ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್
ಲ್ಯಾಂಡ್ ರೋವರ್ ಈ ವರ್ಷದ ಆರಂಭದಲ್ಲಿ ಯುಎಸ್‍ನಲ್ಲಿ ಐಕಾನಿಕ್ ಡಿಫೆಂಡರ್ ಎಸ್‍ಯುವಿಯನ್ನು ಅನಾವರಣಗೊಳಿಸಿತ್ತು. ಈ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡ ಬಳಿಕ 2020ರ ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಸಂಚಲವನ್ನು ಸೃಷ್ಟಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಎಸ್‍ಯುವಿಗೆ ಸಾಕಷ್ಟು ಬೇಡಿಕೆಯನ್ನು ಗಳಿಸಿದೆ.

2020ರ ಲ್ಯಾಂಡ್ ರೋವರ್ ಡಿಫೆಂಡರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಕ್ಯಾರಂಡ್‍ಬೈಕ್ ವರದಿ ಮಾಡಿದೆ. ವರದಿಗಳ ಪ್ರಕಾರ ಐಕಾನಿಕ್ ಎಸ್‍ಯುವಿ ಭಾರತದಲ್ಲಿ 2020ರ ಮಧ್ಯೆ ಜೂನ್ ತಿಂಗಳಲ್ಲಿ ಮಾರಾಟವಾಗಲಿದೆ. ಲ್ಯಾಂಡ್ ರೋವರ್ ಡಿಫೆಂಡರ್ 110(ಲಾಂಗ್-ವ್ಹೀಲ್ ಬೇಸ್ ರೂಪಾಂತರ)ವನ್ನು ಭಾರತದಲ್ಲಿ ಮೊದಲಿಗೆ ಬಿಡುಗಡೆಗೊಳಿಸುತ್ತಿದೆ. ಸಣ್ಣ ಲ್ಯಾಂಡ್ ರೋವರ್ ಡಿಫೆಂಡರ್ 90 ಎಸ್‍ಯುವಿಯು ಮುಂದಿನ ವರ್ಷದ ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಮಾರಾಟವಾಗಲಿದೆ.

ಆರಂಭದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಸಿಬಿಯು (ಕಂಪ್ಲೀಟ್ ಬಿಲ್ಟ್ ಯುನಿಟ್) ಆಗಿ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುತ್ತದೆ. ನಂತರದಲಿ ಲ್ಯಾಂಡ್ ರೋವರ್ ಭಾರತದಲ್ಲಿ ಡಿಫೆಂಡರ್ ಸ್ಥಳೀಯವಾಗಿ ಜೋಡಣೆಯನ್ನು ಮಾಡಲು ಪ್ರಾರಂಭಿಸಲು ಯೋಜಿಸಿದೆ. ಇದನ್ನು ಸಿಕೆಡಿ(ಕಂಪ್ಲೇಟ್ಲಿ ನಾಕ್ ಡೌನ್)ಯುನಿಟ್‍ಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು.

ಹೊಸ ಡಿಫೆಂಡರ್ ಕಾರು ಲ್ಯಾಂಡ್ ರೋವರ್‍ನ ಹೊಸ ಟಿ7 ಎಕ್ಸ್ ಆರ್ಕಿಟೆಕ್ಚರ್ ಮೇಲೆ ನಿರ್ಮಾಣವಾಗಿದೆ. ಈ ಹೊಸ ಕಾರಿನಲ್ಲಿ ಅಲ್ಯುಮಿನಿಯಂ ಮೊನೊಕಾಕ್ ಚಾಸೀಸ್ ಅಳವಡಿಸಲಾಗಿದೆ. ಈ ಚಾಸೀಸ್ ಹಳೆಯ ಮಾದರಿಯ ಕಾರಿನಲ್ಲಿರುವ ಚಾಸೀಸ್‍ಗಿಂತ ಹೆಚ್ಚಿನ ಪ್ರಮಾಣದ ಸ್ಥಿರತೆ ಹಾಗೂ ಕಡಿಮೆ ತೂಕವನ್ನು ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯನ್ನು 90 ಹಾಗೂ 110 ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಎರಡು ಮಾದರಿಗಳ ಪೈಕಿ 90 ಮಾದರಿಯು 6 ಸೀಟುಗಳನ್ನು ಹೊಂದಿದ್ದರೆ, 110 ಮಾದರಿಯು 7 ಸೀಟುಗಳನ್ನು ಹೊಂದಿದೆ.

ಮೂರನೇ ಸಾಲಿನಲ್ಲಿರುವ ಸೀಟುಗಳನ್ನು ಮಡುಚಿದರೆ, 1,075 ಲೀಟರ್‍ನಷ್ಟು ಬೂಟ್ ಸ್ಪೇಸ್ ದೊರೆತರೆ, ಎರಡನೇ ಸಾಲಿನ ಸೀಟುಗಳನ್ನು ಮಡುಚುವುದರಿಂದ 2,380 ಲೀಟರ್‍ನಷ್ಟು ಬೂಟ್ ಸ್ಪೇಸ್ ಜಾಗ ಸಿಗಲಿದೆ.

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಉತ್ತಮವಾದ ಆಫ್ ರೋಡ್ ಮಾದರಿಯಾಗಿರಲಿದೆ. ಈ ಹೊಸ ತಲೆಮಾರಿನ ಎಸ್‍ಯುವಿ ಹಲವಾರು ಹೊಸ ಫೀಚರ್‍ಗಳನ್ನು ಹೊಂದಿರಲಿದೆ. ಈ ಎಸ್‍ಯುವಿಯು 3,720 ಕೆ.ಜಿಯಷ್ಟು ತೂಕವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಸ್‍ಯುವಿಯ ರೂಫ್‍ನ ತೂಕವು 300 ಕೆಜಿಯಷ್ಟಿದೆ. ಡಿಫೆಂಡರ್ 291 ಎಂಎಂನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಯಾವುದೇ ರಸ್ತೆಯನ್ನೇ ಆಗಲಿ ಸರಾಗವಾಗಿ ದಾಟುವಂತಹ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಎಸ್‍ಯುವಿಯನ್ನು ಎರಡು ಪೆಟ್ರೋಲ್ ಹಾಗೂ ಎರಡು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಪೆಟ್ರೋಲ್ ಮಾದರಿಯು ಮೈಲ್ ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದಿದೆ. ಈ ಎಸ್‍ಯುವಿಯು ಪ್ಲಗ್ ಇನ್ ಹೈಬ್ರಿಡ್ ಮಾದರಿಯನ್ನು ಸಹ ಹೊಂದಿರಲಿದೆ. ಈ ಎಸ್‍ಯುವಿಯಲ್ಲಿ 8 ಸ್ಪೀಡ್‍ನ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅಳವಡಿಸಲಾಗಿದೆ.

ಆಫ್ ರೋಡ್ ಸಾಮರ್ಥ್ಯದ ಈ ಎಸ್‍ಯುವಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅಳವಡಿಸಲಾಗಿದೆ. ಇದರಲ್ಲಿರುವ ರೇರ್ ಲಾಕಿಂಗ್ ಡಿಫರೆನ್ಶಿಯಲ್ ಈ ಎಸ್‍ಯುವಿಯನ್ನು ಪೂರ್ಣ ಪ್ರಮಾಣದ ಆಫ್ ರೋಡ್ ವಾಹನವನ್ನಾಗಿಸಿದೆ. ಈ ಎಸ್‍ಯುವಿಯಲ್ಲಿ ಟೆರೇನ್ 2 ರೆಸ್ಪಾನ್ಸ್ ಸಿಸ್ಟಂ ಎಂಬ ಆಫ್ ರೋಡ್ ಟೆಕ್ನಾಲಜಿಯನ್ನು ಸಹ ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾದ ಬಳಿಕ ಲ್ಯಾಂಡ್ ರೋವರ್ ಡಿಫೆಂಡರ್ ಲಾಂಗ್-ವ್ಹೀಲ್-ಬೆಸ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.90 ಲಕ್ಷಗಳಾದರೆ, ಸಣ್ಣ ಡಿಫೆಂಡರ್ ಸುಮಾರು ರೂ.70 ಲಕ್ಷಗಳಿಗೆ ಮಾರಾಟ ಮಾಡುವ ಸಾಧ್ಯತೆಗಳಿವೆ.


Click it and Unblock the Notifications