎಂಪಿವಿ ಕಾರುಗಳ ಮಾರಾಟ ಮೇಲೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದು, ಸದ್ಯಕ್ಕೆ ಸಣ್ಣ ಕಾರುಗಳ ಮಾರಾಟ ಯೋಜನೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.

ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಈ ಕುರಿತಂತೆ ಸೆಲ್ಟೊಸ್ ಕಾರು ಅನಾವರಣದಲ್ಲಿ ಭಾಗಿಯಾಗಿದ್ದ ಕಿಯಾ ಗ್ಲೋಬಲ್ ಹೆಡ್ ಹಾನ್ ವೂ ಪಾರ್ಕ್ ಅವರು ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದು, ಸೆಲ್ಟೊಸ್ ನಂತರ ಭಾರತದಲ್ಲಿ ಒಂದು ಹೊಸ ಎಂಪಿವಿ ಮಾದರಿ ಬಿಡುಗಡೆಯ ಯೋಜನೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.

ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಹೀಗಾಗಿ ಕಿಯಾ ಬಿಡುಗಡೆ ಮಾಡಲಿರುವ ಮಧ್ಯಮ ಗಾತ್ರದ ಎಂಪಿವಿ ಮಾದರಿಯು ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರಿಗೆ ಭರ್ಜರಿ ಪೈಪೋಟಿ ನೀಡವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಿಯಾ ಈಗಾಗಲೇ ಸೆಲ್ಟೊಸ್ ಜೊತೆಗೆ ಹೊಸ ಎಂಪಿವಿ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು, ಮಾಹಿತಿಗಳ ಪ್ರಕಾರ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಕೆರನ್ಸ್ ಎಂಪಿವಿ ಡಿಸೈನ್ ಪ್ರೇರಣೆಯೊಂದಿಗೆ ಹೊಸ ಎಂಪಿವಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಕಿಯಾ ಹೊಸ ಎಂಪಿವಿ ಕಾರು 4,600-ಎಂಎಂ ಉದ್ದ ಹೊಂದಿರಲಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ ಎರ್ಟಿಗಾಗಿಂತಲೂ 200-ಎಂಎಂ ಹೆಚ್ಚು ಉದ್ದವಾಗಿರುವುದಲ್ಲದೇ ಮಹೀಂದ್ರಾ ಮರಾಜೋಗಿಂತ 15-ಎಂಎಂ ಹೆಚ್ಚುವರಿ ಉದ್ದವಿರಲಿದೆ.

ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಇನ್ನು ಕೆಲವು ಮಾಹಿತಿಗಳ ಪ್ರಕಾರ, ಕಿಯಾ ಸಂಸ್ಥೆಯು ಸದ್ಯ ಅನಾವರಣಗೊಳಿಸಲಾಗಿರುವ 5 ಸೀಟರ್ ಸೆಲ್ಟೊಸ್ ಕಾರು ಮಾದರಯಲ್ಲೇ ಹೊಸ ವಿನ್ಯಾಸದ 7 ಸೀಟರ್ ಕಾರನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದ್ದು, ಸೆಲ್ಟೊಸ್ ಬಿಡುಗಡೆಯ ನಂತರವಷ್ಟೇ ಹೊಸ ಕಾರಿನ ಬಗೆಗೆ ಮತ್ತಷ್ಟು ಮಾಹಿತಿ ತಿಳಿಯಲಿದೆ.

ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಹಾಗೆಯೇ ಕಿಯಾ ಸಂಸ್ಥೆಯು 9 ಸೀಟರ್ ಮಾದರಿಯ ಕಾರ್ನಿವಾಲ್ ಎಂಪಿವಿ ಮಾದರಿಯನ್ನು ಸಹ ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗಿಂತಲೂ ದುಬಾರಿಯಾಗಿರುವ ಕಾರಣ ಮಧ್ಯಮ ಗಾತ್ರದ ಎಂಪಿವಿಗೆ ಬಿಡುಗಡೆಗೆ ಎದುರು ನೋಡುತ್ತಿದೆ.

ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಇದಲ್ಲದೇ ಕಿಯಾ ಸಂಸ್ಥೆಯು ಸೆಲ್ಟೊಸ್ ಬಿಡುಗಡೆಯ ನಂತರ ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರು ಆವೃತ್ತಿಗಳನ್ನು ಮುಂದಿನ 2 ವರ್ಷಗಳ ಅವಧಿಯಲ್ಲಿ ಬಿಡುಗಡೆ ಮಾಡಲಿದ್ದು, ಇದರಲ್ಲಿ 2 ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಂಡಿದೆ.

ಭಾರತದಲ್ಲಿ ಸಣ್ಣ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದ ಕಿಯಾ ಮೋಟಾರ್ಸ್

ಇದಕ್ಕಾಗಿಯೇ ಬರೋಬ್ಬರಿ 7 ಸಾವಿರ ಕೋಟಿ ಬಂಡವಾಳದೊಂದಿಗೆ ಆಂಧ್ರಪ್ರದೇಶದಲ್ಲಿ ಹೊಸ ಕಾರು ಉತ್ಪಾದನಾ ಘಟಕವನ್ನು ತೆರೆದಿದ್ದು, ಇಲ್ಲಿ ವಾರ್ಷಿಕವಾಗಿ 3 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಮಾಡುವ ಗುರಿಹೊಂದಿದೆ.

Source: ET Auto

Most Read Articles

Kannada
English summary
Kia Will Not Launch Small Cars. Read in kannada.
Story first published: Saturday, June 22, 2019, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X