ಬೆಂಗಳೂರಿನ ರಸ್ತೆಗಳಲ್ಲಿ ಲ್ಯಾಂಬೋರ್ಗಿನಿ ಅವೆಂಟಡೊರ್ ಎಸ್‍ವಿಜೆ ಕಾರಿನ ದರ್ಬಾರು...
ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಐಷಾರಾಮಿ ಪಫಾರ್ಮೆನ್ಸ್ ಕಾರುಗಳು ಬಿಡುಗಡೆಗೊಂಡರೂ ಸಹ ಅವುಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಾರೆ. ಏಕೆಂದರೆ ಅವುಗಳ ಗೌಂಡ್ ಕ್ಲಿಯರೆನ್ಸ್ ಕಡಿಮೆ ಇದ್ದು, ಅವುಗಳನ್ನು ಭಾರತೀಯ ರಸ್ತೆಗಳಲ್ಲಿ ಚಲಾಯಿಸಲು ಸಾಧ್ಯವಿಲ್ಲವೆಂದು.

ಆಶ್ಚರ್ಯ ಏನಪ್ಪಾಂದ್ರೆ ಇಡೀ ದೇಶದಲ್ಲಿ ಮಾತ್ರ ಕೊಟಿಗಟ್ಟಲೆ ಬೆಲೆ ಬಾಳುವ ಐಷಾರಾಮಿ ಮತ್ತು ಐಷಾರಾಮಿ ಪರ್ಫಾರ್ಮೆನ್ಸ್ ಕಾರುಗಳನ್ನು ನೋಡಲು ಸಾಧ್ಯವಾದ ನಗರಗಳಲ್ಲಿ ನಮ್ಮ ಬೆಂಗಳೂರು ಕೂಡಾ ಒಂದು ಎಂದು ವರದಿಯೊಂದು ಹೇಳಿದೆ. ಅಂತಹ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಅವೆಂಟಡೊರ್ ಎಸ್‍ವಿಜೆ ಕೂಡಾ ಒಂದು. ಈ ಕಾರು ಸುಮಾರು ರೂ. 12 ಕೋಟಿಗೆ ಮಾರಾಟವಾಗುತ್ತಿದೆ.

ಇದನ್ನು ಖರೀದಿಸಿದ ಬೆಂಗಳೂರಿನ ಮಾಲೀಕನೊಬ್ಬ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಚಾಲಾಯಿಸುತ್ತಿರುವಾಗ ಯೂಟ್ಯೂಬರ್ ಆದ ವಿಪಿನ್ ಮಬೆನ್ ಎಂಬಾತ ಯೂಟ್ಯುಬ್ ಚಾನೆಲ್‍ನಲ್ಲಿ ಪೋಸ್ಟ್ ಮಾಡಿದ್ದು, ಸಧ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಲಂಬೋರ್ಗಿನಿ ಸರಣಿ ಕಾರುಗಳು ಸದ್ಯ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದು, ಇದೀಗ ಮತ್ತೊಂದು ಹೊಸ ನಮೂನೆಯ ಅವೆಂಟಡೊರ್ ಎಸ್‌ವಿಜೆ ಕಾರು ಆವೃತ್ತಿಯು ಸಿಲಿಕಾನ್ ಸಿಟಿಯಲ್ಲಿ ಬಿಡುಗಡೆಯಾಗಿದೆ. ಅಷ್ಟಕ್ಕೂ ಇದನ್ನು ಖರೀದಿ ಮಾಡಿದವರು ಬೆಂಗಳೂರಿನ ಉದ್ಯಮಿ ಎನ್ನವುದು ಮತ್ತೊಂದು ಆಕರ್ಷಣೆ.

ಲಂರ್ಬೋಗಿನಿ ಸಂಸ್ಥೆಯು ಇದುವರೆಗೆ ಪರಿಚಯಿಸುವ ಹಲವು ಸೂಪರ್ ಕಾರು ಮಾದರಿಗಳಲ್ಲಿ ಅವೆಂಟಡೊರ್ ಎಸ್‌ವಿಜೆ ಕಾರು ಆವೃತ್ತಿ ಹಲವು ವಿಶೇಷತೆಗಳಿಂದ ಕೂಡಿದ್ದು, ಜಗತ್ತಿನಾದ್ಯಂತ ಮಾರಾಟಕ್ಕೆ ಲಭ್ಯವಿರುವ 63 ಅವೆಂಟಡೊರ್ ಎಸ್‌ವಿಜೆ ಕಾರುಗಳಲ್ಲಿ ಇದು ಕೂಡಾ ಒಂದು.

ಹಾಗೆಯೇ ಈ ಕಾರು ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೇ ಭಾರತದಲ್ಲಿ ಖರೀದಿಸಲಾದ ಮೊದಲ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲೂ ಮಾರಾಟವಾದ 3ನೇ ಕಾರು ಕೂಡಾ ಇದೆ ಎನ್ನುವುದು ಮತ್ತೊಂದು ವಿಶೇಷ.

ಅಂದ್ರೆ ಅವೆಂಟಡೊರ್ ಎಸ್‌ವಿಜೆ ಕಾರು ಲಿಮಿಟೆಡ್ ಎಡಿಷನ್ ಕಾರು ಮಾದರಿಯಾಗಿದ್ದು, ಜಗತ್ತಿನಾದ್ಯಂತಾ ಕೇವಲ 900 ಕಾರುಗಳು ಮಾತ್ರ ಮಾರಾಟಕ್ಕಿವೆ. ಇದರಲ್ಲಿ ಒದಗಿಸಲಾಗಿರುವ ದುಬಾರಿ ಬೆಲೆಯ ಮೆಟಾಲಿಕ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಮಾತ್ರ ಮೊದಲಿಗೆ ನಾವು ನೋಡಬಹುದಾಗಿದ್ದು, ವಿಶೇಷವಾಗಿ ಇದೇ ಮೊದಲ ಬಾರಿಗೆ ಆರೆಂಜ್ ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಈ ಕಾರುನ್ನು ಖರೀದಿ ಮಾಡಿದವರು ಉದ್ಯಮಿ ಭೂಪೇಶ್ ರೆಡ್ಡಿ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಭೂಪೇಶ್ ರೆಡ್ಡಿ ಕೇವಲ ಅವೆಂಟಡೊರ್ ಎಸ್‌ವಿಜೆ ಕಾರನ್ನೇ ಅಷ್ಟೇ ಅಲ್ಲದೇ ಹತ್ತಕ್ಕೂ ಹೆಚ್ಚು ಸೂಪರ್ ಕಾರುಗಳ ಮೊದಲ ಮಾಲೀಕರಾಗಿದ್ದಾರೆ.
ಕಳೆದ ಅಗಸ್ಟ್‌ನಲ್ಲೂ ಪೋರ್ಷೆ 911 ಜಿಟಿ2 ಆರ್‌ಎಸ್ ಕಾರಿನ ಮೊದಲ ಮಾಲೀಕರಾಗಿದ್ದ ಭೂಪೇಶ್ ರೆಡ್ಡಿ ಸೂಪರ್ ಕಾರ್ ಗ್ಯಾರೇಜ್ ಕೂಡಾ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಕೆಲವೇ ಕೆಲವು ಸೂಪರ್ ಕಾರು ಗ್ಯಾರೇಜ್ ಪಟ್ಟಿಯಲ್ಲಿ ಭೂಪೇಶ್ ರೆಡ್ಡಿ ಒಡೆತನದ ಬ್ರೆನ್ ಗ್ಯಾರೇಜ್ ಕೂಡಾ ಒಂದು.

ಸದ್ಯ ಬ್ರೆನ್ ಗ್ಯಾರೇಜ್‌ಗೆ ಎಂಟ್ರಿ ನೀಡಿರುವ ಲಂಬೋರ್ಗಿನಿ ಸ್ಪೆಷಲ್ ಎಡಿಷನ್ ಅವೆಂಟಡೊರ್ ಎಸ್‌ವಿಜೆ ಕಾರು ಯುರೋಪ್ ಸೇರಿದಂತೆ ಭಾರತದಲ್ಲೂ ಬಿಡುಗಡೆಯಾಗಿದ್ದು, ಈಗಾಗಗಲೇ ಖರೀದಿಗೆ ಲಭ್ಯವಿರುವ 63 ಅವೆಂಟಡೊರ್ ಎಸ್‌ವಿಜೆ ಕಾರುಗಳನ್ನು ಪೂರ್ಣ ಪ್ರಮಾಣದಲ್ಲಿ ಮಾರಾಟಗೊಂಡಿವೆ ಎನ್ನಲಾಗಿದೆ.

ಅದರಲ್ಲೂ ಇದು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗಿರುವ ಕಾರು ಮಾದರಿಯಾಗಿರುವುದರಿಂದ ಕಾರಿನ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಯುರೋ 6(ಲೆವಲ್ 3) ಎಂಜಿನ್ ವೈಶಿಷ್ಟ್ಯತೆಯನ್ನು ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರುಗಳು ಪರ್ಫಾಮೆನ್ಸ್ ವಿಚಾರಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
6.5-ಲೀಟರ್(6498 ಸಿಸಿ) ವಿ12 ನ್ಯಾಚುರಲಿ ಆಸ್ಪೈರೆಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರು, 7-ಸ್ಪೀಡ್ ಐಎಸ್ಆರ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 770-ಬಿಎಚ್‌ಪಿ ಮತ್ತು 720-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಟೂ ಸೀಟರ್ ಕೂಪೆ ವಿನ್ಯಾಸ ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರಿನಲ್ಲಿ ಬೆಲೆ ತಕ್ಕಂತೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೀರಿಂಗ್ ವೀಲ್ಹ್, ಕಾರ್ಬನ್ ಪೈಬರ್ ಎಂಜಿನ್ ಬ್ಯಾನೆಟ್, ಅಲ್ಯುಮಿನಿಯಂ ಫ್ರಂಟ್ ಬ್ಯಾನೆಟ್ ಜೋಡಣೆ ಹೊಂದಿರುವ ಈ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಸರಾಸರಿ 4 ಕಿ.ಮಿ ಮೈಲೇಜ್ ನೀಡುತ್ತೆ ಅಂದ್ರೆ ನಂಬಲೇಬೇಕು.


Click it and Unblock the Notifications