ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳಿಸಲಿದೆ ಲೆಕ್ಸಸ್

ಲೆಕ್ಸಸ್ ಕಂಪನಿಯು ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಪ್ರದರ್ಶಿಸಲು ಸಜ್ಜಾಗಿದೆ. ಈ ಕಾರು ಸಣ್ಣ ಹ್ಯಾಚ್ ಬ್ಯಾಕ್ ಕಾರ್ ಆಗಿರಲಿದೆ. ಲೆಕ್ಸಸ್ ಕಂಪನಿಯು ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗ ಪಡಿಸಿಲ್ಲ.

ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳಿಸಲಿದೆ ಲೆಕ್ಸಸ್

ಈ ವರ್ಷದ ಅಕ್ಟೋಬರ್‍‍ನಲ್ಲಿ ಟೊಕಿಯೋದಲ್ಲಿ ನಡೆಯಲಿರುವ ಮೋಟಾರ್ ಶೋನಲ್ಲಿ ಈ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶಿಸುವ ಸಾಧ್ಯತೆಗಳಿವೆ. ಈ ಕಾರಿನ ಮಾರಾಟವನ್ನು 2020ರ ಮಧ್ಯ ಭಾಗದಲ್ಲಿ ಆರಂಭಿಸಲಾಗುವುದು. ಈ ಕಾರಿನ ವಿನ್ಯಾಸವನ್ನು 2015ರ ಎಲ್ಎಫ್-ಎಸ್ಎ ಕಾನ್ಸೆಪ್ಟ್ ಕಾರಿನಿಂದ ಸ್ಫೂರ್ತಿ ಪಡೆಯುವ ಸಾಧ್ಯತೆಗಳಿವೆ. ಈ ಕಾನ್ಸೆಪ್ಟ್ ಕಾರು ಲೆಕ್ಸಸ್‌ನ ಆಧುನಿಕ ವಿನ್ಯಾಸ ಭಾಷೆಯನ್ನು ಸಣ್ಣ ಕಾರಿಗೆ ಹೇಗೆ ಅನುವಾದಿಸಬಹುದು ಎಂಬುದನ್ನು ತೋರಿಸಿತ್ತು.

ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳಿಸಲಿದೆ ಲೆಕ್ಸಸ್

ಇತರ ಲೆಕ್ಸಸ್ ಮಾದರಿಗಳಿಗಿಂತ ತುಂಬಾ ಚಿಕ್ಕದಾಗಿದ್ದರೂ, ಹೊಸ ಹ್ಯಾಚ್‌ಬ್ಯಾಕ್ ದೊಡ್ಡ ಗಾತ್ರದ ಸ್ಪಿಂಡಲ್ ಗ್ರಿಲ್ ಹೊಂದಿರಲಿದೆ. ಕಾರಿನಲ್ಲಿರುವ ಬ್ಯಾಟರಿಯನ್ನು ತಂಪಾಗಿಸಲು ಗಾಳಿಯನ್ನು ಚಾನಲ್ ಮಾಡಲು ಗ್ರಿಲ್‍‍ನ ಅಗತ್ಯವಿದೆ ಎಂದು ಲೆಕ್ಸಸ್‌ನ ಮೂಲ ಕಂಪನಿಯಾದ ಟೊಯೊಟಾ ತಿಳಿಸಿದೆ. ಕಾರುಗಳ ಪೂರ್ಣ ಎಲೆಕ್ಟ್ರಿಕರಣಕ್ಕೆ ಲೆಕ್ಸಸ್ ಎರಡು ಮಾರ್ಗಗಳನ್ನು ಹೊಂದಿದೆ.

ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳಿಸಲಿದೆ ಲೆಕ್ಸಸ್

ಮೊದಲನೆಯದು, ಎಲೆಕ್ಟ್ರಿಕ್ ಮೋಟರ್ ಅನ್ನು ಬೆಂಬಲಿಸುವ ಹೊಸ ಅಂಡರ್‍‍ಪಿನ್‍‍ಗಳನ್ನು ಬಳಸುವುದು. ಲೆಕ್ಸಸ್ ಹಾಗೂ ಟೊಯೊಟಾ ಕಂಪನಿಯ ಎಂಜಿನಿಯರ್‌ಗಳು ಈ ಕೆಲಸ ಮಾಡಲು ಹೆಸರುವಾಸಿಯಾಗಿದ್ದಾರೆ. ಎರಡನೆಯದು ಮಿನಿ ಎಲೆಕ್ಟ್ರಿಕ್‌ನ ಅಂಡರ್‌ಪಿನ್ನಿಂಗ್ ಹಾಗೂ ಎಲೆಕ್ಟ್ರಿಕ್ ಮೋಟರ್‍ ಅನ್ನು ಎರವಲು ಪಡೆಯುವುದು.

ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳಿಸಲಿದೆ ಲೆಕ್ಸಸ್

ಮಿನಿ ಎಲೆಕ್ಟ್ರಿಕ್ ಅನ್ನು ಮುಂದಿನ ವರ್ಷದ ಮಾರ್ಚ್‌‍‍ನಿಂದ ಮಾರಾಟ ಮಾಡಲಾಗುವುದು. ಟೊಯೊಟಾ ಈಗಾಗಲೇ ಟೊಯೋಟಾ ಜಿಆರ್ ಸುಪ್ರಾ ಹಾಗೂ ಬಿಎಂಡಬ್ಲ್ಯು ಝಡ್ 4 ಸ್ಪೋರ್ಟ್ಸ್ ಕಾರುಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮಿನಿ ಕಾರಿನ ಮಾಲೀಕರಾದ ಬಿಎಂಡಬ್ಲ್ಯು ಕಂಪನಿಯ ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ.

ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳಿಸಲಿದೆ ಲೆಕ್ಸಸ್

ಅಧಿಕೃತ ಡಬ್ಲ್ಯುಎಲ್‌ಟಿಪಿ ಪರೀಕ್ಷಾ ಚಕ್ರದ ಪ್ರಕಾರ ಮಿನಿ ಎಲೆಕ್ಟ್ರಿಕ್ 144 ಮೈಲುಗಳವರೆಗೆ ಚಲಿಸಲಿದೆ ಎಂದು ತಿಳಿದು ಬಂದಿದೆ. ಲೆಕ್ಸಸ್ ಇದಕ್ಕೆ ಸರಿಸಾಟಿಯಾಗುವಂತಹ ಕಾರ್ ಅನ್ನು ಅಭಿವೃದ್ದಿಪಡಿಸುವ ಉದ್ದೇಶವನ್ನು ಹೊಂದಿದೆ.

ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳಿಸಲಿದೆ ಲೆಕ್ಸಸ್

ಹೊಸ ಲೆಕ್ಸಸ್ ಕಾರು ಬಿಡುಗಡೆಯಾದ ನಂತರ, ಬಿಎಂಡಬ್ಲ್ಯು ಐ3, ರೆನಾಲ್ಟ್ ಜೊ ಹಾಗೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಇ ಸೇರಿದಂತೆ ಸಣ್ಣ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಲೆಕ್ಸಸ್‌ನ ಎಲೆಕ್ಟ್ರಿಕ್ ಕಾರು ಬಿಡುಗಡೆಯಾದ ನಂತರ, ಕಡಿಮೆ ಬೆಲೆಯ ಟೊಯೊಟಾ ಕಾರ್ ಅನ್ನು ನಿರೀಕ್ಷಿಸಬಹುದು.

ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳಿಸಲಿದೆ ಲೆಕ್ಸಸ್

ಟೊಯೊಟಾ ಹಾಗೂ ಲೆಕ್ಸಸ್ ಕಂಪನಿಗಳು ಈಗಾಗಲೇ ಹಲವಾರು ಹೈಬ್ರಿಡ್ ಕಾರುಗಳನ್ನು ಬಿಡುಗಡೆಗೊಳಿಸಿವೆ. ಟೊಯೊಟಾ ಪ್ರಿಯಸ್ ಕಾರ್ ಅನ್ನು ಪರಿಸರ ಸ್ನೇಹಿ ಕಾರುಗಳ ಮೊದಲ ಕಾರು ಎಂದು ಪರಿಗಣಿಸಲಾಗುತ್ತದೆ. ಸದ್ಯಕ್ಕೆ ಈ ಎಲೆಕ್ಟ್ರಿಕ್ ಕಾರನ್ನು ಮಾರಾಟ ಮಾಡಲಾಗುತ್ತಿಲ್ಲ. ಈಗ ಹೈಡ್ರೋಜನ್ ಫ್ಯೂಯಲ್ ಹೊಂದಿರುವ ಮಿರೈ ಕಾರ್ ಅನ್ನು ಮಾರಾಟ ಮಾಡಲಾಗುತ್ತಿದೆ.

ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳಿಸಲಿದೆ ಲೆಕ್ಸಸ್

ಲೆಕ್ಸಸ್ ಕಂಪನಿಯು ಹೊಸ ಸಣ್ಣ ಕಾರುಗಳನ್ನು ಅಭಿವೃದ್ದಿಪಡಿಸುವುದರಿಂದ ಹೆಚ್ಚು ಗ್ರಾಹಕರನ್ನು ಸೆಳೆಯಬಹುದೆಂಬ ಲೆಕ್ಕಾಚಾರವನ್ನು ಹೊಂದಿದೆ. ಹೆಚ್ಚು ಗ್ರಾಹಕರನ್ನು ಸೆಳೆಯಲು ಈ ಎಲೆಕ್ಟ್ರಿಕ್ ಕಾರಿನ ಬೆಲೆಯು ಮುಖ್ಯವಾಗಲಿದೆ. ಶೂನ್ಯ ಪ್ರಮಾಣದ ಮಾಲಿನ್ಯ ಪ್ರಮಾಣವನ್ನು ಹೊಂದಿರುವ ಕಾರಣಕ್ಕೆ ಸರ್ಕಾರದಿಂದ ಸಹಾಯಧನವನ್ನು ಪಡೆಯಲಿದೆ. ಹೊಸ ಲೆಕ್ಸಸ್ ಕಾರು ಸಿಟಿ ಹ್ಯಾಚ್ ಬ್ಯಾಕ್ ಕಾರಿನ ಬದಲಿಗೆ ಬಿಡುಗಡೆಯಾಗಲಿದೆ.

More from DriveSpark

Article Published On: Saturday, August 24, 2019, 14:22 [IST]
English summary
Lexus developing first electric car to be launched by 2020 - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+