ಭಾರತದಲ್ಲಿ ಬಿಡುಗಡೆಯಾದ ಲ್ಯಾಂಡ್ ರೋವರ್ ಡಿಸ್ಕವರಿ

ಜಾಗ್ವರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು, 2.0 ಲೀಟರಿನ ಡೀಸೆಲ್ ಆವೃತ್ತಿಯ ಲ್ಯಾಂಡ್ ರೋವರ್ ಡಿಸ್ಕವರಿ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.75.18 ಲಕ್ಷಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾದ ಲ್ಯಾಂಡ್ ರೋವರ್ ಡಿಸ್ಕವರಿ

ಈ ಹೊಸ ಕಾರು ಎಸ್, ಎಸ್‍ಇ, ಹೆಚ್‍ಎಸ್‍ಇ ಹಾಗೂ ಹೆಚ್‍ಎಸ್‍ಇ ಲಗ್ಷುರಿ ಟ್ರಿಮ್ ಎಂಬ ಮಾದರಿಗಳಲ್ಲಿ ಲಭ್ಯವಿದೆ. ಈ ಕಾರಿನಲ್ಲಿರುವ ಎಂಜಿನ್ 237 ಬಿ‍‍ಹೆಚ್‍‍ಪಿ ಹಾಗೂ 500 ಎನ್‍ಎಂ ಟಾರ್ಕ್ ಬಿಡುಗಡೆಗೊಳಿಸುತ್ತದೆ. ಈ ಅಡ್ವಾನ್ಸ್ ಆದ ಎಂಜಿನ್ ಅನ್ನು ಜಾಗ್ವರ್ ಲ್ಯಾಂಡ್ ರೋವರ್ ಪವರ್‍‍ಪ್ಲಾಂಟ್‍‍ನಲ್ಲಿ ಮೊದಲ ಬಾರಿಗೆ ಸೀರಿಸ್ ಸಿಕ್ವೆಂಷಿಯಲ್ ಟರ್ಬೊ ಟೆಕ್ನಾಲಜಿಯನ್ನು ಹೆಚ್ಚಿನ ಪ್ರಮಾಣದ ಒತ್ತಡಕ್ಕಾಗಿ ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾದ ಲ್ಯಾಂಡ್ ರೋವರ್ ಡಿಸ್ಕವರಿ

7 ಸೀಟುಗಳನ್ನು ಹೊಂದಿರುವ ಈ ಕಾರಿನಲ್ಲಿ ಐಷಾರಾಮಿ ಫೀಚರ್‍‍ಗಳಿದ್ದು, ಎಲೆಕ್ಟ್ರಿಕ್ ರಿಕ್ಲೈನಿಂಗ್ ಸೀಟುಗಳು, ಇಂಟೆಲಿಜೆಂಟ್ ಸೀಟ್ ಫೋಲ್ಡ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್, ಪವರ್ ಹೊಂದಿರುವ 3ನೇ ಸಾಲಿನ ಸೀಟುಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾದ ಲ್ಯಾಂಡ್ ರೋವರ್ ಡಿಸ್ಕವರಿ

ಇದರ ಜೊತೆಗೆ ಪನೊರಾಮಿಕ್ ಸನ್‍‍ರೂಫ್, ಕ್ಯಾಬಿನ್ ಏರ್ ಅಯಾನೈಜೆಷನ್, 360 ಡಿಗ್ರಿ ಕ್ಯಾಮರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ರಿಮೋಟ್‍‍ಗಳಿವೆ. ತನ್ನ ಸಾಮರ್ಥ್ಯದಿಂದಾಗಿ ಆಫ್‍‍ರೋಡ್‍‍ಗಳಲ್ಲಿಯೇ ಉತ್ತಮವಾದ ವಾಹನವೆನಿಸಿದೆ.

ಭಾರತದಲ್ಲಿ ಬಿಡುಗಡೆಯಾದ ಲ್ಯಾಂಡ್ ರೋವರ್ ಡಿಸ್ಕವರಿ

ಲ್ಯಾಂಡ್ ರೋವರ್ ಡಿಸ್ಕವರಿ ನೀರಿನಲ್ಲಿ 900 ಎಂಎಂವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, 3500 ಕೆ.ಜಿಗಳಷ್ಟು ತೂಕವನ್ನು ಎಳೆಯಬಲ್ಲದು. ಈ ಎಲ್ಲವೂಗಳಿಂದ ಇದು ವಿಭಿನ್ನವಾದ ಎಸ್‍‍ಯು‍‍ವಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾದ ಲ್ಯಾಂಡ್ ರೋವರ್ ಡಿಸ್ಕವರಿ

ಜಾಗ್ವರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್‍‍ನ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ರೋಹಿತ್ ಸೂರಿ ರವರು ಮಾತನಾಡಿ, ಡಿಸ್ಕವರಿಯು ಹೈ ಪವರ್‍‍ನ ಇಗ್ನೆನಿಯಂ ಡೀಸೆಲ್ ವೆರಿಯಂಟ್ ಹೊಂದಿದ್ದು, ಸರಿಸಾಟಿಯಿಲ್ಲದ ಸಾಮರ್ಥ್ಯವನ್ನು, ವಿಭಿನ್ನತೆಯನ್ನು ಹೊಂದಿದ್ದು, ಕೈಗೆಟುಕುವ ದರದಲ್ಲಿ ದೊರೆಯಲಿದೆ. ನಾವು ಡಿಸ್ಕವರಿಯನ್ನು ಬಹು ಸಂಖ್ಯೆಯ ಗ್ರಾಹಕರಿಗೆ ತಲುಪಿಸಲಿದ್ದೇವೆ ಎಂದು ಹೇಳಿದರು.

More from DriveSpark

Article Published On: Thursday, June 6, 2019, 16:48 [IST]
English summary
2019 Land Rover Discovery Launched In India - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+